/newsfirstlive-kannada/media/media_files/2025/10/05/rohit-sharma-2025-10-05-12-17-55.jpg)
ಟೀಮ್ ಇಂಡಿಯಾದ ಮಿಷನ್​ 2027 ವಿಶ್ವಕಪ್​ ಅಧಿಕೃತವಾಗಿ ಆರಂಭವಾಗಿದೆ. ಬಹು ದಿನಗಳಿಂದ ಅಂತೆ ಕಂತೆಗಳಿಗೆ ಸೀಮಿತವಾಗಿದ್ದ ಸುದ್ದಿಗೆ ಸ್ಪಷ್ಟತೆ ಸಿಕ್ಕಿದೆ. ಅಹ್ಮದಾಬಾದ್​ ಟೆಸ್ಟ್​ಗೆ ಗೆದ್ದ ಖುಷಿಯಲ್ಲಿದ್ದ ಶುಭ್​ಮನ್​ ಗಿಲ್​​ಗೆ ಮತ್ತೊಂದು ಗಿಫ್ಟ್ ನೀಡಿದೆ. ಏಕದಿನ ನಾಯಕನಾಗಿ ಪಂಜಾಬ್​ ಪುತ್ತರ್​ ಪಟ್ಟಾಭಿಷೇಕವಾಗಿದೆ.
ಟೀಮ್ ಇಂಡಿಯಾದಲ್ಲಿ ಹೊಸ ಪರ್ವ ಶುರು
ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಆಸ್ಟ್ರೇಲಿಯಾ ಏಕದಿನ ಸರಣಿಯ ಪ್ರವಾಸದೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ. ನೂತನ ನಾಯಕನ ಸಾರಥ್ಯದಲ್ಲಿ ಕಾಂಗೂರು ಬೇಟೆಗೆ ಟೀಮ್ ಇಂಡಿಯಾ ತೆರಳಲಿದೆ. ಮಿಷನ್ 2027ರ ವಿಶ್ವಕಪ್ ಜಪ ಮಾಡ್ತಿರುವ ಟೀಮ್ ಇಂಡಿಯಾ, ಅಧಿಕೃತವಾಗಿ ಸಿದ್ಧತೆ ಆರಂಭಿಸಿದೆ.
ಟೀಮ್​ ಇಂಡಿಯಾದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಪರ್ವಕ್ಕೆ ಸಂಪೂರ್ಣವಾಗಿ ಅಂತ್ಯವಾಡಿದೆ. ಏಕದಿನ ನಾಯಕತ್ವದಿಂದಲೂ ರೋಹಿತ್​ ಶರ್ಮಾಗೆ ಕೊಕ್​ ಕೊಡಲಾಗಿದೆ. ಪಂಜಾಬ್ ಪುತ್ತರ್ ಶುಭ್​ಮನ್ ಗಿಲ್​ಗೆ ಏಕದಿನ ತಂಡದ ನಾಯಕನಾಗಿ ಪಟ್ಟಾಭಿಷೇಕ ಮಾಡಲಾಗಿದೆ.
ಟೆಸ್ಟ್​, ಟಿ20 ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯನ್ನಾಡ್ತಾರಾ ಎಂಬ ಪ್ರಶ್ನೆ ಸಹಜವಾಗೇ ಇತ್ತು. ರೋಹಿತ್​ ಆಡೋದು ಕನ್​ಫರ್ಮ್​ ಆಗಿದೆ. ನಾಯಕನಾಗಿ ಅಲ್ಲ. ರೋಹಿತ್​ ಕೇವಲ ಆಟಗಾರನಾಗಿ ಮುಂದುವರಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಈ ನಿರ್ಣಯಕ್ಕೂ ಮುನ್ನ ರೋಹಿತ್ ಶರ್ಮಾ ಜೊತೆ ಸುರ್ದೀರ್ಘ ಮಾತುಕತೆ ನಡೆಸಿದೆ. ಈ ಬಳಿಕವೇ ಸೆಲೆಕ್ಷನ್ ಕಮಿಟಿ ಅಂತಿಮ ನಿರ್ಧಾರ ತೆಗೆದುಕೊಂಡಿದೆ. ರೋಹಿತ್ ಶರ್ಮಾ ಬದಲಿಗೆ ಶುಭ್​ಮನ್ ಗಿಲ್​​ಗೆ ಏಕದಿನ ನಾಯಕತ್ವ ಪಟ್ಟ ಕಟ್ಟಿದ ಹಿಂದೆ ಭಾರೀ ಪ್ಲ್ಯಾನ್ ಅಡಗಿದೆ.
ಶುಭ್​ಮನ್​​ ಗಿಲ್ ಏಕದಿನ ನಾಯಕತ್ವ ಕಟ್ಟುವ ಹಿಂದೆ ಭಾರೀ ಲೆಕ್ಕಚಾರ ಇದೆ. ಸೌತ್​ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಟೂರ್ನಿ ಸದ್ಯ ಟೀಮ್​ ಮ್ಯಾನೇಜ್​ಮೆಂಟ್​ನ ಟಾರ್ಗೆಟ್​. ಈ ಏಕದಿನ ವಿಶ್ವಕಪ್​​ಗೆ ಕೇವಲ 2 ವರ್ಷ ಮಾತ್ರವೇ ಬಾಕಿ ಇದೆ. ಶುಭ್​ಮನ್​​ ಗಿಲ್​​ಗೆ ಆಸ್ಟ್ರೇಲಿಯಾ ಸರಣಿಯಿಂದಲೇ ಏಕದಿನ ನಾಯಕತ್ವದ ಪಟ್ಟ ನೀಡಿದ್ರೆ, ನಾಯಕತ್ವದ ಅನುಭವದ ಜೊತೆಗೆ ಟೀಮ್ ಬಿಲ್ಡ್ ಮಾಡಲು ಟೈಮ್ ಸಿಗುತ್ತೆ. 2027ರ ಏಕದಿನ ವಿಶ್ವಕಪ್​ ವೇಳೆಗೆ ನಾಯಕನಾಗಿಯೂ ಶುಭ್​ಮನ್ ಗಿಲ್​​ ಮತ್ತಷ್ಟು ಪಳಗಲು ಅವಕಾಶ ಸಿಗುತ್ತೆ. ಹೀಗಾಗಿ ಆಸ್ಟ್ರೇಲಿಯಾ ಸರಣಿಯಿಂದಲೇ ಶುಭ್​ಮನ್​​ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.
ಟೆಸ್ಟ್​ ತಂಡದ ನಾಯಕನಾಗಿ ಶುಭ್​ಮನ್​ ಗಿಲ್​ ಸಕ್ಸಸ್​ ಕಂಡಿದ್ದಾರೆ. ಏಕದಿನ ತಂಡದ ನಾಯಕನ ಪಟ್ಟವನ್ನ ಸೆಲೆಕ್ಷನ್ ಕಮಿಟಿ ಕಟ್ಟಿದೆ. ಸದ್ಯ ಟಿ20 ತಂಡಕ್ಕೆ ಶುಭ್​ಮನ್​ ಗಿಲ್​ ಉಪನಾಯಕನಾಗಿದ್ದಾರೆ. 2026ರಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಈ ವೇಳೆಗೆ ಸೂರ್ಯಕುಮಾರ್​ ಯಾದವ್​​​ ವಯಸ್ಸು 36ರ ಗಡಿ ದಾಟಿರುತ್ತೆ. ಹೀಗಾಗಿ ಶುಭ್​ಮನ್​ ಗಿಲ್​ಗೆ T20 ತಂಡದ ನಾಯಕತ್ವವೂ ಶೀಘ್ರದಲ್ಲೇ ಸಿಗೋ ಸಾಧ್ಯತೆ ದಟ್ಟವಾಗಿದೆ.
ಟಫ್​ ಕಾಲ್​ ತೆಗೆದುಕೊಂಡಿರೋ ಸೆಲೆಕ್ಷನ್​ ಕಮಿಟಿ 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಶುಭ್​ಮನ್​ ಗಿಲ್​ಗೆ ನಾಯಕತ್ವ ನೀಡಿದೆ. ಸಿದ್ಧತೆಯ ದೃಷ್ಟಿಯಿಂದ ಸರಿಯಾದ ಸಮಯದಲ್ಲಿ ಈ ನಿರ್ಧಾರವನ್ನ ಸೆಲೆಕ್ಷನ್​ ಕಮಿಟಿ ಮಾಡಿದೆ. ಇದೇ ವೇಳೆ ಗಿಲ್​​ಗೆ ನಾಯಕತ್ವ ನೀಡಿರೋದ್ರಿಂದ ರೋಹಿತ್​ ಶರ್ಮಾರ ಏಕದಿನ ವಿಶ್ವಕಪ್​ ಆಡೋ ಕನಸು ನನಸಾಗಲ್ವಾ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ