/newsfirstlive-kannada/media/media_files/2025/09/16/suryakumar-yadav-and-tilak-varma-2025-09-16-09-54-26.jpg)
ಏಷ್ಯಾಕಪ್ ಟೂರ್ನಿಯ ಮತ್ತೊಂದು ಕದನಕ್ಕೆ ವೇದಿಕೆ ಸಜ್ಜಾಗಿದೆ. ಓಮನ್ ಎದುರು ತೊಡೆತಟ್ಟಲು ಸೂರ್ಯಕುಮಾರ್ ಸೈನ್ಯ ರೆಡಿಯಾಗಿದೆ. ದುಬೈ ಅಂಗಳದಲ್ಲಿ ಸತತ 2 ಗೆಲುವು ಸಾಧಿಸಿರುವ ಅಬುಧಾಬಿಯಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಮೆನ್ ಇನ್ ಬ್ಲೂ ಪಡೆಯಲ್ಲಿ ಯಾವೆಲ್ಲಾ ಬದಲಾವಣೆಯಾಗಲಿವೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಇದನ್ನೂ ಓದಿ:WCPL ಟ್ರೋಫಿಗೆ ಮುತ್ತಿಟ್ಟ ಶ್ರೇಯಂಕ ಪಾಟೀಲ್ ಟೀಂ -ಹ್ಯಾಟ್ರಿಕ್ ಕಪ್ ಹೊಡೆದ ರಾಯಲ್ಸ್..!
ಏಷ್ಯಾಕಪ್ ಟೂರ್ನಿಯ 3ನೇ ಕದನಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಯುಎಇ ಹಾಗೂ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿರೋ ಇಂಡಿಯನ್ ಟೀಮ್ ಇದೀಗ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ. ದುಬೈ ಅಂಗಳದಲ್ಲಿ ಆಡಿದ ಎರಡೂ ಪಂದ್ಯ ಗೆದ್ದು ಬೀಗಿರೋ ಇಂಡಿಯನ್ ಟೈಗರ್ಸ್, ಇದೀಗ ಅಬುಧಾಬಿಯ ಶೇಕ್ ಝೈದ್ ಸ್ಟೇಡಿಯಂನಲ್ಲಿ ಓಮನ್ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ.
ಸಂಜು ಸ್ಯಾಮ್ಸನ್ಗೆ ಸಿಗುತ್ತಾ ಪ್ರಮೋಶನ್?
ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಈಗಾಗಲೇ ಸೂಪರ್-4 ಹಂತಕ್ಕೆ ಕ್ವಾಲಿಫೈ ಆಗಿದೆ. ಆಡಿದ 2 ಪಂದ್ಯಗಳಲ್ಲಿ ಗೆದ್ದು ಬೀಗಿರೋದ್ರಿಂದ ಇಂದಿನ ಪಂದ್ಯದಲ್ಲಿ ಪ್ರಯೋಗಗಳಾಗೋ ನಿರೀಕ್ಷೆಯಿದೆ. ಕಳೆದ 2 ಪಂದ್ಯಗಳಿಂದ ಮಿಡಲ್ ಆರ್ಡರ್ಗೆ ಸೀಮಿತವಾಗಿರೋ ಸಂಜು ಸ್ಯಾಮ್ಸನ್ ಪ್ಯಾಡ್ ಕಟ್ಟಿ ಅಂಗಳಕ್ಕಿಳಿಯೋ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಓಪನರ್ ಆಗಿ ಪ್ರಮೋಷನ್ ಸಿಗೋ ಸಾಧ್ಯತೆಯಿದೆ.
ಓಮನ್ ಎದುರು ಲೋವರ್ ಆರ್ಡರ್ ಸ್ಟ್ರೆಂಥ್ ‘ಟೆಸ್ಟ್’?
ಆಡಿದ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಟಾಪ್ ಹಾಗೂ ಮಿಡಲ್ ಆರ್ಡರ್ ಬ್ಯಾಟರ್ಗಳೇ ಮ್ಯಾಚ್ ಮುಗಿಸಿದ್ದಾರೆ. ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳಿಗೆ ಅವಕಾಶ ಸಿಕ್ಕಿಲ್ಲ. ಸುದೀರ್ಘ ಅಂತರದ ಬಳಿಕ ಮೈದಾನಕ್ಕೆ ಕಮ್ಬ್ಯಾಕ್ ಮಾಡಿದ್ರೂ, ಬ್ಯಾಟಿಂಗ್ ಮಾಡಿಲ್ಲ. ಭಾನುವಾರ ಮತ್ತೊಂದು ಮಹತ್ವದ ಪಂದ್ಯ ಇರೋದ್ರಿಂದ ಇಂದಿನ ಪಂದ್ಯದಲ್ಲಿ ಲೋವರ್ ಬ್ಯಾಟಿಂಗ್ ಸ್ಟ್ರೆಂಥ್ನ ಟೆಸ್ಟ್ ನಡೆಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಇದನ್ನೂ ಓದಿ:MS ಧೋನಿ ಕ್ಯಾಪ್ಟನ್ಸಿಯಲ್ಲಿ ಅನ್ಯಾಯ..ಅನ್ಯಾಯ.. ಹುಕ್ಕಾ ಗ್ಯಾಂಗ್ಗೆ ತಂಡದಲ್ಲಿ ಸ್ಥಾನ..!
ದುಬೈನ ಸ್ಪಿನ್ ಫ್ರೆಂಡ್ಲಿ ಕಂಡಿಷನ್ನಲ್ಲಿ ಟೀಮ್ ಇಂಡಿಯಾ ಮೂವರು ಸ್ಪಿನ್ನರ್ ಹಾಗೂ ಒಬ್ಬ ಸ್ಪೆಷಲಿಸ್ಟ್ ವೇಗಿ, ಒಬ್ಬ ಪೇಸ್ ಆಲ್ರೌಂಡರ್ ಕಾಂಬಿನೇಷನ್ನಲ್ಲಿ ಕಣಕ್ಕಿಳಿದು ಸಕ್ಸಸ್ ಕಂಡಿತ್ತು. ಅಬುಧಾಬುಯಿಯ ಕಂಡಿಷನ್ಸ್ ಬೇರೆಯಾಗಿರೋದ್ರಿಂದ ಬೌಲಿಂಗ್ ಕಾಂಬಿನೇಷನ್ನಲ್ಲಿ ಬದಲಾವಣೆಯಾಗೋ ಸಾಧ್ಯತೆಯಿದೆ. ಇಬ್ಬರು ಸ್ಪೆಷಲಿಸ್ಟ್ ವೇಗಿಗಳೊಂದಿಗೆ ಕಣಕ್ಕಿಳಿಯಿದ್ರೆ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಪೈಕಿ ಯಾರು ಡ್ರಾಪ್ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಆರ್ಷ್ದೀಪ್ಗೆ ಚಾನ್ಸ್?
ವರ್ಕ್ಲೋಡ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ಇಂದಿನ ಪಂದ್ಯದಿಂದ ವೇಗಿ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಮ್ಯಾನೇಜ್ಮೆಂಟ್ ಮುಂದಾಗಿದೆ. ಮೊದಲ 2 ಪಂದ್ಯಗಳಲ್ಲಿ ಬೆಂಚ್ ಕಾದಿರೋ ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಪ್ಲೇಯಿಂಗ್ ಎಂಟ್ರಿ ಕೊಡೋದು ಬಹುತೇಕ ಖಚಿತವಾಗಿದೆ. ಇಬ್ಬರೂ ವೇಗಿಗಳೊಂದಿಗೆ ಕಣಕ್ಕಿಳಿಯೋದಾದ್ರೆ, ಹರ್ಷಿತ್ ರಾಣಾ ಕೂಡ ಅಬಿಧಾಬಿಯಲ್ಲಿ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.
ಇದನ್ನೂ ಓದಿ:ಕಿಂಗ್ ಕೊಹ್ಲಿನ ನೆನಪಿಸುತ್ತಿರುವ T20 ಪಂದ್ಯಗಳು.. ಟೀಮ್ ಇಂಡಿಯಾಗೆ ಬೇಕಾಗಿರೋದು ಏನೇನು?
ಓಮನ್ ವಿರುದ್ಧದ ಕದನ ಔಪಚಾರಿಕವಾಗಿರೋದ್ರಿಂದ ಟೀಮ್ ಇಂಡಿಯಾದಲ್ಲಿ ಹಲವಾರು ಬದಲಾವಣೆಗಳ ನಿರೀಕ್ಷೆಯಿದೆ. ಹೆಡ್ಕೋಚ್ ಗೌತಮ್ ಗಂಭೀರ್ ವಿನ್ನಿಂಗ್ ಕಾಂಬಿನೇಷನ್ ಡಿಸ್ಟರ್ಬ್ ಮಾಡಿದ ಇತಿಹಾಸ ತೀರಾ ಕಡಿಮೆಯಿದೆ. ಹೀಗಾಗಿ ಅಬುಧಾಬಿ ಕದನದಲ್ಲಿ ಪ್ಲೇಯಿಂಗ್ ಇಲೆವೆನ್ ಹಾಗೂ ಬಾರ್ಡರ್ ಆರ್ಡರ್ನಲ್ಲಿ ಬದಲಾವಣೆಗೆ ಮುಂದಾಗ್ತಾರಾ? ಅಥವಾ ಸೇಮ್ ಕಾಂಬಿನೇಷನ್ನೊಂದಿಗೆ ಮುಂದುವರೀತಾರಾ? ಕಾದು ನೋಡಬೇಕಿದೆ.
ಇದನ್ನೂ ಓದಿ:6, 6, 6, 6, 6; ಬೆಚ್ಚಿ ಬಿದ್ದ ಬೌಲರ್.. ಸತತ 5 ಸಿಕ್ಸರ್ ಸಿಡಿಸಿದ ಅಫ್ಘಾನ್ ಆಲ್ರೌಂಡರ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ