/newsfirstlive-kannada/media/media_files/2025/09/11/axer-patel-and-kuldeep-yadav-2025-09-11-10-12-53.jpg)
ಏಷ್ಯಾಕಪ್​ ಅಖಾಡದಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಯುಎಇ ತಂಡವನ್ನ ಬಗ್ಗು ಬಡಿದು ಟ್ರೋಫಿಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಇಷ್ಟೇ ಅಲ್ಲ, ಮೊದಲ ಪಂದ್ಯದಲ್ಲೇ ಟೀಮ್​​ ಇಂಡಿಯಾ ಗೇಮ್​ಪ್ಲಾನ್​ ಸಖತ್​ ಆಗಿ ವರ್ಕೌಟ್​ ಆಗಿದೆ. ಟೀಮ್ಇಂಡಿಯಾ ಗೆಲುವಿನ ರಣ ತಂತ್ರ ಸಕ್ಸಸ್​ ಕಂಡಿದ್ದೇಗೆ ಅನ್ನೋ ವಿವರ ಇಲ್ಲಿದೆ.
3 ಜನ ಸ್ಪಿನ್ನರ್ ಬೇಕಿತ್ತಾ? ಏಷ್ಯಾಕಪ್​ ಕದನದ ಯುಎಇ ವಿರುದ್ಧದ ಪಂದ್ಯಕ್ಕೆ ಟೀಮ್​ ಇಂಡಿಯಾ ಪ್ಲೇಯಿಂಗ್​ ಇಲೆವೆನ್​ ಅನೌನ್ಸ್​ ಆದ ಕೂಡಲೇ ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಕೆಲವೇ ಗಂಟೆಗಳಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗ್ತು. ಹೆಡ್​ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಪ್ಲಾನ್​ ಪರ್ಫೆಕ್ಟ್​ ಆಗಿ ವರ್ಕೌಟ್​ ಆಯ್ತು.
ಸ್ಪಿನ್​ ‘ಸ್ಟ್ರೋಕ್​​’.!
ದುಬೈ ಮೈದಾನದಲ್ಲಿ ಟೀಮ್​ ಇಂಡಿಯಾ ಸ್ಪಿನ್ನರ್​ಗಳು ನಿನ್ನೆ ಪರಾಕ್ರಮ ಮೆರೆದ್ರು. ಮೆನ್​ ಇನ್​ ಬ್ಲೂ ಆರ್ಮಿಯ ಸ್ಪಿನ್​ ಮೆಜಿಶಿಯನ್ಸ್​​​ ಚಮಾತ್ಕಾರದ ಮುಂದೆ ಯುಇಎ ಬ್ಯಾಟರ್ಸ್​ ಪರದಾಡಿದ್ರು. ಸ್ಪಿನ್​ ಟ್ರ್ಯಾಪ್​ನಲ್ಲಿ ಬಿದ್ದು ವಿಲ ವಿಲ ಒದ್ದಾಡಿದ್ರು. ಟೀಮ್​ ಇಂಡಿಯಾದ ಸ್ಪಿನ್​ ಸ್ಟ್ರೋಕ್​​​ಗೆ ತಬ್ಬಿಬ್ಬಾಗಿ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದ್ರು.
ಇದನ್ನೂ ಓದಿ:ಕೇವಲ 4 ಓವರ್​ಗಳಲ್ಲಿ UAE ತಂಡದ ವಿರುದ್ಧ ಟೀಮ್ ಇಂಡಿಯಾಗೆ ಗೆಲುವು
ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್​ ಯಾದವ್​ ನಿನ್ನೆ ಕೈಚಳಕ ಮಾಡಿದ್ರು. ದುಬೈನಲ್ಲಿ ದರ್ಬಾರ್​ ನಡೆಸಿದ ಕುಲ್​​ದೀಪ್​ ಯಾದವ್ 4 ವಿಕೆಟ್​ ಬೇಟೆಯಾಡಿದ್ರು. ಹಾಕಿದ ಮೊದಲ ಓವರ್​​ನಲ್ಲಿ ವಿಕೆಟ್​ ಲೆಸ್​ ಆಗಿ ನಿರ್ಗಮಿಸಿದ ಕುಲ್​ದೀಪ್​ ಯಾದವ್, 2ನೇ ಓವರ್​ನಲ್ಲಿ ಚಮಾತ್ಕಾರ ಮಾಡಿದ್ರು. ರಾಹುಲ್​ ಚೋಪ್ರಾ, ಮೊಹಮ್ಮದ್​ ವಾಸಿಮ್​, ಹರ್ಷಿತ್​ ಕೌಶಿಕ್​.. ಮೂವರಿಗೆ ಒಂದೇ ಓವರ್​ನಲ್ಲಿ ಪೆವಿಲಿಯನ್​ ದಾರಿ ತೋರಿಸಿದ್ರು.
ಸೆಕೆಂಡ್​ ಸ್ಪೆಲ್​ ಹಾಕಲು ಬಂದ ಮೊದಲ ಎಸೆತದಲ್ಲೇ ಕುಲ್​​ದೀಪ್​ ಯುಎಇ ಬ್ಯಾಟಿಂಗ್​ ಕತೆ ಮುಗಿಸಿದ್ರು. ಮ್ಯಾಜಿಕಲ್​ ಎಸೆತಕ್ಕೆ ತಬ್ಬಿಬ್ಬಾದ ಹೈದರ್​ ಅಲಿ, ಸಂಜು ಸ್ಯಾಮ್ಸನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು.
/filters:format(webp)/newsfirstlive-kannada/media/media_files/2025/09/11/team-india-12-2025-09-11-10-15-02.jpg)
ಕುಲ್​​ದೀಪ್​ ಯಾದವ್​ ಬೌಲಿಂಗ್​
ನಿನ್ನೆ ಪಂದ್ಯದಲ್ಲಿ ಒಟ್ಟಾರೆ 2.1 ಓವರ್​​ ಬೌಲಿಂಗ್​ ಮಾಡಿದ ಕುಲ್​​ದೀಪ್​ ಯಾದವ್​, ಕೇವಲ 7 ರನ್​ ಬಿಟ್ಟು ಕೊಟ್ರು. 3.20ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟ ಕುಲ್​​ದೀಪ್​ ಯಾದವ್​ ಒಟ್ಟು 4 ವಿಕೆಟ್​ ಬೇಟೆಯಾಡಿದ್ರು. ಕುಲ್​​ದೀಪ್​ ಯಾದವ್​ ಮಾತ್ರವಲ್ಲ.. ಮಿಸ್ಟ್ರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಕೂಡ ಚಮಾತ್ಕಾರ ಮಾಡಿದ್ರು. 2 ಓವರ್​​ ಬೌಲಿಂಗ್​ ಮಾಡಿದ ವರುಣ್​ ಚಕ್ರವರ್ತಿ ಜಸ್ಟ್​ 4 ರನ್​ ಬಿಟ್ಟು ಕೊಟ್ಟು ಒಂದು ವಿಕೆಟ್​ ಉರುಳಿಸಿದ್ರು.
ಅಕ್ಷರ್ ಪಟೇಲ್​ ಕೂಡ ವಿಕೆಟ್​ ಬೇಟೆಯಾಡುವಲ್ಲಿ ಯಶಸ್ವಿಯಾದ್ರು. ಮೊದಲ ಓವರ್​ನಲ್ಲಿ ದುಬಾರಿ ಅನಿಸಿದ್ರೂ 2ನೇ ಓವರ್​ನಲ್ಲಿ ವಿಕೆಟ್​ ಉರುಳಿಸುವಲ್ಲಿ ಯಶಸ್ವಿಯಾದ್ರು. ಸ್ಪಿನ್ನರ್​ಗಳ ಹೊರತಾಗಿ ಆಲ್​​​ರೌಂಡರ್ ಶಿವಂ ದುಬೆ ಎಲ್ಲರ ಗಮನ ಸೆಳೆದ್ರು. ಹಾಕಿದ 2 ಓವರ್​ಗಳಲ್ಲಿ 3 ವಿಕೆಟ್​ ಬೇಟೆಯಾಡಿದ್ರು. ವೇಗಿ ಜಸ್​ಪ್ರಿತ್​ ಬೂಮ್ರಾ ಒಂದು ವಿಕೆಟ್​​ ಕಬಳಿಸಿದ್ರು.
/filters:format(webp)/newsfirstlive-kannada/media/media_files/2025/09/10/varun_chakravarty-2025-09-10-21-42-38.jpg)
ಒಟ್ಟಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಟೀಮ್​ ಇಂಡಿಯಾ ಬೌಲರ್​​ಗಳು ಪರಾಕ್ರಮ ಮೆರೆದಿದ್ದಾರೆ. ಜೊತೆಗೆ ಅರಬ್ಬರ ಪಡೆಯನ್ನ ಬಗ್ಗು ಬಡಿದು ಮುಂದಿನ ಎದುರಾಳಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us