Advertisment

ಬಾಕ್ಸ್​ ಆಫೀಸ್​ನಲ್ಲಿ ಸುನಾಮಿ.. ಎರಡು ದಿನದಲ್ಲಿ 100 ಕೋಟಿ ದಾಟಿದ ಕಾಂತಾರ..!

ರಿಷಬ್ ಶೆಟ್ಟಿ ಅವರ ಕಾಂತಾರ ಬಾಕ್ಸ್​ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊದಲನೇ ದಿನ ಕೋಟಿ ಕೋಟಿ ಲೂಟಿ ಮಾಡಿದ್ದ ಚಿತ್ರವು, ಎರಡನೇ ದಿನವೂ ಗಳಿಕೆಯಲ್ಲಿ ಕೊಳ್ಳೆ ಹೊಡೆದಿದೆ. ಎಷ್ಟು ಕೋಟಿ ಹಣ ಗಳಿಸಿದೆ ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
kantara trailer (1)
Advertisment

Kantara box office collection day 2: ರಿಷಬ್ ಶೆಟ್ಟಿ ಅವರ ಕಾಂತಾರ ಬಾಕ್ಸ್​ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊದಲನೇ ದಿನ ಕೋಟಿ ಕೋಟಿ ಲೂಟಿ ಮಾಡಿದ್ದ ಚಿತ್ರವು, ಎರಡನೇ ದಿನವೂ ಗಳಿಕೆಯಲ್ಲಿ ಕೊಳ್ಳೆ ಹೊಡೆದಿದೆ. ಅಕ್ಟೋಬರ್ 2 ರಂದು ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆಗಿದೆ.

Advertisment

ಇದನ್ನೂ ಓದಿ: ಕಾಂತಾರ, ರಿಷಭ್ ಶೆಟ್ಟಿ ಬಗ್ಗೆ ರಾಕಿ ಭಾಯ್ ಯಶ್​ ಏನ್ ಹೇಳಿದರು..? ರುಕ್ಮಿಣಿ ವಸಂತ್​..

Kantara

 
ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಕಾಂತಾರ, ಎರಡೇ ದಿನದಲ್ಲಿ 100 ಕೋಟಿ ಕ್ಲಬ್​ ಸೇರಿದೆ. ಮೂಲಗಳ ಪ್ರಕಾರ, ಮೊದಲ ದಿನವೇ ಬರೋಬ್ಬರಿ 80 ಕೋಟಿ ಗಳಿಸಿರುವ ಮಾಹಿತಿ ಇದೆ. ಎರಡನೇ ದಿನವೂ ಗೆಲುವಿನ ನಾಗಲೋಟ ಮುಂದುವರೆದಿದ್ದು, ಕಲೆಕ್ಷನ್ ₹ 100 ಕೋಟಿ ದಾಟಿದೆ. ಎನ್ನಲಾಗಿದೆ. 

ಇದನ್ನೂ ಓದಿ: ಡಿವೈನ್ ಫೀಲ್ ಕೊಡುತ್ತಿರುವ ಕಾಂತಾರಗೆ ಎಲ್ಲೆಡೆಯಿಂದ ಮೆಚ್ಚುಗೆ: ಪ್ರೇಕ್ಷಕರ ನಂಬಿಕೆ ಉಳಿಸಿಕೊಂಡ ಕಾಂತಾರ ಟೀಮ್‌

Advertisment

kantara

ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿರುವ ಚಿತ್ರವು ವಿದೇಶದಲ್ಲೂ ಮ್ಯಾಜಿಕ್ ಮಾಡ್ತಿದೆ. ದಿನೇ ದಿನೇ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗ್ತಿದ್ದು, ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಸಿನಿಮಾ ಗೆದ್ದಿದೆ. ಉತ್ತರ ಭಾರತದಲ್ಲಿ ಕಾಂತಾರಗೆ ಭಾರೀ ಯಶಸ್ಸು ಸಿಕ್ಕಿದೆ. ಶನಿವಾರ ಮತ್ತು ಭಾನುವಾರ ಮತ್ತಷ್ಟು ಕಲೆಕ್ಷನ್ ಜೋರಾಗುವ ನಿರೀಕ್ಷೆ ಇದೆ. 

ಇದನ್ನೂ ಓದಿ:ಅಬ್ಬಬ್ಬ..! ಕಾಂತಾರ ಹೊಸ ದಾಖಲೆ.. ಒಂದೇ ದಿನ ಸೇಲ್ ಆದ ಟಿಕೆಟ್ ಎಷ್ಟು ಗೊತ್ತಾ?

ಕಾಂತಾರ- 1 ಶೂಟಿಂಗ್ ಮಾಡುವಾಗ ಅಸಲಿಗೆ ಏನಾಯಿತು.. ಸ್ಪಷ್ಟನೆ ಕೊಟ್ಟ ಚಿತ್ರತಂಡ, ಹೇಳಿದ್ದೇನು?

Sacnilk ಪ್ರಕಾರ, ಈ ಚಿತ್ರವು ಮೊದಲ ದಿನ ₹61.85 ಕೋಟಿ ಗಳಿಸಿದೆ ಎಂದಿದೆ. ಕನ್ನಡದಲ್ಲಿ 18.5 ಕೋಟಿ, ಹಿಂದಿಯಲ್ಲಿ 19.6 ಕೋಟಿ ಗಳಿಸಿದೆ ಅಂತಾ ವರದಿ ಮಾಡಿದೆ. ಇನ್ನು ಎರಡನೇ ದಿನ, ಬೆಳಗ್ಗೆ 10:30 ರ ಹೊತ್ತಿಗೆ 43.65 ಕೋಟಿ ಗಳಿಸಿದೆ ಎಂದು ಹೇಳಿದೆ. 

Advertisment

ಇದನ್ನೂ ಓದಿ:ಕಾಂತಾರ ಯಶಸ್ಸು ಕಂಡರೂ ರಿಷಭ್ ಶೆಟ್ಟಿ ಸ್ನೇಹಿತ ರಕ್ಷಿತ್ ಬಂದಿಲ್ಲವೇಕೆ? ಎಲ್ಲಿ ಹೋದರು ರಕ್ಷಿತ್ ಶೆಟ್ಟಿ?

ಕಾಂತಾರ-2, ಟಾಕ್ಸಿಕ್ ವಿರುದ್ಧ ಅರಣ್ಯ ನಾಶ ಆರೋಪ; ಸರ್ಕಾರದಿಂದ ಮಹತ್ವದ ಆದೇಶ

ಗಳಿಕೆಯಲ್ಲಿ ‘ಕಾಂತಾರ ಅಧ್ಯಾಯ 1’ ಮೊದಲ ಭಾಗವನ್ನು ಮೀರಿಸುತ್ತದೆ. 2022 ರಲ್ಲಿ ಬಿಡುಗಡೆಯಾದ  ಮೊದಲ ದಿನ 1.95 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಕಾಂತಾರ ಚಾಪ್ಟರ್-1, ಬರೋಬ್ಬರಿ 60 ಕೋಟಿಗೂ ಹೆಚ್ಚು ಹಣ ಗಳಿಸಿದೆ. Sacnilk ಪ್ರಕಾರ, ‘ಕಾಂತಾರ’ ಮೊದಲ ವಾರದಲ್ಲಿ 30.3 ಕೋಟಿ ರೂ. ಗಳಿಸಿತ್ತು. ಎರಡನೇ ವಾರದಲ್ಲಿ 42.3 ಕೋಟಿ ರೂ. ಗಳಿಸಿತ್ತು. ಎರಡು ವಾರಗಳಲ್ಲಿ ಒಟ್ಟು ಕಲೆಕ್ಷನ್  72.6 ಕೋಟಿ ರೂಪಾಯಿ ಆಗಿತ್ತು. 

ಇದನ್ನೂ ಓದಿ:ಮಕ್ಕಳನ್ನ ಕೊಲ್ಲುತ್ತಿದೆ ಕೆಮ್ಮಿನ ಸಿರಪ್.. ಕೇಂದ್ರ ಸರ್ಕಾರದಿಂದ ತುರ್ತು ಎಚ್ಚರಿಕೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rishab Shetty Kantara review Kantara Movie Kantara Chapter1 Kantara Chapter 1 trailer
Advertisment
Advertisment
Advertisment