/newsfirstlive-kannada/media/media_files/2026/02/13/karna-serial-riya-1-2026-02-13-15-21-05.jpg)
ಕರ್ಣ ಹೊಸ ಅಧ್ಯಾಯ ಶುರುವಾಗಿದೆ. ಇಷ್ಟು ದಿನ ತಂದೆಯನ್ನ ಹೆಚ್ಚಾಗಿ ಪ್ರಿತಿಸ್ತಿದ್ದ ಕರ್ಣ ತಂದೆ ಮಾಡಿದ ಅನ್ಯಾಯ ತಿಳಿದು ಸೇಡು ತೀರಿಸಿಕೊಳ್ತಿದ್ದಾನೆ. ಇದನ್ನ ಕಂಡ ವೀಕ್ಷಕರಂತು ಸಖತ್​ ಖುಷಿಯಾಗಿದ್ದಾರೆ. ಈ ಗ್ಯಾಪ್​ನಲ್ಲಿ ಕರ್ಣ ಧಾರವಾಹಿಗೆ ಹೊಸ ಪಾತ್ರ ರಿಯಾ ಎಂಟ್ರಿ ಆಗಿದೆ. ಅದ್ರಲ್ಲೂ ರಿಯಾ ಮೊದಲಿಗೆ ಸಂಜಯ್​ನನ್ನ ಭೇಟಿಯಾಗಿದ್ದಾಳೆ. ಹಾಗದ್ರೆ ಮುಂದೆ ರಿಯಾ ಸಂಜಯ್​ ಲವರ್ಸ್​ ಆಗ್ತಾರಾ. ಅಥವಾ ಸಂಜಯ್​ಗೆ ರಿಯಾ ಪಾಠ ಕಲಿಸ್ತಾಳ ಎಂಬುದೇ ಸದ್ಯಕಿರೋ ಕ್ಯೂರಿಯಾಸಿಟಿ.
ಇದನ್ನೂ ಓದಿ: ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ಕ್ಯಾಬಿನೆಟ್ ನಿರ್ಧಾರ
/filters:format(webp)/newsfirstlive-kannada/media/media_files/2026/02/13/karna-serial-riya-2-2026-02-13-15-22-30.jpg)
ಸಂಜಯ್.. ತಂದೆ ರಮೇಶ್​ನಂತೆಯೇ ಬಹಳ ದುರಹಂಕಾರಿ. ಬಹಳ ಕೆಟ್ಟವನು. ತಂದೆ ಜೊತೆ ಸೇರಿ ಸಾಕಷ್ಟು ಕೆಟ್ಟ ಕೆಲಸಗಳಲ್ಲಿ ಭಾಗಿ ಆಗ್ತಿದ್ದ.. ಕೊಬ್ಬಿನಿಂದ ಮೆರೆಯುತ್ತಿದ್ದ ಸಂಜಯ್​ ಬಾಳಲ್ಲಿ ಪ್ರೀತಿಗೆ ಜಾಗವೇ ಇಲ್ಲ... ಅವನ ಮನಸಲ್ಲಿರೋದು ಬರೀ ದ್ವೇಷ ಅಷ್ಟೇ. ಆದ್ರೆ ಇದೀಗ ಯಾಕೋ ಸಂಜಯ್​ಗೂ ಸೈಕಲ್​ ಗ್ಯಾಪ್​ನಲ್ಲಿ ಲವ್​ ಆಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ಕರ್ಣ ಧಾರವಾಹಿಗೆ ಹೊಸದಾಗಿ ಎಂಟ್ರಿಯಾಗಿರೋ ರಿಯಾ..
ಸಂಜಯ್​ ಬೈಕ್​ನಲ್ಲಿ ಹೋಗೊ ವೇಳೆ ಬೈಕ್​ ಕೈಕೊಡುತ್ತೆ.. ಹೀಗಾಗಿ ಸಂಜಯ್ ಬೈಕ್​ನಿಂದ ಇಳಿದು ಆಟೋವನ್ನ ಕರಿತ್ತಾನೆ.. ಈ ವೇಳೆ ರಿಯಾ ಕೂಡ ಅದೇ ಸಮಯಕ್ಕೆ ಸರಿಯಾಗಿ ಆಟೋವನ್ನ ಕರಿತ್ತಾಳೆ...ಇಬ್ಬರು ಆಟೋ ಹತ್ತಲು ಬಂದಾಗ ಡಿಕ್ಕಿ ಹೊಡೆದುಕೊಳ್ತಾರೆ... ಬಳಿಕ ಇಬ್ಬರೂ ಒಂದೇ ಆಟೋದಲ್ಲಿ ಕಾಲೇಜಿಗೆ ಬರ್ತಾರೆ.. ಆದ್ರೆ ಆಟೋದಿಂದ ಇಳಿದ ಮೇಲೆ ಸಂಜಯ್​ ರಿಯಾ ಬಳಿ ಆಟೋಗೆ ಕೊಡಲು 7 ರೂಪಾಯಿ ಸಾಲ ಮಾಡ್ತಾನೆ..
ಇದನ್ನೂ ಓದಿ:ಅಕ್ಕನಿಗಿಂತ ತಮ್ಮನಿಗೆ ಮೊದಲು ಮದುವೆ..? ಕ್ರಿಕೆಟ್ ದೇವರ ಮನೆಯಲ್ಲಿ ಆಗಿದ್ದೇನು..?
/filters:format(webp)/newsfirstlive-kannada/media/media_files/2026/02/13/karna-serial-riya-2026-02-13-15-22-46.jpg)
ಒಂದೊಂದು ರೂಪಾಯಿಗೂ ಲೆಕ್ಕ ಹಾಕೋ ರಿಯಾ ಕೈಯಲ್ಲಿ ಸಿಲುಕಿ ಸಂಜಯ್​ ಒದ್ದಾಡ್ತಿದ್ದಾನೆ ... ಸದ್ಯ ಸಂಜಯ್​ನನ್ನ ಚಿಲ್ಲರೆ ಡಾಕ್ಟರ್​ ಅಂತಾ ಕರಿಯೋಕೆ ರಿಯಾ ಶುರುಮಾಡಿದ್ದಾಳೆ.. ಇಷ್ಟು ದಿನ ವಿಲನ್​ ಆಗಿ ಕಾಣ್ತಿದ್ದ ಸಂಜಯ್​, ಇದೀಗ ರಿಯಾ ಜೊತೆ ಕೋಳಿ ಜಗಳ ಮಾಡ್ತಿರೋದು ವೀಕ್ಷಕರಿಗೆ ಸಖತ್​ ಮಜಾ ನೀಡ್ತಿದೆ..
ರಿಯಾ ಪಾತ್ರದಲ್ಲಿ ಅಭಿನಯ್ತಿಸ್ತಿರೋದು ನಟಿ ಅಂಕಿತಾ ಜಯರಾಮ್.. ಬಾಲ ನಟಿಯಾಗಿ ಅನೇಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಅಷ್ಟೇ ಯಾಕೆ ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿಯೂ ನವೀನ್​ ಕೃಷ್ಣ ಅವರ ಮಗಳ ಪಾತ್ರ ಮಾಡಿ ವೀಕ್ಷಕರ ಮನ ಗೆದ್ದಿದ್ರು.
ಮುಂದೆ ಸಂಜುಗೆ ಮಾರಿ ಹಬ್ಬ ಇದ್ಯಾ.. ಅಥವಾ ಸಂಜು ರಿಯಾ ಲವ್​ನಲ್ಲಿ ಬಿಳ್ತಾರಾ? ವಿಲನ್​ ಆಗಿದ್ದ ಸಂಜಯ್​ ಲವರ್​ ಬಾಯ್​ ಆಗ್ತಾನಾ? ರಿಯಾ ಪಾತ್ರ ಯಾವ ಯಾವ ರೀತಿಯ ಟ್ವಿಸ್ಟ್ ಅಂಡ್ ಟರ್ನ್ ನೀಡುತ್ತೆ ಎಂಬುದು ಎಂಬುದನ್ನ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us