Advertisment

ಕ್ವಾಟ್ಲೆ ಕಿಚನ್ ಫಿನಾಲೆಯಲ್ಲಿ ‘SU from So’ ತಂಡ.. 4 ಗಂಟೆಗಳ ಕಾಲ ನಾನ್​ಸ್ಟಾಫ್ ನಗು..!

ಕಲರ್ಸ್ ಕನ್ನಡ, ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಕಲರ್ಸ್ ಕನ್ನಡದ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’.

author-image
Ganesh Kerekuli
kwatle kichen
Advertisment

ಕಲರ್ಸ್ ಕನ್ನಡ, ಪ್ರೇಕ್ಷಕರ ಮನರಂಜನೆಗಾಗಿ ಅತ್ಯಂತ ವಿನೂತನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಕಲರ್ಸ್ ಕನ್ನಡದ ಪಕ್ಕಾ ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’. 

Advertisment

ಇದನ್ನೂ ಓದಿ: ಬಿಗ್ ಬಾಸ್- ಸೀಸನ್ 12; 28ಕ್ಕೆ ಗ್ರಾಂಡ್ ಓಪನಿಂಗ್.. ಚಿನ್ನದ ನಾಣ್ಯ ಗೆಲ್ಲಬಹುದು.. ಹೇಗೆ?

kwatle kichen (1)

ಈ ಶನಿವಾರ ‘ಕ್ವಾಟ್ಲೆ ಕಿಚನ್’ ನ ಗ್ರಾಂಡ್ ಫಿನಾಲೆಯನ್ನು ಜನರಿಗೆ ತಲುಪಿಸುತ್ತಿದೆ. ಈ ಶನಿವಾರ (27 ಸೆಪ್ಟೆಂಬರ್) ಸಂಜೆ 6 ರಿಂದ ರಾತ್ರಿ 10 ರ ವರೆಗೆ ಈ ಕುತೂಹಲಭರಿತ ಕುಕ್ಕಿಂಗ್ ಶೋನ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದನ್ನೂ ಓದಿ:ತ್ರಿನಯನಿ ಖ್ಯಾತಿಯ ಕನ್ನಡದ ನಟಿ ಆಶಿಕಾ ಹಿಂದಿ ಭಾಷೆಗೆ ಅದ್ಧೂರಿ ಎಂಟ್ರಿ..!

Advertisment

kwatle kichen (2)

ನೂರಕ್ಕೆ ನೂರು ಕಾಮಿಡಿ ಕುಕ್ಕಿಂಗ್ ಶೋ ‘ಕ್ವಾಟ್ಲೆ ಕಿಚನ್’ನ ಈ ಸಂಚಿಕೆಯಲ್ಲಿ ‘SU from So ‘ ಚಿತ್ರ ತಂಡದ ರಾಜ್ ಬಿ ಶೆಟ್ಟಿ, ರವಿಯಣ್ಣ, ಜೆಪಿ ತುಮಿನಾಡ್ ಅತಿಥಿಗಳಾಗಿ ಭಾಗವಹಿಸಿರುವುದು ವಿಶೇಷ. 
ಆರು ಮಂದಿ ಫೈನಲಿಸ್ಟ್ ಕುಕ್‌ಗಳು, ಎರಡು ರೌಂಡ್ ನ ಮಹಾ ಪೈಪೋಟಿ- ಈ ಮೂಲಕ ಒಬ್ಬ ವಿನ್ನರ್ ತೀರ್ಮಾನವಾಗಲಿರುವುದು ಈ ಫಿನಾಲೆಯ ವಿಶೇಷ. 

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್

kwatle kichen (3)

ಕುಕ್‌ಗಳಾಗಿ-ಬೆಳ್ಳುಳ್ಳಿ ಕಬಾಬ್ ಚಂದ್ರು, ಆರ್.ಕೆ.ಚಂದನ್, ದಿಲೀಪ್ ಶೆಟ್ಟಿ, ಕಾವ್ಯ ಗೌಡ, ಶರ್ಮಿತ ಗೌಡ, ರಾಘವೇಂದ್ರ ಕಾರ್ಯಕ್ರಮದಲ್ಲಿ ಆರು ಫೈನಲಿಸ್ಟ್ ಗಳಾಗಿದ್ದಾರೆ. ಈ ಆರು ಮಂದಿಯಲ್ಲಿ ವಿನ್ನರ್ ಯಾರು, ಟ್ರೋಫಿ ಮತ್ತು ಐದು ಲಕ್ಷ ಗೆಲ್ಲೋ ಅದೃಷ್ಟ ಯಾರದ್ದು ಎಂಬ ಜನರ ಪ್ರಶ್ನೆಗಳಿಗೆ ಉತ್ತರ ಸಿಗಲಿದ್ದು ಅತ್ಯಂತ ಮನರಂಜಕ ಸಂಚಿಕೆ ಇದಾಗಲಿದೆ.

Advertisment

ಇದನ್ನೂ ಓದಿ:  ಶ್ರಾವಣಿ ಸುಬ್ರಹ್ಮಣ್ಯ ಮೇಕಿಂಗ್​ ವೀಡಿಯೋ.. ನಾಚಿ ನೀರಾದ ಅಭಿಮಾನಿಗಳು

kwatle kichen (4)

ಕಾರ್ಯಕ್ರಮದ ತೀರ್ಪುಗಾರರಾಗಿ ನಟಿ ಶ್ರುತಿ ಮತ್ತು ಕಳೆದ 25 ವರ್ಷಗಳಲ್ಲಿ ಪಾಕಶಾಸ್ತ್ರ ಮತ್ತು ಟೆಲಿವಿಶನ್​​ನ ಹಲವು ಪ್ರಸಿದ್ಧ ಶೋಗಳಲ್ಲಿ ಭಾಗವಹಿಸಿರುವ ಪ್ರಸಿದ್ಧ ಚೆಫ್ ಕೌಶಿಕ್ ಇರುವುದು ‘ಕ್ವಾಟ್ಲೆ ಕಿಚನ್’ಗೆ ಹೊಸ ಕಳೆಯನ್ನು ತಂದಿದೆ. ಕಿಚನ್‌ ಸ್ಟಾರ್‌ಗಳು ಮತ್ತು ಕ್ಯಾಟ್ಲೆಗಳ ಮೋಜು ಮಸ್ತಿಯ ಈ ಜಗಳಬಂದಿ ಕಾರ್ಯಕ್ರಮವನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್‌ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ಚಂದುಳ್ಳಿ ಚೆಲುವೆ ಆಸಿಯಾ ಬೇಗಮ್​ ಹೊಸ ಫೋಟೋಶೂಟ್.. ಫ್ಯಾನ್ಸ್​ ಏನಂದ್ರು?

kwatle kichen (5)

ಅಡುಗೆಯ ಔತಣ ಮತ್ತು ನಗುವಿನ ರಸದೌತಣಗಳನ್ನು ಒಟ್ಟೊಟ್ಟಿಗೇ ಬಡಿಸುವ ‘ಕ್ವಾಟ್ಲೆ ಕಿಚನ್’, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವುದಂತೂ ಗ್ಯಾರಂಟಿ. ಈ ಶನಿವಾರ ಕಲರ್ಸ್ ಕನ್ನಡದಲ್ಲಿ ‘ಕ್ವಾಟ್ಲೆ ಕಿಚನ್ ಗ್ರಾಂಡ್ ಫಿನಾಲೆ’ ನೋಡುವುದನ್ನು ಮರೆಯಬೇಡಿ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

kwatle kitchen
Advertisment
Advertisment
Advertisment