/newsfirstlive-kannada/media/media_files/2025/09/29/mallamma-2025-09-29-14-15-52.jpg)
ಬಿಗ್‌ಬಾಸ್ ಸೀಸನ್ 12 ಪಕ್ಕಾ ದೇಸಿತನದಿಂದ ತುಂಬಿದೆ. ಮನೆಯಾಗಿರಬಹುದು, ಥಿಮ್ ಆಗಿರಬಹುದು ಪಕ್ಕಾ ನಮ್ಮ ನೆಲದ ಸೊಗಡು ಹೊಂದಿದೆ. ಇದೀಗ ಕಲವು ಸ್ಪರ್ಧಿಗಳು ಕೂಡ ದೇಸಿಯ ಪ್ರತಿಭೆ ಆಗಿವೆ. ಅವರಲ್ಲಿ ಮಲ್ಲಮ್ಮ ಕೂಡ ಒಬ್ಬರು. ಉತ್ತರ ಕರ್ನಾಟಕದ ಹಳ್ಳಿ ಪ್ರತಿಭೆ ಮಲ್ಲಮ್ಮ. ವಿಶೇಷ ಅಂದರೆ ಮಲ್ಲಮ್ಮನ ದೊಡ್ಡ ಮಗ ಹೀರೋ.
ಹೌದಾ? ಯಾರು ಅಂದ್ರ? ಭಾರ್ಗವಿ LLB ಸೀರಿಯಲ್ ನಾಯಕ ಮನೋಜ್​ ಕುಮಾರ್​. ಯೆಸ್​, ಯಾದಗಿರಿ ಮೂಲದ ಮಲ್ಲಮ್ಮ 12 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಇವ್ರಿಗೆ ಇಬ್ಬರೂ ಗಂಡ್ಮಕ್ಕಳು. ಇಬ್ಬರೂ ಕೂಲಿ ಕೆಲಸ ಮಾಡ್ಕೊಂಡು ಜೀವನ ಮಾಡ್ತಾರೆ. ಈ ಕುಟುಂಬಕ್ಕೆ ಆಶ್ರಯ ಕೊಟ್ಟಿದ್ದು ಖ್ಯಾತ ಫ್ಯಾಷನ್​ ಡಿಸೈನರ್​ ಪಲ್ಲವಿ.
ಆಗ್ಲೇ ಹೇಳಿದ್ವಲ್ಲ ಮಲ್ಲಮ್ಮನ ಮಗ ಮನೋಜ್​ ಅಂತ. ನಿಜವಾದ ಮಗ ಅಲ್ಲ. ಆದ್ರೇ ಸ್ವಂತ ಮಗನಿಗಿಂತ ಹೆಚ್ಚಾಗಿ ಮಲ್ಲಮ್ಮನನ್ನ ನೋಡಿ ಕೊಳ್ತಾರೆ. ಇವ್ರಿಬ್ಬರ ಪರಿಚಯವಾಗಿದ್ದು.. ಆಗಾಗ ಡಿಸೈನರ್​ ಬಟ್ಟೆಗಳನ್ನ ತಗೋಳ್ಳೋಕೆ ಅಂತ ಮನೋಜ್​ ಪಲ್ಲವಿ ಅವ್ರ ಬೋಟಿಕ್​ಗೆ ಹೋಗ್ತಿರ್ತಾರೆ. ಅಲ್ಲೇ ಕೆಲಸ ಮಾಡೋ ಮಲ್ಲಮ್ಮನ ಮಾತಿನ ಶೈಲಿ, ಕಾಮಿಡಿ ಪಂಚ್​ ಅವ್ರ ಮಾಡಿ ಕೊಡೋ ಬಿಸಿ ಬಿಸಿ ಜೋಳದ ರೋಟ್ಟಿಗೆ ಮನೋಜ್​ ಫಿದಾ ಆಗ್ತಾರೆ. ಇವ್ರ ಹೆಸರಲ್ಲಿ ಮಲ್ಲಮ್ಮ ಟಾಕ್ಸ್​ ಅಂತ ಇನ್​ಸ್ಟಾಗ್ರಾಮ್​ ಖಾತೆ ಓಪನ್​ ಮಾಡ್ತಾರೆ. ಸೋಷಿಯಲ್​ ಮೀಡಿಯಾದಲ್ಲಿ ಮಲ್ಲಮ್ಮನ ಮಾತಿಗೆ ಅಪಾರ ಅಭಿಮಾನಿಗಳು ಹುಟ್ಟಿಕೊಳ್ತಾರೆ. ಸಿಕ್ಕಾಪಟ್ಟೆ ಫೇಮಸ್​ ಆಗ್ತಾರೆ. ಇದೇ ಕಾರಣಕ್ಕೆ ಬಿಗ್ ಬಾಸ್​ ಮನೆಗೆ ಪಿಕ್​ ಮಾಡಲಾಗಿದೆ.
ತೆಲುಗು ಬಿಗ್​ ಬಾಸ್​ ಶೋನಲ್ಲಿ ಹಳ್ಳಿ ಪ್ರತಿಭೆ ಗಂಗವ್ವ ಅವ್ರು ಸ್ಪರ್ಧಿ ಆಗಿದ್ರು. ಇದೇ ಮಾದರಿಯಲ್ಲಿ ಹಳ್ಳಿಯ ಸ್ವಚ್ಛ ಮನಸ್ಸಿನ ಮಲ್ಲಮ್ಮನನ್ನ ಬಿಗ್​ ಬಾಸ್​ಗೆ ಆಯ್ಕೆ ಮಾಡಲಾಗಿದೆ. ಇವ್ರ ಆಯ್ಕೆ ಬೆನ್ನಲ್ಲೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ ನಟ ಮನೋಜ್​.
ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಮತ್ತೊಬ್ಬ ದೇಸಿ ಗಾಯಕ.. ಯಾರು ಈ ಮಾಳು ನಿಪನಾಳ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ