Advertisment

ಮುಂದುವರೆದ ಗಂಭೀರ್​ ಫೇವರಿಸಂ.. ಹೆಡ್​​ಕೋಚ್​ ಲಾಬಿಗೆ ಸ್ಟಾರ್​ ವೇಗಿ ಬಲಿ..?

ಟೀಮ್​ ಇಂಡಿಯಾದಲ್ಲೀಗ ಗಂಭೀರ್​ ಆಡಿದ್ದೇ ಆಟ ಅನ್ನೋದು ಮತ್ತೊಮ್ಮೆ ಬಟಾಬಯಲಾಗಿದೆ. ಟಿ20 ಫಾರ್ಮೆಟ್​ನ ಅತಿ ಹೆಚ್ಚು​ ವಿಕೆಟ್​ ಟೇಕರ್​​, 2024ರ ಟಿ20 ವಿಶ್ವಕಪ್​ ಹೀರೋ ಆರ್ಷ್​​ದೀಪ್​ ಸಿಂಗ್​ ಬೇಡವಾಗಿದ್ದಾರೆ. ಶಿಷ್ಯನ ಪರ ಬ್ಯಾಟಿಂಗ್​​ ನಡೆಸ್ತಿರೋ ಗಂಭೀರ್​, ಆರ್ಷ್​ದೀಪ್​ರ ಮೂಲೆಗುಂಪು ಮಾಡ್ತಿದ್ದಾರೆ.

author-image
Ganesh Kerekuli
gautam_gambhir_surya
Advertisment

ಟಿ20 ಫಾರ್ಮೆಟ್​ನ ವರ್ಲ್ಡ್​ ಕ್ಲಾಸ್​ ಬೌಲರ್​. ಟೀಮ್​ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್​ ಕಬಳಿಸಿರೋ ವೇಗಿ. ಪವರ್​​ ಪ್ಲೇನ ಪಂಟರ್​, ಡೆತ್​ ಓವರ್​ನ ಯಾರ್ಕರ್​ ಮಾಸ್ಟರ್​. ಎಲ್ಲಕ್ಕಿಂತ ಮಿಗಿಲಾಗಿ 2024ರ ಟಿ20 ವಿಶ್ವಕಪ್​ ವಿನ್ನರ್​. ಈತನ ಬಿರುಗಾಳಿಯಂಥ ಬೌಲಿಂಗ್​ ದಾಳಿಯನ್ನ ಇಡೀ ವಿಶ್ವವೇ ಕೊಂಡಾಡಿದೆ. ಹೆಡ್​ಕೋಚ್​ ಗೌತಮ್​ ಗಂಭೀರ್​ ಅದ್ಯಾವ ಕೋಪಾನೋ ಗೊತ್ತಿಲ್ಲ. ಈತನ ಕಂಡರೆ ಆಗಲ್ಲ. ನಾವು​ ಹೇಳ್ತಿರೋದು ಲೆಫ್ಟ್​ ಆರ್ಮ್​ ಪೇಸರ್​ ಆರ್ಷ್​​ದೀಪ್​ ಸಿಂಗ್​ ಬಗ್ಗೆ..

Advertisment

ಕೋಚ್​ ಗಂಭೀರ್​ ಫೇವರಿಸಮ್​

ಅದೆಷ್ಟೇ ಟೀಕೆಗಳು ಬರಲಿ. ಅದೆಷ್ಟೇ ಪ್ರಶ್ನೆಗಳು ಬರಲಿ. ಗಂಭೀರ್​ ಬದಲಾಗೋ ಯಾವ ಲಕ್ಷಣಗಳೂ ಇಲ್ಲ. ನಾನು ಆಡಿದ್ದೇ ಆಟ ಮಾಡಿದ್ದೇ ರೂಲ್ಸು ಅಂತಿರೋ ಗಂಭೀರ್​ ಫೇವರಿಸಮ್​ ಮತ್ತೊಮ್ಮೆ ಬಟಾಬಯಲಾಗಿದೆ. ತನ್ನ ಶಿಷ್ಯ ಹರ್ಷಿತ್​ ರಾಣಾ ಪರ ಟಿ20 ಫಾರ್ಮೆಟ್​ನಲ್ಲೂ ಜೋರಾಗಿ ಬ್ಯಾಟಿಂಗ್​ ನಡೆಸ್ತಿದ್ದಾರೆ. ಶಿಷ್ಯನಿಗೆ ಚಾನ್ಸ್​ ಕೊಡಿಸೋಕೆ ಮತ್ತೊಬ್ಬ ಯುವ ಆಟಗಾರ ಆರ್ಷ್​​ದೀಪ್​​ ಸಿಂಗ್​​​ನ ಬಲಿ ಹಾಕಿದ್ದಾರೆ. ಗಂಭೀರ್​ ನಿರ್ಧಾರಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗ್ತಿವೆ. 

ಇದನ್ನೂ ಓದಿ:ಆರೋಗ್ಯ ಚೇತರಿಕೆ ಬಗ್ಗೆ ಮೊದಲ ಬಾರಿಗೆ ಅಪ್​​ಡೇಟ್ಸ್ ಕೊಟ್ಟ ಅಯ್ಯರ್.. ಭಾವುಕ ಪೋಸ್ಟ್..!

Gautam gambhir
ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯಕೋಚ್

ಕ್ಯಾನ್​ಬೆರಾದಲ್ಲಿ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಆದಾದ ಎಲ್ಲರಿಗೂ ಸರ್​​ಪ್ರೈಸ್​ ಆಗಿದ್ದು ಸುಳ್ಳಲ್ಲ. ಟಿ20 ಫಾರ್ಮೆಟ್​ ಬೆಸ್ಟ್​ ಬೌಲರ್​​ ಆರ್ಷ್​​ದೀಪ್​ ಸಿಂಗ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನವೇ ಇರಲಿಲ್ಲ. ಆಡಿದ 65 ಇನ್ನಿಂಗ್ಸ್​ಗಳಲ್ಲೇ 101 ವಿಕೆಟ್​​ ಕಬಳಿಸಿ ಟಿ20 ಇಂಟರ್​ನ್ಯಾಷನಲ್​ನಲ್ಲಿ ದಾಖಲೆ ಬರೆದಿರೋ ಆರ್ಷ್​ದೀಪ್​ ಬೆಂಚ್​ ಫಿಕ್ಸ್​ ಆಗಿದ್ರು. ಆರ್ಷ್​ದೀಪ್​ ಬದಲು ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ಈಗ ಹೆಜ್ಜೆ ಇಡ್ತಿರೋ, 3 ಟಿ20 ಪಂದ್ಯ ಆಡಿರೋ ಹರ್ಷಿತ್​ ರಾಣಾಗೆ ಸ್ಥಾನ ಸಿಕ್ಕಿತ್ತು. 

Advertisment

ಇದನ್ನೂ ಓದಿ:T20; ಟೀಮ್ ಇಂಡಿಯಾ ಫಸ್ಟ್ ಬ್ಯಾಟಿಂಗ್​.. ಪ್ಲೇಯಿಂಗ್- 11ರಲ್ಲಿ ಯಾರ್​ ಯಾರಿಗೆ ಚಾನ್ಸ್​..!

ಬೂಮ್ರಾ ಇಲ್ಲದೇ ಬೌಲಿಂಗ್ ಅಟ್ಯಾಕ್​ ಹೇಗೆ.. ಶಮಿ ಫಿಟ್ ಇಲ್ಲ, ಬಲ ತುಂಬುವ ತಾಕತ್ ಯಾರಿಗಿದೆ?

ಟಿ20 ಮಾದರಿಯಲ್ಲಿ ಟೀಮ್​ ಇಂಡಿಯಾದ ದಿ ಬೆಸ್ಟ್​ ಬೌಲರ್​ ಯಾರು ಅಂದ್ರೆ ಅದಕ್ಕೆ ಉತ್ತರ ಜಸ್​ಪ್ರಿತ್​ ಬೂಮ್ರಾ ಅಲ್ಲ. ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​. ಆರ್ಷ್​​ದೀಪ್​ಗಿಂತ ಮುಂಚೆಯೇ ಟಿ20 ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ರೂ ಕೂಡ ಬೂಮ್ರಾ ಇನ್ನೂ 100 ವಿಕೆಟ್​ ಗಡಿಯನ್ನ ಕ್ರಾಸ್​ ಮಾಡಿಲ್ಲ. ಆರ್ಷ್​​ದೀಪ್ ಸಿಂಗ್​ ಟೀಮ್​ ಇಂಡಿಯಾ ಪರ ಟಿ20ಯಲ್ಲಿ ಹೈಯೆಸ್ಟ್ ವಿಕೆಟ್​ ಟೇಕರ್ ಎನಿಸಿದ್ದಾರೆ. ಕನ್ಸಿಸ್ಟೆಂಟ್​ ಆಗಿ ಪರ್ಫಾಮ್​ ಮಾಡಿ ಸಾಮರ್ಥ್ಯವನ್ನ ಇಡೀ ಜಗತ್ತಿಗೆ ತೋರಿಸಿದ್ದಾರೆ. ಆದ್ರೆ, ಗಂಭೀರ್​ ಕೋಚ್​ ಆದ ಮೇಲೆ ಟೀಮ್​ ಇಂಡಿಯಾದಲ್ಲೇ ಮೂಲೆಗುಂಪಾಗಿದ್ದಾರೆ. 

ವಿಶ್ವಕಪ್​ ವಿನ್ನರ್​​ಗೆ ಬೆಲೆನೇ ಇಲ್ವಾ? 

2024ರಲ್ಲಿ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆಲುವಿನಲ್ಲಿ ಆರ್ಷ್​​ದೀಪ್​ ಸಿಂಗ್​ ಪ್ರಮುಖ ಪಾತ್ರ ನಿರ್ವಹಿಸಿದ್ರು. ಆಡಿದ 8 ಪಂದ್ಯಗಳಲ್ಲೇ 17 ವಿಕೆಟ್​ ಕಬಳಿಸಿ ಟೂರ್ನಿಯಲ್ಲಿ ಜಾಯಿಂಟ್​ ಹೈಯೆಸ್ಟ್​ ವಿಕೆಟ್​ ಟೇಕರ್​ ಆಗಿ ಹೊರಹೊಮ್ಮಿದ್ರು. ವಿಕೆಟ್​ ಕಬಳಿಕೆಗಿಂತ ವೇರಿಯಷನ್​ ಬೌಲಿಂಗ್​ನಿಂದಲೇ ಆರ್ಷ್​​ದೀಪ್​ ಗಮನ ಸೆಳೆದಿದ್ರು. ಒತ್ತಡದ ಸಂದರ್ಭದಲ್ಲೂ ಕೂಲ್​ ಅಂಡ್ ಕಾಮ್​ ಆಗಿ ಬೌಲಿಂಗ್​ ಮಾಡ್ತಿದ್ದ ಆರ್ಷ್​​ದೀಪ್​ ಪವರ್​ ಪ್ಲೇ ಹಾಗೂ ಡೆತ್​ ಓವರ್​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರು. ಇಂತಹ ಆಟಗಾರನೇ ಗಂಭೀರ್​ಗೆ ಬೇಡವಾದಂತಿದೆ. 

Advertisment

ಇದನ್ನೂ ಓದಿ: ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸಿತ್ತು.. ಕೊನೆಯಲ್ಲಿ ಅಭಿಮಾನಿಗಳಿಗೆ ಕಾದಿದ್ದು ನಿರಾಸೆ..!

ಯಂಗ್ ಪ್ಲೇಯರ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ

ಹೀಗೊಂದು ಚರ್ಚೆಯೂ ಕ್ರಿಕೆಟ್​ ವಲಯದಲ್ಲಿ ನಡೀತಿದೆ. ಗಂಭೀರ್​ ಕೋಚ್​ ಆದ ಬಳಿಕ ಆರ್ಷ್​​ದೀಪ್​ ಸಿಂಗ್​ ಆಡಿದ್ದಕ್ಕಿಂತ ಬೆಂಚ್​ ಕಾದಿರೋದೆ ಹೆಚ್ಚಾಗಿದೆ. ಇಂಗ್ಲೆಂಡ್​ ಎದುರಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಬೆಂಚ್​ ಕಾದ ಆರ್ಷ್​ದೀಪ್​ಗೆ ಚಾಂಪಿಯನ್ಸ್​ ಟ್ರೋಫಿಯಲ್ಲೂ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇಂಗ್ಲೆಂಡ್​ ಪ್ರವಾಸದಲ್ಲೂ ಬೆಂಚ್​ಗೆ ಸೀಮಿತವಾದ ಆರ್ಷ್​​ದೀಪ್​, ಆಸ್ಟ್ರೇಲಿಯಾ ಪ್ರವಾಸದಲ್ಲೂ ಆಡಿರೋದು 2 ಪಂದ್ಯ ಮಾತ್ರ. ಆರ್ಷ್​​ದೀಪ್​ ಯಾವಾಗೆಲ್ಲಾ ಸೈಡ್​ಲೈನ್​ ಆಗಿದ್ದಾರೋ ಆಗೆಲ್ಲಾ ಆಡಿರೋದು ಹರ್ಷಿತ್​ ರಾಣಾ. ಹೀಗಾಗಿಯೇ ಆರ್ಷ್​​ದೀಪ್​ನ ಗಂಭೀರ್​ ಟಾರ್ಗೆಟ್​ ಮಾಡ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟಿದೆ. 

ಮಹತ್ವದ ಟಿ20 ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿವೆ. ಚಾಂಪಿಯನ್​​ ಪಟ್ಟ ಉಳಿಸಿಕೊಳ್ಳಬೇಕಂದ್ರೆ ಬಲಿಷ್ಟ ತಂಡವನ್ನ ಕಣಕ್ಕಿಳಿಸಬೇಕಿದೆ. ತಂಡದಿಂದ ಆರ್ಷ್​​ದೀಪ್​ ಸಿಂಗ್​ನ ಹೊರಗಿಟ್ರೆ ಹಿನ್ನಡೆಯಾಗೋದ್ರಲ್ಲಿ ಅನುಮಾನವೇ ಇಲ್ಲ. ಮುಂದಾದ್ರೂ ಇದನ್ನ ಗಂಭೀರ್​ ಅರ್ಥ ಮಾಡಿಕೊಳ್ಳಬೇಕಿದೆ.

Advertisment

ಇದನ್ನೂ ಓದಿ: MI ಬಿಡಲು ರೋಹಿತ್ ಶರ್ಮಾ ರೆಡಿ.. ಯಾವ ಫ್ರಾಂಚೈಸಿ ಸೇರ್ತಾರೆ ಹಿಟ್​ಮ್ಯಾನ್..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

arshdeep singh Gautam Gambhir
Advertisment
Advertisment
Advertisment