/newsfirstlive-kannada/media/media_files/2025/08/24/cheteshwar-pujara-2025-08-24-15-27-54.jpg)
ಚೇತೇಶ್ವರ್ ಪೂಜಾರ
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ (Cheteshwar Pujara) ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ.
ಕ್ರಿಕೆಟ್ ಬದುಕಿಗೆ ನಿವೃತ್ತಿ ಪಡೆದುಕೊಳ್ತಿರೋದನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾದ ಜೆರ್ಸಿ ತೊಟ್ಟು, ರಾಷ್ಟ್ರಗೀತೆ ಹಾಡಿ ಮೈದಾನಕ್ಕೆ ಕಾಲಿಡುವ ಪ್ರತಿಯೊಂದು ಕ್ಷಣ ಹಾಗೂ ಅತ್ಯುತ್ತಮ ಪ್ರದರ್ಶನಕ್ಕಾಗಿ ನನ್ನ ನಿರಂತರ ಪ್ರಯತ್ನಗಳನ್ನ ಪದಗಳಲ್ಲಿ ವಿವರಿಸಲು ಅಸಾಧ್ಯ. ಪ್ರತಿಯೊಂದು ಒಳ್ಳೆಯ ವಿಷಯವೂ ಕೊನೆಗೊಳ್ಳಲೇಬೇಕು. ನಾನು ಎಲ್ಲಾ ಮಾದರಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ.
ಇದನ್ನೂ ಓದಿ: ಬ್ರ್ಯಾಂಡ್‌ಗಳ ಪಾಲಿನ ಹೊಸ ಕೊಹ್ಲಿ ಆಗ್ತಾರಾ ಶುಭ್ಮನ್..?
ರಾಜ್‌ಕೋಟ್‌ನ ಸಣ್ಣ ಪಟ್ಟಣದ ಬಾಲಕನಾಗಿದ್ದಾಗ ಹೆತ್ತವರೊಂದಿಗೆ, ಸ್ಟಾರ್‌ಗಳತ್ತ ಗುರಿಯಿಟ್ಟುಕೊಂಡಿದ್ದೆ. ಅಂದೇ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಬೇಕು ಎಂದು ಕನಸು ಕಂಡಿದ್ದೆ. ಕ್ರಿಕೆಟ್ ನನಗೆ ಇಷ್ಟೆಲ್ಲ ನೀಡುತ್ತದೆ ಎಂದು ತಿಳಿದಿರಲಿಲ್ಲ. ಅಮೂಲ್ಯ ಅವಕಾಶಗಳು, ಅನುಭವ, ಪ್ರೀತಿ ಮುಖ್ಯವಾಗಿ ನನ್ನ ರಾಜ್ಯ ಮತ್ತು ಈ ಮಹಾನ್ ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶವನ್ನು ನನಗೆ ನೀಡಿತು ಎಂದು ಪೂಜಾರ ಬರೆದುಕೊಂಡಿದ್ದಾರೆ.
ಚೇತೇಶ್ವರ ಪೂಜಾರ ನಿವೃತ್ತಿ
ಕ್ರಿಕೆಟ್ ಜೀವನದಲ್ಲಿ ದೊರೆತ ಅವಕಾಶ ಮತ್ತು ಬೆಂಬಲಕ್ಕಾಗಿ ಬಿಸಿಸಿಐ ಮತ್ತು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಷ್ಟು ವರ್ಷಗಳ ಕಾಲ ಪ್ರತಿನಿಧಿಸಿದ ಎಲ್ಲಾ ತಂಡಗಳು, ಫ್ರಾಂಚೈಸಿಗಳು ಮತ್ತು ಕೌಂಟಿ ತಂಡಗಳಿಗೂ ನಾನು ಕೃತಜ್ಞನಾಗಿದ್ದೇನೆ.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಶರ್ ಇಲ್ವಾ.. ತಂಡಕ್ಕೆ ಬೇಕಿದೆ ಆ ಒಬ್ಬ ಆಟಗಾರ
ಕ್ರೀಡೆ ನನ್ನನ್ನು ಪ್ರಪಂಚದಾದ್ಯಂತ ಕರೆದೊಯ್ದಿದೆ. ಈ ಸಮಯದಲ್ಲಿ ಅಭಿಮಾನಿಗಳ ಉತ್ಸಾಹಭರಿತ ಬೆಂಬಲ ಮತ್ತು ಶಕ್ತಿ ಯಾವಾಗಲೂ ನನ್ನೊಂದಿಗಿದೆ. ಎಲ್ಲಿ ಆಡಿದೇನೋ ಅಲ್ಲೆಲ್ಲ ಸಾಕಷ್ಟು ಬೆಂಬಲ ಸಿಕ್ಕಿದೆ. ಅದಕ್ಕಾಗಿ ಕೃತಜ್ಞನಾಗಿರುತ್ತೇನೆ. ನನ್ನ ಕುಟುಂಬ, ನನ್ನ ಪೋಷಕರು, ಪತ್ನಿ ಪೂಜಾ ಮತ್ತು ಮಗಳು ಅದಿತಿ, ಅತ್ತೆ ಮತ್ತು ನನ್ನ ಕುಟುಂಬದ ಉಳಿದವರ ತ್ಯಾಗ ಮತ್ತು ಬೆಂಬಲ ನನ್ನ ಪ್ರಯಾಣವನ್ನು ಸಾರ್ಥಕಗೊಳಿಸಿದೆ. ಮುಂದಿನ ಹೆಜ್ಜೆಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.
ಅಂತರರಾಷ್ಟ್ರೀಯ ವೃತ್ತಿಜೀವನ
37 ವರ್ಷದ ಪೂಜಾರ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 103 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪೂಜಾರ 103 ಟೆಸ್ಟ್‌ಗಳ 176 ಇನ್ನಿಂಗ್ಸ್‌ಗಳಲ್ಲಿ 7195 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ಪೂಜಾರ ಅವರ ಟೆಸ್ಟ್ ಪ್ರಯಾಣವು ಅತ್ಯುತ್ತಮವಾಗಿತ್ತು. ಆದರೆ ದೀರ್ಘಕಾಲದವರೆಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಕಿಂಗ್ ಕೊಹ್ಲಿ ಕಠಿಣ ಪ್ರಾಕ್ಟೀಸ್.. ಮುಂದಿನ ಅಗ್ನಿಪರೀಕ್ಷೆಗೆ ವಿರಾಟ್ ರಣತಂತ್ರ ಹೇಗಿದೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ