/newsfirstlive-kannada/media/media_files/2025/10/05/kantara-1-2025-10-05-07-23-18.jpg)
ಸಿನಿ ಪ್ರೇಕ್ಷಕ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಬಂದ್ಮೇಲೂ ಆ ಕಥೆ ಆತನನ್ನ ಆವರಿಸ್ಕೊಂಡು ಇರ್ಬೇಕು. ಆತನಲ್ಲಿ ವ್ಹಾವ್! ಎಂಥಾ ಅದ್ಭುತ ಸಿನಿಮಾ ನೋಡಿದೆ ಅನ್ನೋ ಭಾವನೆ ಮನೆ ಮಾಡಬೇಕು. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಅದೇ ರೀತಿಯ ವಾತಾವರಣ ಉತ್ತರ, ದಕ್ಷಿಣ ಎಲ್ಲೆಡೆ ಕಾಣಿಸ್ಕೊಳ್ತಿದೆ.
ಕಾಂತಾರ ಕಮಾಲ್!
2022 ರಲ್ಲಿ ರಿಲೀಸ್ ಆಗಿದ್ದ ಕಾಂತರ ಸಿನಿಮಾ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವಂತೆ ಮಾಡಿದ್ದೇ ಕನ್ನಡಿಗರಾಗಿತ್ತು. ಕನ್ನಡಿಗರು ಅದ್ಭುತ ರೆಸ್ಪಾನ್ಸ್ ಕೊಟ್ಟಿದ್ದಕ್ಕೆ ಸಿನಿಮಾ ತಂಡ ಪ್ಯಾನ್ ಇಂಡಿಯಾಗೆ ಹೋಗಿತ್ತು. 2022 ರಲ್ಲಿಯೇ ಕಾಂತರ ಸಿನಿಮಾಗೆ ತೆಲುಗು ಪ್ರೇಕ್ಷಕರು ಫಿಗಾ ಆಗಿ ಹೋಗಿದ್ರು. ಕನ್ನಡ ಸಿನಿಮಾಗೆ ದೊಡ್ಡ ಮಟ್ಟದ ಗೆಲುವು ನೀಡಿದ್ರು. ಇದೀಗ ಅದಕ್ಕೂ ದೊಡ್ಡ ಗೆಲುವು ನೀಡ್ತಿದ್ದಾರೆ ತೆಲುಗು ಪ್ರೇಕ್ಷಕರು.
ಇದನ್ನೂ ಓದಿ: ದಿನಕ್ಕೆ ಒಂದೇ ಹೊತ್ತು ಊಟ.. ಡಿವೋರ್ಸ್ ಕೊಟ್ಟು ಲವ್! ಇದು ಕಾಂತಾರ ವಿಲನ್ ಲೈಫ್​ಸ್ಟೈಲ್
ಬೇರೆ ಸ್ಟೇಟ್‌ನ ಸಿನಿ ಪ್ರೇಮಿಗಳಿಗೆ ಹೋಲಿಸಿದ್ರೆ, ತಮಿಳುನಾಡು ಮತ್ತು ಕೇರಳದ ಸಿನಿ ಪ್ರೇಮಿಗಳು ವಿಭಿನ್ನ. ಅವ್ರು ಅಷ್ಟು ಸುಲಭದಲ್ಲಿ ಬೇರೆ ಸ್ಟೇಟ್‌ನ, ಬೇರೆ ನಾಡಿನ ಮಣ್ಣಿನ ಕಥೆಯನ್ನ ಒಪ್ಪಿಕೊಳ್ಳುವುದಿಲ್ಲ, ಅಪ್ಪಿಕೊಳ್ಳುವುದಿಲ್ಲ. ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಎರಡೂ ರಾಜ್ಯದವರು ಒಪ್ಪಿಕೊಂಡಿದ್ದಾರೆ. ಕಾಂತಾರ ಸಿನಿಮಾ ದೈವದ ಕಥೆಯ ಸುತ್ತ ಸಾಗುವ ಸಿನಿಮಾ ಆಗಿರೋದ್ರಿಂದ ಕೇರಳಕ್ಕೆ ಸ್ವಲ್ಪ ಚಟ್ ಇದೆ. ಹೀಗಾಗಿ ಕೇರಳಿಗರು ಒಪ್ಪಿಕೊಂಡಿರುವುದರಲ್ಲಿ ದೊಡ್ಡ ಅಚ್ಚರಿ ಅನಿಸೋದಿಲ್ಲ. ತಮಿಳುನಾಡಿಗರು ಒಪ್ಪಿಕೊಂಡಿದ್ದು ಖುಷಿ ಪಡೋ ವಿಚಾರ. ವಿಶೇಷ ಅಂದ್ರೆ 2022 ರಲ್ಲಿ ಕಾಂತಾರ ಸಿನಿಮಾಗೂ ಜೈ ಅಂತ ಹೇಳಿದ್ದ ತಮಿಳುನಾಡಿಗರು ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾಗೂ ಜೈ ಜೈ ಎಂದಿದ್ದಾರೆ.
ಕನ್ನಡದ ತಾಕತ್ತು ಜಗತ್ತಿಗೆ ಸಾರಿದ ರಿಷಬ್ ಸಿನಿಮಾ
ಹಿಂದೊಂದ್ ಕಾಲ ಇತ್ತು.. ಭಾರತೀಯ ಸಿನಿಮಾ ಅಂದ್ರೆ ಬಾಲಿವುಡ್, ಬಾಲಿವುಡ್ ಅಂದ್ರೆ ಭಾರತೀಯ ಸಿನಿಮಾ ಅನ್ನೋ ಹಾಗಿತ್ತು. ಅದ್ಕೆ ಕಾರಣ, ಭಾರತದಲ್ಲಿ ಬಹುತೇಕ ಸ್ಟೇಟ್‌ಗಳಿಗೆ ಹಿಂದಿ ಭಾಷೆಯೇ ಮಾತೃಭಾಷೆಯಾಗಿತ್ತು. ಈಗ ಕಾಲ ಬದಲಾಗಿದೆ. ಬಾಹುಬಲಿ ಸಿನಿಮಾ ಬಂದ್ಮೇಲೆ ದಕ್ಷಿಣ ಸಿನಿಮಾದತ್ತ ಉತ್ತರ ಭಾರತೀಯರು ಮುಖ ಮಾಡಿದ್ದಾರೆ. ಇಲ್ಲಿಯ ಕಥೆಗೆ, ಸಿನಿಮಾ ಮೇಕಿಂಗ್‌ಗೆ ಅವರು ಫಿದಾ ಆಗ್ತಿದ್ದಾರೆ. ಈಗ ಉತ್ತರ ಭಾರತೀಯದಲ್ಲಿ ನಿಮ್ಗೆ ಬಾಲಿವುಡ್ ಸಿನಿಮಾ ಇಷ್ಟನಾ? ದಕ್ಷಿಣದ ಸಿನಿಮಾ ಇಷ್ಟನಾ? ಅಂತ ಪ್ರಶ್ನೆ ಮಾಡಿದ್ರೆ ಕೇಳಿ ಬರೋ ಉತ್ತರ ದಕ್ಷಿಣದ ಸಿನಿಮಾ. ಹಾಗೇ ಬಾಲಿವುಡ್ ಸಿನಿಮಾದಲ್ಲಿ ಕಥೆಯೇ ಇರೋದಿಲ್ಲ, ಏನಿದ್ದರೂ ರೋಮ್ಯಾನ್ಸ್ ರೋಮ್ಯಾನ್ಸ್. ದಕ್ಷಿಣದ ಸಿನಿಮಾದಲ್ಲಿ ಸ್ಟ್ರಾಂಗ್ ಆಗಿರೋ ಕಥೆ ಇರುತ್ತೆ ಅನ್ನೋದನ್ನ ಮುಕ್ತ ಕಂಟದಿಂದ ಪ್ರಶಂಸಿಸ್ತಾರೆ.
ಇದನ್ನೂ ಓದಿ: ಕಾಂತಾರ ಫಸ್ಟ್​ ಡೇ ಗಳಿಸಿದ್ದು ಕೋಟಿ ಕೋಟಿ.. ಕನ್ನಡದಲ್ಲಿ ಗಳಿಸಿದ್ದು ಎಷ್ಟು ಕೋಟಿ..?
ಕೆಜಿಎಫ್ ಸಿನಿಮಾ ಬರೋದಕ್ಕೂ ಮುನ್ನ ಸ್ಯಾಂಡಲ್‌ವುಡ್ ಸಿನಿಮಾಗಳ ಬಗ್ಗೆ ಉತ್ತರ ಭಾರತೀಯರಿಗೆ ಅಷ್ಟೇನು ಗೊತ್ತಿಲ್ಲವಾಗಿತ್ತು. ಅಲ್ಲಿಯ ಥಿಯೇಟರ್‌ನಲ್ಲಿ ಕನ್ನಡ ಸಿನಿಮಾಗೆ ಆದ್ಯತೆಯೂ ಇರ್ತಾ ಇಲ್ಲ. ಕೆಜಿಎಫ್‌ನಂತರ ಕನ್ನಡ ಸಿನಿಮಾಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನವಯುಗ ಶುರುವಾಗಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾ ನವಯುಗವನ್ನ ಇನ್ನಷ್ಟು ಬೆಳೆಗಿಸ್ತಿದೆ.
ಸಾವಿರ ಕೋಟಿ ಮಾಡುತ್ತಾ ರಿಷಬ್ ಶೆಟ್ಟಿ ಸಿನಿಮಾ?
ಉತ್ತರ, ದಕ್ಷಿಣ.. ಎಲ್ಲಾ ಸಿನಿ ಪ್ರೇಮಿಗಳಲ್ಲಿ ಕೇಳಿಬರ್ತಾ ಇರೋ ಮಾತು ಅಂದ್ರೆ ಕಾಂತಾರ ಕಾಂತಾರ ಕಾಂತರ. ಥಿಯೇಟರ್‌ನಿಂದ ಹೊರಬಂದ್ಮೇಲೆ ಆ ಸಿನಿಮಾ ಕಥೆಯಿಂದ ಅವರಿಗೆ ಹೊರಬರೋದಕ್ಕೆ ಸಾಧ್ಯವಾಗ್ತಿಲ್ಲ. ಒಂದ್ ಮೂಲದ ಪ್ರಕಾರ ಕಾಂತಾರ ಸಿನಿಮಾ ಸಾವಿರ ಕೋಟಿ ದಾಟೋದು ಗ್ಯಾರಂಟಿ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ.. ಎರಡು ದಿನದಲ್ಲಿ 100 ಕೋಟಿ ದಾಟಿದ ಕಾಂತಾರ..!
ಕನ್ನಡ ಸಿನಿಮಾ ಪ್ರೇಮಿಗಳು ಅಷ್ಟೇ ಅಲ್ಲ, ಹಿಂದಿ, ತೆಲುಗು ತಮಿಳು ಪ್ರೇಕ್ಷಕರು ಕೂಡ ಸಾವಿರ ಕೋಟಿ ದಾಟುತ್ತೆ ಅಂತ ಹೇಳ್ತಿದ್ದಾರೆ. ಪ್ರೇಕ್ಷಕರಿಂದ ಪಾಸಿಟಿವ್ ರಿವ್ಯೂ ಕೇಳಿಬರ್ತಾ ಇರೋದ್ರಿಂದ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸೋದು ಗ್ಯಾರಂಟಿ. ಹಾಗೊಂದು ವೇಳೆ ಕಾಂತಾರ ಚಾಪ್ಟರ್ 1 ಸಿನಿಮಾ ಸಾವಿರ ಕೋಟಿ ದಾಟಿದ್ರೆ ಕೆಜಿಎಫ್ ನಂತರ ಆ ಗಡಿ ದಾಟಿದ 2ನೇ ಸಿನಿಮಾ ಅನ್ನೋ ಖ್ಯಾತಿಗೆ ಪಾತ್ರವಾಗುತ್ತೆ. ಏನೇ ಆಗಲಿ ಕನ್ನಡ ನೆಲದ ಕಥೆ, ತನ್ನಡದ ನೆಲದ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘರ್ಜಿಸ್ತಾ ಇರೋದು ನಿಜಕ್ಕೂ ಪ್ರಶಂಸನೀಯ.
ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಮಿಂಚುತ್ತಿವೆ. ಹಾಗೇ ನಾಡಿನ ಕಥೆಯನ್ನ ಅವು ಜಗತ್ತಿಗೆ ಸಾರುತ್ತಿವೆ. ಇಂತಹ ಸಿನಿಮಾಗಳು ಸ್ಯಾಂಡಲ್‌ವುಡ್‌ನಿಂದ ಇನ್ನಷ್ಟು ಬರಲಿ, ನಾಡಿನ ಕೀರ್ತಿ ಇನ್ನಷ್ಟು ಬೆಳಗಲಿ ಅಂತ ಆಶಿಸೋಣ.
ಇದನ್ನೂ ಓದಿ: ಕಾಂತಾರ, ರಿಷಭ್ ಶೆಟ್ಟಿ ಬಗ್ಗೆ ರಾಕಿ ಭಾಯ್ ಯಶ್​ ಏನ್ ಹೇಳಿದರು..? ರುಕ್ಮಿಣಿ ವಸಂತ್​..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ