ಸ್ನೇಹಾ ಶೆಟ್ಟಿಗೆ ಅಕುಲ್ ಕ್ಲಾಸ್​! ಹಳ್ಳಿ ಪವರ್ ಶೋ ಕ್ವಿಟ್ ಮಾಡಿದ ಇಬ್ಬರು ಸ್ಪರ್ಧಿಗಳು!

ಅಕುಲ್​ ಬಾಲಾಜಿ ಖಡಕ್​ ನಿರೂಪಣೆಗೆ ಹೆಸರುವಾಸಿ. ಅದ್ರಲ್ಲೂ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ಜಬರ್ದಸ್ತ್ ಆಗಿ ಹ್ಯಾಂಡಲ್​ ಮಾಡೋ ಚಾಕಚಕ್ಯೆತೆ ಹೊಂದಿರೋ ಅಕುಲ್​ ಸದ್ಯ ಹಳ್ಳಿ ಪವರ್​ಗೆ ಪವರ್​ಫುಲ್​ ಆಗಿಯೇ ಸಾರಥ್ಯ ವಹಿಸಿದ್ದಾರೆ. ಈ ನಡುವೆ ಇಬ್ಬರೂ ಸ್ಪರ್ಧಿಗಳು ಶೋನ ಕ್ವಿಟ್​ ಮಾಡಿದ್ದಾರೆ.

author-image
Ganesh Kerekuli
Halli Power
Advertisment

ಅಕುಲ್​ ಬಾಲಾಜಿ ಖಡಕ್​ ನಿರೂಪಣೆಗೆ ಹೆಸರುವಾಸಿ. ಅದ್ರಲ್ಲೂ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ಜಬರ್ದಸ್ತ್ ಆಗಿ ಹ್ಯಾಂಡಲ್​ ಮಾಡೋ ಚಾಕಚಕ್ಯೆತೆ ಹೊಂದಿರೋ ಅಕುಲ್​ ಸದ್ಯ ಹಳ್ಳಿ ಪವರ್​ಗೆ ಪವರ್​ಫುಲ್​ ಆಗಿಯೇ ಸಾರಥ್ಯ ವಹಿಸಿದ್ದಾರೆ. ಈ ನಡುವೆ ಇಬ್ಬರೂ ಸ್ಪರ್ಧಿಗಳು ಶೋನ ಕ್ವಿಟ್​ ಮಾಡಿದ್ದಾರೆ. 

ಜೀ ಪವರ್​ನಲ್ಲಿ ಮೂಡಿ ಬರ್ತಿರೋ ಹಳ್ಳಿ ಪವರ್ ರಿಯಾಲಿಟಿ ಶೋ ತಂಡ ಉತ್ತರ ಕರ್ನಾಟಕದ ಸಂಗೋಳ್ಳಿ ಗ್ರಾಮದಲ್ಲಿ ಬಿಡುಬಿಟ್ಟಿದೆ. ಹಳ್ಳಿ ಆಚಾರ ವಿಚಾರಗಳ ಜೊತೆಗೆ ಸಹ ಸ್ಪರ್ಧಿಗಳ ಜೊತೆ ಹೊಂದಿಕೊಂಡು ಹೋಗಲು ಪ್ರಾರಂಭದ ದಿನಗಳಲ್ಲಿ ​ಇಬ್ಬರೂ ಸ್ಪರ್ಧಿಯಂತೆ ಒಂದೊಂದು ಮನೆಗೆ ಕಾಲಿಟ್ಟಿದ್ದರು. ಜೋಶ್​ನಲ್ಲೇ ಹೋದ ಸಿಟಿ ಮಂದಿಗೆ ಹಳ್ಳಿ ಜೀವನ ನಡೆಸೋದು ಸುಲಭ ಅಲ್ಲವೇ ಅಲ್ಲ. 

ಇದನ್ನೂ ಓದಿ:ಕರ್ಣ, ಅಣ್ಣಯ್ಯ, ಅಮೃತಧಾರೆ.. ಈ ವಾರ ವೀಕ್ಷಕರ ಹೃದಯಗೆದ್ದ ಸೀರಿಯಲ್ ಯಾವ್ದು ಗೊತ್ತಾ?

Halli Power (1)

12 ಸಿಟಿ ಹುಡುಗಿರು ಶೋನಲ್ಲಿ ಸ್ಪರ್ಧಿಸಿದ್ರು. ಈ ಪೈಕಿ ನಾಲ್ವರು ಶೋನಿಂದ ಹೊರ ನಡೆದಿದ್ದಾರೆ. ಒಬ್ಬರು ಎಲಿಮಿನೇಟ್, ಒಬ್ಬರು ಗಾಯಾಳು ಹಾಗೂ ಮತ್ತಿಬ್ಬರು ವೈಯಕ್ತಿಕ ಕಾರಣ ನೀಡಿ ಈ ಆಟದಿಂದ ಹಿಂದೆ ಸರಿದಿದ್ದಾರೆ. ಈಗ ಚರ್ಚೆಗೆ ಗ್ರಾಸ ಆಗಿರೋದು ಆ್ಯಶ್ ಮೆಲೋ ಹಾಗೂ ಸ್ನೇಹಾ. 


ರೂಲ್ಸ್ ಬ್ರೇಕ್​ ಮಾಡಿ ಫ್ಯಾಮಿಲಿನ ಊರಿಗೆ ಕರಿಸಿದ ಕಾರಣಕ್ಕೆ ಅಕುಲ್​ ಸ್ನೇಹಾ ಶೆಟ್ಟಿಗೆ ಕ್ಲಾಸ್​ ತಗೊಂಡ್ರು. ಇದೇ ಕಾರಣಕ್ಕೆ ಸ್ನೇಹಾ ವೈಯಕ್ತಿಕ ಕಾರಣ ನೀಡಿ ಶೋನಿಂದ ಆಚೆ ಹೋಗೋಕೆ ಸಿದ್ಧ ಆದ್ರು. ಈ ನಡುವೆ ಭಿಮಾ ಸಿನಿಮಾದಲ್ಲಿ ನಟಿಸಿರೋ ಆ್ಯಶ್ ಮೆಲೋ ಸ್ಕೈಲರ್ ಶೋನಲ್ಲಿ ಭರವಸೆ ಮೂಡಿಸಿದ್ರು. ಆ್ಯಶ್​ ಫ್ಯಾನ್ಸ್ ನಿರೀಕ್ಷೆ ಹುಸಿಯಾಗಿದೆ. ಶೋನ ಕ್ವೀಟ್​ ಮಾಡಿದ್ದಾರೆ ನಟಿ.

ಇದನ್ನೂ ಓದಿ:ಲಕ್ಷೀ ನಿವಾಸದಿಂದ ಭವಿಷ್ ಹೊರಬಂದ ಸಿಕ್ರೇಟ್ ರಿವೀಲ್.. ಹೊಸ ವಿಶ್ವ ಯಾರು ಗೊತ್ತಾ..?

Halli Power (2)

ಶೋನಿಂದ ಹೊರ ಬಂದು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಶ್ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು ಆ್ಯಶ್ ಮೆಲೋ. ‘ನಾನು ನನ್ನ ಎಲ್ಲಾ ಪ್ರೇಕ್ಷಕರನ್ನು ಮತ್ತು ಕಾರ್ಯಕ್ರಮದ ವೀಕ್ಷಕರನ್ನು ನಿಜವಾಗಿಯೂ ಗೌರವಿಸುತ್ತೇನೆ. ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ಕಾರ್ಯಕ್ರಮವನ್ನು ತೊರೆದಿದ್ದೇನೆ ಎಂದು ವಿವರವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ಸಾಕಷ್ಟು ಜನ ಆ್ಯಶ್​ನ ಪ್ರಶಂಸಿಸಿದ್ರೇ ಮತ್ತೊಂದಿಷ್ಟು ಜನ ನಿಮ್ಮನ್ನ ಕೆಟ್ಟ ರೀತಿಯಲ್ಲಿ ತೋರಿಸ್ತಿದ್ದಾರೆ ಅಂತ ನಿಮಗೆ ಹೇಗೆ ಗೊತ್ತು? ನೀವು ಅಲ್ಲೇ ಇದ್ದು ಪ್ರೂವ್​ ಮಾಡಿಕೊಳ್ಬೇಕಿತ್ತು ಎಂದು ಕಿವಿಮಾತು ಹೇಳಿದ್ದಾರೆ.  

ಇದನ್ನೂ ಓದಿ:ಕರ್ಣನ ಜರ್ನಿಗೆ 50 ರ ಸಂಭ್ರಮ... ಈ ಸಂಭ್ರಮಲ್ಲಿ ಕರ್ಣನ ಲೈಫ್​ನಲ್ಲಿ ಏನ್​ ನಡೀತಿದೆ..?

Halli Power (3)

ಸದ್ಯ ಪರ-ವಿರೋಧದ ಚರ್ಚೆ ನಡುವೆ 4 ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಶೋಗೆ ಕಾಲಿಟಿದ್ದಾರೆ. ಗಾನವಿ, ಅಂತರ್​ರಾಷ್ಟ್ರೀಯ ಕರಾಟೆ ಪ್ಲೇಯರ್​ ದಿಯಾ ಅರಸ್​, ರಂಗಭೂಮಿ ಕಲಾವಿದೆ ಹೊಣ್ಣಾವರದ ಮಹಾಸತಿ ಗೌಡ ಹಾಗೂ ಮೈಸೂರಿನ ಫರೀನ್​ ಹಬೀಬ್​ ಹಳ್ಳಿ ಪವರ್​ನ ಹೊಸ ಸ್ಪರ್ಧಿಗಳು. ಈ ವಾರದಿಂದ ಹಳ್ಳಿ ಪವರ್​ನ ಎಲ್ಲಾ​ ಸ್ಪರ್ಧಿಗಳು ಹೊಸ ಮನೆಗೆ ಕಾಲಿಡ್ತಿದ್ದು, ಹಳ್ಳಿ ಜೀವನದ ಹೊಸ ಸವಾಲುಗಳಿಗೆ ವೇದಿಕೆ ಸಿದ್ಧವಾಗಿದೆ.

ಇದನ್ನೂ ಓದಿ:ವೀಕ್ಷಕರಿಗೆ ಗುಡ್​ನ್ಯೂಸ್.. ಬಿಗ್​ಬಾಸ್​ ನೀಡುವ ಸರ್ಪ್ರೈಸ್ ಬಗ್ಗೆ ಅಪ್​ಡೇಟ್ಸ್​ ಕೊಟ್ಟ ಪ್ರಿಯಾಂಕ | VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

halli power reality show Akul balaji
Advertisment