/newsfirstlive-kannada/media/media_files/2025/12/24/drinks-cricket-2025-12-24-13-04-12.jpg)
ಌಶಸ್ ಟೆಸ್ಟ್ ಸರಣಿ ಸೋಲಿನ ಬಳಿಕ ಇಂಗ್ಲೆಂಡ್ ತಂಡ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆಸ್ಟ್ರೇಲಿಯಾದಲ್ಲಿ ಪಂದ್ಯಕ್ಕಿಂತ ಹೆಚ್ಚು ಮೋಜು ಮಸ್ತಿಯಲ್ಲೇ ಬ್ಯುಸಿಯಾಗಿದ್ದ ಇಂಗ್ಲೆಂಡ್, ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದೆ. ಅಡಿಲೇಡ್ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಬೆನ್ ಸ್ಟೋಕ್ಸ್ ಪಡೆಯ ವಿರುದ್ಧ, ಶಿಸ್ತು ಕ್ರಮ ಕೈಗೊಳ್ಳಲು ಮಂಡಳಿ ಮುಂದಾಗಿದೆ.
ಪರ್ತ್​, ಬ್ರಿಸ್ಬೇನ್ ಮತ್ತು ಅಡಿಲೇಡ್​ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ತೀವ್ರ ಮುಖಭಂಗ ಅನುಭವಿಸಿತ್ತು. ಌಶಸ್ ಸರಣಿ ಗೆಲ್ಲಲು ಕಾಂಗಳೂರಗಳ ನಾಡಿಗೆ ಕಾಲಿಟ್ಟಿದ್ದ ಇಂಗ್ಲೆಂಡ್, ಆನ್​ಫೀಲ್ಡ್​ಗಿಂತ ಆಫ್ ದ​ ಫೀಲ್ಡ್​ನಲ್ಲೇ ಹೆಚ್ಚು ಸುದ್ದಿ ಮಾಡ್ತಿದೆ. ಇದೀಗ ಮೆಲ್ಬರ್ನ್ ಟೆಸ್ಟ್ ಪಂದ್ಯಕ್ಕೂ ಮುನ್ನ ಬೆನ್ ಸ್ಟೋಕ್ಸ್ ಪಡೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತದ ಮಹಿಳೆಯ ಹ*ತ್ಯೆ : ಅಬ್ದುಲ್ ಗಫೂರಿ ಎಂಬಾತ ಹ*ತ್ಯೆ ಮಾಡಿ ಪರಾರಿ
/filters:format(webp)/newsfirstlive-kannada/media/media_files/2025/12/24/england-cricket-team-1-2025-12-24-13-08-05.jpg)
ಌಶಸ್ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳು ಕೇವಲ 11 ದಿನಗಳಲ್ಲೇ ಮುಕ್ತಾಯಗೊಂಡಿದೆ. ಪರ್ತ್ ಟೆಸ್ಟ್ ಕೇವಲ ಎರಡೇ ದಿನಗಳಲ್ಲಿ ಖತಂ ಆಯ್ತು. ಬ್ರಿಸ್ಬೇನ್ ಟೆಸ್ಟ್ 4 ದಿನಗಳಲ್ಲಿ ಮತ್ತು ಅಡಿಲೇಡ್ ಟೆಸ್ಟ್ ಕೊನೆಯ ದಿನದವರೆಗೂ ನಡೆದಿತ್ತು. 11 ದಿನಗಳಲ್ಲೇ ಸರಣಿ ಸೋತಿರುವ ಇಂಗ್ಲಿಷರು ಭಾರೀ ಅವಮಾನಕ್ಕೆ ಗುರಿಯಾಗಿದ್ದಾರೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಸೋಲಿನ ಬಳಿಕ, ಇಂಗ್ಲೆಂಡ್ ತಂಡ ಬ್ರೇಕ್ ಮೊರೆ ಹೋಯ್ತು. ದಕ್ಷಿಣ ಕ್ವೀನ್ಸ್​ಲ್ಯಾಂಡ್​​ನ ನೊಸ ರೆಸಾರ್ಟ್​​​​ಗೆ ತೆರಳಿದ್ದ ಇಂಗ್ಲೆಂಡ್, ಅಲ್ಲಿ ಮೋಜು ಮಸ್ತಿ ಮಾಡಿ ಕಾಲ ಕಳೆಯಿತು. ಇಂಗ್ಲೆಂಡ್ ಆಟಗಾರರು ಬ್ರೇಕ್ ಅನ್ನ ನಾರ್ಮಲ್ ಆಗಿ ಎಂಜಾಯ್ ಮಾಡಿದ್ರೆ ಓಕೆ. ಆದ್ರೆ ಅತಿಯಾದ ಮದ್ಯಪಾನ ಸೇವನೆಯಿಂದ ಕಾಲೆ ಕಳೆದಿದ್ದಾರೆ. ಅಡಿಲೇಡ್​​ನ ಮೂರನೇ ಟೆಸ್ಟ್​ ಪಂದ್ಯದ ಸೋಲಿಗೆ, ಆಟಗಾರರ ಅತಿಯಾದ ಮದ್ಯಪಾನ ಸೇವನೆ ಕಾರಣ ಅಂತ ತಿಳಿದುಬಂದಿದೆ.
ಅಡಿಲೇಡ್ ಟೆಸ್ಟ್​ ಪಂದ್ಯವನ್ನ ಸರಿಯಾಗಿ ಆಡಿದ್ರೆ ಇಂಗ್ಲೆಂಡ್ ತಂಡ ಸುಲಭವಾಗಿ ಗೆಲ್ಲಬಹುದಿತ್ತು. ತಂಡದ ಆಟಗಾರರು ಇನ್ನೂ ಹ್ಯಾಂಗ್ ಓವರ್​ನಲ್ಲೇ ಇದ್ದ ಕಾರಣ, ಪಂದ್ಯವನ್ನ ಕೈಚೆಲ್ಲಬೇಕಾಯ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ 82 ರನ್​ಗಳಿಂದ ಸೋಲು ಅನುಭವಿಸಿತ್ತು. ತಂಡದ ಸೋಲಿಗೆ ಕಾರಣವೇನು ಅನ್ನೋದನ್ನ ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹುಡುಕಲು ಶುರುಮಾಡಿದೆ.
6 ತಿಂಗಳಿಂದ ಌಷಸ್​ ಟೆಸ್ಟ್ ಸರಣಿಗೆ ತಯಾರಿ
ಌಶಸ್ ಟೆಸ್ಟ್ ಸರಣಿ ಪ್ರತಿಷ್ಟಿತ ಸರಣಿ. ಈ ಸರಣಿಯನ್ನ ಗೆಲ್ಲಲೇಬೇಕು ಅನ್ನೋದು, ಇಂಗ್ಲೆಂಡ್ ತಂಡದ ಶಪಥವಾಗಿತ್ತು. ಅದಕ್ಕಾಗೇ ಇಂಗ್ಲೆಂಡ್ ಆಟಗಾರರು, ಕಳೆದ ಆರು ತಿಂಗಳಿಂದ ಸಾಕಷ್ಟು ಸಮರಾಭ್ಯ ನಡೆಸಿದ್ರು. 6 ತಿಂಗಳ ಪ್ರಯತ್ನ ಕೇವಲ 11 ದಿನಗಳಲ್ಲೇ ಮುಗಿದೇ ಹೋಗಿರೋದು, ಇಸಿಬಿಗೆ ಬೇಸರ ಮೂಡಿಸಿದೆ. ಇಂಗ್ಲೆಂಡ್ ಅಭಿಮಾನಿಗಳು ಸಹ ತಂಡದ ಪ್ರದರ್ಶನದಿಂದ ರೊಚ್ಚಿಗೆದ್ದಿದ್ದಾರೆ.
/filters:format(webp)/newsfirstlive-kannada/media/media_files/2025/12/24/england-cricket-team-2-2025-12-24-13-08-20.jpg)
ಮೊದಲ ಮೂರು ಟೆಸ್ಟ್ ಪಂದ್ಯಗಳನ್ನ ಸೋತು, ಸರಣಿಯಲ್ಲಿ 3-0 ಅಂತರದಿಂದ ಹಿನ್ನಡೆಯಲ್ಲಿದೆ. ಉಳಿದಿರೋದು ಮೆಲ್ಬರ್ನ್ ಮತ್ತು ಸಿಡ್ನಿ ಟೆಸ್ಟ್ ಪಂದ್ಯಗಳು ಮಾತ್ರ. ಈ ಎರಡೂ ಟೆಸ್ಟ್ ಪಂದ್ಯಗಳನ್ನ ಇಂಗ್ಲೆಂಡ್ ಸೋತ್ರೆ, ಸರಣಿಯನ್ನ 5-0 ಅಂತರದಿಂದ ಸೋತು ವೈಟ್​ವಾಶ್ ಮುಖಭಂಗ ಅನುಭವಿಸಬೇಕಾಗುತ್ತದೆ. ಆ ಭೀತಿ ಸದ್ಯ ಇಂಗ್ಲೆಂಡ್ ಆಟಗಾರರನ್ನ ಕಾಡ್ತಿದೆ.
ಅತಿಯಾದ ಆತ್ಮವಿಶ್ವಾಸ, ಸಮರಾಭ್ಯಾಸ ಇಲ್ಲದ ಸೈನ್ಯಕ್ಕೆ ಸೋಲು ಕಟ್ಟಿಟ್ಟಬುತ್ತಿ ಅನ್ನೋದಕ್ಕೆ, ಬೆನ್ ಸ್ಟೋಕ್ಸ್ ಪಡೆ ಬೆಸ್ಟ್ ಎಕ್ಸಾಂಪಲ್. ಉಳಿದೆರಡು ಪಂದ್ಯಗಳನ್ನಾದ್ರೂ ಇಂಗ್ಲೆಂಡ್ ತಂಡ ಗೆದ್ದು ಮಾನ ಉಳಿಸಿಕೊಳ್ಳುತ್ತಾ ಅನ್ನೋದನ್ನ ಕಾದುನೋಡೋಣ.
ಇದನ್ನೂ ಓದಿ: ನಡು ರಸ್ತೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ, ಹಲ್ಲೆ.. ಬೆಂಗಳೂರಲ್ಲಿ ನಾಚಿಕೆಗೇಡಿನ ಕೃತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us