/newsfirstlive-kannada/media/media_files/2025/11/02/south-africa-vs-india-2-2025-11-02-23-43-07.jpg)
ODI World Cup final: ಹರ್ಮನ್​ಪ್ರೀತ್ ಕೌರ್​ ನೇತೃತ್ವದ ಟೀಂ ಇಂಡಿಯಾ, ಚೊಚ್ಚಲ ಏಕದಿನ ವಿಶ್ವಕಪ್​​ಗೆ ಮುತ್ತಿಟ್ಟಿದೆ. ಫೈನಲ್​​​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದ್ದು, ದೇಶದಲ್ಲಿ ಹರ್ಷೋದ್ಘಾರ ಮೊಳಗಿದೆ.
ನವಿ ಮುಂಬೈನ ಡಿವೈ ಪಾಟೀಲ್​ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಯಿತು. ಟಾಸ್​​ ಸೋತು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ, ನಿಗದಿತ 50 ಓವರ್​​ನಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ದಕ್ಷಿಣ ಆಫ್ರಿಕಾ ತಂಡದ ವನಿತೆಯರು 45.3 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾದರು.
ಇದನ್ನೂ ಓದಿ: ಕರುಣ್ ನಾಯರ್ ಮತ್ತೆ ಮಿಂಚು.. ಕೇರಳ ವಿರುದ್ಧ ದ್ವಿಶತಕ ಬಾರಿಸಿ ಬಿಸಿಸಿಐಗೆ ಕಪಾಳಮೋಕ್ಷ..!
/filters:format(webp)/newsfirstlive-kannada/media/media_files/2025/11/02/south-africa-vs-india-3-2025-11-02-23-43-45.jpg)
2005ರ ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಫಸ್ಟ್​ ಟೈಂ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ಆಸ್ಟ್ರೇಲಿಯಾ ಎದುರು 98 ರನ್​ಗಳಿಂದ ಸೋತು ರನ್ನರ್​​ಅಪ್​ ಪಟ್ಟಕ್ಕೆ ತೃಪ್ತಿ ಪಟ್ಟುಕೊಂಡಿತ್ತು. 2017ರ ವಿಶ್ವಕಪ್​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿ ಫೈನಲ್​ ತಲುಪಿದ್ದ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲೋ ಫೇವರಿಟ್​ ಎನಿಸಿತ್ತು. ಆದ್ರೆ ಕ್ರಿಕೆಟ್​ ಕಾಶಿ ಲಾರ್ಡ್​ನಲ್ಲಿ ಕ್ಲೋಸ್​ ಮಾರ್ಜಿನ್​ನಲ್ಲಿ ಕೇವಲ 9 ರನ್ ಅಂತರದಲ್ಲಿ ಸೋತು ಹೊರಬಿದ್ದಿತ್ತು. ಈ ಸೋಲು ಟೀಮ್​ ಇಂಡಿಯಾದಲ್ಲಿ ಹೊಸ ಎರಾ ಆರಂಭಕ್ಕೆ ಮುನ್ನುಡಿ ಬರೆದಿತ್ತು. ಅಂದು ತಂಡಕ್ಕೆ ಎಂಟ್ರಿ ಕೊಟ್ಟ ಯುವ ಪಡೆ ಇಂದು ಮತ್ತೊಮ್ಮೆ ತಂಡವನ್ನ ಫೈನಲ್​ಗೆ ಕೊಂಡೊಯ್ದು, ಟ್ರೋಫಿ ಗೆದ್ದು ಸಂಭ್ರಮಿಸಿದೆ.
ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ 5, ಶಫಾಲಿ ವರ್ಮಾ 2 ಹಾಗೂ ಶ್ರೀ ಚರಣಿ ಒಂದು ವಿಕೆಟ್ ಪಡೆದರು. ವಿಶೇಷ ಅಂದ್ರೆ ದೀಪ್ತಿ ಶರ್ಮಾ ಆಲ್​ರೌಂಡರ್ ಆಟವಾಡಿದರು. ಬ್ಯಾಟಿಂಗ್​ನಲ್ಲಿ 58 ರನ್​ಗಳ ಕಾಣಿಕೆ ನೀಡಿದರು.
ಇದನ್ನೂ ಓದಿ: IND vs SA Final : ಶಫಾಲಿ ಸ್ಫೋಟಕ ಬ್ಯಾಟಿಂಗ್.. ದಕ್ಷಿಣ ಆಫ್ರಿಕಾಗೆ ಸವಾಲಿನ ಟಾರ್ಗೆಟ್​..!
/filters:format(webp)/newsfirstlive-kannada/media/media_files/2025/11/02/south-africa-vs-india-2025-11-02-23-44-02.jpg)
ಕೋಟ್ಯಾಂತರ ಅಭಿಮಾನಿಗಳ ಸಂಭ್ರಮ
ಟೀಂ ಇಂಡಿಯಾ ವಿಶ್ವಕಪ್​ಗೆ ಮುತ್ತಿಡುತ್ತಿದ್ದಂತೆಯೇ ಕೊಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ದೇಶದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕ್ರಿಕೆಟ್ ಲೋಕದ ದಿಗ್ಗಜರು ಭಾರತ ವನಿತೆಯರ ತಂಡಕ್ಕೆ ಶುಭ ಹಾರೈಸುತ್ತಿದ್ದಾರೆ. ಟೂರ್ನಿ ಆರಂಭವಾದ ದಿನದಿಂದಲೂ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿತ್ತು. ಅಂತೆಯೇ ಗೆಲ್ಲುತ್ತ ಫೈನಲ್ ವರೆಗೂ ಪ್ರವೇಶ ಮಾಡಿತ್ತು. ಕೊನೆಯ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿ, ವಿಜಯೋತ್ಸವ ಆಚರಿಸಿದೆ.
ಇದನ್ನೂ ಓದಿ: ಬಿಗ್​ಬಾಸ್ ಮನೆಯಿಂದ ಮಲ್ಲಮ್ಮ ಔಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us