ಟೀಂ ಇಂಡಿಯಾಗೆ ದೊಡ್ಡ ಪಾಠ ಕಲಿಸಿದ ಅಮೆರಿಕ.. ಸೂರ್ಯನ ಸೈನ್ಯಕ್ಕೆ ಸಿಕ್ಕ ಸಂದೇಶ ಏನು?

ಪ್ರತಿಷ್ಠಿತ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಯುಎಸ್​​ಎ ಎದುರು ಓಪನಿಂಗ್​ ಗೇಮ್​ನಲ್ಲಿ 29 ರನ್​ಗಳ ಗೆಲುವು ಸಾಧಿಸಿದ್ರೂ ಕೂಡ ಸಮಾಧಾನವಿಲ್ಲ. ವಾಂಖೆಡೆಯಲ್ಲಿ ನಡೆದ ಮೊದಲ ಪಂದ್ಯ ಟೀಮ್​ ಇಂಡಿಯಾಗೆ ಸರಿಯಾದ ಪಾಠ ಮಾಡಿದೆ. ಸೂರ್ಯನ ಸೈನ್ಯಕ್ಕೆ ಖಡಕ್​ ಎಚ್ಚರಿಕೆ ನೀಡಿದೆ.

author-image
Ganesh Kerekuli
India vs usa
Advertisment
  • ಎಚ್ಚರ ಇಂಡಿಯಾ ಎಚ್ಚರ.. ಯಾಮಾರಿದ್ರೆ ಶಾಕ್
  • ಸೂರ್ಯನ ಸೈನ್ಯಕ್ಕೆ ಮೊದಲ ಪಂದ್ಯದಲ್ಲೇ ಪಾಠ​
  • ಓವರ್​ ಕಾನ್ಫಿಡೆನ್ಸ್​ನಲ್ಲಿ ಕಣಕ್ಕಿಳಿದ್ರೆ ಶಾಕ್​ ಪಕ್ಕಾ

ಪ್ರತಿಷ್ಠಿತ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಯುಎಸ್​​ಎ ಎದುರು ಓಪನಿಂಗ್​ ಗೇಮ್​ನಲ್ಲಿ 29 ರನ್​ಗಳ ಗೆಲುವು ಸಾಧಿಸಿದ್ರೂ ಕೂಡ ಸಮಾಧಾನವಿಲ್ಲ. ವಾಂಖೆಡೆಯಲ್ಲಿ ನಡೆದ ಮೊದಲ ಪಂದ್ಯ ಟೀಮ್​ ಇಂಡಿಯಾಗೆ ಸರಿಯಾದ ಪಾಠ ಮಾಡಿದೆ. ಸೂರ್ಯನ ಸೈನ್ಯಕ್ಕೆ ಖಡಕ್​ ಎಚ್ಚರಿಕೆ ನೀಡಿದೆ. 

ಮೊದಲ ಪಂದ್ಯದಲ್ಲೇ ಪಾಠ​

ಎಚ್ಚರ ಟೀಮ್​ ಇಂಡಿಯಾ ಎಚ್ಚರ.. ಅನ್ನೋ ಸ್ಪಷ್ಟವಾದ ಸಂದೇಶವನ್ನ ಯುಎಸ್​ಎ ವಿರುದ್ಧದ ಮೊದಲ ಪಂದ್ಯ ಟೀಮ್​ ಇಂಡಿಯಾಗೆ ರವಾನಿಸಿದೆ. ಪಂದ್ಯದಲ್ಲಿ ಮೆನ್​ ಇನ್​ ಬ್ಲ್ಯೂ ಪಡೆ ಗೆದ್ದಿರಬಹುದು. ಸೋತ ಕ್ರಿಕೆಟ್​ ಶಿಶು ಯುಎಸ್​ಎ ಹಲವು ಪಾಠಗಳನ್ನ ಇಂಡಿಯನ್​ ಟೀಮ್​ಗೆ ಮಾಡಿದೆ. ಸ್ವಲ್ಪ ಯಾಮಾರಿದ್ರೂ ಸೋಲಿನ ಶಾಕ್​ ಪಕ್ಕಾ ಅನ್ನೋ ಸಂದೇಶವನ್ನ ಮೊದಲ ಪಂದ್ಯವೇ ರವಾನಿಸಿದೆ. 

ಇದನ್ನೂ ಓದಿ:ಕೆಂಪೇಗೌಡ ಏರ್‌ಪೋರ್ಟ್ ರನ್‌ವೇಗೆ ನುಗ್ಗಿದ ಬೃಹತ್ ಬಲೂನ್..! ಸ್ವಲ್ಪದರಲ್ಲೇ ತಪ್ಪಿದ ಭಾರೀ ವಿಮಾನ ದುರಂತ

ಯುಎಸ್​ಎ ಎದುರಿನ ಪಂದ್ಯದ ಆರಂಭಕ್ಕೂ ಮುನ್ನ ಇದೊಂದು ಒನ್​ ಸೈಡೆಡ್​ ಗೇಮ್​ ಎಂದೇ ಕ್ರಿಕೆಟ್​ ವಲಯ ಊಹಿಸಿತ್ತು. ಟೀಮ್​ ಇಂಡಿಯಾ ಕೂಡ ಸುಲಭಕ್ಕೆ ಗೆದ್ದು ಬೀಡ್ತಿವಿ ಅಂತಾ ಓವರ್​ ಕಾನ್ಫಿಡೆನ್ಸ್​ನಲ್ಲೇ ಕಣಕ್ಕಿಳಿದಿದಂತಿತ್ತು. ಆದ್ರೆ, ಅಂದುಕೊಂಡಿದ್ದೇ ಬೇರೆ ಆನ್​ಫೀಲ್ಡ್​ನಲ್ಲಿ ಆಗಿದ್ದೇ ಬೇರೆ. ಓವರ್​ ಕಾನ್ಫಡೆನ್ಸ್​ನಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾಗೆ ಯುಎಸ್​ಎ ತಂಡ ಸಖತ್​ ಫೈಟ್​ ಕೊಡ್ತು. ಪಂದ್ಯದೂದಕ್ಕೂ ಅಮೇರಿಕಾದ ನಡೆಸಿದ ಹೋರಾಟಕ್ಕೆ ಬ್ಲ್ಯೂ ಬಾಯ್ಸ್​ ಸುಸ್ತಾಗಿದ್ದು ಸುಳ್ಳಲ್ಲ. 

ತಾಳ್ಮೆಯೂ ಬೇಕು

ಟೀಮ್​ ಇಂಡಿಯಾ ಟಿ20 ಕ್ರಿಕೆಟ್​ನಲ್ಲಿ ಅಗ್ರೆಸ್ಸಿವ್​ ಮಂತ್ರವನ್ನ ಪಠಿಸ್ತಾ ಇದೆ. ಆದ್ರೆ, ಅಗ್ರೆಸ್ಸಿವ್​ ಆಟವೊಂದೆ ನಡೆಯಲ್ಲ ಅನ್ನೋದು ಮೊದಲ ಪಂದ್ಯದಲ್ಲೇ ಸಾಬೀತಾಗಿದೆ. ವಾಂಖೆಡೆಯಲ್ಲಿ ಅಭಿಷೇಕ್​ ಶರ್ಮಾ, ತಿಲಕ್​ ವರ್ಮಾ, ಇಶಾನ್​ ಕಿಶನ್​ ಇವರ್ಯಾರ ಅಬ್ಬರವೂ ನಡೆಯಲೇ ಇಲ್ಲ. ಹಾರ್ದಿಕ್​ ಪಾಂಡ್ಯ, ಶಿವಂ ದುಬೆ ಕೂಡ ಠುಸ್​ ಪಟಾಕಿಯಾದ್ರು. ಸಿಚ್ಯುವೇಶನ್​ಗೆ ತಕ್ಕಂತೆ ಕೂಲ್​ & ಕಾಮ್​ ಆಟವಾಡಿದ ಸೂರ್ಯಕುಮಾರ್​ ಯಾದವ್​ ಮಾತ್ರ ಸಕ್ಸಸ್​ ಕಂಡ್ರು. 

ಇದನ್ನೂ ಓದಿ: ಬೆಂಗಳೂರಲ್ಲಿ 3.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಸೀಜ್! ಲಕಲಕ ಹೊಳೆಯೋ ಕಾರಿನ ಸುತ್ತ ರೋಚಕ ರಹಸ್ಯಗಳು..!

ಟೀಮ್​ ಇಂಡಿಯಾ ಪ್ರತಿಯೊಬ್ಬ ಆಟಗಾರನನ್ನ ಎದುರಾಳಿ ಸಖತ್​ ಸ್ಟಡಿ ಮಾಡಿವೆ ಅನ್ನೋದನ್ನೂ ಮೊದಲ ಪಂದ್ಯವೇ ನಿರೂಪಿಸಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಅಭಿಷೇಕ್​ ಶರ್ಮಾ ಡಿಸ್​ಮಿಸಲ್​. ಪಕ್ಕಾ ಟ್ರ್ಯಾಪ್​.! ಪವರ್​​ ಪ್ಲೇನ್​ನಲ್ಲಿ ಡೀಪ್​ ಕವರ್​ ಫೀಲ್ಡ್​ ಪ್ಲೇಸ್​ಮೆಂಟ್​ ಮಾಡೋ ತುಂಬಾ ರೇರ್​.! ಅಭಿಷೇಕ್​ ಶರ್ಮಾನ ವೀಕ್​ನೆಸ್​ ಗೊತ್ತಿದ್ರಿಂದ ಡೀಪ್​ ಕವರ್​ನಲ್ಲಿ ಫೀಲ್ಡ್​ ಸೆಟ್​ ಮಾಡಿ ಅದಕ್ಕೆ ತಕ್ಕಂತೆ ಔಟ್​ ಸೈಡ್​ ಆಫ್​ ಸ್ಟಂಪ್​ ಲೈನ್​ನಲ್ಲಿ ಬೌಲಿಂಗ್​ ಮಾಡಿ ಈಸಿಯಾಗಿ ವಿಕೆಟ್​ ಎಗರಿಸಿದ್ರು. ಕಿಶನ್, ತಿಲಕ್​, ದುಬೆ ಎಲ್ಲರನ್ನೂ ಸ್ಟನ್​ ಮಾಡಿದ್ದು ಹೀಗೆ. ಇದ್ರ ಅರ್ಥ ಎದುರಾಳಿ ಟೀಮ್​ ಇಂಡಿಯಾದ ಸ್ಟ್ರೆಂಥ್​ ಆ್ಯಂಡ್​ ವೀಕ್​​ನೆಸ್​ ಬಗ್ಗೆ ಕಂಪ್ಲೀಟ್​ ಸ್ಟಡಿ ಮಾಡಿವೆ ಅಂತಾ.

ಯುಎಸ್​ಎ ಎದುರಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಲೋವರ್​ ಆರ್ಡರ್​ ಬ್ಯಾಟರ್ಸ್​ ಟೆಸ್ಟ್​ ಕೂಡ ನಡೀತು. ಟಾಪ್​ ಆರ್ಡರ್​ ಬ್ಯಾಟರ್ಸ್​ ಸಾಲಿಡ್​ ಆಟವಾಡಿದಾಗೆಲ್ಲಾ ಅಂತಿಮ ಹಂತದಲ್ಲಿ ಬಂದು ಲೋವರ್​ ಆರ್ಡರ್​ ಬ್ಯಾಟರ್ಸ್​ ಮಿಂಚು ಹರಿಸ್ತಾ ಇದ್ರು. ಆರಂಭಿಕ ಆಘಾತ ಕಂಡಾಗ ಆ ಒತ್ತಡವನ್ನ ನಿಭಾಯಿಸುವಲ್ಲಿ ಲೋವರ್​ ಆರ್ಡರ್​ ಬ್ಯಾಟರ್ಸ್​ ಫೇಲ್​ ಆದ್ರು. ಶಿವಂ ದುಬೆ, ರಿಂಕು ಸಿಂಗ್​, ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​ ಪ್ರೆಶರ್​ ಸಿಚ್ಯುವೇಶನ್​ನ ಹ್ಯಾಂಡಲ್​ ಮಾಡೋದನ್ನ ಕಲೀಬೇಕಿದೆ. 

ಇದನ್ನೂ ಓದಿ: ಟಿ-20 ವಿಶ್ವಕಪ್ ಆರಂಭದಲ್ಲೇ ಅಭಿಮಾನಿಗಳಿಗೆ ಬೇಸರ..! ಕಾರಣ..?

ಬ್ಯಾಟಿಂಗ್​ ಮಾತ್ರವಲ್ಲ.. ಬೌಲಿಂಗ್​ನಲ್ಲೂ ಟೀಮ್​ ಇಂಡಿಯಾ ಸುದಾರಿಸಿಕೊಳ್ಳಬೇಕಿದೆ ಅನ್ನೋದನ್ನ ಮೊದಲ ಪಂದ್ಯ ಕ್ಲೀಯರ್​ ಕಟ್​ ಆಗಿ ಹೇಳಿದೆ. ಟೀಮ್​ ಮ್ಯಾನೇಜ್​ಮೆಂಟ್​ & ಪ್ಲೇಯರ್ಸ್​ ಇದನ್ನ ಅರ್ಥಮಾಡಿಕೊಂಡು ಗೇಮ್​ಪ್ಲಾನ್​ ಮೇಲೆ ರೀ ವರ್ಕ್​ ಮಾಡಬೇಕಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

blind T20 World Cup Surya kumar Yadav
Advertisment