/newsfirstlive-kannada/media/media_files/2025/09/30/ml-karibasappa-2025-09-30-12-34-32.jpg)
ದೇಹದಾಢ್ಯ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಎಲ್.ಎಮ್.ಕರಿಬಸಪ್ಪ ಬಿಗ್​ಬಾಸ್​ ಮನೆಯಲ್ಲಿ ಸಖತ್ ಸೌಂಡ್​ ಮಾಡ್ತಿದ್ದಾರೆ. ನಾನು ಬಾಡಿ ಬಿಲ್ಡಿಂಗೂ ಮಾಡಿದ್ದೀನಿ, ಕಾಮಿಡಿನೂ ಮಾಡ್ತೀನಿ. ಬಿಗ್​ ಬಾಸ್​ನಲ್ಲಿ ನಾನು ತುಂಬಾ ಸೀರಿಯಸ್ ಅಲ್ಲ. ನಿಮ್ಮನ್ನೆಲ್ಲ ರಂಜಿಸ್ತೀನಿ ಎಂದು ದೊಡ್ಮನೆಗೆ ಎಂಟ್ರಿ ನೀಡಿರುವ ಕರಿಬಸಪ್ಪ ಭಾರೀ ಚರ್ಚೆ ಆಗ್ತಿದ್ದಾರೆ.
ಯಾರು ಈ ಕರಿಬಸಪ್ಪ..?
ಕರಿಬಸಪ್ಪ ಕರ್ನಾಟಕದ ದಾವಣಗೆರೆ ಮೂಲದವರು. ಅವರು ಭಾರತೀಯ ಬಾಡಿ ಬಿಲ್ಡಿಂಗ್‌ನಲ್ಲಿ ಅಂತರಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಕಠಿಣ ಪರಿಶ್ರಮ ಮತ್ತು ಡಿಸಿಪ್ಲಿನ್‌ನಿಂದ ವಿಶ್ವದ ಗಮನ ಸೆಳೆದಿದ್ದಾರೆ.
#BBK12 | #BiggBossKannada12
— Cinema Kahani (@cinemakahani) September 29, 2025
"Tiger Banthu Tigeru, Yaav Ooru Tigeruu."
Heavy comedy guru ivanu. 😂#Karibasappa#BBKSeason12 | #BBK12livepic.twitter.com/SczF4bUaNF
ಇವರ ತಂದೆ ಪೌರ ಕಾರ್ಮಿಕರಾಗಿದ್ದರು. ನಟ ಟೈಗರ್ ಪ್ರಭಾಕರ್ ಅವರನ್ನು ನೋಡಿ ಬಾಡಿ ಬಿಲ್ಡ್ ಮಾಡೋಕೆ ಶುರು ಮಾಡಿದ್ದರಂತೆ. ಕರಿಬಸಪ್ಪ ಅವರಿಗೆ 54 ವರ್ಷವಾಗಿದ್ದು, ವೇದಾವತಿ ಅನ್ನೋರ ಕೈಹಿಡಿದಿದ್ದಾರೆ. ಈ ದಂಪತಿಗೆ ಇಬ್ಬರು ಅವಳಿ ಗಂಡು ಮಕ್ಕಳಿದ್ದಾರೆ.
ಇದನ್ನೂ ಓದಿ:ಟ್ರೋಫಿ ಸ್ವೀಕರಿಸಲ್ಲ ಎಂದಿರಲಿಲ್ಲ, ಅವರು ಕಪ್ ಎತ್ಕೊಂಡು ಓಡಿದರು -ಸೂರ್ಯ ಮತ್ತೆ ಆಕ್ರೋಶ
ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿರುವ ಬಗ್ಗೆ ವಿಟಿಯಲ್ಲಿ ಮಾತನಾಡಿರುವ ಕರಿಬಸಪ್ಪ.. ನಾನು ಬಾಡಿ ಬಿಲ್ಡಿಂಗೂ ಮಾಡಿದ್ದೀನಿ, ಕಾಮಿಡಿನೂ ಮಾಡ್ತೀನಿ. ಬಿಗ್​ ಬಾಸ್​ನಲ್ಲಿ ನಾನು ತುಂಬಾ ಸೀರಿಯಸ್ ಅಲ್ಲ. ನಿಮ್ಮನ್ನೆಲ್ಲ ರಂಜಿಸ್ತೀನಿ. ನಾನು ತುಂಬಾ ಸ್ಮೂತ್ ಹಾಗಂತ ನನ್ನ ತಂಟೆಗೆ ಬಂದರೆ ಸುಮ್ಮನೆ ಇರಲ್ಲ.
ಪ್ರಪಂಚದಲ್ಲಿ ನಂಬರ್ ಒನ್ ರಿಯಾಲಿಟಿ ಶೋ ಬಿಗ್​ಬಾಸ್. ಈ ಬಿಗ್​ಬಾಸ್​ನಲ್ಲಿ ಭಾಗವಹಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತೆಯೇ ನಾನಗೂ ಆ ಆಸೆ ಇತ್ತು. ನಾನು ಬಿಗ್​ಬಾಸ್​ ಗೆಲ್ಲಬೇಕು ಎಂಬ ಆಸೆಯಿಂದ ಬಂದಿದ್ದೇನೆ. ನಾನು ರಫ್ ಆಗಿ ಕಾಣಬಹುದು ಆದರೆ, ನಾನು ರಫ್ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ.. ದಂಪತಿ ಗಂಭೀರ, 11 ತಿಂಗಳ ಮಗು ಸೇಫ್
2004ರಲ್ಲಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಈ ಸ್ಪರ್ಧೆ ನಡೆದಿತ್ತು. ಆಮೇಲೆ ರಾಷ್ಟ್ರಗೀತೆ ಹಾಡಿಸಿದ್ದರು ಮಿಸ್ಟರ್ ಇಂಡಿಯಾ ಪ್ರಶಸ್ತಿ ಕೂಡ ಪಡೆದಿದ್ದಾರೆ. 2007ರಲ್ಲಿ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಅಲ್ಲದೇ 2023ರಲ್ಲಿ ಬೆಂಗಳೂರಲ್ಲಿ ನಡೆದ ಫೆಡರೇಷನ್ ಕಪ್ ಬಾಡಿ ಬಿಲ್ಡಿಂಗ್ ಚಾಂಪಿಯನ್​ಶಿಪ್​​ನಲ್ಲಿ ಸತತ ಎರಡನೇ ಬಾರಿಗೆ ಭಾರತ್ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
ಇನ್ನು ಬಿಗ್​ಬಾಸ್​ ಮನೆಗೆ ಎಂಟ್ರಿ ಬೆನ್ನಲ್ಲೇ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋಗಳು ವೈರಲ್ ಆಗಿವೆ. ಅಂತೆಯೇ ಕಾರ್ಯಕ್ರಮವೊಂದರಲ್ಲಿ ಸ್ಟೆಪ್ ಹಾಕಿದ ವಿಡಿಯೋ ಇಲ್ಲಿದೆ.
#BBK12#Karibasappa not a comedy peace
— Honest Review (@honestreview01) September 29, 2025
He troll peace ಯಾವದೋ ಉಗಾಂಡಾ ದೇಶ ದಿಂದ ಬಂದ😀ವ್ನೆ pic.twitter.com/1kvqlx1JWs
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ