/newsfirstlive-kannada/media/media_files/2025/08/26/rcb_team-1-2025-08-26-10-46-49.jpg)
ಆರ್​ಸಿಬಿ (RCB) ಐಪಿಎಲ್​ 19ನೇ ಆವೃತ್ತಿಗೆ ಹಾಲಿ ಚಾಂಪಿಯನ್ ಆಗಿ ಎಂಟ್ರಿ ನೀಡಲಿದೆ. ರಜತ್ ಪಾಟೀದಾರ್ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ಕಿಂಗ್ಸ್ ಸೋಲಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದೆ. ಇದೀಗ ಐಪಿಎಲ್-2026 ಸಿದ್ಧತೆ ನಡೆಯುತ್ತಿದ್ದು, ಫ್ರಾಂಚೈಸಿ ಕಣ್ಣು ಮಿನಿ ಹರಾಜಿನತ್ತ ನೆಟ್ಟಿದೆ.
4 ಆಟಗಾರರ ಬಿಡುಗಡೆ
ಲಿಯಾಮ್ ಲಿವಿಂಗ್‌ಸ್ಟೋನ್: ಇಂಗ್ಲೆಂಡ್ ಆಲ್‌ರೌಂಡರ್ ಆಗಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಆರ್​ಸಿಬಿ 8.75 ಕೋಟಿಗೆ ಖರೀದಿಸಿತ್ತು. ಆದರೆ ಅವರ ಪ್ರದರ್ಶನ ನಿರಾಶದಾಯಕವಾಗಿದೆ. 8 ಇನ್ನಿಂಗ್ಸ್‌ಗಳಲ್ಲಿ 112 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಖದರ್ ತೋರಿಸಲಿಲ್ಲ. ಕೇವಲ 2 ವಿಕೆಟ್ ಪಡೆದು ಸುಮ್ಮನಾದರು. ಹೀಗಾಗಿ ಮಿನಿ ಹರಾಜಿಗೂ ಮುನ್ನ ಲಿವಿಂಗ್​ಸ್ಟೋನ್​​ರನ್ನು ಬಿಡುಗಡೆ ಮಾಡಬಹುದು. 49 ಐಪಿಎಲ್ ಪಂದ್ಯಗಳಲ್ಲಿ 7 ಅರ್ಧಶತಕಗಳು ಸೇರಿ 1051 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 158.76. 13 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮಾಯಾಂಕ್ ಅಗರ್ವಾಲ್:ಗಾಯಗೊಂಡ ದೇವದತ್ ಪಡಿಕ್ಕಲ್ ಬದಲಿಗೆ ಮಯಾಂಕ್ ಅಗರ್ವಾಲ್​​ ಜೊತೆ ಆರ್​ಸಿಬಿ ಒಪ್ಪಂದ ಮಾಡಿಕೊಂಡಿತ್ತು. 2025 ರಲ್ಲಿ ಆರ್‌ಸಿಬಿ ಪರ ನಾಲ್ಕು ಪಂದ್ಯಗಳನ್ನು ಆಡಿರುವ ಮಯಾಂಕ್, 148.43 ಸ್ಟ್ರೈಕ್ ರೇಟ್‌ನಲ್ಲಿ 95 ರನ್ ಗಳಿಸಿದ್ದಾರೆ. ಮುಂದಿನ ಋತುವಿಗೆ ಪಡಿಕ್ಕಲ್ ಲಭ್ಯವಿರುತ್ತಾರೆ. ಆದ್ದರಿಂದ ಮಯಾಂಕ್ ಅವರನ್ನು ಬಿಡುಗಡೆಮಾಡಬಹುದು. ಐಪಿಎಲ್​ನಲ್ಲಿ ಐದು ತಂಡಗಳ ಪರ ಆಡಿರುವ ಮಯಾಂಕ್​​ಗೆ ಅಪಾರ ಅನುಭವ ಇದೆ. 131 ಪಂದ್ಯಗಳನ್ನು 2,756 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 13 ಅರ್ಧಶತಕ ಅವರ ಹೆಸರಲ್ಲಿ ಇದೆ.
ಲುಂಗಿ ಎನ್‌ಗಿಡಿ: ದಕ್ಷಿಣ ಆಫ್ರಿಕಾದ ಈ ವೇಗಿ ಉತ್ತಮ ಬೌಲರ್. ಆದರೆ ಅವರು ಐಪಿಎಲ್‌ನಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ. ಮೊದಲು ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ₹50 ಲಕ್ಷಕ್ಕೆ ಖರೀದಿಸಿತ್ತು. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಅವರನ್ನು 1 ಕೋಟಿಗೆ ಖರೀದಿಸಿತ್ತು. ಇದು ಅವರ ಮೂಲ ಬೆಲೆಯಾಗಿತ್ತು. ಆದಾಗ್ಯೂ ಆರ್​ಸಿಬಿ ಪರ 2 ಪಂದ್ಯವನ್ನಾಡಿ 4 ವಿಕೆಟ್‌ಗಳನ್ನು ಕಬಳಿಸಿದರು. 2018 ರಿಂದ ಐಪಿಎಲ್​​ ಆಡುತ್ತಿರುವ ಲುಂಗಿ ಎನ್‌ಗಿಡಿ ಕೇವಲ 16 ಪಂದ್ಯಗಳನ್ನು ಆಡಿದ್ದಾರೆ. 29 ವಿಕೆಟ್‌ಗಳನ್ನು ಹೊಂದಿದ್ದಾರೆ. ಇವರನ್ನೂ ಕೂಡ ಆರ್​ಸಿಬಿ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ: ಉಗ್ರನಂತೆ ಪೋಸ್, ಆಮೇಲೆ ಬಿಲ ಸೇರಿದ​.. ಭಾರತ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?
ರಸಿಕ್ ಸಲಾಂ: ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ರಸಿಕ್ ಸಲಾಂ ಐಪಿಎಲ್ 18ರ ಸೀಸನ್​​ಗಾಗಿ ಆರ್‌ಸಿಬಿ ₹6 ಕೋಟಿಗೆ ಖರೀದಿಸಿತ್ತು. ಇದು ಅವರ ನಾಲ್ಕನೇ ಐಪಿಎಲ್ ತಂಡ. ಹಿಂದೆ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ಆರ್‌ಸಿಬಿ ಅವರನ್ನು ಕೇವಲ ಎರಡು ಪಂದ್ಯಗಳಲ್ಲಿ ಆಡಿಸಿದೆ. ಹೇಜಲ್‌ವುಡ್, ದಯಾಳ್ ಮತ್ತು ಭುವಿ ಅವರಂತಹ ವೇಗದ ಬೌಲರ್‌ಗಳ ಜೊತೆಗೆ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯೋದು ಕಷ್ಟವಾಗಿತ್ತು.
ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯದಲ್ಲಿ L ಸಿಂಬಲ್​ನಲ್ಲಿ ಸಂಭ್ರಮ.. ಏನಿದು ಹೊಸ ಸ್ಟೈಲ್..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ