ವಿರಾಟ್ ಕೆರಳಿ ನಿಂತರೇ ಇವತ್ತು ದಾಖಲೆಗಳು ಆಗೋದು ಗ್ಯಾರಂಟಿ
RCB vs CSK ಇತಿಹಾಸ ಕೆದಕಿದ್ರೆ ಗುರು-ಶಿಷ್ಯರ ಫೈಟ್ ಗೊತ್ತಾಗುತ್ತೆ
ಎಂಎಸ್ ಧೋನಿಯನ್ನು ಕಟ್ಟಿ ಹಾಕೋದು ಆರ್ಸಿಬಿಗೆ ಬಿಗ್ ಚಾಲೆಂಜ್
ಎಂಎಸ್ ಧೋನಿ ಹಾಗೂ ಕಿಂಗ್ ಕೊಹ್ಲಿ. ಇಬ್ಬರೂ ದಿಗ್ಗಜರು ಇದ್ದ ಕಡೆ ಮನರಂಜನೆಗೆ ಬರವಿಲ್ಲ. ದಿಗ್ಗಜ ದ್ವಯರ ಆರ್ಭಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂದು ನಡೆಯುವ ಚೆನ್ನೈ ಹಾಗೂ ಆರ್ಸಿಬಿ ಪಂದ್ಯದಲ್ಲಿ ಇವರೇ ಸೆಂಟರ್ಆಫ್ ಅಟ್ರ್ಯಾಕ್ಷನ್. ಈ ಇಬ್ಬರೂ ನಾನಾ, ನೀನಾ ಅಂತ ತೊಡೆ ತಟ್ಟಲು ಸಜ್ಜಾಗಿದ್ದಾರೆ.
ಆರ್ಸಿಬಿ ವರ್ಸಸ್ ಸಿಎಸ್ಕೆ ನಡುವಿನ ಮೆಗಾ ಬ್ಯಾಟಲ್ ಇನ್ನೇನು ಪ್ರಾರಂಭವಾಗಲಿದೆ. ಇದು ಪ್ಲೇಆಫ್ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಪಂದ್ಯ. ಹೀಗಾಗಿ ಭಾರೀ ಕೌತುಕತೆ ಮನೆ ಮಾಡಿದೆ. ಜೊತೆಗೆ ದಿಗ್ಗಜ ಕಿಂಗ್ ಕೊಹ್ಲಿ ವರ್ಸಸ್ ಮಾಸ್ಟರ್ಮೈಂಡ್ ಧೋನಿ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಇಡೀ ಕ್ರಿಕೆಟ್ ಲೋಕದ ಚಿತ್ತ, ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯದ ಮೇಲೆ ನೆಟ್ಟಿದೆ.
ಇಬ್ಬರಿಗೂ ಪ್ರತಿಷ್ಠೆ. ಗುರು-ಶಿಷ್ಯರಲ್ಲಿ ಗೆಲ್ಲೋದ್ಯಾರು..?
ಇಂದಿನ ಬ್ಯಾಟಲ್ ಕಿಂಗ್ ಕೊಹ್ಲಿ ವರ್ಸಸ್ ಲಜೆಂಡ್ ಧೋನಿ ಕದನವಾಗಿ ಮಾರ್ಪಟ್ಟಿದೆ. ಯಾಕಂದ್ರೆ ಇಬ್ಬರಿಗೂ ಇದು ಪ್ರತಿಷ್ಠೆಯ ಕದನ. ಹಾಗಾಗಿ ಚಿನ್ನಸ್ವಾಮಿಯಲ್ಲಿ ಗುರು-ಶಿಷ್ಯರಿಂದ ಪೈಸಾ ವಸೂಲಿ ಪ್ರದರ್ಶನ ಮೂಡಿ ಬರೋದು, ಪಕ್ಕಾ. ಆರ್ಸಿಬಿ ವರ್ಸಸ್ ಚೆನ್ನೈ ಇತಿಹಾಸ ಕೆದಕಿದ್ರೆ ಅದು ಕ್ಲಿಯರ್ ಆಗಿ ಗೊತ್ತಾಗುತ್ತೆ.
IPL ನಲ್ಲಿ ಸಿಎಸ್ಕೆ ವಿರುದ್ಧ ಕಿಂಗ್ ಕೊಹ್ಲಿ
ಕಿಂಗ್ ಕೊಹ್ಲಿ ಸಾಂಪ್ರದಾಯಿಕ ಎದುರಾಳಿ ಸಿಎಸ್ಕೆ ವಿರುದ್ಧ ಒಟ್ಟು 32 ಪಂದ್ಯಗಳನ್ನ ಆಡಿದ್ದಾರೆ. 124.9ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 1,006 ರನ್ ಚಚ್ಚಿದ್ದಾರೆ. 9 ಹಾಫ್ಸೆಂಚುರಿ ಬಾರಿಸಿದ್ರೆ, 90 ರನ್ ಕೊಹ್ಲಿಯ ಬೆಸ್ಟ್ ಸ್ಕೋರ್ ಆಗಿದೆ.
ಇದನ್ನೂ ಓದಿ: ನಂ-18 ಅಂದ್ರೆ ವಿರಾಟ್ ಧಗಧಗ ಉರಿತಾರೆ.. ಮೇ 18ರಂದೇ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?
ಕಿಂಗ್ ಕೊಹ್ಲಿಯಂತೆ ಧೋನಿ ಕೂಡ ಆರ್ಸಿಬಿ ವಿರುದ್ಧ ಸಾಲಿಡ್ ರೆಕಾರ್ಡ್ಸ್ ಹೊಂದಿದ್ದಾರೆ. ರೆಡ್ ಆರ್ಮಿ ಬೌಲರ್ಗಳನ್ನ ನಿರ್ದಯವಾಗಿ ದಂಡಿಸಿ, ರನ್ ಸರಮಾಲೆ ಕಟ್ಟಿದ್ದಾರೆ. ಇಂತಹ ಫಿನಿಶರ್ನನ್ನ ಇಂದು ಕಟ್ಟಿಹಾಕೋದು ಆರ್ಸಿಬಿಗೆ ಬಿಗ್ ಚಾಲೆಂಜ್ ಆಗಿದೆ.
IPL ನಲ್ಲಿ ಆರ್ಸಿಬಿ ವಿರುದ್ಧ ಧೋನಿ
ಸದ್ಯ ಅದ್ಭುತ ಫಾರ್ಮ್ನಲ್ಲಿರೋ ಧೋನಿ, ಆರ್ಸಿಬಿ ಎದುರು ಇಲ್ಲಿ ತನಕ 35 ಪಂದ್ಯಗಳನ್ನ ಆಡಿದ್ದಾರೆ. 839 ರನ್ ದಾಖಲಿಸಿದ್ರೆ, 140.7 ಇವರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಆಗಿದೆ. ಮಾಹಿ 4 ಅರ್ಧಶತಕಗಳನ್ನ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಧೋನಿ ಆರ್ಸಿಬಿ ವಿರುದ್ಧವೇ ಅತ್ಯಧಿಕ 43 ಸಿಕ್ಸರ್ಗಳನ್ನ ಸಿಡಿಸಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?
ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿ, ಧೋನಿ ದರ್ಬಾರ್..!
ರನ್ ಗಳಿಕೆ ಜೊತೆ ಚಿನ್ನಸ್ವಾಮಿ ಮೈದಾನ ಇಬ್ಬರಿಗೂ ಫೇವರಿಟ್. ಇಲ್ಲಿ ಯಾವಾಗ ಮ್ಯಾಚ್ ನಡೆದ್ರೂ, ಕಿಂಗ್ ಕೊಹ್ಲಿ ಹಾಗೂ ಧೋನಿ ಅಬ್ಬರಿಸಿ ಬೊಬ್ಬಿರಿದ್ದಾರೆ.
ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಧೋನಿ
ತವರಿನ ಅಂಗಳದಲ್ಲಿ ಕೊಹ್ಲಿ, ಚೆನ್ನೈ ವಿರುದ್ಧ 10 ಪಂದ್ಯಗಳನ್ನ ಆಡಿದ್ದಾರೆ. 73 ರನ್ ಗರಿಷ್ಠ ಸ್ಕೋರ್ ಆದ್ರೆ, 280 ರನ್ ಗಳಿಸಿದ್ದಾರೆ. ಹಾಗೇ140.70 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಧೋನಿ ಆರ್ಸಿಬಿ ಎದುರು 11 ಪಂದ್ಯಗಳನ್ನ ಆಡಿದ್ದು, ಅಜೇಯ 84 ಗರಿಷ್ಠ ರನ್ ಆಗಿದೆ. 174.26 ಸ್ಟ್ರೈಕ್ರೇಟ್ನಲ್ಲಿ 413 ರನ್ ಕಲೆಹಾಕಿದ್ದಾರೆ. ಚಿನ್ನಸ್ವಾಮಿ ದಂಗಲ್ ಕಿಂಗ್ ಕೊಹ್ಲಿ ವರ್ಸಸ್ ಧೋನಿ ಕಾಳಗವಾಗಿ ಮಾರ್ಪಟ್ಟಿದೆ. ಈ ದಿಗ್ಗಜರ ಕದನದಲ್ಲಿ ಗೆಲ್ಲೋದ್ಯಾರು, ಯಾರಿಗೆ ಯಾರು ಚಮಕ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ