/newsfirstlive-kannada/media/media_files/2025/09/26/haris-rauf-and-sahibzada-2025-09-26-15-04-57.jpg)
ಪಾಕಿಸ್ತಾನ ಕ್ರಿಕೆಟರ್​ ಹ್ಯಾರಿಸ್ ರೌಫ್​​ನನ್ನ ಐಸಿಸಿ ಬ್ಯಾನ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಏಷ್ಯಾ ಕಪ್ ಫೈನಲ್ ಮ್ಯಾಚ್​ ಸೇರಿ ಒಟ್ಟು 3 ಪಂದ್ಯಗಳಿಗೆ ನಿಷೇಧ ಹೇರಲಾಗುತ್ತದೆ ಎನ್ನಲಾಗಿದೆ.
ಇಂದು ರಾತ್ರಿ ಐಸಿಸಿ ನಿರ್ಧಾರ ಪ್ರಕಟ ಮಾಡಲಿದೆ. ಹ್ಯಾರಿಸ್ ರೌಫ್ ಬ್ಯಾನ್​ಗೆ ಕಾರಣ ಮೈದಾನದಲ್ಲಿ ನಡೆದುಕೊಂಡ ಕೆಟ್ಟ ವರ್ತನೆ. ಸೆಪ್ಟೆಂಬರ್ 21 ರಂದು ಭಾರತದ ಜೊತೆಗಿನ ಪಾಕಿಸ್ತಾನ ಸೂಪರ್ ಫೋರ್​ ಪಂದ್ಯ ಆಡಿತು. ಈ ವೇಳೆ ರೌಫ್ ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದ್ದ. ಸೇಡಿಗಾಗಿ ಕತ್ತಿ ಮಸೆಯುತ್ತಿದ್ದ ಪಾಕಿಗಳು ಪಂದ್ಯಕ್ಕೂ ಮುನ್ನವೇ ಆಫ್​​ ದ ಫೀಲ್ಡ್​ನಲ್ಲಿ ನರಿ ಬುದ್ಧಿ ತೋರಿಸಿದ್ದರು.
ಅಭ್ಯಾಸದ ವೇಳೆ ಹ್ಯಾರಿಸ್​ ರೌಫ್ ಭಾರತೀಯ ಅಭಿಮಾನಿಗಳ ಕಡೆಗೆ 6-0 ಎಂದು ಕೂಗಿ ಆಪರೇಷನ್​ ಸಿಂಧೂರ ದಾಳಿ ವೇಳೆ ನಾವು ಭಾರತದ 6 ಯುದ್ಧ ವಿಮಾನ ಹೊಡೆದುಳಿಸಿದ್ವಿ ಎಂದು ಪಾಕಿಸ್ತಾನ ಹಬ್ಬಿಸಿದ್ದ ಹಸಿ ಸುಳ್ಳನ್ನ ಇಟ್ಟುಕೊಂಡು ಕೆಣಕಿದ್ದ. ಇದನ್ನು ಪಂದ್ಯದ ವೇಳೆಯೂ ಮುಂದುವರಿಸಿದ್ದ.
ಇದನ್ನೂ ಓದಿ:ಹ್ಯಾರಿಸ್ ರೌಫ್, ಫರ್ಹಾನ್​​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..! ಏನಾಯ್ತು..?
ಏನಿದು 6-0?
ಸೂಪರ್ ಫೋರ್​​ನ ಭಾರತದ ಇನ್ನಿಂಗ್ಸ್​ನಲ್ಲಿ ಅಭಿಷೇಕ್ ಶರ್ಮಾ, ಮೊದಲ ಬಾಲ್​ಗೆ ಸಿಕ್ಸರ್ ಬಾರಿಸಿ ಖಡಕ್ ಉತ್ತರ ನೀಡಿದ್ದರು. ಇದನ್ನು ಸಹಿಸದ ರೌಫ್, ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಹಬ್ಬಿಸಿದ್ದ ಸುಳ್ಳನ್ನ ಮತ್ತೆ ತನ್ನ ಕೀಳು ಪ್ರಚಾರಕ್ಕೆ ಬಳಸಿಕೊಂಡಿದ್ದ. ಆಪರೇಷನ್ ಸಿಂಧೂರ್ ಸಮಯದಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್ ಸೇನೆ ಸುಳ್ಳು ಹೇಳಿತ್ತು. ಅಲ್ಲದೇ ಪಾಕಿಸ್ತಾನದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಕೊಚ್ಚಿಕೊಂಡಿತ್ತು. ಅದನ್ನೇ ಕೈ ಸನ್ನೆ ಮೂಲಕ ರೌಫ್ ಮೈದಾನದಲ್ಲಿ ಆಗಾಗ ತೋರಿಸುತ್ತಿದ್ದ.
ಇದನ್ನೂ ಓದಿ:ಉಗ್ರನಂತೆ ಪೋಸ್, ಆಮೇಲೆ ಬಿಲ ಸೇರಿದ​.. ಭಾರತ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?
ಪಾಕ್​ ಬೌಲಿಂಗ್ ದಾಳಿಯನ್ನು ಗಿಲ್, ಅಭಿಷೇಕ್ ಶರ್ಮಾ ಚಿಂದಿ ಉಡಾಯಿಸಿದ್ದರು. ಇವರಿಬ್ಬರ ಆರ್ಭಟ ಅರಗಿಸಿಕೊಳ್ಳಲಾಗದ ಶಾಹೀನ್ ಆಫ್ರಿದಿ, ಶುಭ್​ಮನ್ ಗಿಲ್​​​ ಮೇಲೆ ಸ್ಲೆಡ್ಜಿಂಗ್​ಗೆ ನಿಂತರು. ಕಾಲು ಕೆರೆದುಕೊಂಡು ಬಂದ್ರೆ ನಮ್ಮ ಹುಡುಗ್ರು ಸುಮ್ಮನೇ ಬಿಡ್ತಾರಾ? ಹಾರಿಸ್ ರೌಫ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಶುಭ್​ಮನ್ ಬೌಂಡರಿ ಬಾರಿಸಿದ್ದರು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ಅಭಿಷೇಕ್ ಹಾಗೂ ಹ್ಯಾರಿಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಬಿಸಿಸಿಐ ರೌಫ್ ಹಾಗೂ ಫರ್ಹಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಐಸಿಸಿಗೆ ದೂರು ನೀಡಿತ್ತು.
ಇದೀಗ ತನಿಖೆ ನಡೆಸ್ತಿರುವ ಐಸಿಸಿ ರೌಫ್​ ಅವರಿಗೆ ಮೂರು ಪಂದ್ಯಗಳಿಂದ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳಿಗೂ ವಾರ್ನ್​ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ A ವಿರುದ್ಧ ಗೆದ್ದ ಭಾರತ.. KL ರಾಹುಲ್ 176 ರನ್​​ಗಳ ಅಜೇಯ ಆಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.