/newsfirstlive-kannada/media/media_files/2025/10/05/rishab-shetty-2-2025-10-05-09-25-46.jpg)
ಇವತ್ತು ರಿಷಬ್​ ಶೆಟ್ಟಿಯವ್ರ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಸೃಷ್ಟಿಸಿರೋ ಸಂಚಲನವನ್ನ ನೋಡ್ತಿದ್ರೆ, ಆ ಸಿನಿಮಾ ರಿಷಬ್​ಗೆ ಸುಲಭದ ಹಾದಿಯಾಗಿರಲಿಲ್ಲ ಅನ್ನೋದು ಮೇಲ್ನೋಟಕ್ಕೇನೇ ಗೊತ್ತಾಗಿಬಿಡುತ್ತೆ.. ಅಷ್ಟೇ ಯಾಕೆ..ಇವತ್ತಿನ ಈ ಸಕ್ಸಸ್​ ಅಂದಿನ ಅನುಮಾನವನ್ನ ಡಿವೈನ್​ ಸ್ಟಾರ್ ಮೆಲುಕು ಹಾಕುವಂತೆ ಮಾಡಿದೆ.
ಯಾವುದಾದ್ರೂ ಒಂದು ಗುರಿ ನಮ್ಮ ಕಣ್ಮುಂದೆ ಬಂದ್​​ಬಿಟ್ರೆ ಸಾಕು.. ಹಠವಿದ್ದವನು ತಾನಿಡೋ ಹೆಜ್ಜೆಯನ್ನ ಯಾವುದೇ ಕಾರಣಕ್ಕೂ ಹಿಂದೆ ತೆಗೆಯೋ ಮನಸ್ಸು ಮಾಡೋದೇ ಇಲ್ಲ.. ಅದೆಷ್ಟೇ ಅಡೆತಡೆ ಬರಲಿ, ಸಾಕಷ್ಟು ಅವಮಾನವೇ ಎದುರಾಗಲಿ ಹೃದಯ ಕುಗ್ಗೋದಿಲ್ಲ..ಜಗ್ಗೋದಿಲ್ಲ.. ಮನಸೊಳಗೆ ಛಲದ ಬೆಂಕಿ ಹೊತ್ತಿ ಉರಿಯುವವನಿಗೆ ಯಾವುದೂ ಅಸಾಧ್ಯವಲ್ಲ ಅನ್ನೋದಕಕ್ಕೆ ಖಡಕ್ ಉದಾಹರಣೆ ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ಡಿವೈನ್​ ಸ್ಟಾರ್ ರಿಷಭ್​ ಶೆಟ್ಟಿ..
ಇದನ್ನೂ ಓದಿ: ತಮಿಳುನಾಡು, ಕೇರಳದವರೂ ಫಿದಾ.. ಬಾಲಿವುಡ್​ ಸಿನಿ ಪ್ರೇಮಿಗಳಿಗೂ ಕಾಂತಾರವೇ ಅಚ್ಚುಮೆಚ್ಚು..!
ರಿಷಭ್​ ಶೆಟ್ಟಿ.. ಇವತ್ತು ಇದು ಬರೀ ಹೆಸರಲ್ಲ.. ಕನ್ನಡ ಸಿನಿ ದುನಿಯಾದ ದೈತ್ಯಶಕ್ತಿ..ಇಡೀ ದೇಶವೇ ಮತ್ತೆ ಕನ್ನಡ ನಾಡಿನತ್ತ ತಿರುಗಿ ನೋಡುವಂತೆ ಮಾಡಿದ ವ್ಯಕ್ತಿತ್ವ. ಮೂರು ವರ್ಷದ ಹಿಂದೆ ದೇಶಾದ್ಯಂತ ಕಾಂತಾರ ಸಿನಿಮಾ ಹಚ್ಚಿದ ಭಕ್ತಿಯ ಕಿಚ್ಚು ಇನ್ನೂ ಕಮ್ಮಿ ಆಗಿಲ್ಲ. ಆ ಕಿಚ್ಚು ಈಗ ಕಾಂತಾರ ಚಾಪ್ಟರ್ 1 ಮೂಲಕ ಕಾಡ್ಗಿಚ್ಚಾಗಿ ಬದಲಾಗಿ ಡಬಲ್ ಡಿವೈನ್ ಫೀಲ್ ಕೊಡ್ತಿದೆ. ಬೆಳಕು.. ಇದು ಬೆಳಕಲ್ಲ ದರ್ಶನ.. ಅಂತೇಳಿ ಇಡೀ ದೇಶಕ್ಕೆ ಭಕ್ತಿರಸವನ್ನು ಉಣಬಡಿಸ್ತಿರೋ ಸಿನಿಮಾ ಕಾಂತಾರ ಚಾಪ್ಟರ್​1.. ಇಡೀ ಜಗತ್ತಿನಾದ್ಯಂತ ಬಾಕ್ಸ್​ ಆಫೀಸ್​​ನ ಧೂಳೀಪಟ ಮಾಡಿ ಮುನ್ನುಗ್ಗುತ್ತಿದೆ..
ಧರ್ಮ, ಜಾತಿ, ಗಡಿಗಳ ಸಂಕೋಲೆ ಒಡೆದಾಕಿ ಎಲ್ಲರೂ ವಾರೆವ್ಹಾ ಅನ್ನೋ ಮಟ್ಟಿಗೆ, ದೈವಿಕ ಪ್ರಪಂಚವನ್ನ ಕಾಂತಾರ ಹುಟ್ಟು ಹಾಕಿತ್ತು.. ಆ ಯಶಸ್ಸಿನ ಬೆನ್ನಲ್ಲೇ, ಅದ್ಯಾವಾಗ ರಿಷಬ್ ಶೆಟ್ರು ಕಾಂತಾರ ಪ್ರೀಕ್ವೆಲ್ ಪ್ರಸ್ತಾಪ ಮಾಡಿದ್ರೋ, ಅಲ್ಲಿಂದ ಚಾಪ್ಟರ್ 1 ಮೇಲೆ ಬೆಟ್ಟದಷ್ಟು ನಿರೀಕ್ಷೆ ಶುರುವಾಗಿತ್ತು.. ಆ ನಿರೀಕ್ಷೆಗಳೆಲ್ಲವೂ ಈಗ, ಜನರ ಜೈಕಾರದ ರೂಪವಾಗಿ ಹೊರ ಬರ್ತಿದೆ.. ಬರೋಬ್ಬರಿ 30ಕ್ಕೂ ಹೆಚ್ಚು ದೇಶಗಳು, 7000ಕ್ಕೂ ಅಧಿಕ ಸ್ಕ್ರೀನ್​​ಗಳಲ್ಲಿ ಜಗಮಗಿಸುತ್ತಿರುವ ಕಾಂತಾರ ಮೊದಲ ದಿನವೇ ಬರೋಬ್ಬರಿ 60 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿ ಇಡೀ ದೇಶವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ.. ಈ ವೀಕೆಂಡ್​ನಲ್ಲಿ 200 ಕೋಟಿ ಬಾಚುವ ನಿರೀಕ್ಷೆ ಇದೆ.. ಇನ್ನೇನು ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕಲೆಕ್ಷನ್​ ಮಾಡೋದು ಪಕ್ಕಾ ಅಂತಾ ಪ್ರಖ್ಯಾತ ವಿಮರ್ಶಕರೇ ಹೇಳ್ತಿದ್ದಾರೆ.
ಇದನ್ನೂ ಓದಿ: ದಿನಕ್ಕೆ ಒಂದೇ ಹೊತ್ತು ಊಟ.. ಡಿವೋರ್ಸ್ ಕೊಟ್ಟು ಲವ್! ಇದು ಕಾಂತಾರ ವಿಲನ್ ಲೈಫ್​ಸ್ಟೈಲ್
ಕಾಂತಾರ ಸೃಷ್ಟಿಸಿದ ಈ ಸೆನ್ಸೇಷನ್​ ಕನ್ನಡಿಗರ ಪಾಲಿಗೆ ಬಹುದೊಡ್ಡ ಸಾಧನೆಯೇ ಹೌದು. ಆದ್ರೆ, ಈ ಸಾಧನೆಯ ಹಿಂದೆ ರಿಷಭ್​ ಶೆಟ್ಟಿ ಎನ್ನುವ ಧೀಶಕ್ತಿ ಇರೋದನ್ನ ಮರೆಯೋ ಹಾಗಿಲ್ಲ. ಬಟ್, ರಿಷಭ್​ ಶೆಟ್ಟಿಯವ್ರಿಗೆ ದಕ್ಕಿರೋ ಈ ಯಶಸ್ಸು ಏನಿದ್ಯಲ್ಲ. ಅದು ಅವರಿಗೆ ಸುಲಭವಾಗಿ ದಕ್ಕಿದ್ದಂತೂ ಅಲ್ಲ. ಆ ಕಾರಣಕ್ಕೇನೇ ರಿಷಭ್​ ಇಂತಹ ಸಂಭ್ರಮದ ಘಳಿಗೆಯಲ್ಲೂ ತಮ್ಮ ಹಳೆಯ ದಿನಗಳನ್ನ ಮೆಲುಕು ಹಾಕಿರೋದು. ಆವತ್ತು ಎದುರಿಸಿದ್ದ ಅವಮಾನವನ್ನ ನೆನೆದು ಭಾವುಕರಾಗಿರೋದು.
"1 ಶೋಗಾಗಿ ಒದ್ದಾಡಿದ್ದೆ"
2016ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು ಹೌಸ್ಫುಲ್ ಶೋಗಳ ಈ ಅದ್ಭುತ ಪಯಣ.ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ.ಇದಕ್ಕಾಗಿ ನಾನು ನಿಮಗೆ ಸದಾ ಋಣಿ
-ರಿಷಬ್ ಶೆಟ್ಟಿ, ನಟ
ಆವತ್ತು ಒಂದೇ ಒಂದು ಶೋಗಾಗಿ ಒದ್ದಾಡಿದ್ದೆ. 10 ವರ್ಷಗಳ ಆ ಒದ್ದಾಟ ಬರೋಬ್ಬರಿ 5000ಕ್ಕೂ ಹೆಚ್ಚು ಶೋಗಳು ಹೌಸ್​ಫುಲ್​ ಆಗುವ ಫಲಿತಾಂಶ ಕೊಟ್ಟಿದೆ. ಇದಕ್ಕೆಲ್ಲಾ ನೀವೇ ಕಾರಣ ಅಂತಾ ಸಿನಿಪ್ರಿಯರಿಗೆ ಕೃತಜ್ಞತೆ ಸಲ್ಲಿಸಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ ರಿಷಭ್​ ಶೆಟ್ಟಿ. ನಿಜಕ್ಕೂ ಎಂಥಾ ಜರ್ನಿ ಅಲ್ವಾ? ನಿಮಗೆಲ್ಲಾ ಸಿನಿಮಾ ಮಂದಿಯ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತೆ. ಯಾರಾದ್ರೂ ಕಷ್ಟಪಟ್ಟು ಸಿನಿಮಾ ಮಾಡಿ, ಕೋಟಿ ಕೋಟಿ ಖರ್ಚು ಮಾಡಿ, ಆ ಸಿನಿಮಾ ಚೆನ್ನಾಗಿ ಓಡಲಿಲ್ಲ ಅಂದ್ರೆ, ಅವ್ರು ಮತ್ತೆ ಜೀವನದಲ್ಲಿ ಸಿನಿಮಾ ಮಾಡೋದೇ ಡೌಟು. ಕೆಲವರು ಈ ಫೀಲ್ಡನ್ನೇ ಬಿಟ್ಟು ಹೋಗಿರೋ ಅನೇಕ ನಿದರ್ಶನಗಳಿವೆ, ಆದ್ರೆ, ರಿಷಬ್​ ಇದ್ದಾರಲ್ಲ ಯಾವತ್ತೂ ಕೂಡ ಅವರು ಕಂಡ ಸೋಲಿಗೆ ಹಾಗೂ ಆದ ಅವಮಾನದಿಂದ ಎದೆಗುಂದಿದ ವ್ಯಕ್ತಿಯೇ ಅಲ್ಲ. ಪ್ರವಾಹದ ವಿರುದ್ಧ ದಿಕ್ಕಿನಲ್ಲಿಯೇ ಈಜಿ ಇವತ್ತು ದೊಡ್ಡ ಯಶಸ್ಸು ಗಳಿಸಿದವರು.. ಇಂಥಾ ರಿಷಬ್​ 2016ರಲ್ಲಿ ಒಂದು ಟ್ವೀಟ್​ ಮಾಡಿದ್ದರು..
ಇದನ್ನೂ ಓದಿ: ಕಾಂತಾರ ಫಸ್ಟ್​ ಡೇ ಗಳಿಸಿದ್ದು ಕೋಟಿ ಕೋಟಿ.. ಕನ್ನಡದಲ್ಲಿ ಗಳಿಸಿದ್ದು ಎಷ್ಟು ಕೋಟಿ..?
"ಕೈ ಕಾಲು ಹಿಡಿದೆ"ಅಂತೂ ಇಂತೂ ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ ನಾಳೆಯಿಂದ ಸಂಜೆ 7pm ಶೋ ಸಿಕ್ತು. ನೋಡಲು ಇಚ್ಛಿಸುವವರು..-ರಿಷಬ್ ಶೆಟ್ಟಿ, ನಟ
ಅದ್ಯಾವ ಕಾಂತಾರ ಯಶಸ್ಸಿನ ಸಂಭ್ರಮದಲ್ಲಿದ್ದಾರೋ.. ಅದೇ ರಿಷಬ್​ 2016ರಲ್ಲಿ ಮಾಡಿದ್ದ ಟ್ವೀಟ್​ ಇದು. ​ನಿಮಗೆಲ್ಲ ನೆನಪಿದ್ಯೋ ಇಲ್ವೋ. 2016ರ ಫೆಬ್ರವರಿ ತಿಂಗಳಲ್ಲಿ ಒಂದು ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದ ಹೆಸರು ರಿಕ್ಕಿ. ಅದು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಮೊಟ್ಟ ಮೊದಲ ಚಿತ್ರ, ಆ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ನಾಯಕನಾಗಿದ್ರೆ, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದರು.
ಆವತ್ತು ರಿಕ್ಕಿ ಚಿತ್ರಕ್ಕೆ ಕರಾವಳಿಯಲ್ಲಿಯೇ ಥಿಯೇಟರ್ ಸಿಕ್ಕಿರಲಿಲ್ಲ. ಅದರಲ್ಲೂ ರಿಷಬ್​ ಶೆಟ್ಟಿಯವರ ತವರು ಜಿಲ್ಲೆ ಮಂಗಳೂರಿನಲ್ಲೇ ರಿಕ್ಕಿ ಚಿತ್ರಕ್ಕೆ ಥಿಯೇಟರ್​ ಸಿಗದಿದ್ದಾಗ, ರಿಷಬ್ ಸೇರಿ ಇಡೀ ಚಿತ್ರತಂಡಕ್ಕೆ ಆದ ನೋವು ಅಂತಿಂಥಾದಲ್ಲ. ಅಂತಹ ಟೈಮಲ್ಲಿ ಚಿತ್ರದ ನಿರ್ದೇಶಕನಾಗಿದ್ದ ರಿಷಭ್ ತಮ್ಮ ಸಿನಿಮಾಗೆ ಶೋ ಸಿಗುವಂತೆ ಮಾಡಲು ಅಲೆದಾಡಿದ್ದ ಕಥೆ ಹೇಳತೀರದ್ದು. ಸಿಕ್ಕ ಸಿಕ್ಕವರನ್ನ ಬೇಡಿಕೊಂಡಿದ್ದೆಷ್ಟೊ..ಹೀಗೆ ಸಾಕಷ್ಟು ಮಂದಿಯ ಕೈ ಕಾಲು ಹಿಡಿದ ಬಳಿಕ ಮಂಗಳೂರಿನ ಬಿಗ್​ ಸಿನಿಮಾಸ್​​ನಲ್ಲಿ ಒಂದು ಶೋ ಸಿಕ್ಕಿತ್ತು. ಬಟ್, ಇಷ್ಟಾದ್ರೂ ರಿಕ್ಕಿ ಚಿತ್ರವನ್ನ ಸಿನಿಪ್ರಿಯರು ಕೈ ಹಿಡೀಲಿಲ್ಲ. ಹಾಗಂತ, ರಿಷಬ್​ ಶೆಟ್ಟಿ ಸೋತೆ ಅಂತಾ ಕುಗ್ಗಲಿಲ್ಲ. ಮುಂದೆ ಅದೇ ವರ್ಷ ತಮ್ಮದೇ ನಿರ್ದೇಶನದಲ್ಲಿ ಅದೇ ರಕ್ಷಿತ್​ ಶೆಟ್ಟಿಯವ್ರನ್ನ ನಾಯಕನನ್ನಾಗಿ ಹಾಕೊಂಡು ಕಿರಿಕ್​ ಪಾರ್ಟಿ ಎನ್ನುವ ಸಿನಿಮಾ ನಿರ್ದೇಶನ ಮಾಡ್ತಾರೆ.
ಇದನ್ನೂ ಓದಿ: ಕಾಂತಾರ, ರಿಷಭ್ ಶೆಟ್ಟಿ ಬಗ್ಗೆ ರಾಕಿ ಭಾಯ್ ಯಶ್​ ಏನ್ ಹೇಳಿದರು..? ರುಕ್ಮಿಣಿ ವಸಂತ್​..
ಸೋಲುಂಡಿದ್ದ ರಿಷಬ್​ ಶೆಟ್ಟಿಗೆ ಕಿರಿಕ್​ ಪಾರ್ಟಿ ದೊಡ್ಡ ಗೆಲುವನ್ನೇ ತಂದುಕೊಟ್ಟಿತ್ತು. ಅಲ್ಲಿಂದ ಶುರುವಾದ ಗೆಲುವು ಇವತ್ತು ಅವ್ರನ್ನ ಪ್ಯಾನ್​ ಇಂಡಿಯಾ ಸ್ಟಾರ್​ನನ್ನಾಗಿ ಬದಲಾಯಿಸಿದೆ. ಇವತ್ತು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ 1, ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಾಣ್ತಿದೆ. ಎಲ್ಲಾ ಕಡೆಯೂ ಕಾಂತಾರ ಹೌಸ್​ಫುಲ್ ಆಗಿದ್ದು, ಈ ಬೆಳವಣಿಗೆ ಹಾಗೂ ಈ ಯಶಸ್ಸಿಗೆ ನೀವೇ ಕಾರಣ ಅಂತಾ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿದ್ದಾರೆ..
ಮನಸಾರೆ ಕೊಂಡಾಡಿದ ಯಶ್​!
ಕನಸು ಕಾಣೋದು ದೊಡ್ಡದಲ್ಲ. ಕನಸು ಎಷ್ಟು ದೊಡ್ಡದಿರುತ್ತೋ ಅದಕ್ಕಿಂತ ಡಬಲ್ ಪರಿಶ್ರಮವನ್ನ ಆ ಕನಸು ಬೇಡುತ್ತೆ. ನಾವ್​ ಮಾಡೋ ಕೆಲಸದ ಮೇಲೆ ಅಷ್ಟೇ ಶ್ರದ್ಧೆ ಭಕ್ತಿ ಬೇಕಾಗುತ್ತೆ. ರಿಷಬ್​ ಶೆಟ್ಟಿ ಕೂಡ ಅಷ್ಟೇ, ಕಾಂತಾರ ಕೆಲಸ ಶುರುವಾದಾಗಿನಿಂದ ಹಿಡಿದು ಇಲ್ಲಿತನಕ ಕಣ್ತುಂಬ ನಿದ್ರೆ ಮಾಡಿರೋ ದಿನವಿಲ್ಲ. ಅದ್ರಲ್ಲೂ ಕಳೆದ 3 ತಿಂಗಳಿನಿಂದ ಬರೀ ದಿನಕ್ಕೆ ಜಸ್ಟ್​ ಒಂದೆರಡು ಗಂಟೆಗಳಷ್ಟೇ ನಿದ್ದೆ ಮಾಡಿರೋದಾಗಿ ಅವರೇ ನ್ಯೂಸ್​ಫಸ್ಟ್​ ಜೊತೆ ಹೇಳಿಕೊಂಡಿದ್ದರು.
ಇದನ್ನೂ ಓದಿ: EMIನಲ್ಲಿ ಫೋನ್ ಖರೀದಿಸಿದ್ದವರಿಗೆ RBI ಬಿಗ್ ಶಾಕ್
ಆ ಶ್ರದ್ಧೆಗೆ ಇವತ್ತು ದೊಡ್ಡವ ಪ್ರತಿಫಲವೇ ಸಿಕ್ಕಿದೆ. ಬರೀ ಕರ್ನಾಟಕದಲ್ಲಷ್ಟೇ ಅಲ್ಲ. ಭಾರತೀಯ ಸಿನಿದುನಿಯಾದಲ್ಲಿ ಕಾಂತಾರ ದೊಡ್ಡ ಮೈಲುಗಲ್ಲನ್ನೇ ನೆಟ್ಟಿದ್ದು, ರಿಷಬ್​ ಡೆಡಿಕೇಷನ್​ನ ದಿಗ್ಗಜ ನಟರು ಮುಕ್ತಕಂಟದಿಂದ ಶ್ಲಾಘಿಸಿದ್ದಾರೆ. ಅದ್ರಲ್ಲೂ ಸ್ಯಾಂಡಲ್​ವುಡ್​ನ ಮತ್ತೊಬ್ಬ ಟಾಪ್​ ಹೀರೋ ರಾಕಿಂಗ್​ ಸ್ಟಾರ್​ ಯಶ್​ ಈ ಸಿನಿಮಾಗಾಗಿ ರಿಷಬ್​ ಪಟ್ಟಿರೋ ಶ್ರಮ ತೆರೆಮೇಲೆ ನೀಟಾಗಿ ಕಾಣ್ತಿದೆ ಅಂತಾ ಕೊಂಡಾಡಿದ್ದಾರೆ.
ಬರೀ ಕನ್ನಡದ ನಟರಷ್ಟೇ ಅಲ್ಲ. ತಮ್ಮದೇ ಡೈರೆಕ್ಷನ್​ ಮೂಲಕ ಇಡೀ ದೇಶದ ಮನೆಮಾತಾಗಿರೋ ದಕ್ಷಿಣ ಭಾರತದ ಪ್ರಸಿದ್ದ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಕಾಂತಾರವನ್ನ ನಿಜವಾದ ಮಾಸ್ಟರ್​ಪೀಸ್​ ಎಂದಿದ್ದಾರೆ.
‘ನಿಜವಾದ ಮಾಸ್ಟರ್ಪೀಸ್'ಕಾಂತಾರ ಚಾಪ್ಟರ್-1 ನಿಜವಾದ ಮಾಸ್ಟರ್ಪೀಸ್.ಭಾರತೀಯ ಸಿನಿಮಾ ಈ ಹಿಂದೆ ಇಂತಹದ್ದನ್ನ ಕಂಡಿರಲಿಲ್ಲ.ಇದು ಸಿನಿಮೀಯ ಚಂಡಮಾರುತ.ದೈವಿಕ, ಕಾಂತಾರವನ್ನ ಯಾರೂ ಶೇಕ್ ಮಾಡೋದಕ್ಕಾಗಲ್ಲ.ರಿಷಬ್ ಶೆಟ್ಟಿಯ ಒನ್ ಮ್ಯಾನ್ ಶೋ, ಏಕಾಂಗಿಯಾಗಿ ಅವರು ಸಿನಿಮಾವನ್ನ ಕೊನೆವರೆಗೂ ತೆಗೆದುಕೊಂಡು ಹೋಗಿರುವ ರೀತಿ ಅದ್ಭುತ.-ಸಂದೀಪ್ ರೆಡ್ಡಿ ವಂಗಾ, ನಿರ್ದೇಶಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ