/newsfirstlive-kannada/media/media_files/2026/02/07/team-india-21-2026-02-07-17-18-45.jpg)
ಟಿ20 ವಿಶ್ವಕಪ್​ ಮಹಾಸಮರಕ್ಕೂ ಮುನ್ನ ಟೀಮ್​ ಇಂಡಿಯಾದ ಬ್ಯಾಟಿಂಗ್​ ಜೊತೆಗೆ ಮೆನ್​ ಇನ್​ ಬ್ಲ್ಯೂ ಪಡೆಯ ಬೌಲಿಂಗ್​ ಅಟ್ಯಾಕ್​ ಎದುರಾಳಿಗಳ ನಿದ್ದೆಗೆಡಿಸಿದೆ. ಭಾರತದ ಬಲಿಷ್ಠ ಬೌಲಿಂಗ್​ ಪಡೆ ಎದುರಾಳಿಗಳಿಗೆ ಪವರ್​ಫುಲ್​ ಪಂಚ್​ ಕೊಡೋಕೆ ಸಜ್ಜಾಗಿ ನಿಂತಿದೆ. ಕಳೆದ ಕೆಲ ಸರಣಿಗಳಲ್ಲಿ ಸಾಲಿಡ್​​ ಪರ್ಫಾಮೆನ್ಸ್​ ನೀಡಿರುವ ಟೀಮ್​ ಇಂಡಿಯನ್​ ಬೌಲರ್ಸ್​ ಅದೇ ರಿಧಮ್​ ಮುಂದುವರೆಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಪಂಚ​ ಬೌಲರ್ಸ್​ ಪಂಚ್​ನ ಭಯ ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ಆವರಿಸಿದೆ.
ಟಿ20 ವಿಶ್ವಕಪ್ ಮಹಾ ಸಮರಕ್ಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಹಾಲಿ ಚಾಂಪಿಯನ್​ ಪಟ್ಟ ಉಳಿಸಿಕೊಳ್ಳೋಕೆ ಪಣ ತೊಟ್ಟಿರೋ ಟೀಮ್​ ಇಂಡಿಯಾ ಸ್ಪಷ್ಟವಾದ ಗೇಮ್​ ಪ್ಲಾನ್​, ಸ್ಟಾರ್ಟಜಿ ರೂಪಿಸಿಕೊಂಡು ರಣಾಂಗಣಕ್ಕಿಳಿಯೋಕೆ ರೆಡಿಯಾಗಿದೆ. ಸದ್ಯಕ್ಕಂತೂ ಟೀಮ್​ ಇಂಡಿಯಾನೇ ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್​ ಆಗಿ ಗುರುತಿಸಿಕೊಂಡಿದೆ. ಯಾಕಂದ್ರೆ, ಬ್ಯಾಟಿಂಗ್​ ಮಾತ್ರವಲ್ಲ.. ಬೌಲಿಂಗ್​ನಲ್ಲೂ ಈ ಬಾರಿ ಟೀಮ್​ ಇಂಡಿಯಾ ಅಷ್ಟು ಬಲಿಷ್ಠವಾಗಿದೆ.
ಆರ್ಷ್​​​ದೀಪ್​ ಆರ್ಭಟ..!
ಯಂಗ್​ ಅಂಡ್ ಎನರ್ಜಿಟಿಕ್​ ಆರ್ಷ್​​​ದೀಪ್ ಸಿಂಗ್​, ಎದುರಾಳಿ ತಂಡಗಳ ಟೆನ್ಶನ್​ ಹೆಚ್ಚಿಸಿದ್ದಾರೆ. ಕಳೆದ ಕೆಲ ಸರಣಿಗಳಲ್ಲಿ ಫೈರಿ ಸ್ಪೆಲ್​ಗಳ​ ಮೂಲಕ ಬ್ಯಾಟರ್​ಗಳನ್ನ ಕಂಗೆಡಿಸಿದ್ದಾರೆ. ಪವರ್​ ಪ್ಲೇ & ಡೆತ್​ ಓವರ್​​ಗಳಲ್ಲಿ ಮಾರಕ ದಾಳಿಗಳನ್ನ ಸಂಘಟಿಸೋ ಪಂಜಾಬ್​ ಪುತ್ತರ್​, ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಕೀ ಪ್ಲೇಯರ್​​ ಎನಿಸಿದ್ದಾರೆ. ಆರ್ಷ್​​ದೀಪ್​ ಆರ್ಭಟಿಸಿದ್ರೆ, ಟೀಮ್​ ಇಂಡಿಯಾ ಗೆಲುವು ಮಿಸ್ಸೇ ಇಲ್ಲ.
ಇದನ್ನೂ ಓದಿ: ಶಾಕಿಂಗ್ ನ್ಯೂಸ್​.. ಸೂರ್ಯಗೆ ಇದು ಕೊನೆಯ ವಿಶ್ವಕಪ್​ ಟೂರ್ನಿ..?
/filters:format(webp)/newsfirstlive-kannada/media/media_files/2026/02/07/team-india-21-2026-02-07-17-18-45.jpg)
ಟೀಮ್​ ಇಂಡಿಯಾ ವೇಗಿ, ಯಾರ್ಕರ್​​ ಸ್ಪೆಷಲಿಸ್ಟ್​ ಜಸ್​​ಪ್ರಿತ್​ ಬೂಮ್ರಾ ಬೌಲಿಂಗ್​ ಬಗ್ಗೆ ಹೆಚ್ಚು ಹೇಳೋ ಅಗತ್ಯಾನೇ ಇಲ್ಲ. ಬೂಮ್ರಾ ಬಿರುಗಾಳಿಗೆ ವಿಶ್ವದ ಘಟಾನುಘಟಿ ಬ್ಯಾಟ್ಸ್​ಮನ್​ಗಳೇ ಉಡೀಸ್​ ಆಗಿದ್ದಾರೆ. ಅದ್ರಲ್ಲೂ, ಬಿಗ್​ ಸ್ಟೇಜ್​, ಹೈಪ್ರೆಶರ್​​ ಗೇಮ್​ಗಳಲ್ಲಿ ಬೆಂಕಿ ದಾಳಿ ಸಂಘಟಿಸೋದ್ರಲ್ಲಿ ಬೂಮ್ರಾ ಎತ್ತಿದ ಕೈ.! ಬೂಮ್ರಾ ಪ್ಲೇಯಿಂಗ್​ ಇಲೆವೆನ್​ನಲ್ಲಿ ಇದ್ದಾರೆ ಅಂದ್ರೇನೆ ಎದುರಾಳಿ ಪಡೆಯ ಬ್ಯಾಟರ್ಸ್​​ ಅರ್ಧ ಪ್ರೆಶರ್​ಗೆ ಒಳಗಾಗಿರ್ತಾರೆ. ಬೂಮ್ರಾ ಖದರ್​ ಅಂತದ್ದು.!
ಪಂಚ್​ ಕೊಡಲು ಪಾಂಡ್ಯ ರೆಡಿ
ಬ್ಯಾಟಿಂಗ್​ನಲ್ಲಿ ಬೌಂಡರಿ, ಸಿಕ್ಸರ್​​ ಸಿಡಿಸಿ ರನ್​ ಹೊಳೆ ಹರಿಸೋ ಹಾರ್ದಿಕ್ ಪಾಂಡ್ಯ, ರಿಸೆಂಟ್​ ಟೈಮ್​ನಲ್ಲಿ ಬೌಲಿಂಗ್​ನಲ್ಲೂ ಮಿಂಚು ಹರಿಸ್ತಿದ್ದಾರೆ. ಪವರ್​ ಪ್ಲೇ, ಮಿಡಲ್​ ಓವರ್​, ಡೆತ್​ ಓವರ್​​.. ಯಾವುದೇ ಸಿಚ್ಯುವೇಶನಲ್ಲಿ ಬೇಕಾದ್ರೂ ವಿಕೆಟ್​ ಬೇಟೆಯಾಡೋ ಕೆಪಾಸಿಟಿ ಹೊಂದಿದ್ದಾರೆ. 2024ರ ವಿಶ್ವಕಪ್​ನ ಫೈನಲ್​ ಗೆಲುವಿನಲ್ಲಿ ಪಾಂಡ್ಯ ಪವರ್​​ ಫುಲ್​ ಬೌಲಿಂಗ್​ ಮೇಜರ್​ ರೋಲ್​ ಪ್ಲೇ ಮಾಡಿತ್ತು. ಇದೀಗ ಸೌತ್​​ ಆಫ್ರಿಕಾ, ನ್ಯೂಜಿಲೆಂಡ್​​ ವಿರುದ್ಧ ಸಾಲಿಡ್​ ಸ್ಪೆಲ್​ ಹಾಕಿರೋ ಪಾಂಡ್ಯ ವಿಶ್ವಕಪ್​ನಲ್ಲೂ ಅದೇ ಆಟ ಮುಂದುವರೆಸೋಕೆ ರೆಡಿಯಾಗಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಐದು ಪವರ್ ಹಿಟ್ಟರ್ಸ್​.. ಇವರಿಂದ ತಂಡಕ್ಕೆ ಆಗುವ ಲಾಭ ಏನು?
/filters:format(webp)/newsfirstlive-kannada/media/post_attachments/wp-content/uploads/2024/10/ARSHDEEP-SING.jpg)
ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್​ ಯಾದವ್​ ಬಿಗ್ ಸ್ಟೇಜ್​ ಮ್ಯಾಜಿಕ್​ ಮಾಡೋಕೆ ಕಾದು ಕುಳಿತಿದ್ದಾರೆ. ವೇರಿಯೇಶನ್​ ಎಸೆತಗಳಿಂದಲೇ ಬ್ಯಾಟ್ಸ್​ಮನ್​ಗಳನ್ನ ಕಾಡೋ ಲೆಫ್ಟ್​ ಆರ್ಮ್​ ಸ್ಪಿನ್ನರ್​ಗೆ ವಿಶ್ವಕಪ್​ನಲ್ಲಿ ಪಿಚ್​​ನ ಅಡ್ವಾಂಟೇಜ್​ ಕೂಡ ಇದೆ. ವಿಶ್ವಕಪ್​ ಟೂರ್ನಿ ನಡೆಯೋ ಶ್ರೀಲಂಕಾ ಹಾಗೂ ಭಾರತದ ಪಿಚ್​​ಗಳು ಕುಲ್​​ದೀಪ್​ ಬೌಲಿಂಗ್​ ಶೈಲಿಗೆ ಹೇಳಿ ಮಾಡಿಸಿದಂತಿವೆ. ಕಳೆದ 3 ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ರಿಧಮ್​ ಕಂಡುಕೊಂಡಿರೋ ಕುಲ್​​ದೀಪ್​, ಚುಟುಕು ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಬಿಗ್ಗೆಸ್ಟ್​​ ಸ್ಟ್ರೆಂಥ್​​​ ಅನಿಸಿದ್ದಾರೆ.
2021ರ ಟಿ20 ವಿಶ್ವಕಪ್​ನ ಕಹಿ ನೆನಪನ್ನ 2026 ವಿಶ್ವಕಪ್​ನಲ್ಲಿ ಮರೆಯೋಕೆ ಮಿಸ್ಟ್ರಿ ಸ್ಪಿನ್ನರ್​​ ವರುಣ್​ ಚಕ್ರವರ್ತಿ ರೆಡಿಯಾಗಿದ್ದಾರೆ. ಆಗಿದ್ದ ವರುಣ್​ ಚಕ್ರವರ್ತಿಗೂ ಈಗಿರೋ ವರುಣ್​ ಚಕ್ರವರ್ತಿಗೂ ಸಿಕ್ಕಾಪಟ್ಟೆ ಡಿಫರೆನ್ಸ್​ ಇದೆ. ಇತ್ತೀಚಿನ ದಿನಗಳಲ್ಲಿ ಸ್ಪಿನ್​ ಚಮಾತ್ಕಾರದಿಂದ ಬ್ಯಾಟ್ಸ್​ಮನ್​ಗಳ ಪಾಲಿಗೆ ವರುಣ್​ ಕಂಟಕವಾಗಿ ಪರಿಣಮಿಸಿದ್ದಾರೆ. ಮಿಡಲ್ ಓವರ್​ಗಳಲ್ಲಿ ವಿಕೆಟ್​ ಬೇಟೆಯಾಡ್ತಾ ರನ್​ಗಳಿಕೆಗೆ ಕಡಿವಾಣ ಹಾಕೋ ಕಲೆಯನ್ನ ವರುಣ್​ ಕರಗತ ಮಾಡಿಕೊಂಡಿರೋದು ಭಾರತಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.
ಟಿ20 ಅನ್ನೋದು​ ಬ್ಯಾಟರ್ಸ್​​ ಗೇಮ್​ ಅನ್ನೋ ಮಾತಿದೆ. ಈ ಬ್ಯಾಟರ್ಸ್​ ಗೇಮ್​ನಲ್ಲಿ ಈ ಬಾರಿ ಟೀಮ್​ ಇಂಡಿಯಾದ ಬೌಲರ್ಸ್​ ದರ್ಬಾರ್​ ನಡೆಸೋಕೆ ಸಜ್ಜಾಗಿದ್ದಾರೆ. ಪಂಚ​​ ಬೌಲರ್ಸ್ ಎದುರಾಳಿಗಳಿಗೆ​ ಹೇಗೆ​ ಪಂಚ್​ ಕೊಡ್ತಾರೆ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್‌ನ್ಯೂಸ್: ನಮ್ಮ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us