Advertisment

ಮನೆಗೆ ಎಂಟ್ರಿಕೊಟ್ಟ ದೈತ್ಯ ಹೆಬ್ಬಾವು.. ಬೆಚ್ಚಿಬಿದ್ದ ಮನೆಮಂದಿ.. ಈ ಮಳೆಯಿಂದ ಏನೆಲ್ಲ ಅನಾಹುತ ಆಗುತ್ತೋ..!

author-image
Ganesh
Updated On
ಮನೆಗೆ ಎಂಟ್ರಿಕೊಟ್ಟ ದೈತ್ಯ ಹೆಬ್ಬಾವು.. ಬೆಚ್ಚಿಬಿದ್ದ ಮನೆಮಂದಿ.. ಈ ಮಳೆಯಿಂದ ಏನೆಲ್ಲ ಅನಾಹುತ ಆಗುತ್ತೋ..!
Advertisment
  • ಬೆಚ್ಚಿಗಿನ ವಾಸ ಸ್ಥಾನ ಹುಡುಕಿಕೊಂಡು ಬಂದ ಹೆಬ್ಬಾವು
  • ಹೆಬ್ಬಾವು ಹಿಡಿಯಲು ಬಂದ ಉರಗ ತಜ್ಞರು ಗಾಬರಿ..
  • ಕಾಡಂಚಿನ ಜನರೇ ಎಚ್ಚರ, ಎಚ್ಚರ.. ಯಾಕಂದ್ರೆ..!

ಮುಂಗಾರು ಮಳೆಯ ಆರ್ಭಟ ಕೇವಲ ಮನುಷ್ಯರಿಗೆ ಮಾತ್ರವಲ್ಲ, ವನ್ಯ ಜೀವಿಗಳ ಮೇಲೂ ಪರಿಣಾಮ ತಟ್ಟಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಳಿ ಕೊರೆಯಲು ಶುರುಮಾಡಿದೆ.

Advertisment

ಪರಿಣಾಮ ಸರೀಸೃಪಗಳು ತಮ್ಮ ಬೆಚ್ಚಿಗಿನ ವಾಸ ಸ್ಥಾನವನ್ನು ಕಳೆದುಕೊಂಡಿದ್ದು, ಮನೆಗಳತ್ತ ಆಶ್ರಯ ಪಡೆಯಲು ದೌಡಾಯಿಸುತ್ತಿವೆ. ಅದರಂತೆ ತೆಲಂಗಾಣದ ಕಮ್ಮಂ ಜಿಲ್ಲೆಯಲ್ಲಿರುವ ಮನೆಯೊಂದಕ್ಕೆ ಹೆಬ್ಬಾವು ಎಂಟ್ರಿಯಾಗಿ ಕುಟುಂಬದ ಸದಸ್ಯರನ್ನು ಗಾಬರಿಗೊಳಿಸಿತ್ತು.

ಜಿಲ್ಲೆಯ ವೆಂಕಟೇಶ ನಗರದ ಮನೆಗೆ ಹೆಬ್ಬಾವು ಬಂದಿತ್ತು. ಇದನ್ನು ಗಮನಿಸಿದ ಮನೆಯವರು ಉರಗ ತಜ್ಞರಿಗೆ ಮಾಹಿತಿ ನೀಡಿ, ಹಾವನ್ನು ಹಿಡಿಸಿದ್ದಾರೆ. ನಂತರ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಕಾಡಿನ ಆಸುಪಾಸಿನಲ್ಲಿ ವಾಸಿಸುತ್ತಿರುವ ಜನರೇ ಯಾವುದಕ್ಕೂ ಎಚ್ಚರದಿಂದಿರಿ. ಎಡಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಚ್ಚಗಿನ ಜಾಗ ಹುಡುಕಿಕೊಂಡು ನಿಮ್ಮ ಮನೆಗಳಿಗೆ ಹಾವುಗಳಂತಹ ವಿಷಕಾರಿ ಸರಿಸೃಪಗಳು ನಿಮ್ಮ ಮನೆಗೆ ಬರಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment