Rain in Karnataka: ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನ ಭರ್ಜರಿ ಮಳೆ.. ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

author-image
Ganesh
Updated On
4 ದಿನ ಮೊದಲೇ ಮಾನ್ಸೂನ್ ಎಂಟ್ರಿ.. ಯಾವಾಗಿಂದ ಮುಂಗಾರು ಮಳೆ ಆರಂಭ..? ಮಹತ್ವದ ಮಾಹಿತಿ..!
Advertisment
  • ಬೆಂಗಳೂರಲ್ಲಿ ಇವತ್ತೂ ಕೂಡ ಮಳೆ ಬರಲಿದೆಯಂತೆ..!
  • ಯಾವೆಲ್ಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ ಗೊತ್ತಾ?
  • ನಿನ್ನೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.

ಮಳೆಯ ಮುನ್ಸೂಚನೆ ಮತ್ತು ಎಚ್ಚರಿಕೆ ನೀಡಿರುವ ರಾಜ್ಯ ಹವಾಮಾನ ಇಲಾಖೆ, ಮೇ 18ರವರೆಗೆ ಮಳೆ ಆಗಲಿದೆ ಎಂದಿದೆ. ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ ಇದೆ. ಬಾಗಲಕೋಟೆ, ಧಾರವಾಡ, ಗದಗ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೋರಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಕೊಪ್ಪಳ, ಹಾವೇರಿ, ಹಾಸನ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿ, ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:RCB ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬೆಂಗಳೂರು ತಂಡಕ್ಕೆ ಇರುವ ದಾರಿ ಅದೊಂದೇ..!

publive-image

ಬೆಳಗಾವಿ, ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗದ ಕೆಲವು ಸ್ಥಳಗಳಲ್ಲಿ ಗುಡುಗು, ಗಾಳಿ ಸಹಿತ ಸಾಧಾರಣ ಮಳೆ ಸಾಧ್ಯತೆ ಎಂದಿದೆ. ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆ ಗುಡುಗು ಗಾಳಿ ಸಹಿತ ಹಗುರದಿಂದ ಸಾಧರಣ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಮತ್ತೆ ಮ್ಯಾಚ್​ ಫಿಕ್ಸಿಂಗ್ ಆರೋಪ.. CSK ಬ್ಯಾನ್​​ಗೆ ಆಗ್ರಹಿಸಿದ ಫ್ಯಾನ್ಸ್..! ಏನಿದು ಅನುಮಾನ

ಇದನ್ನೂ ಓದಿ:ಕೊಹ್ಲಿ ವಿಚಾರದಲ್ಲಿ ಭಾರೀ ಗೊಂದಲ.. ವಿರಾಟ್​ಗೆ ಕಂಟಕವಾಗಿ ಬಿಟ್ರಾ ಈ ಆಟಗಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment