newsfirstkannada.com

×

ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್‌.. ಡಿ.ಕೆ ರವಿ ಕೇಸ್‌ ಮಾದರಿ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು; ಕಾರಣವೇನು?

Share :

Published July 7, 2024 at 3:41pm

    ಬಂಧನಕ್ಕೂ ಮೊದಲೇ ಆರೋಪಿಗಳಿಂದ ಮಹತ್ವದ ಸಾಕ್ಷಿ ನಾಶ

    ರಕ್ತದ ಕಲೆ, ಕೂದಲು & ಡಿಎನ್ಎ ಪರೀಕ್ಷೆ ಜೊತೆ ಹಲವು ಪರಿಶೀಲನೆ

    ಆದಷ್ಟು ಬೇಗ ವರದಿ ನೀಡಲು FSL ಅಧಿಕಾರಿಗಳಿಗೆ ಪೊಲೀಸರ ಮನವಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದಿನಕಳೆದಂತೆ ದರ್ಶನ್ ಗ್ಯಾಂಗ್‌ಗೆ ಕಾನೂನಿನ ಬಂಧನ ಬಿಗಿಯಾಗುತ್ತಿದೆ. ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು ಸ್ವಲ್ಪವೂ ತಪ್ಪಿಸಿಕೊಳ್ಳಲು ಅವಕಾಶ ನೀಡದಂತೆ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ನೂರಾರು ಸಾಕ್ಷಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು 2 ಎಫ್ಎಸ್ಎಲ್ ಕೇಂದ್ರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ? 

ಪಟ್ಟಣಗೆರೆ ಶೆಡ್‌ನಿಂದ ಹಿಡಿದು ಮೋರಿವರೆಗೂ ತನಿಖೆ ನಡೆಸಿದ ಪೊಲೀಸರು 180ಕ್ಕೂ ಹೆಚ್ಚು ಭೌತಿಕ & ಜೈವಿಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ವಸ್ತುಗಳನ್ನು ಇದೀಗ ಎರಡೆರಡು ಕಡೆ FSL ಪರೀಕ್ಷೆಗೆ ಕಳಿಸಿದ್ದಾರೆ ಎನ್ನಲಾಗಿದೆ. ಕೆಲವು ವಸ್ತುಗಳನ್ನು ಬೆಂಗಳೂರು FSLಗೆ ರವಾನಿಸಿದ್ರೆ ಇನ್ನೂ ಹಲವು ವಸ್ತುಗಳನ್ನು ಹೈದರಾಬಾದ್ FSL ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಎಲ್ಲಿ ಯಾವ್ಯಾವ ಪರೀಕ್ಷೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿರುವ ಜೈವಿಕ ಸಾಕ್ಷಿಗಳಾದ ರಕ್ತದ ಕಲೆ, ಕೂದಲು & ಡಿಎನ್ಎ ಪರೀಕ್ಷೆಯನ್ನು ಬೆಂಗಳೂರು ಎಫ್ಎಸ್ಎಲ್​ ಕೇಂದ್ರ ಕಳುಹಿಸಲಾಗಿದೆ. ಮೊಬೈಲ್‌ ಫೋನ್​, ಸಿಸಿಟಿವಿ ಸೇರಿ ತಾಂತ್ರಿಕ ಸಾಕ್ಷ್ಯಗಳನ್ನು ಪರೀಕ್ಷೆ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಊಟ ಬಿಟ್ರೂ ಸೆಕ್ಸ್‌ ಬಿಡಲಾರೆ’- ಆ ಹಸಿವಿನ ಬಗ್ಗೆ ಸಮಂತಾ ಶಾಕಿಂಗ್‌ ಹೇಳಿಕೆ; ವಿಡಿಯೋ ವೈರಲ್‌! 

ದರ್ಶನ್ ಗ್ಯಾಂಗ್ ಬಂಧನಕ್ಕೂ ಮೊದಲೇ ಆರೋಪಿಗಳು ಸಾಕ್ಷಿಗಳನ್ನ ನಾಶ ಮಾಡಿದ್ದರು. ಆರೋಪಿಗಳು ಮೊಬೈಲ್​​ನಲ್ಲಿದ್ದ ಕಾಲ್ ಲಾಗ್, ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ಹೀಗಾಗಿ ಕೆಲವು ಮೊಬೈಲ್ & ಲ್ಯಾಪ್​​ಟಾಪ್‌ಗಳನ್ನು ಹೈದರಾಬಾದ್​ FSL ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಇವುಗಳನ್ನ ಡೇಟಾ ರಿಟ್ರೀವ್ ಮಾಡಿಸಲು ಪೊಲೀಸರ ಸತತ ಪ್ರಯತ್ನ ಮಾಡುತ್ತಿದ್ದಾರೆ.

ಈ ಹಿಂದೆ IAS ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣದಲ್ಲಿ 3 FSL ಕೇಂದ್ರದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈಗ ರೇಣುಕಾಸ್ವಾಮಿ ಕೇಸ್​​ನಲ್ಲಿ 2 FSLನಿಂದ ಸ್ಯಾಂಪಲ್​ಗಳ ಪರೀಕ್ಷೆ ಮಾಡಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಮೊಬೈಲ್ ರಿಟ್ರೀವ್, ಡಿವಿಆರ್ ರಿಟ್ರೀವ್ ಮೇಲೆ ಹೆಚ್ಚು ಗಮನ ಹರಿಸಿದ್ದು, ಸೂಕ್ಷ್ಮವಾಗಿ ತನಿಖೆ ಮಾಡುತ್ತಿದ್ದಾರೆ. ಅಲ್ಲದೇ ಆದಷ್ಟು ಬೇಗ ವರದಿ ನೀಡಲು FSL ಅಧಿಕಾರಿಗಳಿಗೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್‌.. ಡಿ.ಕೆ ರವಿ ಕೇಸ್‌ ಮಾದರಿ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು; ಕಾರಣವೇನು?

https://newsfirstlive.com/wp-content/uploads/2024/07/dk-ravi-and-darshan.jpg

Load More