/newsfirstlive-kannada/media/media_files/2025/09/28/cockroach-sudhi-2025-09-28-12-22-55.jpg)
ಬಿಗ್ ​​ಬಾಸ್​ ಮನೆಗೆ ಹೋಗ್ತಿರೋ ಮೂವರು ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ರಿವೀಲ್ ಮಾಡಿದೆ. ನಿನ್ನೆ ನಡೆದ ‘ಕ್ವಾಟ್ಲೆ ಕಿಚನ್’ ಫಿನಾಲೆಯಲ್ಲಿ ಮೂವರ ಹೆಸರನ್ನು ಅನಾವರಣ ಮಾಡಿದ್ದು, ಕಾಕ್ರೋಚ್ ಸುಧಿ, ಮಾತಿನ ಮಲ್ಲಿ ಮಲ್ಲಮ್ಮ ಹಾಗೂ ಮಂಜು ಭಾಷಿಣಿ ದೊಡ್ಮನೆಗೆ ಎಂಟ್ರಿ ನೀಡ್ತಿದ್ದಾರೆ ಎಂದು ತಿಳಿಸಿದೆ.
ಕ್ರಾಕೋಚ್​ ಸುಧಿ ಯಾರು..?
ಕೆಲವು ದಿನಗಳ ಹಿಂದೆ ಕಲರ್ಸ್​ ಕನ್ನಡ ವಿಡಿಯೋ ಒಂದನ್ನ ಬಿಡುಗಡೆ ಮಾಡಿತ್ತು. ಅದರಲ್ಲಿ ಮಾಸ್ಕ್​ ಮ್ಯಾನ್ ಒಬ್ಬ ತಾನು ಬಿಗ್​ಬಾಸ್​ಗೆ ಹೋಗ್ತೀನಿ ಎಂದು ಜನರ ಬಳಿ ನೇರವಾಗಿ ಹೇಳಿ ಅಭಿಪ್ರಾಯ ಸಂಗ್ರಹಿಸಿದ್ದ. ನಿಗೂಢತೆ ಹೊಂದಿದ್ದ ವ್ಯಕ್ತಿ ಯಾರು, ಯಾರು ಎಂಬ ಪ್ರಶ್ನೆ ಕೇಳಿಬಂದಿತ್ತು. ಇದೀಗ ಆತ ಯಾರು ಅನ್ನೋದನ್ನು ವಾಹಿನಿ ರಿವೀಲ್ ಮಾಡಿದೆ. ಇಂದು ಸಂಜೆ ಆರು ಗಂಟೆಗೆ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಬಿಗ್​ಬಾಸ್ ಮನೆಗೆ ಎಂಟ್ರಿ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಕಾಕ್ರೋಚ್ ಸುಧಿ ಬೇರೆ ಯಾರೂ ಅಲ್ಲ. ಸ್ಯಾಂಡಲ್​ವುಡ್​​ ನಟ. ಇವರ ಹೆಸರು ಸುಧೀರ್ ಬಾಲರಾಜ್. ಶಿವಣ್ಣ ಅಭಿನಯದ ‘ಟಗರು’ ಸಿನಿಮಾದಲ್ಲಿ ‘ಕಾಕ್ರೋಚ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ‘ಕಾಕ್ರೋಚ್ ಸುಧಿ’ ಎಂದೇ ಖ್ಯಾತರಾದರು. ಇತ್ತೀಚೆಗೆ ಅವರು ನಟಿಸುತ್ತಿರುವ ‘ಚೈಲ್ಡು’ ಚಿತ್ರ ಸೆಟ್ಟೇರಿದೆ. ಅವರು ನಾಯಕರಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಸುಮಾರು 10ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಕಾಕ್ರೋಚ್, ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.
‘ಅಲೆಮಾರಿ’ ಸಿನಿಮಾ ಮೂಲಕ ಇಂಡಸ್ಟ್ರೀಗೆ ಕಾಲಿಟ್ಟಿರುವ ಸುಧಿಗೆ ‘ಟಗರು’ ಸಿನಿಮಾ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತು. ‘ಸಲಗ’ ಸಿನಿಮಾದಲ್ಲಿ ‘ಸಾವಿತ್ರಿ’ ಪಾತ್ರ ತುಂಬಾ ಫೇಮಸ್ ಆಯಿತು. ಫೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಾಕ್ರೋಚ್ ಸುಧಿ, ಬರೀ ನಟನಲ್ಲ ಅದ್ಭುತ ಆರ್ಟ್ ಕೂಡ ಮಾಡುತ್ತಾರೆ. ವಿಲನ್ ರೋಲ್‌ಗಳು, ಕಾಮಿಕ್ ಟೈಮಿಂಗ್, ಡೈಲಾಗ್ ಮತ್ತು ಎನರ್ಜಿ ವೀಕ್ಷಕರನ್ನ ಆಕರ್ಷಿಸುತ್ತವೆ ಅನ್ನೋದ್ರಲ್ಲಿ ಡೌಟಿಲ್ಲ. ನಾನು ತುಂಬಾ ವೈಲೆಂಟು, ತುಂಬಾ ಆ್ಯರೋಗೆಂಟ್ ಎನ್ನುತ್ತ ಬಿಗ್​ಬಾಸ್​ಗೆ ಎಂಟ್ರಿ ನೀಡಿರುವ ಇವರು, ವೀಕ್ಷಕರ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದ್ದಾರೆ.
ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂವರು ಸ್ಪರ್ಧಿಗಳು.. ಯಾರಿವರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ