/newsfirstlive-kannada/media/media_files/2025/09/15/india-vs-pakisthan-5-2025-09-15-14-15-51.jpg)
ಏಷ್ಯಾಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿನ ಹೀರೋ ಆಗಿದ್ದು ನಾಯಕ ಸೂರ್ಯಕುಮಾರ್ ಯಾದವ್. ಸೂರ್ಯ ಅವರ 47 ರನ್‌ಗಳು ಭಾರತದ ಗೆಲುವಿಗೆ ತುಂಬಾ ಮುಖ್ಯವಾಯಿತು. ಆದರೆ ಟೀಮ್ ಇಂಡಿಯಾಗೆ ಗೆಲುವಿನ ಅಡಿಪಾಯ ಹಾಕಿದ್ದು ಕುಲದೀಪ್ ಯಾದವ್!
ಕುಲದೀಪ್ ಯಾದವ್ ಗೆಲುವಿನ ಹೀರೋ
ನಿನ್ನೆಯ ಪಂದ್ಯದಲ್ಲೂ ಕುಲ್ದೀಪ್ ಯಾದವ್ಗೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ನೀಡಲಾಯಿತು. ಇನ್ನು ಏಷ್ಯಾಕಪ್ನ ಮೊದಲ ಪಂದ್ಯದಲ್ಲೂ ಯುಎಇ ವಿರುದ್ಧ 4 ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ನಿನ್ನೆಯ ಪಂದ್ಯದಲ್ಲಿ ಕುಲ್ದೀಪ್ ಪಾಕಿಸ್ತಾನದ 3 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಪಾಕ್ಗೆ ಮತ್ತೊಂದು ಅವಮಾನ.. ರಾಷ್ಟ್ರಗೀತೆ ಬದಲಿಗೆ ಪ್ಲೇ ಆಗಿದ್ದು ‘ಜಲೇಬಿ ಬೇಬಿ’ ಸಾಂಗ್ -VIDEO\
ಇನ್ನು ನಾಲ್ಕು ಓವರ್ ಮಾಡಿದ ಕುಲ್ದೀಪ್ ಬಿಟ್ಟುಕೊಟ್ಟಿದ್ದು ಕೇವಲ 14 ರನ್‌ಗಳು ಮಾತ್ರ. ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಮೊದಲ 2 ಓವರ್‌ಗಳಲ್ಲಿ ತಲಾ ಒಂದೊಂದು ವಿಕೆಟ್ ಕಿತ್ತರು. ನಂತರ ಅಕ್ಷರ್ ಪಟೇಲ್ ಆ ಜವಾಬ್ದಾರಿ ವಹಿಸಿಕೊಂಡು ಫಖರ್ ಜಮಾನ್ ಮತ್ತು ಸಲ್ಮಾನ್ ಆಗಾ ವಿಕೆಟ್ ಪಡೆದರು.
ಇನ್ನು 13ನೇ ಓವರ್‌ನಲ್ಲಿ ಸತತ 2 ಎಸೆತಗಳಲ್ಲಿ ಹಸನ್ ನವಾಜ್ ಮತ್ತು ಮೊಹಮ್ಮದ್ ನವಾಜ್ರ ಔಟ್ ಮಾಡುವ ಮೂಲಕ ಕುಲ್ದೀಪ್ ಪಾಕ್ಗೆ ಆಘಾತ ನೀಡಿದರು. ಆದರೆ ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇದರ ಮಧ್ಯೆ ಸಾಹಿಬ್‌ಜಾದಾ ಫರ್ಹಾನ್ ಅದ್ಭುತ ಬ್ಯಾಟಿಂಗ್ ಮೂಲಕ ಅರ್ಧ ಶತಕದ ಹೊಸ್ತಿಲಲ್ಲಿದ್ದರು. ಅವರನ್ನ ಕುಲದೀಪ್ 40 ರನ್‌ಗಳಿಗೆ ಔಟ್ ಮಾಡಿದರು.
ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದು ಸೂರ್ಯ ಖಡಕ್ ಸಂದೇಶ.. ಕ್ಯಾಪ್ಟನ್ ಹೇಳಿದ್ದೇನು..?
ಸೂರ್ಯಕುಮಾರ್ ಯಾದವ್ ಅಜೇಯ 47 ರನ್ ಗಳಿಸಿದರು. ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 31 ರನ್ ಗಳಿಸಿ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ತಿಲಕ್ ವರ್ಮಾ ಕೂಡ 31 ರನ್ ಗಳಿಸಿದರು. ಹೀಗಿದ್ದೂ ಕುಲ್ದೀಪ್ ಯಾದವ್ ಅವರ 3 ವಿಕೆಟ್‌ಗಳು ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಿತು.
ಅತಿ ಹೆಚ್ಚು ವಿಕೆಟ್ ಇವರಿಗೇ..
2025ರ ಏಷ್ಯಾ ಕಪ್‌ನಲ್ಲಿ ಇಲ್ಲಿಯವರೆಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಕುಲ್ದೀಪ್ ಯಾದವ್. 2 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ನಂತರ ಪಾಕಿಸ್ತಾನದ ಸ್ಯಾಮ್ ಅಯೂಬ್ 5 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಕುಲ್ದೀಪ್ ನಂತರ ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಶೇಕ್ ಹ್ಯಾಂಡ್ಗಾಗಿ ನಿಂತಿದ್ದರು.. ಪಾಕಿಗರ ಮುಖಕ್ಕೆ ಬಾಗಿಲು ಬಡೆದಂತೆ ಆಯಿತು.. ಹೇಗಿತ್ತು ಆ ಕ್ಷಣ..? VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ