/newsfirstlive-kannada/media/media_files/2026/02/07/abhishek-sharma-8-2026-02-07-17-29-10.jpg)
ಟಿ20 ವಿಶ್ವಕಪ್​ಗೂ ಮುನ್ನ ವಿಶ್ವದ ಘಟಾನುಘಟಿ ತಂಡಗಳಿಗೆ ಭಾರತದ ಯುವ ಆಟಗಾರ ತಲೆನೋವಾಗಿದ್ದಾನೆ. 25 ವರ್ಷದ ಅಭಿಷೇಕ್​ ಶರ್ಮಾ ದಿಗ್ಗಜ ಬೌಲರ್​​ಗಳಲ್ಲೂ ಭಯ ಹುಟ್ಟಿಸಿದ್ದಾನೆ. ಅನ್​ಸ್ಟಾಪಬಲ್​ ಅಭಿಷೇಕ್ ಶರ್ಮಾನ ಹೇಗೆ ಸ್ಟಾಪ್ ಮಾಡೋದು ಅನ್ನೋದೆ ಎದುರಾಳಿ ಪಡೆಗಳಲ್ಲಿ ಸದ್ಯ ನಡೀತಾ ಇರೋ ಗಂಭೀರ ಚರ್ಚೆಯಾಗಿದೆ. ಅಭಿಷೇಕ್​ ಭಯಾನಕ ಆಟ ಹೇಗಿದೆ?
ಇದನ್ನೂ ಓದಿ: ಶಾಕಿಂಗ್ ನ್ಯೂಸ್​.. ಸೂರ್ಯಗೆ ಇದು ಕೊನೆಯ ವಿಶ್ವಕಪ್​ ಟೂರ್ನಿ..?
ಅಭಿಷೇಕ್ ಶರ್ಮಾ.. ಪಕ್ಕಾ ಮಾಸ್ ಎಂಟರ್​​​ಟೈನರ್​.! ದಡಂದಶ ಗುಣಂ ಅನ್ನೋದೇ ಈತನ ಮೂಲ ಮಂತ್ರ. ಕ್ರೀಸ್​ನಲ್ಲಿ ಇರುವಷ್ಟು ಹೊತ್ತು ಸಿಕ್ಸರ್​ಗಳ ಅಭಿಷೇಕವನ್ನೇ ಮಾಡೋ ಡೆಡ್ಲಿ ಬ್ಯಾಟ್ಸ್​ಮನ್​. ಎಂತಾ ಘಟಾನುಘಟಿ ಬೌಲರ್​​ ಆಗಿದ್ರೂ ಚಿಂದಿ ಉಡಾಯಿಸೋ ತಾಕತ್ತು ಈ ಯಂಗ್​ ಮಿಸೈಲ್​ಗಿದೆ. ಸದ್ಯ ಟಿ20 ವಿಶ್ವಕಪ್​ಗೂ ಮುನ್ನ ಈತ ಸೆನ್ಸೇಷನ್​​ ಕ್ರಿಯೇಟ್​ ಮಾಡಿದ್ದಾನೆ. ವಿಸ್ಪೋಟಕ ಬ್ಯಾಟಿಂಗ್​ಗೆ ಬೌಲರ್ಸ್​ ಬೆಚ್ಚಿ ಬಿದ್ದಿದ್ದಾರೆ.
/filters:format(webp)/newsfirstlive-kannada/media/media_files/2026/01/29/abhishekh-sharma-3-2026-01-29-12-55-51.jpg)
ಪವರ್​​ ಪ್ಲೇನಲ್ಲಿ ಪವರ್​ ಫುಲ್​ ಬ್ಯಾಟಿಂಗ್
ಕೂಲ್​ & ಕಾಮ್​​, ಚಾಕಲೇಟ್​ ಬಾಯ್ ಆಗಿ ಕಾಣೋ ಯಂಗ್​ ಮಿಸೈಲ್​ ಅಭಿಷೇಕ್​ ಶರ್ಮಾ ಬ್ಯಾಟಿಂಗ್​ ಪ್ಯಾಡ್​ ಕಟ್ಟಿ ಕ್ರಿಸ್​ಗಿಳಿದ ಮೇಲೆ ರೌದ್ರಾವತಾರ ತಾಳ್ತಾರೆ. ಪವರ್​ ಪ್ಲೇನಲ್ಲಂತೂ ಪವರ್​ಫುಲ್​ ಬ್ಯಾಟಿಂಗ್​ ನಡೆಸೋ ಪಂಜಾಬ್​ ಪುತ್ತರ್​, ಬೌಲರ್​​ಗಳ ಚಿಂದಿ ಉಡಾಯಿಸ್ತಾರೆ. ಟಿ20 ಕ್ರಿಕೆಟ್​ನ ಟಾಪ್​ ಬೌಲರ್ಸ್​ಗೂ ಕೂಡ ಈತನ ಎದುರು ಮೊದಲ 6 ಓವರ್​ಗಳಲ್ಲಿ ಬೌಲಿಂಗ್​ ಮಾಡೋಕೆ ಭಯ.! ಹಂಗಿದೆ ಹಿಸ್ಟರಿ. ಪವರ್​​ ಪ್ಲೇ ಬರೋಬ್ಬರಿ 190ರ ಸ್ಟ್ರೈಕ್​​ರೇಟ್​​ನಲ್ಲಿ ಅಭಿಷೇಕ್​ ಅಬ್ಬರ ನಡೆದಿದೆ.
ಕ್ರಿಸ್​​ ಸೆಟಲ್ ಆಗಬೇಕು, ಎದುರಾಳಿಯ ಗೇಮ್​ಪ್ಲ್ಯಾನ್​ ಟ್ಯಾಕಲ್​ ಮಾಡಬೇಕು ಅನ್ನೋ ಕ್ರಿಕೆಟ್​ನ ಟೆಕ್ಸ್ಟ್​ಬುಕ್​ ಪಾಠವನ್ನೇ ಅಭಿಷೇಕ್ ಅಳಿಸಿ ಹಾಕಿದ್ದಾರೆ. ಎದುರಾಳಿ ಬೌಲರ್​ ಸೆಟಲ್​ ಆಗೋಕೆ ಮುನ್ನವೇ ಅಭಿಷೇಕ್​ ಕಂಗಾಲ್​ ಮಾಡಿಬಿಡ್ತಾರೆ. ಮೊದಲ ಎಸೆತದಿಂದಲೇ ಬಿಗ್​ ಶಾಟ್​ಗಳನ್ನ ಪ್ಲೇ ಮಾಡೋ ಅಭಿಷೇಕ್​, ಆರಂಭದಲ್ಲೇ ಎದುರಾಳಿ ಲೆಕ್ಕಾಚಾರವನ್ನೇ ಉಲ್ಟಾ ಮಾಡಿ ಬಿಡ್ತಾರೆ. ಫಸ್ಟ್​ ಬಾಲ್​ನಿಂದಲೇ ಆರ್ಭಟಿಸೋ ಅಭಿ, ಆರಂಭಿಕ 10 ಎಸೆತಗಳಲ್ಲಿ 183ರ ಸ್ಟ್ರೈಕ್​​ರೇಟ್​ನಲ್ಲಿ ರನ್ ಗಳಿಸಿದ್ದಾರೆ.
ಮೊದಲ 6 ಓವರ್​ಗಳಲ್ಲಿ ಫೀಲ್ಡ್​ ರಿಸ್ಟ್ರಿಕ್ಷನ್​ ಇರುತ್ತೆ. ಆ ಬಳಿಕ ಅಭಿಷೇಕ್​ ಅಬ್ಬರ ಕಡಿಮೆಯಾಗುತ್ತೆ ಅಂತಾ ಎದುರಾಳಿ ತಂಡವೇನಾದ್ರೂ, ನಗ್ಲೆಟ್​ ಮಾಡಿದ್ರೆ ಕಂಟಕ ತಪ್ಪಿದ್ದಲ್ಲ. ಮಿಡಲ್​ ಓವರ್​ಗಳಲ್ಲಿ ಅಭಿಷೇಕ್​ ಶರ್ಮಾ ಮತ್ತಷ್ಟು ಡೇಂಜರಸ್​ ಬ್ಯಾಟರ್​.! ಮೊದಲ 6 ಓವರ್​ಗಳಲ್ಲಿ 190ರ ಸ್ಟ್ರೈಕ್​ರೇಟ್​ ಹೊಂದಿರೋ ಅಭಿಷೇಕ್​ ಶರ್ಮಾ, 7ರಿಂದ 16ರವರೆಗಿನ ಓವರ್​​ಗಳಲ್ಲಿ ಬರೋಬ್ಬರಿ 203ರ ಸ್ಟ್ರೈಕ್​​ರೇಟ್​​ನಲ್ಲಿ ರನ್​​ ಕೊಳ್ಳೆ ಹೊಡೆದಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಐದು ಪವರ್ ಹಿಟ್ಟರ್ಸ್​.. ಇವರಿಂದ ತಂಡಕ್ಕೆ ಆಗುವ ಲಾಭ ಏನು?
ಸ್ಪಿನ್​ ಅಂದ್ರೆ ಅಭಿಷೇಕ್​ ಶರ್ಮಾಗೆ ಫೇವರಿಟ್​. ಸ್ಪಿನ್ನರ್​ಗಳನ್ನ ಸಿಕ್ಕಾಪಟ್ಟೆ ಈಸಿಯಾಗಿ ರೀಡ್​ ಮಾಡೋ ಯುವ ಆಟಗಾರ ಸಲೀಸಾಗಿ ರನ್​ ಕೊಳ್ಳೆ ಹೊಡೆದಿದ್ದಾರೆ. ವಿಶ್ವದ ಟಾಪ್​ ಕ್ಲಾಸ್​ ಸ್ಪಿನ್ನರ್​ಗಳನ್ನೂ ಚಿಂದಿ ಉಡಾಯಿಸಿದ್ದಾರೆ. ಅಭಿಷೇಕ್​ ರೋಷಾವೇಶಕ್ಕೆ ಸ್ಪಿನ್​ ಮೆಜಿಶಿಯನ್​ಗಳು ಥಂಡಾ ಹೊಡೆದಿದ್ದಾರೆ. ಸ್ಪಿನ್ನರ್​ಗಳ ಎದುರು ಘರ್ಜಿಸಿರೋ ಅಭಿಷೇಕ್​ ಶರ್ಮಾ ಬರೋಬ್ಬರಿ 211ರ ಸ್ಟ್ರೈಕ್​ರೇಟ್​​ನಲ್ಲಿ ರನ್​ಗಳಿಸಿದ್ದಾರೆ.
ಸ್ಪಿನ್ನರ್ಸ್​​ ಮಾತ್ರವಲ್ಲ.. ಪೆಸರ್ಸ್​ ಕೂಡ ಲೆಫ್ಟಿ ಬ್ಯಾಟರ್​​ ಆಟದ ಮುಂದೆ ಕಂಗಾಲಾಗಿ ಹೋಗಿದ್ದಾರೆ. ವೇಗಿಗಳ ಮೇಲೆ ಕೂಡ ಸವಾರಿ ಮಾಡಿರುವ ಡಿಸ್ಟ್ರಕ್ಟಿವ್​ ಓಪನರ್​​ 188ರ ಸ್ಟ್ರೈಕ್​ರೇಟ್​ನಲ್ಲಿ ರನ್​ ಹೊಳೆ ಹರಿಸಿದ್ದಾರೆ. ಬೌಂಡರಿ, ಸಿಕ್ಸರ್​ಗಳಲ್ಲಿ ಪೇಸರ್ಸ್​​ ಬೌಲಿಂಗ್​ನಲ್ಲಿ ರನ್​ ಡೀಲ್​ ಮಾಡಿದ್ದಾರೆ.
ಪವರ್​​ ಪ್ಲೇ, ಮಿಡಲ್​ ಓವರ್​​, ಪೇಸರ್ಸ್​, ಸ್ಪಿನ್ನರ್ಸ್​.. ಎಲ್ಲದಕ್ಕೂ ಅಭಿಷೇಕ್ ಉತ್ತರ ವಿಧ್ವಂಸಕ ಬ್ಯಾಟಿಂಗ್ ಒಂದೇ.! ಯಾವುದೇ ತಂತ್ರಕ್ಕೂ ಅನ್​ಸ್ಟಾಪಬಲ್​ ಅಭಿಷೇಕ್​ನ ಸ್ಟಾಪ್​ ಮಾಡೋಕೆ ಆಗಿಲ್ಲ. ಅದಕ್ಕೆ ಅಲ್ವಾ ಅಭಿಷೇಕ್​ ಟಿ20 ಕ್ರಿಕೆಟ್​ ನಯಾ ಸುಲ್ತಾನನಾಗಿರೋದು. ನಂಬರ್​ 1 ಬ್ಯಾಟರ್​ ಆಗಿ ಮರೆದಾಡ್ತಿರೋದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us