newsfirstkannada.com

ಫೈಟರ್​ ಪಂತ್​ ಕಮ್​ಬ್ಯಾಕ್​ ಕತೆಯೇ ರೋಚಕ.. ಕ್ರಿಕೆಟ್​ಗಾಗಿ ಕೆಜಿ.. ಕೆಜಿ ತೂಕ ಇಳಿಸಿಕೊಂಡ ರಿಷಬ್!

Share :

Published May 2, 2024 at 2:53pm

    ರಸಮಲೈ, ಬಿರಿಯಾನಿ, ಫ್ರೈಡ್​ ಚಿಕನ್​ಗೆ ಯಂಗ್ ಪ್ಲೇಯರ್​ ಕೊಕ್​.!

    ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿ ಮನೆಯೂಟ ತಿನ್ನುತ್ತಿದ್ದ ಪಂತ್​

    ಎನ್​ಸಿಎನಲ್ಲಿ ಫಿಟ್​​ನೆಸ್ ಅಗ್ನಿಪರೀಕ್ಷೆ ಗೆದ್ದ ಪಂತ್​, IPLನಲ್ಲಿ ಅಬ್ಬರ

ಭೀಕರ ಕಾರು ಅಪಘಾತದಲ್ಲಿ ಸಿಲುಕಿದ ರಿಷಬ್​ ಪಂತ್​​ರ ಕ್ರಿಕೆಟ್​​ ಕರಿಯರ್​ ಮುಗಿದೆ ಹೋಯ್ತು ಅಂತಾ ಬಹುತೇಕರು ಫಿಕ್ಸ್​ ಆಗಿದ್ರು. ಆದ್ರೆ ಎಲ್ಲರ ಊಹೆಯನ್ನ ರಿಷಬ್​ ಪಂತ್​ ಸುಳ್ಳಾಗಿಸಿದ್ದಾರೆ. ಅಷ್ಟಕ್ಕೂ ಈ ಪಂತ್​ ಸಾವನ್ನ ಗೆದ್ದು ಬಂದಿದ್ದೇಗೆ.? ಆಕ್ಸಿಡೆಂಟ್​ ಬಳಿಕ ಪಂತ್​ ಲೈಫ್​ ಎಷ್ಟು ಬದಲಾಗಿದೆ?. ಫೈಟರ್​​ ಪಂತ್​​ರ ಕಮ್​ಬ್ಯಾಕ್​ ಆಗಿದ್ದೇಗೆ?.

ಡಿಸೆಂಬರ್​ 30, 2022… ಇಡೀ ಕ್ರಿಕೆಟ್​​ ಲೋಕಕ್ಕೆ ಶಾಕ್​ ಕೊಟ್ಟ ದಿನ ಇದು. ಬೆಳ್ಳಬೆಳಂಗ್ಗೆ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಟೀಮ್​ ಇಂಡಿಯಾ ಡೈನಾಮಿಕ್​ ಬ್ಯಾಟ್ಸ್​​ಮನ್​ ರಿಷಬ್​ ಪಂತ್​ರ ಕಾರು ಧಗಧನೇ ಉರೀತಾ ಇತ್ತು. ಸದಾ ನಗುವೇ ತುಂಬಿರ್ತಾ ಇದ್ದ​​ ಪಂತ್​ ಮುಖ ಸಂಪೂರ್ಣ ರಕ್ತಸಿಕ್ತವಾಗಿತ್ತು.

ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ

ಇದನ್ನೂ ಓದಿ: ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ? 

ಅಂದು ಭೀಕರ ಅಫಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್​ ಆದ ಪಂತ್​, ಎಲ್ಲರೂ ಹುಬ್ಬೇರಿಸುವಂತೆ ಕ್ರಿಕೆಟ್​ ಫೀಲ್ಡ್​ಗೆ ಕಮ್​ಬ್ಯಾಕ್​​ ಮಾಡಿದ್ದಾರೆ. ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್​​ ಅಖಾಡಕ್ಕೆ ಮರಳಿರುವ ಪಂತ್​, ಬ್ಯಾಟ್​ ಹಿಡಿದು ಘರ್ಜಿಸ್ತಾ ಇದ್ದಾರೆ. ವಿಕೆಟ್​ ಹಿಂದೆಯೂ ಕೂಡ ಮ್ಯಾಜಿಕ್​ ಮಾಡ್ತಿದ್ದಾರೆ. ತಮ್ಮ ಸಾಲಿಡ್​ ಪರ್ಫಾಮೆನ್ಸ್​​ನಿಂದ ಗಮನ ಸೆಳೆದಿರೋ ಪಂತ್​, ಮುಂಬರೋ ಟಿ20 ವಿಶ್ವಕಪ್​ ತಂಡಕ್ಕೂ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ.

ಕಮ್​​ಬ್ಯಾಕ್​ ಮಾಡಲು ರಿಷಭ್​​ ಪಟ್ಟ ಕಷ್ಟ ಅಷ್ಟಿಷ್ಟಲ್ಲ.!

ಆ್ಯಕ್ಸಿಡೆಂಟ್​​ ಆದ ದಿನವೇ ಅದೆಷ್ಟೋ ಜನ ಪಂತ್​ ಕರಿಯರ್​​ ಖತಃ ಎಂದು ಭವಿಷ್ಯ ನುಡಿದಿದ್ರು. ಆದ್ರೆ, ಎಲ್ಲರ ಭವಿಷ್ಯವನ್ನ ಸುಳ್ಳಾಗಿಸಿದ ಪಂತ್​ ರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಆಕ್ಸಿಡೆಂಟ್​ಗೂ ಮುನ್ನ​ ತನ್ನ ದೇಹದ ತೂಕದ ಕಾರಣಕ್ಕೆ ಸಿಕ್ಕಾಪಟ್ಟೆ ಟೀಕೆಗೊಳಗಾಗಿದ್ರು. ಫಿಟ್​ನೆಸ್​​ ಅನ್ನ ಹಲವರು ಪ್ರಶ್ನೆ ಮಾಡಿದ್ರು. ಅಂದು ಟೀಕಿಸಿದವರೆಲ್ಲರೂ ಇಂದಿನ ಪಂತ್​ ನೋಡಿ ಶಾಕ್​ ಆಗಿದ್ದಾರೆ. ಫ್ಯಾಟಿ ಪಂತ್​ ಇದೀಗ ಫುಲ್​ ಸ್ಲಿಮ್​ & ಟ್ರಿಮ್​ ಆಗಿದ್ದಾರೆ.

13+9 = 22.. ಬರೋಬ್ಬರಿ 22KG ತೂಕ ಇಳಿಸಿಕೊಂಡ ಪಂತ್​..!

ಅಚ್ಚರಿ ಅನ್ನಿಸಿದ್ರು ಇದನ್ನ ನಂಬಲೇ ಬೇಕು. ಅಫಘಾತದಿಂದ ಚೇತರಿಸಿಕೊಳ್ತಾ ಇದ್ದ ವೇಳೆ ಪಂತ್​​ ದೇಹಕ್ಕೆ ದಿನವೊಂದಕ್ಕೆ ಕನಿಷ್ಟ 1400 ಕ್ಯಾಲೊರಿಯ ಫುಡ್​​ ಬೇಕಿತ್ತಂತೆ. ಕಾಲಿನ ಮೇಜರ್​ ಸರ್ಜರಿಗೆ ಒಳಗಾಗಿದ್ದರಿಂದ, ಮಸಲ್​​ ಬ್ಯುಲ್ಡ್​ ಮಾಡಬೇಕಾದ ಸವಾಲಿತ್ತು. ಆದ್ರೆ, ಆ ಸಮಯದಲ್ಲಿ ಕಠಿಣ ನಿರ್ಧಾರ ಕೈಗೊಂಡ ಪಂತ್​, ಕೇವಲ 1,000 ಕ್ಯಾಲೋರಿಯಷ್ಟು ಪ್ರಮಾಣದಲ್ಲಿ ಮಾತ್ರ ಫುಡ್​ ಸೇವಿಸ್ತಿದ್ರಂತೆ. ಇದ್ರ ಪರಿಣಾಮವೇ ಐಪಿಎಲ್​​ಗೂ ಮುನ್ನ 13 ಕೆಜಿ​, ಇದೀಗ ಐಪಿಎಲ್​ ನಡುವೆ 9 ಕೆಜಿ ಒಟ್ಟಾರೆ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ತೂಕ ಇಳಿಸಿಕೊಂಡಿದ್ರ ಹಿಂದಿದೆ ಆಲಿವ್​ ಎಣ್ಣೆಯ ಸೀಕ್ರೆಟ್​.!

ಆಕ್ಸಿಡೆಂಟ್​​ಗೂ ಮುನ್ನ ಪಂತ್​​ ಫಿಟ್​​ನೆಸ್​​ ಕಡೆಗೆ ಹೆಚ್ಚು ಗಮನ ನೀಡ್ತಾ ಇರಲಿಲ್ಲ. ಆದ್ರೆ, ಚೇತರಿಕೆಯ ಹಂತದಲ್ಲಿ ಕಟ್ಟು ನಿಟ್ಟಿನ ಡಯಟ್​ ಪಾಲಿಸಿದ್ರು. ಅತಿ ಹೆಚ್ಚು ಇಷ್ಟ ಪಡ್ತಿದ್ದ ರಸಮಲೈ, ಬಿರಿಯಾನಿ, ಫ್ರೈಡ್​ ಚಿಕನ್​ ಅನ್ನ ಆ ಬಳಿಕ ತಿಂದೇ ಇಲ್ವಂತೆ. ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದ ವೇಳೆ ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿದ್ದ ಪಂತ್​, ಮನೆಯೂಟವನ್ನೇ ಮಾಡ್ತಿದ್ರು. ತೂಕ ಇಳಿಸಿಕೊಳ್ಳೋ ಗುರಿ ಇಟ್ಟುಕೊಂಡಿದ್ದ ಪಂತ್​, ಪ್ರತಿ ಅಡಿಗೆಯಲ್ಲೂ 5ML ಹೆಚ್ಚೇ OLIVE OIL ಬಳಸ್ತಿದ್ರು. ಪ್ರೋಟಿನ್​ಗಾಗಿ ಚಿಲ್ಲಿ ಚಿಕನ್​ ತಿಂತಿದ್ದ ಪಂತ್​, ಅದಕ್ಕೂ ಹೆಚ್ಚಿನ OLIVE OIL ಬಳಸ್ತಿದ್ರು.

ನಿದ್ದೆಯಲ್ಲೂ ನೋ ಕಾಂಪ್ರಮೈಸ್ ಎಂದಿದ್ದ ಪಂತ್​​​​.!

ಬೆಂಗಳೂರಿನ ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದ ವೇಳೆ ಊಟ -ತಿಂಡಿ ವಿಚಾರದಲ್ಲಿ ಮಾತ್ರವಲ್ಲ.. ನಿದ್ದೆಯ ವಿಚಾರದಲ್ಲೂ ಪಂತ್​ ನೋ ಕಾಂಪ್ರಮೈಸ್​ ಎಂದಿದ್ರು. ಮೊಬೈಲ್​, ಟಿವಿ, ಐಪ್ಯಾಡ್​​ ಎಲ್ಲವನ್ನೂ ಬದಿಗಿರಿಸಿ ರಾತ್ರಿ ಸರಿಯಾಗಿ 11 ಗಂಟೆಗೆ ಮಲಗಿ ಬಿಡ್ತಿದ್ರು. 8 ರಿಂದ 9 ಗಂಟೆಗಳ ಕಾಲ UNINTERRUPTED ನಿದ್ದೆ ಮಾಡ್ತಿದ್ರು. ದೇಹಕ್ಕೆ ನೀಡ್ತಾ ಇದ್ದ ಈ ವಿಶ್ರಾಂತಿ ಕೂಡ ಬಹುಬೇಗ ಚೇತರಿಸಿಕೊಳ್ಳಲು ಸಹಾಯ ಮಾಡ್ತು ಅನ್ನೋದು ಎನ್​ಸಿಎ ಡಾಕ್ಟರ್ಸ್​ ಹೇಳೋ ಮಾತಾಗಿದೆ.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್​​ಗೆ ಬಿಗ್ ಶಾಕ್​.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ​

ಬಹುತೇಕ ಫಿಟ್​ ಆದ ಬಳಿಕ ಅಭ್ಯಾಸದ ಅಖಾಡಕ್ಕೆ ಎಂಟ್ರಿ.!

ಕಟ್ಟು ನಿಟ್ಟಿನ ಡಯಟ್​ನಿಂದಾಗಿ ವೇಗವಾಗಿ ಚೇತರಿಸಿಕೊಂಡ ಪಂತ್​​, ಬಹುತೇಕ ಫಿಟ್​ ಆದ ಬೆನ್ನಲ್ಲೇ ಅಭ್ಯಾಸ ಕಣಕ್ಕೆ ಧುಮುಕಿದ್ರು. ಫಿಟ್​​ನೆಸ್​ ಸಾಧಿಸುವ ಹಂತದಲ್ಲಿ ದಿನಕ್ಕೆ 2ವರೆ ಗಂಟೆ ಬ್ಯಾಟಿಂಗ್​ ಅಭ್ಯಾಸ ಮಾಡಿದ್ರು. ಬಳಿಕ ಹತ್ತಿರವಾದ ಸಂದರ್ಭದಲ್ಲಿ 45 ನಿಮಿಷಗಳ ಕಾಲ ಕೀಪಿಂಗ್​ ಅಭ್ಯಾಸವನ್ನೂ ನಡೆಸಿದ್ರು. ಬಳಿಕ ಎನ್​ಸಿಎನಲ್ಲಿ ಫಿಟ್​​ನೆಸ್ ಅಗ್ನಿಪರೀಕ್ಷೆ ಗೆದ್ದ ಪಂತ್​, ಇದೀಗ ಐಪಿಎಲ್​ ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ.

ಇದನ್ನೂ ಓದಿ: ಕರೆಂಟ್​ ಕಂಬಕ್ಕೆ ಕ್ರೂಸರ್​ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ 

ಮೊದಲು ಪಂತ್​​ ಆನ್​ಫೀಲ್ಡ್​ನಲ್ಲಿ ಕೆಚ್ಚೆದೆಯ ಹೋರಾಟವನ್ನ ಇಡೀ ಕ್ರಿಕೆಟ್​ ಲೋಕವೇ ನೋಡಿತ್ತು. ಇದೀಗ ಸಾವಿನ ವಿರುದ್ಧ ಸಮರ ಸಾರಿ ಗೆದ್ದು ಪಂತ್​​ರನ್ನ ನೋಡಿದ್ದಾಗಿದೆ. ಸಾವನ್ನೇ ಗೆದ್ದು ಬಂದಿರೋ ಪಂತ್​ರ ಸೆಕೆಂಡ್​ ಇನ್ನಿಂಗ್ಸ್​ ಅದ್ಭುತವಾಗಿರಲಿ. ಆನ್​ & ಆಫ್​ ಫೀಲ್ಡ್​ನಲ್ಲಿ ಅಭಿಮಾನಿಗಳನ್ನ ರಂಜಿಸಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಫೈಟರ್​ ಪಂತ್​ ಕಮ್​ಬ್ಯಾಕ್​ ಕತೆಯೇ ರೋಚಕ.. ಕ್ರಿಕೆಟ್​ಗಾಗಿ ಕೆಜಿ.. ಕೆಜಿ ತೂಕ ಇಳಿಸಿಕೊಂಡ ರಿಷಬ್!

https://newsfirstlive.com/wp-content/uploads/2024/03/RISHABH_PANTH.jpg

Load More