/newsfirstlive-kannada/media/media_files/2025/10/06/bigg-boss-4-2025-10-06-12-42-51.jpg)
ಬಿಗ್‌ಬಾಸ್ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಹಾಕಿದ ಬಳಿಕ ಸ್ಪರ್ಧಿಗಳನ್ನು ಈಗಲ್‌ಟನ್ ರೆಸಾರ್ಟ್ ಶಿಫ್ಟ್ ಮಾಡಲಾಗಿದೆ. ವಿಷಯ ತಿಳಿದ ಬೆನ್ನಲ್ಲೇ ವೀಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ನಿನ್ನೆಯ ದಿನ ಬಿಗ್​ಬಾಸ್​ ಕಾರ್ಯಕ್ರಮ ಪ್ರಸಾರವಾಗಿದೆ. ಇವತ್ತಿನಿಂದ ಶೋ ಪ್ರಸಾರ ಆಗಲಿದೆಯಾ? ಇಲ್ಲವಾ ಎಂಬ ಅನುಮಾನದಲ್ಲಿದ್ದಾರೆ.
ಈ ಗೊಂದಲದ ನಡುವೆ ಕಲರ್ಸ್​ ಕನ್ನಡ ಬಿಗ್​ಬಾಸ್ ವೀಕ್ಷಕರಿಗೆ ಗುಡ್​ನ್ಯೂಸ್​ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಪ್ರೊಮೋ ಶೇರ್ ಮಾಡಿದ್ದು, ಅದರಲ್ಲಿ ಸ್ಪರ್ಧಿಗಳು ಕಿತ್ತಾಡುತ್ತಿರೋದನ್ನು ನೋಡಬಹುದು. ಮನೆಯಲ್ಲಿ ನಿನ್ನೆ ಆಗಿರುವ ಘಟನೆಯನ್ನು ಪ್ರೊಮೋದಲ್ಲಿ ಶೇರ್ ಮಾಡಲಾಗಿದೆ. ಅದರಲ್ಲಿ ಊಟದ ವಿಚಾರಕ್ಕೆ ರಕ್ಷಿತಾ ಶೆಟ್ಟಿ ರೊಚ್ಚಿಗೆದ್ದಿದ್ದಾರೆ. ಇದರಿಂದ ಬಿಗ್​ಬಾಸ್ ಮನೆಯಲ್ಲಿ ದೊಡ್ಡ ರಂಪಾಟವೇ ಆಗಿದೆ. ಪ್ರೊಮೋ ನೋಡಿದ ವೀಕ್ಷಕರು ಕೊಂಚ ಸಮಾಧಾನದಲ್ಲಿದ್ದಾರೆ.
ಬಿಗ್​ಬಾಸ್ ನಿಲ್ಲಲ್ಲ. ಇವತ್ತೂ ಪ್ರಸಾರವಾಗಲಿದೆ. ಕಾನೂನು ಹೋರಾಟದ ಮೂಲಕ ಮನರಂಜನೆ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಸದ್ಯ ಬಿಗ್​ಬಾಸ್​ ಮನೆ ಖಾಲಿ ಖಾಲಿಯಾಗಿದೆ. ಸ್ಪರ್ಧಿಗಳನ್ನ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ:ಬಿಗ್​​ಬಾಸ್ ಮನೆಗೆ ಬೀಗ.. ಈಗ ಸ್ಪರ್ಧಿಗಳು ಏನು ಮಾಡ್ತಿದ್ದಾರೆ..?
ಕೆರಳಿದ ರಕ್ಷಿತಾನನ್ನ ಕಂಡು ಅಸುರಾಧಿಪತಿ ಗಪ್ಚುಪ್
— Colors Kannada (@ColorsKannada) October 8, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/pxRqDBZOsg
ಆಗಿದ್ದೇನು..?
ಬಿಗ್‌ಬಾಸ್ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿದ್ದು ಅಷ್ಟರಲ್ಲಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟ ತಹಶೀಲ್ದಾರ್, ಬಿಗ್​ಬಾಸ್​ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದು, ಕಂಟೆಸ್ಟಟ್​ಗಳನ್ನ ಮಾಸ್​ ಆಗಿ ಎಲಿಮಿನೇಟ್​ ಮಾಡಿದ್ದಾರೆ.. ಜಾಲಿವುಡ್​ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ಜಾಲಿವುಡ್​ ಸ್ಟುಡಿಯೋಗೆ ನೋಟಿಸ್ ನೀಡಲಾಗಿತ್ತು. ರಾಮನಗರದ ತಹಶೀಲ್ದಾರ್ ತೇಜಸ್ವಿನಿ ಅವರು ಸ್ಟುಡಿಯೋಗೆ ಬೀಗ ಜಡಿದಿದ್ದಾರೆ.
ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂದು ಜೆಡಿಎಸ್ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ