/newsfirstlive-kannada/media/media_files/2025/09/29/malu-nipanala-2025-09-29-12-45-27.jpg)
ಬಿಗ್​ಬಾಸ್​ ಮನೆಗೆ ‘ನಾ ಡ್ರೈವರಾ, ನೀ ನನ್ನ ಲವ್ವರಾ..’ ಹಾಡಿನ ಖ್ಯಾತಿಯ ದೇಸಿ ಸಿಂಗರ್ ಮಾಳು ನಿಪನಾಳ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಗಳಿಸಿರುವ ಇವರಿಗೆ ಬಿಗ್​ಬಾಸ್ ದೊಡ್ಡ ವೇದಿಕೆ ಕಲ್ಪಿಸಿದೆ. ಮಾಳು ನಿಪನಾಳ ಯಾರು ಅನ್ನೋದ್ರ ವಿವರ ಇಲ್ಲಿದೆ.
ಯಾರು ಈ ಮಾಳು ನಿಪನಾಳ?
ಮಾಳು ನಿಪನಾಳು ಯೂಟ್ಯೂಬ್ ಮೂಲಕ ಜನಪ್ರಿಯತೆ ಪಡೆದವರು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದ ಅಪ್ಪಟ ಹಳ್ಳಿಯ ಪ್ರತಿಭೆ. ಇವರ ‘ನಾ ಡ್ರೈವರಾ, ನೀ ನನ್ನ ಲವ್ವರಾ’ ಎಂಬ ಹಾಡು ಇಡೀ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಜನ ಫಿದಾ ಆಗಿದ್ದರು. ಯೂಟ್ಯೂಬ್ ಒಂದರಲ್ಲೇ ಬರೋಬ್ಬರಿ 250 ಮಿಲಿಯನ್ಸ್ ವೀವ್ಸ್​​ ಕಂಡು ಮನೆಮಾತಾದರು. ಇನ್ನೊಂದು ವಿಶೇಷ ಅಂದರೆ ಇವರ ಯೂಟ್ಯೂಬ್ ಚಾನಲ್​​ಗೆ 2 ಮಿಲಿಯನ್​ಗಿಂತಲೂ ಹೆಚ್ಚು ಸಬ್​ಸ್ಕ್ರೈಬರ್ಸ್​ ಇದ್ದಾರೆ.
ಸಿನಿಮಾದಲ್ಲೂ ಹಾಡಿದ್ದಾರೆ
ಯೋಗರಾಜ್ ಭಟ್ ನಿರ್ದೇಶನ ‘ಕರಟಕ ದಮನಕ’ ಚಿತ್ರದ ಜನಪ್ರಿಯ ಹಾಡು ‘ಹಿತ್ತಲಕ ಕರೀಬ್ಯಾಡ್ ಮಾವ..’. ಈ ಹಾಡನ್ನು ಹಾಡಿದ್ದು ಮಾಳು ನಿಪನಾಳ. ಇದು ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅಲ್ಲಿಂದ ಇವರಿಗೆ ಮತ್ತಷ್ಟು ದೊಡ್ಡ ಮೊಟ್ಟದಲ್ಲಿ ಬೇಡಿಕೆ ಬಂತು. ಬಿಗ್​ಬಾಸ್​​ ವಿಟಿಯಲ್ಲಿ ಹೇಳಿದಂತೆ.. ಮಾಳು ಚಿಕ್ಕವಯಸ್ಸಿನಲ್ಲಿ ಡೊಳ್ಳು ಕಲಾವಿದ. ‘ನಾನು 12ನೇ ವಯಸ್ಸಿನಿಂದಲೇ ಹಾಡುತ್ತಿದ್ದೆ. ಜಾತ್ರೆಗಳಲ್ಲಿ ಹಾಡುತ್ತಿದ್ದೆ. ನಂತರ ನನಗೆ ಬೇಡಿಕೆ ಹೆಚ್ಚಾಗುತ್ತ ಬಂದು, ಬೆಳಗಾವಿ ಜಿಲ್ಲೆಯ ಒಂದು ಹಳ್ಳಿಯನ್ನೂ ನಾನು ಬಿಟ್ಟಿಲ್ಲ. ಎಲ್ಲಾ ಕಡೆ ಹಾಡಿದ್ದೇನೆ ಎಂದಿದ್ದಾರೆ.
ಇನ್ನು, ನನ್ನನ್ನು ಹೊರದೇಶದಲ್ಲೂ ಫೇಮಸ್ ಮಾಡಿದ್ದು ‘ನಾ ಡ್ರೈವರಾ ಸಾಂಗ್’. ಜೊತೆಗೆ ‘ಹಿತ್ತಲಕ ಕರೀಬ್ಯಾಡ್ ಮಾವ..’ ಎಂಬ ಹಾಡು ಕೂಡ ಜನಪ್ರಿಯತೆ ತಂದುಕೊಟ್ಟಿತು. ನಾನು ಮದುವೆ ಆಗಿರುವ ಹುಡುಗಿ ಕೂಡ ಸಿಂಗರ್. ನಮ್ಮಿಬ್ಬರದ್ದು ಲವ್ ಮ್ಯಾರೇಜ್. ನಾನೇ ಮೊದಲು ಪ್ರಪೋಸ್ ಮಾಡಿದ್ದು. ನನಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮ ಮನೆ ಮಳೆಗೆ ಸೋರುತ್ತಿತ್ತು. ಈಗ ದೊಡ್ಡ ಮನೆ ಕಟ್ಟಿಸಿದ್ದೇನೆ. ಕಟ್ಟಿಸಿರುವ ಹೊಸ ಮನೆ ಯೂಟ್ಯೂಬ್‌ನಿಂದ ಬಂದ ಆದಾಯ ಎಂದಿದ್ದಾರೆ.
ಇದನ್ನೂ ಓದಿ: BBK12; ಒಟ್ಟು ಎಷ್ಟು ಕಂಟೆಸ್ಟೆಂಟ್ಸ್​ ದೊಡ್ಮನೆಗೆ ಎಂಟ್ರಿ ಆಗಿದ್ದಾರೆ.. ಅವರು ಯಾರೆಂದು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ