newsfirstkannada.com

×

ಭಾರತ ಟೆಸ್ಟ್ ತಂಡದ ಮೋಸ್ಟ್​ ಡೆಡ್ಲಿ ಕಾಂಬಿನೇಷನ್​ ಇದು.. ದಶಕಗಳಿಂದ ಇವರಿಬ್ಬರದ್ದೇ ಜಾದೂ..!

Share :

Published September 24, 2024 at 11:38am

    ಟೀಮ್ ಇಂಡಿಯಾಗೆ ಸಿಕ್ಕ ಅಪರೂಪದ ಜೋಡಿ ಇದು

    ವರ್ಲ್ಡ್​ ಕ್ಲಾಸ್ ಆಲ್​ರೌಂಡರ್​​ಗಳೇ ಮ್ಯಾಚ್ ವಿನ್ನರ್ಸ್

    ಸಚಿನ್, ದ್ರಾವಿಡ್ ಬಳಿಕ ಹೆಚ್ಚು ಮ್ಯಾನ್ ಆಫ್​ ದ ಮ್ಯಾಚ್

ಅಶ್ವಿನ್​ ಮತ್ತು ಜಡೇಜಾ. ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್ಸ್. ಬ್ಯಾಟಿಂಗ್​ ಇರಲಿ, ಬೌಲಿಂಗ್​ ಇರಲಿ, ಯಾರೇ ಕೈ ಕೊಟ್ರೋ ತಂಡಕ್ಕೆ ಆಸರೆಯಾಗೋ ಜೋಡಿ. ಒಂದೇ ಮಾತಲ್ಲಿ ಹೇಳೋದಾದ್ರೆ ಟೀಮ್ ಇಂಡಿಯಾ ಟೆಸ್ಟ್​ ತಂಡ ಕಂಡ ಮೋಸ್ಟ್​ ಡೆಡ್ಲಿ ಕಾಂಬಿನೇಷನ್​ ಇದು. ದಶಕದಿಂದ ಟೀಮ್​ ಇಂಡಿಯಾ ಟೆಸ್ಟ್​​ನಲ್ಲಿ ಕಂಡಿರೋ ಸಕ್ಸಸ್​​ ಕ್ರೆಡಿಟ್​ ಈ ಜೋಡಿಗೇ ಸಲ್ಲಬೇಕು.

ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಕೆಲವೇ ಕೆಲ ಜೋಡಿಗಳು ನೆನಪಲ್ಲಿ ಉಳಿಯುತ್ತವೆ. ಈ ಪೈಕಿ ಅಶ್ವಿನ್ ಆ್ಯಂಡ್ ಜಡೇಜಾ ಜೋಡಿಯೂ ಒಂದಾಗಿದೆ. ವಿಶ್ವ ಕ್ರಿಕೆಟ್​ನ ಒನ್​ ಆಫ್ ದಿ ರೇರೆಸ್ಟ್​ ಆ್ಯಂಡ್ ಡೆಡ್ಲಿ ಕಾಂಬಿನೇಷನ್​ ಇದು. ಭಾರತ ಟೆಸ್ಟ್​ ತಂಡದ ಯಶಸ್ಸಿನ ಗುಟ್ಟು ಇವ್ರೇ ಅನ್ನೋದೂ ಓಪನ್ ಸಿಕ್ರೇಟ್. ಈ ವರ್ಲ್ಡ್​ ಕ್ಲಾಸ್ ಸ್ಪಿನ್ ಆಲ್​ರೌಂಡರ್​ಗಳು ಟೀಮ್ ಇಂಡಿಯಾಗೆ ಸಿಕ್ಕಿರುವುದು ನಿಜಕ್ಕೂ ಅದೃಷ್ಟ.

ಇದನ್ನೂ ಓದಿ:ಪರ.. ವಿರುದ್ಧ.. ಏನೇ ತೀರ್ಪು ಬಂದ್ರೂ ಸಿಎಂ ಸಿದ್ದು ಸಜ್ಜು; ಅದಕ್ಕಾಗಿ 9 ರೀತಿಯಲ್ಲಿ ಸಿದ್ಧತೆ..!

ವರ್ಲ್ಡ್​ ಕ್ಲಾಸ್ ಆಲ್​ರೌಂಡರ್​​ಗಳೇ ಬಿಗ್ ಮ್ಯಾಚ್ ವಿನ್ನರ್ಸ್​
2012ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ನಾಗ್ಪುರ ಟೆಸ್ಟ್​ನಲ್ಲಿ ಈ ಜೋಡಿ ಜೊತೆಯಾಗಿ ಕಣಕ್ಕಿಳಿದಿತ್ತು. ಆಗ 12 ವರ್ಷಕ್ಕೂ ಅಧಿಕ ಕಾಲ ಇವರಿಬ್ಬರೂ ಜೊತೆಯಾಗಿ ಆಡ್ತಾರೆ ಅನ್ನೋ ನಿರೀಕ್ಷೆಯೇ ಇರಲಿಲ್ಲ. ಡ್ರಾನಲ್ಲಿ ಮುಕ್ತಾಯವಾಗಿದ್ದ ಆ ಟೆಸ್ಟ್​ನಲ್ಲಿ ಅಶ್ವಿನ್, ಬ್ಯಾಟಿಂಗ್​ನಲ್ಲಿ ಝಲಕ್ ತೋರಿಸಿದ್ರೆ, ಜಡೇಜಾ ಬೌಲಿಂಗ್​ನಲ್ಲಿ ಜಾದೂ ಮಾಡಿದ್ದರು.

ಅಂದು ಜೊತೆಯಾದ ಈ ಲೆಫ್ಟಿ, ರೈಟಿ ಕಾಂಬಿನೇಷನ್, ಇಂದಿನ ತನಕ ಟೆಸ್ಟ್​ ತಂಡದ ಮ್ಯಾಚ್ ವಿನ್ನರ್​ಗಳಾಗಿ ಮಿಂಚುತ್ತಿದ್ದಾರೆ. ವರ್ಲ್ಡ್​ ಕ್ಲಾಸ್ ಆಲ್​ರೌಂಡರ್​ಗಳಾಗಿ ಬೆಳೆದು ನಿಂತಿದ್ದಾರೆ. ದಿಗ್ಗಜ ಆಟಗಾರರ ಸಾಲಿಗೆ ಬೆಳೆದಿದ್ದಾರೆ. ಈ ಮಾತನ್ನ ಸುಖಾಸುಮ್ಮನೆ ಹೇಳ್ತಿಲ್ಲ. ಅಂಕಿಅಂಶಗಳ ಸಾಕ್ಷಿಯಿದೆ.

ಟೆಸ್ಟ್​ನಲ್ಲಿ ಅಶ್ವಿನ್-ಜಡೇಜಾ ಬ್ಯಾಟಿಂಗ್
ಟೆಸ್ಟ್​ನಲ್ಲಿ ಆರ್​ .ಅಶ್ವಿನ್, 26.94ರ ಬ್ಯಾಟಿಂಗ್ ಅವರೇಜ್​ನಲ್ಲಿ 3422 ರನ್ ಕಲೆ ಹಾಕಿದ್ದು, 6 ಶತಕ, 14 ಅರ್ಧಶತಕ ಸಿಡಿಸಿದ್ದಾರೆ. ಜಡೇಜಾ 36.76ರ ಬ್ಯಾಟಿಂಗ್ ಅವರೇಜ್​ನಲ್ಲಿ 3122 ರನ್ ಕಲೆ ಹಾಕಿದ್ದು. 4 ಶತಕ, 21 ಅರ್ಧಶತಕ ದಾಖಲಿಸಿದ್ದಾರೆ.

ಟೆಸ್ಟ್​ನಲ್ಲಿ ಅಶ್ವಿನ್-ಜಡೇಜಾ ಬೌಲಿಂಗ್
ಬೌಲಿಂಗ್​ನಲ್ಲಿ ಕಮಾಲ್ ಮಾಡಿರುವ ಅಶ್ವಿನ್, 522 ವಿಕೆಟ್ ಉರುಳಿಸಿದ್ದಾರೆ. 37 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 59 ರನ್ ನೀಡಿ 7 ವಿಕೆಟ್ ಬೇಟೆಯಾಡಿರುವುದು ಇನ್ನಿಂಗ್ಸ್​ವೊಂದರ ಬೆಸ್ಟ್​ ಪರ್ಫಾಮೆನ್ಸ್ ಆಗಿದೆ. ಇನ್ನು 299 ವಿಕೆಟ್ ಕಬಳಿಸಿರುವ ಜಡೇಜಾ, 13 ಬಾರಿ 5 ವಿಕೆಟ್ ಉರುಳಿಸಿದ್ದಾರೆ. ಈ ಪೈಕಿ 42 ರನ್ ನೀಡಿ 7 ವಿಕೆಟ್ ಉರುಳಿಸಿರೋದು ಇನ್ನಿಂಗ್ಸ್​ವೊಂದರ ಬೆಸ್ಟ್ ಪರ್ಫಾಮೆನ್ಸ್.

ಇದನ್ನೂ ಓದಿ:ಟೀಮ್ ಇಂಡಿಯಾ ಗೆಲುವಿಗೆ ಮುಖ್ಯ ಕಾರಣ ರಿವೀಲ್; ತೆರೆ ಹಿಂದಿನ ಈ ವ್ಯಕ್ತಿಗೆ ಗೌರವ ಸಿಗಬೇಕು

ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಸಕ್ಸಸ್​ ಫುಲ್ ಆಟಗಾರರು ಅಂದ್ರೆ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿರುತ್ತೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಮ್ಯಾನ್ ಆಫ್​ ದ ಮ್ಯಾಚ್ ಅವಾರ್ಡ್ ಗೆದ್ದ ಖ್ಯಾತಿ ಇವರದ್ದಾಗಿದೆ. ಇದೀಗ ಇದೇ ಸಾಲಿನಲ್ಲಿ ಸಾಗಿರುವ ಅಶ್ವಿನ್, ಜಡೇಜಾ ಜೋಡಿಯೂ ಸ್ಥಾನ ಪಡೆದಿದೆ. ವಿರಾಟ್ ದಾಖಲೆ ಸರಿಗಟ್ಟಿ ಜಂಟಿ 3ನೇ ಸ್ಥಾನ ಅಲಂಕರಿಸಿದೆ ಈ ಭಲೇ ಜೋಡಿ.

ಭಾರತ ಪರ ಟೆಸ್ಟ್​ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ
ಸಚಿನ್ ತೆಂಡುಲ್ಕರ್ ಆಡಿದ 200 ಟೆಸ್ಟ್​ ಪಂದ್ಯಗಳಲ್ಲಿ 14 ಪ್ರಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ರೆ, ರಾಹುಲ್ ದ್ರಾವಿಡ್ 163 ಟೆಸ್ಟ್ ಪಂದ್ಯಗಳಲ್ಲಿ 11 ಬಾರಿ ಮ್ಯಾನ್ ಆಪ್ ದಿ ಮ್ಯಾಚ್ ಗರಿ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ವಿರಾಟ್​ ಕೊಹ್ಲಿ 114 ಟೆಸ್ಟ್​ ಪಂದ್ಯಗಳನ್ನಾಡಿ 10 ಪಂದ್ಯ ಶ್ರೇಷ್ಟ ಪ್ರಶಸ್ತಿಗಳಿಗೆ ಮುತ್ತಿಟ್ಟಿದ್ರೆ, ಕ್ರಮವಾಗಿ 101 ಹಾಗೂ 73 ಟೆಸ್ಟ್​ ಪಂದ್ಯಗಳನ್ನಾಡಿರುವ ಆರ್​.ಅಶ್ವಿನ್ ಹಾಗೂ ಜಡೇಜಾ ಕೂಡ ತಲಾ 10 ಮ್ಯಾನ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದಿದ್ದಾರೆ.

ವಿರಾಟ್​ ಕೊಹ್ಲಿ 114 ಟೆಸ್ಟ್​ ಪಂದ್ಯಗಳನ್ನ ಆಡಿ 10 ಮ್ಯಾನ್​ ಆಫ್​ ದ ಮ್ಯಾಚ್​ ಪ್ರಶಸ್ತಿ ಗೆದ್ದಿದ್ರೆ, ಅದಕ್ಕಿಂತ ಕಡಿಮೆ ಪಂದ್ಯಗಳಲ್ಲೇ ಜಡೇಜಾ, ಅಶ್ವಿನ್​ ಈ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಂದ್ಯ ಗೆಲ್ಲಿಸಿಕೊಟ್ಟು ಸಚಿನ್, ದ್ರಾವಿಡ್​ ದಾಖಲೆಯನ್ನ ಮುರಿಯೋ ಅವಕಾಶವೂ ಇವರಿಬ್ಬರಿಗಿದೆ. ಹೀಗಾಗಿಯೇ ಹೇಳಿದ್ದು, ಇವ್ರೆ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್ಸ್​ ಅಂತಾ. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್, ಬೌಲಿಂಗ್​​ನಲ್ಲಿ ಆಪ್ತರಕ್ಷಕರಾಗಿ ನಿಲ್ಲುವ ಈ ಜೋಡಿ ಟೀಮ್ ಇಂಡಿಯಾಗೆ ಸಿಕ್ಕ ಅಪರೂಪದ ಮಾಣಿಕ್ಯವೇ ಸರಿ.

ಇದನ್ನೂ ಓದಿ:ಮ್ಯಾಕ್ಸಿ, ಯುವಿ.. ಆರ್​​ಸಿಬಿಯ ಐವರು ದುಬಾರಿ ಆಟಗಾರರು ಇವರೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ ಟೆಸ್ಟ್ ತಂಡದ ಮೋಸ್ಟ್​ ಡೆಡ್ಲಿ ಕಾಂಬಿನೇಷನ್​ ಇದು.. ದಶಕಗಳಿಂದ ಇವರಿಬ್ಬರದ್ದೇ ಜಾದೂ..!

https://newsfirstlive.com/wp-content/uploads/2024/09/TEAM_INDIA.jpg

Load More