ವಿಶ್ವಕಪ್​​​ಗೂ ಮುನ್ನ ವಿಘ್ನ ವಿನಾಶಕನ ಆಶೀರ್ವಾದ ಪಡೆದ ಗಂಭೀರ್..!

T20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಹೆಡ್​​ಕೋಚ್​ ಗೌತಮ್​ ಗಂಭೀರ್​ ಪವರ್​ಫುಲ್​ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಷ್ಟಿತ ಸರಣಿಯಲ್ಲಿ ಯಾವುದೇ ವಿಘ್ನ ಎದುರಾಗದಿರಲಿ ಎಂದು ಪ್ರಾರ್ಥಸಿದ್ದಾರೆ. ಆ ಸ್ಥಳಕ್ಕೆ ಹೋಗಿ ಬಂದಿರೋ ಕೋಚ್​​ ಗಂಭೀರ್​ ಆತ್ಮವಿಶ್ವಾಸ ಡಬಲ್​ ಆಗಿದೆ.

author-image
Ganesh Kerekuli
Gambhir (6)
Advertisment
  • ವಿಘ್ನ ವಿನಾಶಕನ ಮೊರೆ ಹೋದ ಗೌತಮ್​ ಗಂಭೀರ್
  • ವಿಶ್ವಕಪ್​ಗೂ ಮುನ್ನ ಕೋಚ್​ ಗಂಭೀರ್​ ಟೆಂಪಲ್​ ರನ್​
  • ಸಿದ್ಧಿ ವಿನಾಯಕನ ಸನ್ನಿಧಿಗೆ ಗೌತಮ್ ಗಂಭೀರ್​ ಭೇಟಿ

T20 ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಹೆಡ್​​ಕೋಚ್​ ಗೌತಮ್​ ಗಂಭೀರ್​ ಪವರ್​ಫುಲ್​ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಷ್ಟಿತ ಸರಣಿಯಲ್ಲಿ ಯಾವುದೇ ವಿಘ್ನ ಎದುರಾಗದಿರಲಿ ಎಂದು ಪ್ರಾರ್ಥಸಿದ್ದಾರೆ. ಆ ಸ್ಥಳಕ್ಕೆ ಹೋಗಿ ಬಂದಿರೋ ಕೋಚ್​​ ಗಂಭೀರ್​ ಆತ್ಮವಿಶ್ವಾಸ ಡಬಲ್​ ಆಗಿದೆ. ಅಷ್ಟಕ್ಕೂ ಗಂಭೀರ್​ ಹೋಗಿದ್ದೆಲ್ಲಿಗೆ?

ಟೀಮ್​ ಇಂಡಿಯಾ ಹೆಡ್​ಕೋಚ್​ ಗೌತಮ್​ ಗಂಭೀರ್​​. ಒಬ್ಬ ಮಹಾನ್​ ದೈವಭಕ್ತ. ಭಾರತದ ಯಾವುದೇ ನಗರದಲ್ಲಿ ಕ್ರಿಕೆಟ್​ ಸರಣಿ ನಡೆಯಲಿ, ಅಲ್ಲಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡ್ತಾನೆ ಇರ್ತಾರೆ. ಕಳೆದೊಂದು ವರ್ಷದಿಂದ ಗೌತಮ್​ ಗಂಭೀರ್​ ಟೆಂಪಲ್​ ರನ್​ ಜೋರಾಗಿದೆ. ಮಾ ಕಾಮಾಕ್ಯಾ ದೇವಿ, ಕೊಲ್ಕತ್ತಾದ ಕಾಳಿ ದೇವಸ್ಥಾನ, ಉಜ್ಜಯಿನಿಯ ಮಹಾಕಾಳೇಶ್ವರ ಸನ್ನಿಧಿ, ಸಿಂಹಾಂಚಲಂನ ವರಾಹ ನರಸಿಂಹ ಸ್ವಾಮಿ ಟೆಂಪಲ್​.. ಹೀಗೆ ದೇಶದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. 

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಐದು ಪವರ್ ಹಿಟ್ಟರ್ಸ್​.. ಇವರಿಂದ ತಂಡಕ್ಕೆ ಆಗುವ ಲಾಭ ಏನು?

ಪ್ರತಿಷ್ಟಿತ ಟಿ20 ವಿಶ್ವಕಪ್​ ಟೂರ್ನಿ ಆರಂಭಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಇವತ್ತು ಚುಟುಕು ವಿಶ್ವಕಪ್​ ಟೂರ್ನಿ ಕಿಕ್​ ಸ್ಟಾರ್ಟ್​ ಆಗಲಿದ್ದು, ಮೊದಲ ದಿನದಲ್ಲೇ ಹಾಲಿ ಚಾಂಪಿಯನ್​​ ಟೀಮ್​ ಇಂಡಿಯಾ ಕೂಡ ಅಖಾಡಕ್ಕಿಳಿಯಲಿದೆ. ಯುಎಸ್​​ಎ ವಿರುದ್ಧದ ಮೊದಲ ಕದನಕ್ಕೂ ಮುನ್ನ ಭಾರತ ತಂಡದ ಹೆಡ್​​ ಕೋಚ್​ ಗೌತಮ್​ ಗಂಭೀರ್​ ವಿಘ್ನ ವಿನಾಶಕನ ಮೊರೆ ಹೋಗಿದ್ದಾರೆ. 

ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್​ ಮುಂಬೈನಲ್ಲಿರೋ ಪ್ರಸಿದ್ಧ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬ್ಯಾಟಿಂಗ್​ ಕೋಚ್​ ಸಿಂತಾಶು ಕೋಟಕ್​ ಜೊತೆಗೆ ನಿನ್ನೆ ದೇವಸ್ಥಾನಕ್ಕೆ ಭೇಟಿ ನೀಡಿದ ಗಂಭೀರ್​ ವಿಶೇಷ ಪೂಜೆ ಸಲ್ಲಿಸಿದ್ರು. ವಿನಾಯಕನ ದರ್ಶನ ಪಡೆದು ಟೀಮ್​ ಇಂಡಿಯಾಕ್ಕೆ  ಯಾವುದೇ ವಿಘ್ನಗಳು ಎದುರಾಗದಂತೆ ಪ್ರಾರ್ಥಿಸಿದ್ದಾರೆ. 
ಸಿದ್ಧಿ ವಿನಾಯಕನ ದರ್ಶನ ಪಡೆದ ಅದೆಷ್ಟೋ ಭಕ್ತರು, ಹೇಳೋದು ಈ ಮಾತನ್ನೇ. ಈ ದೇವಸ್ಥಾನಕ್ಕೆ ಭೇಡಿ ನೀಡಿ ಭಕ್ತಿಯಿಂದ ಪ್ರಾರ್ಥಿಸಿದ್ರೆ, ಬೇಡಿದ ವರವನ್ನ ಕರುಣಿಸ್ತಾರೆ ಅನ್ನೋದು ಜನರ ನಂಬಿಕೆಯಾಗಿದೆ. ಸಿದ್ಧಿ ವಿನಾಯಕನ ದರ್ಶನ ಪಡೆದ ಬಳಿಕ ಇಷ್ಟಾರ್ಥ ಸಿದ್ಧಿಯಾದ ಹಲವು ಉದಾಹರಣೆಗಳು ಇವೆ. ಹೀಗಾಗೇ ದಾದರ್​ನಲ್ಲಿರೋ ಸಿದ್ಧಿ ವಿನಾಯಕನ ದರ್ಶನಕ್ಕೆ, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಆಗಮಿಸ್ತಾರೆ. 

ಇದನ್ನೂ ಓದಿ:ಪವರ್​​​ಫುಲ್​ ಪಂಚ್​ ಕೊಡೋಕೆ ‘ಪಂಚ’ ಬೌಲರ್ಸ್​ ರೆಡಿ..! ಹೇಗಿದೆ ಬೌಲಿಂಗ್ ಸ್ಟ್ರೆಂಥ್..?

Gambhir (7)

ಟೀಮ್ ಇಂಡಿಯಾದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು, ಸಿದ್ಧಿ ವಿನಾಯಕನ ಪರಮ ಭಕ್ತರು. 2024ರ ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಟ್ರೋಫಿ ಸಮೇತ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ರು. ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಅಜಿಂಕ್ಯಾ ರಹಾನೆ ಸೇರಿದಂತೆ, ಹಲವು ಕ್ರಿಕೆಟರ್ಸ್ ಆಗಾಗ ಸಿದ್ಧಿ ವಿನಾಯಕನ ದರ್ಶನ ಪಡಿತಾರೆ. ಇನ್ನು ಬಾಲಿವುಡ್ ಸ್ಟಾರ್ಸ್​ ಬಗ್ಗೆ ಹೇಳೋದೇ ಬೇಡ..! ಸಲ್ಮಾನ್ ಖಾನ್, ಸಂಜಯ್ ದತ್, ದೀಪಿಕಾ ಪಡುಕೋಣೆ, ಐಶ್ವರ್ಯ ರೈ ಬಚ್ಚನ್ ಸೇರಿದಂತೆ, ಖ್ಯಾತ ನಟ ನಟಿಯರು ಆಗಾಗ ವಿನಾಯಕನ ದರ್ಶನ ಪಡಿತಲೇ ಇರ್ತಾರೆ.

ಕ್ರಿಕೆಟರ್ಸ್, ಫಿಲ್ಮ್​ ಸ್ಟಾರ್ಸ್ ಅಷ್ಟೇ ಅಲ್ಲ..! ಭಾರತದ ಶ್ರೀಮಂತ ಉದ್ಯಮಿ ಅಂಬಾನಿಗೂ ಸಿದ್ಧಿವಿನಾಯಕನ ಆರ್ಶಿವಾದ ಬೇಕು. ಅಂಬಾನಿ ಮನೆಯಲ್ಲೇ ಏನೇ ಫಂಕ್ಷನ್ ನಡೀಲಿ, ಯಾವುದೇ ಬಿಗ್​ ಡೀಲ್​ಗೆ ಕೈ ಹಾಕಲಿ.. ಮೊದಲು ಸಿದ್ಧಿವಿನಾಯಕನ ದರ್ಶನ ಪಡೆದು, ಆರ್ಶಿವಾದ ಪಡೆಯುತ್ತಾರೆ. ನಂತರವೇ, ಬೇರೆ ಕಾರ್ಯಗಳಿಗೆ ಕೈ ಹಾಕೋದು..!

ದಾದರ್​ನಲ್ಲಿರೋ ದೇವಸ್ಥಾನದಲ್ಲಿ ಕಪ್ಪು ಕಲ್ಲಿನಿಂದ ಕೆತ್ತಲಾಗಿರುವ 2.5 ಅಡಿ ಎತ್ತರ ಮತ್ತು 2 ಅಡಿ ಅಗಲದ ವಿನಾಯಕ, ತನ್ನ ಇಬ್ಬರು ಮಡದಿಯರಾದ ರಿದ್ಧಿ ಮತ್ತು ಸಿದ್ಧಿ ಜೊತೆ ಆಸೀನರಾಗಿದ್ದಾರೆ. ಭಕ್ತರು ಬೇಡಿದ ವರವನ್ನ ಕರುಣಿಸುವ ಸಿದ್ಧಿವಿನಾಯಕ, ಈ ಬಾರಿ ಟೀಮ್ ಇಂಡಿಯಾಕ್ಕೆ ತವರಿನಲ್ಲಿ T20 ವಿಶ್ವಕಪ್ ಗೆಲ್ಲುವಂತೆ ಆಶೀರ್ವದಿಸಲಿ. ಗಂಭೀರ್​ ಪ್ರಾರ್ಥನೆ ಫಲಿಸಲಿ ಅನ್ನೋದು ಅಭಿಮಾನಿಗಳ ಆಶಯ. 

ಇದನ್ನೂ ಓದಿ:ಎದುರಾಳಿಗೆ ಅಭಿಷೇಕ್ ಅವರೇ ಆತಂಕ.. ಅಗ್ರೆಸಿವ್ ಬ್ಯಾಟಿಂಗ್ ಹೇಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Gautam Gambhir T20 world cup T20I
Advertisment