/newsfirstlive-kannada/media/media_files/2026/02/14/amrutadhare-2-2026-02-14-16-15-51.jpg)
ಒಂದು ಕಡೆ ಗೌತಮ್​ ಜೀರೋದಿಂದ ಮತ್ತೆ ಹೊಸದಾಗಿ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾನೆ. ಮತ್ತೊಂದ್ಕಡೆ ಮಲ್ಲಿ, ಜೈದೇವ್ ಕುತಂತ್ರಕ್ಕೆ ಸಿಲುಕಿ ಭೂಮಿಕಾ ವಿರುದ್ಧವೇ ತಿರುಗಿಬಿದ್ದಿದ್ದಾಳೆ. ಮುಂದೆ ಗೌತಮ್​ ಹೊಸ ಸಾಮ್ರಾಜ್ಯ ಕಟ್ತಾನಾ? ಮಲ್ಲಿ ಹಾಗೂ ಭೂಮಿಕಾ ನಡುವೆ ಬಿರುಕು ಮೂಡುತ್ತಾ? ಭೂಮಿ ಮುಂದೇನಾಡ್ತಾಳೆ ಇದೇ ಸದ್ಯಕಿರೋ ಕುತುಹಲ.
ಅಮೃತಧಾರೆ ಧಾರವಾಹಿಯಲ್ಲಿ ಹೊಸ ಹೊಸ ಟ್ವಿಸ್ಟ್​ ಆ್ಯಂಡ್​ ಟರ್ನ್​ಗಳು ಬರುತ್ತಲೇ ಇದೆ. ಇಷ್ಟು ದಿನ ಒಂದು ಲೆಕ್ಕ ಇನ್ಮುಂದೆ ಇನ್ನೊಂದು ಲೆಕ್ಕ ಅನ್ನೊದಕ್ಕೆ ಗೌತಮ್​ ರೆಡಿಯಾಗಿದ್ದಾನೆ. ಈ ಹಿಂದೆ ಗೌತಮ್ ದಿವಾನ್ ಗ್ರೂಪ್ ಆಫ್ ಕಂಪನಿಯ ಓಡೆಯನಾಗಿದ್ದ. ಮಲತಾಯಿ ಶಕುಂತಲಾ ಹಾಗೂ ತಮ್ಮ ಜೈದೇವ್​ ಮಾಡಿದ ಮೋಸದಿಂದ ತನ್ನ ಆಸ್ತಿಯನ್ನ ಬರೆದುಕೊಟ್ಟು ಗೌತಮ್​ ಮನೆ ಬಿಟ್ಟು ಬರುವಂತಾಗಿತ್ತು. ಸಾಲದಕ್ಕೆ ಭೂಮಿಕಾನೂ ಗೌತಮ್​ನಿಂದ ದೂರವಾಗಿದ್ಲು.
ಇದನ್ನೂ ಓದಿ:ಸರ್ಕಾರಿ ಅಧಿಕಾರಿಗಳ ‘ಮಹಾ ಎಡವಟ್ಟು’: ಸ್ವಾಮೀಜಿಗೂ ಸಿಕ್ತು ಸರ್ಕಾರಿ ‘ಪ್ರಮೋಷನ್’ ಭಾಗ್ಯ..!
/filters:format(webp)/newsfirstlive-kannada/media/media_files/2026/02/14/amrutadhare-1-2026-02-14-16-17-08.jpg)
ಇದೀಗ ಗೌತಮ್​ ಹಾಗೂ ಭೂಮಿಕಾ ಒಂದಾಗಿದ್ದಾರೆ. ಮನೆ ಬಿಟ್ಟು ಬಂದಮೇಲೆ ಗೌತಮ್​ ಬದುಕು ಸಾಗಿಸಲು ಇಷ್ಟು ದಿನ ಕ್ಯಾಬ್​ ಓಡಿಸ್ತಿದ್ದ. ಆದ್ರೆ ಗೌತಮ್ ಕ್ಯಾಬ್ ಡ್ರೈವರ್ ಆಗಿರೋದಕ್ಕೆ ಗೌತಮ್ ತಾಯಿ ಭಾಗ್ಯ ನೊಂದುಕೊಂಡಿದ್ದಾಳೆ. ಈ ಬಗ್ಗೆ ಗೌತಮ್‌ಗೂ ಹೇಳಿದ್ದಾಳೆ.. ಗೌತಮ್​ ಕೂಡ ದೊಡ್ಡ ಸಾಮ್ರಾಜ್ಯ ಕಟ್ತೀನಿ ಅಂತ ತಾಯಿಗೆ ಮಾತು ಕೊಟ್ಟಿದ್ದಾನೆ.
ಈ ನಡುವೆ ಮಲ್ಲಿ ತನ್ನ ಆಸ್ತಿಯನ್ನ ತೆಗೆದುಕೊಳ್ಳುವಂತೆ ಗೌತಮ್​ ಬಳಿ ಹೇಳಿದ್ದಾಳೆ.. ಆದ್ರೆ ಗೌತಮ್ ತನ್ನ ಸ್ವಂತ ಪ್ರಯತ್ನದಿಂದಲೇ ಸೊನ್ನೆಯಿಂದ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾನೆ.. ಹೀಗಾಗಿ ತನ್ನ ಡ್ರೈವರ್​ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾನೆ... ರಾಜೀನಾಮೆ ಪತ್ರವನ್ನ ಭೂಮಿಕಾ ಬಳಿಯೂ ತಂದುಕೊಟ್ಟಿದ್ದಾನೆ.
ಇದನ್ನೂ ಓದಿ: ಜಡೇಜಾಗೆ ಶಾಕ್ ಕೊಟ್ಟ ರಾಜಸ್ಥಾನ್; ಪರಾಗ್​ಗೆ ಪಟ್ಟ ಕಟ್ಟಿದ್ಯಾಕೆ..?
/filters:format(webp)/newsfirstlive-kannada/media/media_files/2026/02/14/amrutadhare-2026-02-14-16-17-24.jpg)
ಈ ಕಥೆ ಒಂದ್ಕಡೆ ಆದ್ರೆ.. ಮತ್ತೊಂದ್ಕಡೆ ಮಲ್ಲಿ ತನ್ನ ಪ್ರೀತಿಯ ಅಕ್ಕ ಅಂದ್ರೆ ಭೂಮಿಕಾಳ ವಿರುದ್ಧ ತಿರುಗಿಬಿದ್ದಿದ್ದಾಳೆ.. Love Is Blind ಅಂತಾರೆ.. ಈ ಮಾತು ಯಾಕೋ ಮಲ್ಲಿ ಬಾಳಲ್ಲಿ ನಿಜ ಆಗೋ ರೀತಿ ಕಾಣ್ತಿದೆ..​ ಜೈದೇವ್​​ ಮಲ್ಲಿ ಹಿಂದೆ ತನ್ನ ಮ್ಯಾನೇಜರ್​ನನ್ನ​ ಬಿಟ್ಟಿದ್ದಾನೆ. ಇದನ್ನ ಅರಿಯದ ಮಲ್ಲಿ ಕ್ಲಾಸ್​ ಬಂಕ್ ಮಾಡ್ತಾ ಆತನೊಂದಿಗೆ ಓಡಾಡ್ತಿದ್ದಾಳೆ.. ಮಲ್ಲಿ ಕ್ಲಾಸ್​ ಬಂಕ್​ ಮಾಡಿ ಓಡಾಡ್ತಿರೋದು ಭೂಮಿಕಾಳಿಗೆ ಗೊತ್ತಾಗಿದೆ. ಮಲ್ಲಿ ಮತ್ತೇ ಮೋಸ ಹೋಗಬಾರದು ಅಂತಾ ಭೂಮಿಗೆ ಕಾಳಜಿ ಇದೆ.. ಸೋ ಮಲ್ಲಿ ಜೊತೆ ಓಡಾಡ್ತಿರೋ ಹುಡುಗ ಯಾರು ಅಂತಾ ತಿಳಿದುಕೊಳ್ಳಲು ಭೂಮಿ ಮಲ್ಲಿ ಹಿಂದೆ ಬಿದ್ದಿದ್ದಾಳೆ..
ವಿಷಯ ಮಲ್ಲಿಗೆ ಗೊತ್ತಾಗಿದೆ. ಕೋಪದಿಂದ ಮನೆಗೆ ಬಂದು ನಿಮಗೆ ಏನಾದ್ರು ಕೇಳೊದಿದ್ರೆ ನೇರವಾಗಿ ಕೇಳಬಹುದಿತ್ತಲ್ಲ. ಹೀಗೆಲ್ಲಾ ಕದ್ದು ಮುಚ್ಚಿ ಬರುವ ಅಗತ್ಯ ಏನಿತ್ತು ಎಂದು ಭೂಮಿಕಾಳನ್ನ ಪ್ರಶ್ನಿಸಿದ್ದಾಳೆ.. ಮಲ್ಲಿ ಪ್ರಶ್ನೆಗೆ ಭೂಮಿಕಾ, ನೀನು ಜೈದೇವನಿಂದ ಮೋಸ ಹೋಗಿದ್ದೀಯಾ. ಮತ್ತೆ ನಿನ್ನ ಜೀವನದಲ್ಲಿ ತಪ್ಪು ಆಗುವುದು ನನಗೆ ಇಷ್ಟವಿಲ್ಲ ಎಂದಿದ್ದಾಳೆ.. ಆದ್ರೂ ಮಲ್ಲಿ ಭೂಮಿಕಾಳ ಮೇಲೆ ಮುನಿಸಿಕೊಂಡಿದ್ದಾಳೆ..
ಮುಂದೆ ಗೌತಮ್​ ಮತ್ತೇ ಕೋಟ್ಯಾಧಿಪತಿ ಆಗ್ತಾನಾ? ಭೂಮಿ ಹಾಗೂ ಮಲ್ಲಿ ನಡುವೆ ಬಿರುಕು ಮೂಡುತ್ತಾ? ಜೈದೇವ್​ನ ಕುಂತತ್ರಕ್ಕೆ ಮಲ್ಲಿ ಬಲಿಯಾಗ್ತಾಳ.. ಭೂಮಿಕಾ ಇದನ್ನ ತಡಿತ್ತಾಳ ಅನ್ನೋದನ್ನ ಕಾದುನೋಡಬೇಕಾಗಿದೆ.
ಇದನ್ನೂ ಓದಿ:30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಮಹಿಳೆ ನಿಗೂಢ ನಾಪತ್ತೆ! : ಕೆರೆಯಲ್ಲಿ ಶವಕ್ಕಾಗಿ ಹುಡುಕಾಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us