ನಾಳೆಯೊಂದೇ ಬಾಕಿ.. ನಾಳಿದ್ದು ರಣ ರೋಚಕ ಪಂದ್ಯಕ್ಕೆ ಸಾಕ್ಷಿ
ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಮತ್ತು ಚೆನ್ನೈ ತಂಡದ ನಡುವಿನ ಜಟಾಪಟಿ
ಫ್ಯಾನ್ಸ್ ತುದಿಗಾಲಿನಲ್ಲಿ ಕಾದು ಕುಳಿತಿರುವ ಪಂದ್ಯಕ್ಕೆ ಆತನ ಆಶೀರ್ವಾದ ಬೇಕಷ್ಟೆ!
RCBvsCSK: ಮೇ 18. ಆ ದಿನಕ್ಕಾಗಿ ಎಲ್ಲರೂ ಕಾದು ಕುಳಿತ್ತಿದ್ದಾರೆ. ಕಾರಣ ಅಭಿಮಾನಿಗಳ ನೆಚ್ಚಿನ ಆರ್ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವಿನ ಗೆಲುವಿನ ಹೋರಾಟವಿದು. ಈ ರಣ ರೋಚಕ ಪಂದ್ಯಕ್ಕೆ ಎಲ್ಲರೂ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಪಂದ್ಯ ಏರ್ಪಡಲಿದೆ. ಐಪಿಎಲ್ನಲ್ಲಿ ಇವೆರಡು ತಂಡಗಳ ನಡುವಿನ ಪೈಫೋಟಿಗೆ ಅಭಿಮಾನಿಗಳು ಅಂದು ಟಿವಿ ಮುಂದೆ, ಸ್ಟೇಡಿಯಂ ಮುಂದೆ ಹಾಜರಾಗೋದು ಪಕ್ಕಾ. ಒಟ್ಟಿನಲ್ಲಿ ಪ್ಲೇ ಆಫ್ಗೆ ಹೋಗಲು ಅಂದು ಇತ್ತಂಡಗಳು ಸೆಣೆಸಾಡಲಿವೆ. ಹಾಗಾಗಿ ಮೇ18ರ ಪಂದ್ಯಕ್ಕೆ ಪುಟಾಣಿ ಮಕ್ಕಳಿಂದ ಹಿಡಿದು ಹಿರಿ ಜೀವಗಳು ಕೂಡ ಕಾದು ಕುಳಿತ್ತಿದ್ದಾರೆ.
ಈತನ ಆಶೀರ್ವಾದ ಬೇಕಷ್ಟೆ
ಪಂದ್ಯವೇನೋ ಬೆಂಗಳೂರಿನಲ್ಲಿ ನಡೆಯುತ್ತದೆ ನಿಜ. ಈ ಪಂದ್ಯಕ್ಕೆ ಎಲ್ಲರ ಆಶೀರ್ವಾದ ಇರುವುದು ಸಹ ನಿಜ. ಆದರೆ ವರುಣ ದೇವನ ಆಶಿರ್ವಾದ ಬೇಕಷ್ಟೆ. ಆತ ಕೃಪೆ ತೋರಿಸಿದರೆ ಚಿನ್ನಸ್ವಾಮಿಯಲ್ಲಿ ನಡೆಯುವ ಆರ್ಸಿಬಿ ಮತ್ತು ಚೆನ್ನೈ ಪಂದ್ಯ ಕಣ್ಣಾರೆ ಕಾಣಬಹುದಾಗಿದೆ. ಆದರೆ ಹವಾಮಾನ ಇಲಾಖೆಯ ಮುನ್ಸೂಚನೆ ಕೊಂಚ ಕ್ರಿಕೆಟ್ ಫ್ಯಾನ್ಸ್ ಮನದಲ್ಲಿ ಭಯ ಆವರಿಸುವಂತೆ ಮಾಡಿದೆ.
ಇದನ್ನೂ ಓದಿ: ಅಮ್ಮಾ, ಬಾಯಾರಿಕೆ ಆಗ್ತಿದೆ.. ನೀರು ಎಂದುಕೊಂಡು ಆ್ಯಸಿಡ್ ಕುಡಿದು ಮಗು ಸಾವು
ಅಷ್ಟಕ್ಕೂ ಹವಾಮಾನ ಇಲಾಖೆ ಏನು ಹೇಳಿದೆ?
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದು ರಾತ್ರಿ ಭರ್ಜರಿ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 5 ದಿನಗಳಿಂದಲೂ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಅಂತು..ಇಂತು..ಬಂತು ಎಲೆಕ್ಟ್ರಿಕ್ ನ್ಯಾನೋ ಕಾರು.. ಒಂದು ಬಾರಿ ಚಾರ್ಜ್ ಮಾಡಿದ್ರೆ 300km ಚಲಿಸುತ್ತೆ ಕಣ್ರಿ.. ಬೆಲೆ?
ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ನೀಡಿದ ಐಎಂಡಿ
ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ಬೆಂಗಳೂರಿನ ಎಲ್ಲೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಕೂಡ ತಿಳಿಸಿದೆ. ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ