/newsfirstlive-kannada/media/post_attachments/wp-content/uploads/2024/04/RCB-27.jpg)
ಹೊಸ ಅದ್ಯಾಯ ಅಂತಾ ಟೂರ್ನಿ ಶುರು ಮಾಡಿದಾಗ ಆರ್ಸಿಬಿ ಅಭಿಮಾನಿಗಳಲ್ಲಿ ಹೊಸ ಹುರುಪು ಬಂದಿತ್ತು. ಬಹುತೇಕ ಫ್ಯಾನ್ಸ್ ಹೊಸ ಕೋಚ್, ಹೊಸ ಸೀಸನ್. ಪಕ್ಕಾ ಕಪ್ ನಮ್ದೇ ಅಂದಿದ್ರು. ಅಸಲಿ ಅಖಾಡದಲ್ಲಿ ಅದೇ ರಾಗ.. ಅದೇ ಹಾಡು. ಹಳೇ ಪುಸ್ತಕದ್ದೇ ಹೊಸ ಅಧ್ಯಾಯ ಓಪನ್ ಆಗಿದೆ. ಸಾಲು ಸಾಲು ಸೋಲಿನಿಂದ ಆರ್ಸಿಬಿ ಫ್ಯಾನ್ಸ್ ಕಂಗೆಟ್ಟಿದ್ದಾರೆ.
ಸೋಲು.. ಸೋಲು.. ಸೋಲು.. ಸೋಲು.. ಸತತ 4 ಸೋಲು.. ಆಡಿರೋ 6 ಪಂದ್ಯದಲ್ಲಿ ಒಂದು ಗೆಲುವು.. ಐದು ಸೋಲು.. ಹೇಗ್ ಸ್ವಾಮಿ ತಡ್ಕೋಬೇಕು ಜೀವ..! ಈ ಹಿಂದೆ ಸೋತ್ರೂ, ಗೆದ್ರೂ ಆರ್ಸಿಬಿ ಅಂತಿದ್ದ ಫ್ಯಾನ್ಸ್, ಇದೀಗ ಅಸಮಾಧಾನಗೊಂಡಿದ್ದಾರೆ. ತಾಳ್ಮೆಯ ಕಟ್ಟೆಯೊಡೆದಿದ್ದು, ಆಕ್ರೋಶ ಹೊರ ಹಾಕ್ತಿದ್ದಾರೆ.
ಇದನ್ನೂ ಓದಿ:ಮನೆ ಶಿಫ್ಟ್ ಮಾಡಲು ಹೋಗ್ತಿದ್ದಾಗ ಸಂಭವಿಸಿತು ದುರಂತ; ನಾಲ್ವರು ಸಾವು, ಮೂವರು ಗಂಭೀರ
https://twitter.com/retiredMIfans/status/1776669513024786448
ಮುಂಬೈ ವಿರುದ್ಧದಲ್ಲಿ ಬ್ಯಾಟ್ಸ್ಮನ್, 197 ರನ್ಗಳ ಉತ್ತಮ ಟಾರ್ಗೆಟ್ ಅನ್ನೇ ಸೆಟ್ ಮಾಡಿದ್ರು. ಆದ್ರೆ, ಬೌಲರ್ಸ್ ಈ ಟಾರ್ಗೆಟ್ನ ಡಿಫೆಂಡ್ ಮಾಡಿಕೊಳ್ಳುವಲ್ಲಿ ಫೇಲ್ ಆದ್ರು. ಘರ್ಜಿಸಿದ ಮುಂಬೈ ಬ್ಯಾಟರ್ಸ್ ಜಸ್ಟ್ 15.3 ಓವರ್ಗಳಲ್ಲೇ ಚಚ್ಚಿ ಬಿಸಾಕಿದ್ರು. ಈ ಆಟದ ನೋಡಿದ ಮೇಲೆ ಫ್ಯಾನ್ಸ್ ಈ ಬೌಲಿಂಗ್ ಲೈನ್ಅಪ್ ಇಟ್ಟುಕೊಂಡ್ರೆ, ಆಅರ್ಸಿಬಿ 2 ಸಲ ಬ್ಯಾಟಿಂಗ್ ಮಾಡಬೇಕು.. ಆಗ ಮಾತ್ರ ಗೆಲ್ಲೋಕ್ ಸಾಧ್ಯ ಅಂತಿದ್ದಾರೆ.
ಇದನ್ನೂ ಓದಿ:ಮೂವರು ಮಕ್ಕಳ ಸ್ಕೂಲ್ ಫೀಸ್ ಕಟ್ಟದೇ ಧೋನಿ ನೋಡಲು 64,000 ಖರ್ಚು ಮಾಡಿದ ಅಭಿಮಾನಿ..!
Every RCB fan now.. pic.twitter.com/BlCEhQxKnh
— ಟ್ರೋಲ್ ಹೈಕ್ಳು (@TrollHaiklu) April 11, 2024
ಇದನ್ನೂ ಓದಿ: RCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!
ಒಂದೆಡೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸ್ತಾ ಇದ್ರೆ ಇನ್ನೊಂದೆಡೆ ಆರ್ಸಿಬಿಯ ಸೋಲು ಟ್ರೋಲರ್ಗಳಿಗೆ ಫುಲ್ ಮೀಲ್ಸ್ ಊಟ ಸಿಕ್ಕಂತಾಗಿದೆ. ಈ ಸೀಸನ್ನಲ್ಲೂ ಆರ್ಸಿಬಿ ಈ ಕಪ್ ನಮ್ದೇ ಅಂತಾ ಅಭಿಯಾನ ಆರಂಭಿಸಿತು. ಆ ಕಪ್ ನಮ್ದೇ ಅನ್ನೋ ಲೈನ್ ಅನ್ನೇ ಹೊಡೆದಾಕವೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈ - ಆರ್ಸಿಬಿ ನಡುವಿನ ಹೈಲೆಟ್ಸ್ ಆ ಕಥೆನ ಹೇಳ್ತಿದೆ.
RCB fans at 10th place vs CSK,MI fans thinking about their playoff chances pic.twitter.com/weUzdaGCPK
— yaarivanu_unknownu (@memesmaadonu) April 13, 2024
ಇದನ್ನೂ ಓದಿ:ಹೆಸರು ಚೇಂಜ್ ಮಾಡಿ ಓಡಾಟ, ಕೆಫೆ ಸ್ಫೋಟದ ಮಾಸ್ಟರ್ಮೈಂಡ್ ಬಗ್ಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ..?
ಮುಂಬೈ ವಿರುದ್ಧ ಕಳಪೆ ಬೌಲಿಂಗ್ ಮಾಡಿದ ಆರ್ಸಿಬಿ ಬೌಲರ್ಸ್ ವಿರುದ್ಧವಂತೂ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ನಮಗೆ ಬ್ಯಾಟಿಂಗ್ ಮಾತ್ರ ಸಾಕು.. ಬೌಲಿಂಗ್ ಬೇಡವೇ ಬೇಡ ಅಂತಿದ್ದಾರೆ.
RCB Fans To RCB :- pic.twitter.com/q9pC3gT9xb
— Addicted To Memes (@Addictedtomemez) April 6, 2024
ಆರ್ಸಿಬಿಯ ಪ್ರತಿ ಪಂದ್ಯಕ್ಕೂ ಮುಂಚೆ ಕೆಲ ಹಾರ್ಡ್ಕೋರ್ ಫ್ಯಾನ್ಸ್ Don'T Underestimate The Power Of Rcb Power ಅಂತಾರೆ. ಕಪ್ ನಮ್ದೇ ಅನ್ನೋದಂತೂ ಸಖತ್ ಟ್ರೆಂಡ್ ಆಗುತ್ತೆ. ಆದ್ರೆ ಅಂತ್ಯದಲ್ಲಿ ಆಟಗಾರರ ಫ್ಲಾಫ್ ಶೋ ಆ ಆತ್ಮವಿಶ್ವಾಸವನ್ನೂ ಕುಗ್ಗಿಸ್ತಿದೆ.
ಕನ್ನಡಿಗರನ್ನ ಕೂರಿಸಿ ಬೇರೆ ರಾಜ್ಯದ ಆಟಗಾರರನ್ನ ಆಡಿಸೋದು, ಫಾರಿನ್ ಪ್ಲೇಯರ್ ಮೇಲೆ ಕೋಟಿ-ಕೋಟಿ ಸುರಿಯೋದು ಇದೇ ಆರ್ಸಿಬಿಯ ಹೊಸ ಅಧ್ಯಾಯ ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ.
RCB fans every year. #RRvsRcbpic.twitter.com/epFsYLGWhN
— Prayag (@theprayagtiwari) April 6, 2024
ಒಟ್ಟಿನಲ್ಲಿ ಹೀನಾಯ ಸೋಲಿಗೆ ಶರಣಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. ಫ್ಲೇ ಆಫ್ ಬಾಗಿಲೂ ಬಹುತೇಕ ಮುಚ್ಚಿದೆ. ಕಪ್ ಕನಸೂ ಬಹುತೇಕ ನುಚ್ಚು ನೂರಾಗಿದೆ. ಅಟ್ಲೀಸ್ಟ್ ಉಳಿದ ಪಂದ್ಯಗಳಲ್ಲಾದ್ರೂ ಲಾಯಲ್ ಅಭಿಮಾನಿಗಳಿಗೊಸ್ಕರ ಉತ್ತಮ ಪರ್ಫಾಮೆನ್ಸ್ ಆಟಗಾರರು ನೀಡ್ತಾರಾ? ಕಾದು ನೋಡೋಣ.
https://twitter.com/UrsVajrang_2/status/1776676158786175344
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್