ಧನುಷ್ಗೆ 50ನೇ ಸಿನಿಮಾ ಬ್ಲಾಕ್ ಬಸ್ಟರ್, ಹೊಸ ಬೆಂಚ್ ಮಾರ್ಕ್!
ತಮಿಳು ಚಿತ್ರರಂಗದಲ್ಲಿ ಈಗ ಎಲ್ಲಿ ನೋಡಿದ್ರೂ ರಾಯನ್ದೇ ಹವಾ
ರಾಯನ್ ಸಿನಿಮಾ ರಿವೇಂಜ್ ಸುತ್ತಾನೇ ಸುತ್ತುವ ಥ್ರಿಲ್ಲರ್ ಸಿನಿಮಾ
ರಾಯನ್.. ರಾಯನ್.. ರಾಯನ್. ತಮಿಳು ಚಿತ್ರರಂಗದಲ್ಲಿ ಈಗ ಎಲ್ಲಿ ನೋಡಿದ್ರೂ ರಾಯನ್ದೇ ಹವಾ. ನಟ ಧನುಷ್ ಅಂತೂ ತನ್ನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. 50ನೇ ಸಿನಿಮಾದ ಮಾಸ್ ಎಂಟ್ರಿಯ ಜೊತೆಗೆ ನಿರ್ದೇಶಕರಾಗಿಯೂ ಧನುಷ್ ಸೈ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಧನುಷ್ 50ನೇ ಸಿನಿಮಾ, ನಿರ್ದೇಶಕನಾಗಿ ಧನುಷ್ ಮಾಡಿರೋ ಚಮತ್ಕಾರ ಏನು ಅನ್ನೋ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.
ಇದನ್ನೂ ಓದಿ: ವಿವಾಹವಾದ್ರೂ ಧನುಷ್-ಐಶ್ವರ್ಯಾ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರು; ಗಾಯಕಿ ಸುಚಿತ್ರಾ ಶಾಕಿಂಗ್ ಹೇಳಿಕೆ
ಬಹಳ ದಿನಗಳಿಂದ ಧನುಷ್ ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದಿದೆ. ಇಂದು ರಾಯನ್ ಚಿತ್ರ ಬೆಳ್ಳಿತೆರೆ ಮೇಲೆ ಅಪ್ಪಳಿಸಿದ್ದು, ಫ್ಯಾನ್ಸ್ ಸಖತ್ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಧನುಷ್ ಅಭಿನಯಕ್ಕೆ ಮಾರು ಹೋಗಿದ್ದು, 50ನೇ ಸಿನಿಮಾ ಬ್ಲಾಕ್ ಬಸ್ಟರ್, ಬೆಂಚ್ ಮಾರ್ಕ್ ಸಿನಿಮಾ ಎಂದು ಕೊಂಡಾಡುತ್ತಿದ್ದಾರೆ. ಕೆಲವು ಅಭಿಮಾನಿಗಳಂತೂ ಧನುಷ್ಗೆ ಆಸ್ಕರ್ ಅವಾರ್ಡ್ ಸಿಗಬೇಕು ಎನ್ನುತ್ತಿದ್ದಾರೆ.
ರಾಯನ್ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇದೊಂದು ರಿವೇಂಜ್ ಥ್ರಿಲ್ಲರ್, ಆ್ಯಕ್ಷನ್ ಸಿನಿಮಾ ಆಗಿದ್ದು, ಅಭಿಮಾನಿಗಳ ಕಣ್ಣಿಗೆ ಹಬ್ಬದೂಟ ಬಡಿಸಿದೆ. ಎ.ಆರ್ ರಹಮಾನ್ ಅವರ ಸಂಗೀತ ಹಾಗೂ ಹಾಡುಗಳು ಸಿನಿಮಾದ ಕಿಕ್ ಏರುವಂತೆ ಮಾಡಿದೆ. ಧನುಷ್ ಸಿನಿಮಾ ಕೆರಿಯರ್ಗೆ ರಾಯನ್ ಒಂದು ಮೈಲಿಗಲ್ಲಾಗಿದೆ.
ಧನುಷ್ ಈ ಮೊದಲು ಪಾ ಪಾಂಡಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಧನುಷ್ ನಿರ್ದೇಶನದ 2ನೇ ಸಿನಿಮಾ ರಾಯನ್ ಸಖತ್ ಸದ್ದು ಮಾಡಿದೆ.
‘ರಾಯನ್’ ಚಿತ್ರದ ವಿಶೇಷತೆ ಏನು?
ರಾಯನ್ ಅಲಿಯಾಸ್ ಕಾತವರಾಯನ್ ಈ ಸಿನಿಮಾದ ಹೀರೋ. ಇವನಿಗೆ ಇಬ್ಬರು ತಮ್ಮಂದಿರು ಮತ್ತು ಪುಟ್ಟ ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತೆ. ಪೋಷಕರಿಂದ ದೂರವಾದ ದಿನದಿಂದಲೇ ಇವರ ಹೋರಾಟ ಆರಂಭವಾಗುತ್ತೆ. ರಾಯನ್ ಯಾರಿಗೂ ಹೆದರಲ್ಲ. ಸಾವಿಗೂ ಹೆದರದ ಸ್ವಭಾವದವನು.
ರಾಯನ್ ತಮ್ಮ, ತಂಗಿಯರು ತಮ್ಮ ಊರಿನಲ್ಲೇ ಅಪಾಯಕ್ಕೆ ಸಿಲುಕುತ್ತಾರೆ. ಅಲ್ಲಿಂದ ಮದ್ರಾಸ್ಗೆ ತೆರಳಿ ಮನೆಯ ಹುಡುಕಾಟ ನಡೆಸುತ್ತಾರೆ. ಈ ಕಷ್ಟದ ಮಧ್ಯೆ ತಮ್ಮನನ್ನು ಓದಿಸುತ್ತಾನೆ. ಇದರ ಮುತ್ತು ಎಂಬ ಮತ್ತೊಬ್ಬ ಮದ್ಯಪಾನಕ್ಕೆ ದಾಸನಾಗುತ್ತಾನೆ. ಮುತ್ತು ಮದ್ಯಪಾನದ ಚಟದಿಂದ ಇಡೀ ರಾಯನ್ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಈ ಸಂಕಷ್ಟದಲ್ಲಿ ರಾಯನ್ ಪಾತ್ರ ಸಮಾಜಕ್ಕೆ ಒಂದು ಒಳ್ಳೆ ಸಂದೇಶವನ್ನು ನೀಡಿದೆ.
ಇದನ್ನೂ ಓದಿ: ನನ್ನ ಮಾಜಿ ಪತಿ ಸಲಿಂಗಕಾಮಿ.. ಆತ ಧನುಷ್ ಒಂದೇ ರೂಂನಲ್ಲಿ ಸೇರುತ್ತಿದ್ದರು; ಸುಚಿತ್ರಾ ಬಾಂಬ್
ಸಿನಿಮಾದಲ್ಲಿ ಮೊದಲ ಅರ್ಧ ರಾಯನ್ ಹಾಗೂ ತಮ್ಮ, ತಂಗಿಯನ್ನ ಬೆಳೆಸೋದು ಇದ್ರೆ ಉಳಿದಾರ್ಧ ರಿವೇಂಜ್, ರಿವೇಂಜ್ನಲ್ಲೇ ಚಿತ್ರಿಸಲಾಗಿದೆ. ಗ್ಯಾಂಗ್ಸ್ಟರ್ಗಳ ಪಾತ್ರ ಹೊಸ ಟ್ವಿಸ್ಟ್ಗಳನ್ನ ಕೊಟ್ಟಿದ್ರೆ, ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಕಾಶ್ ರಾಜ್ ಅಮೋಘವಾಗಿ ಅಭಿನಯಿಸಿದ್ದಾರೆ.
ರಾಯನ್ ಸಿನಿಮಾ ರಿವೇಂಜ್ ಸುತ್ತಾನೇ ಸುತ್ತಿರುವ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ ಆಗಿದೆ. ನಟನಾಗಿ, ನಿರ್ದೇಶಕನಾಗಿ ಧನುಷ್ ಗೆದ್ದಿದ್ದಾರೆ. ರಾಯನ್ ಸಿನಿಮಾಗೆ ಪ್ರೇಕ್ಷಕರು ಭರ್ಜರಿ ಜೈಕಾರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ