/newsfirstlive-kannada/media/media_files/2025/09/29/dog-satish-4-2025-09-29-10-49-47.jpg)
ಬಿಗ್​ಬಾಸ್​ (Bigg Boss) ಮನೆಯಲ್ಲಿ ವ್ಯಕ್ತಿತ್ವದ ಆಟ ಶುರುವಾಗಿದೆ. ವಿಭಿನ್ನ ವ್ಯಕ್ತಿ, ವಿಭಿನ್ನ ಮನಸ್ಸುಗಳ ಮಧ್ಯೆ ಗೆಲುವಿನ ಕನಸು ಕಂಡು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅಂತೆಯೇ ವಿಶೇಷ ವ್ಯಕ್ತಿಯೊಬ್ಬರು ಬಿಗ್​ಬಾಸ್​ ಮನೆಯಲ್ಲೀಗ ಹೆಚ್ಚು ಚರ್ಚೆ ಆಗ್ತಿದ್ದಾರೆ. ಅವರೇ ಡಾಗ್ ಸತೀಶ್!
ಯಾರು ಈ ಡಾಗ್ ಸತೀಶ್..?
ಸತೀಶ್ ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಸೇರಿದಂತೆ ವಿವಿಧ ರೀತಿಯ ನಾಯಿಯನ್ನು ಖರೀದಿಸೋದೇ ಇವರ ಕಾಯಕ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರುತ್ತಾರೆ. ನಂತರ ಇನ್ನೊಂದು ನಾಯಿ ತಗೊಳ್ತಾರೆ. ಅವರ ಕ್ಯಾಡಬೊಮ್ ಕೆನ್ನೆಲ್ಸ್ ಎಂಬ ಕೆನ್ನೆಲ್ ನಡೆಸುತ್ತಾರೆ. ವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್ ಬ್ರೀಡರ್ ಆಗಿರುವ ಇವರನ್ನ ‘ಗ್ಲೋಬಲ್ ಸೂಪರ್‌ಸ್ಟಾರ್’ ಎಂದು ಕರೆಯುತ್ತಾರೆ.
ಬಿಗ್​ಬಾಸ್ ವೇದಿಕೆಯಲ್ಲಿ ಅವರೇ ಹೇಳಿಕೊಂಡಿರುವಂತೆ.. ಸತೀಶ್ ಅವರಿಗೆ ಮೊದಲಿನಿಂದಲೂ ನಾಯಿ ಅಂದರೆ ಇಷ್ಟ. ಚಿಕ್ಕ ವಯಸ್ಸಿನಲ್ಲಿದ್ದಾಗ ತಂದೆ ನಾಯಿ ಒಂದನ್ನ ಕೊಡಿಸಿದ್ದರು. ಬಳಿಕ ಶ್ವಾನದಲ್ಲಿ ಒಂದಷ್ಟು ತಳಿಗಳಿವೆ ಎಂದು ಗೊತ್ತಾಗಿದೆ. ಕೊನೆಗೆ ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಸತೀಶ್ ಬಳಿ ನೂರು ಕೋಟಿ ರೂಪಾಯಿ ಮೌಲ್ಯದ ನಾಯಿ ಇದೆ. ಕತ್ತೆಯಷ್ಟು ಸೈಜ್ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ.
ವಿಟಿಯಲ್ಲಿ ಅವರೇ ಹೇಳಿರುವಂತೆ.. ನನಗೆ ನಾಯಿ ಅಂದ್ರೆ ಇಷ್ಟ. 6ನೇ ಕ್ಲಾಸ್​​ನಲ್ಲಿ ಇದ್ದಾಗ ಅಪ್ಪ ಕ್ರಾಸ್ ಬ್ರೀಡ್ ಡಾಗ್ ಕೊಡಿಸಿದ್ರು. ನಾಯಿಗಳಿಗೂ ಬೆಲೆ ಇದೆ ಎಂದು ಆಗ ಗೊತ್ತಾಗುತ್ತದೆ. ರೇರ್ ಬ್ರೀಡ್​ಗಳನ್ನು ನಾನು ಭಾರತಕ್ಕೆ ತರಿಸಿಕೊಳ್ಳೋಕೆ ಆರಂಭಿಸಿದೆ. ಫಂಕ್ಷನ್​ಗೆ ನಾನು ಒಬ್ಬನೇ ಹೋದರೆ ನನ್ನ ಗುರುತಿಸಲ್ಲ. ಶ್ವಾನದ ಜೊತೆ ಹೋದ್ರೆ ನನ್ನ ಗುರುತಿಸ್ತಾರೆ ಎಂದಿದ್ದಾರೆ.
ಈಗಾಗಲೇ ಮದುವೆ ಆಗಿರುವ ಸತೀಶ್ ಪತ್ನಿಯಿಂದ ದೂರ ಇದ್ದಾರೆ. ಮಗನಿಗೋಸ್ಕರ ಇನ್ನೊಂದು ಮದುವೆ ಆಗಿಲ್ಲ. ಮುಂದೆ ಬರೋರು ಹೇಗೆ ಇರುತ್ತಾರೋ ಗೊತ್ತಿರಲ್ಲ. ನನ್ನ ಮಗನಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ನಾನು ಮದುವೆ ಆಗಿಲ್ಲ ಎಂದು ಹೇಳಿದ್ದಾರೆ. ಪಕ್ಕಾ ಬ್ಯುಸಿನೆಸ್​ ಮೈಂಡ್ ಹೊಂದಿರೋ ಇವರು, ಬಿಗ್​ಬಾಸ್ ಮನೆಗೆ ಬರೋದಕ್ಕಾಗಿ 25 ಲಕ್ಷ ರೂಪಾಯಿ ಕೊಟ್ಟು ಬಟ್ಟೆ ಖರೀದಿ ಮಾಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:BBK12; ಒಟ್ಟು ಎಷ್ಟು ಕಂಟೆಸ್ಟೆಂಟ್ಸ್​ ದೊಡ್ಮನೆಗೆ ಎಂಟ್ರಿ ಆಗಿದ್ದಾರೆ.. ಅವರು ಯಾರೆಂದು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ