Advertisment

ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ.. KL ರಾಹುಲ್ ಹೊಸ ದಾಖಲೆ

ಸಿರಾಜ್, ಬೂಮ್ರಾ ಬೊಂಬಾಟ್ ಬೌಲಿಂಗ್. ಚೈನಾಮೆನ್ ಕುಲ್ದೀಪ್​ ಸ್ಪಿನ್​ಗೆ, ವೆಸ್ಟ್ ಇಂಡೀಸ್ ಸ್ಟನ್. ಟೀಮ್ ಇಂಡಿಯಾ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ಅಲ್ಪ ಮೊತ್ತಕ್ಕೆ ಆಲೌಟ್. ಮೊದಲ ಇನ್ನಿಂಗ್ಸ್​ನಲ್ಲಿ ಬೃಹತ್ ಮೊತ್ತದತ್ತ ಗಿಲ್ ಪಡೆ. ಅಹ್ಮದಾಬಾದ್​​ ಟೆಸ್ಟ್​ ಪಂದ್ಯದ ಮೊದಲ ದಿನದ ಹೈಲೈಟ್ಸ್ ಹೇಗಿತ್ತು?

author-image
Ganesh Kerekuli
KL Rahul
Advertisment

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ, ವೆಸ್ಟ್ ಇಂಡೀಸ್​​​​​​​​ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ತಂಡಕ್ಕೆ, ದೊಡ್ಡ ಆಘಾತ ಎದುರಾಯ್ತು.

Advertisment

ವಿಂಡೀಸ್ ಟಾಪ್ ಆರ್ಡರ್ ಉಡೀಸ್

ವಿಂಡೀಸ್ ಕೇವಲ 50 ರನ್​ಗಳಿಸುವಷ್ಟರಲ್ಲೇ ಪ್ರಮುಖ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ತ್ಯಾಗಿನರೈನ್ ಚಂದ್ರಪಾಲ್, ಬ್ರೆಂಡನ್ ಕಿಂಗ್, ಅಲಿಕ್ ಅಥಾನಾಜೆಗೆ ವೇಗಿ ಮೊಹಮ್ಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದ್ರೆ, ಜಸ್ಪ್ರೀತ್ ಬೂಮ್ರಾಗೆ ಜಾನ್ ಕ್ಯಾಂಬೆಲ್ ವಿಕೆಟ್ ಒಪ್ಪಿಸಿದ್ರು.

ಇದನ್ನೂ ಓದಿ:ಪಂತ್, ಪಾಂಡ್ಯ ಇರಲ್ಲ! ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಾರಿಗೆಲ್ಲ ಅವಕಾಶ..?

5ನೇ ವಿಕೆಟ್​​ಗೆ ನಾಯಕ ರೊಸ್ಟನ್ ಚೇಸ್ ಮತ್ತು ಶಾಯ್ ಹೋಪ್, ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ರು. ಈ ನಡುವೆ ದಾಳಿಗಿಳಿದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್, ಹೋಪ್​​ ವಿಕೆಟ್ ಪಡೆದು ಟೀಮ್ ಇಂಡಿಯಾಕ್ಕೆ ಬ್ರೇಕ್ ನೀಡಿದ್ರು.​​ ಚೇಸ್ ಕೂಡ ಹೋಪ್ ಹಿಂದೆಯೇ ಹೆಜ್ಜೆ ಹಾಕಿದ್ರು. ಖಾರಿ ಪಿಯರೆಗೆ, ಆಫ್ ಸ್ಪಿನ್ನರ್ ವಾಶಿಂಗ್ಟನ್ ಸುಂದರ್, ಪೆವಿಲಿಯನ್ ದಾರಿ ತೋರಿದ್ರು. 

Advertisment

162 ರನ್​ಗಳಿಗೆ ವೆಸ್ಟ್ ಇಂಡೀಸ್ ಆಲೌಟ್..!

ಜಸ್ಟಿನ್ ಗ್ರೀವ್ಸ್, ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ರು. 32 ರನ್​ಗಳಿಸಿದ ಗ್ರೀವ್ಸ್​, ವೇಗಿ ಬೂಮ್ರಾ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಇನ್ನು ಟೇಲೆಂಡರ್​ಗಳಾದ ಜೋಹಾನ್ ಲೇನ್ ಮತ್ತು ಜೋಮೆಲ್ ವಾರಿಕನ್, ಸಿಂಗಲ್ ಡಿಜಿಟ್​​ ರನ್​ಗಳಿಸುವಷ್ಟರಲ್ಲೇ ಸುಸ್ತಾದ್ರು. ಅಂತಿಮವಾಗಿ ವೆಸ್ಟ್ ಇಂಡೀಸ್, ಕೇವಲ 162 ರನ್​ಗಳಿಗೆ ಆಲೌಟ್ ಆಯ್ತು. ಟೀಮ್ ಇಂಡಿಯಾದ ಪರ ಸಿರಾಜ್ 4 ವಿಕೆಟ್ ಪಡೆದ್ರೆ, ಬೂಮ್ರಾ 3 ವಿಕೆಟ್ ಮತ್ತು ಕುಲ್ದೀಪ್ 2 ವಿಕೆಟ್ ಪಡೆದು ಮಿಂಚಿದ್ರು.

ಟೀಮ್ ಇಂಡಿಯಾಗೆ ಮಳೆ ಕಾಟ

ವೆಸ್ಟ್ ಇಂಡೀಸ್​​​​​​​​​ ಸವಾಲಿಗೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ, ಆರಂಭದಿಂದಲೇ ತಾಳ್ಮೆ ಮತ್ತು ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಯ್ತು. ಆರಂಭಿಕರಾದ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಕ್ರೀಸ್​ನಲ್ಲಿ ಸೆಟಲ್ ಆಗ್ತಿದಂತೆ,  ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತು. ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು.

ಇದನ್ನೂ ಓದಿ: ವಿಂಡೀಸ್​ಗೆ ಸಿರಾಜ್ ಆಘಾತ.. ಸಂಕಷ್ಟಕ್ಕೆ ಸಿಲುಕಿದ ಎದುರಾಳಿ 150/8

ಮಳೆಯ ನಂತರ ಇನ್ನಿಂಗ್ಸ್​ ಶುರುಮಾಡಿದ ಜೈಸ್ವಾಲ್, ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ, ವಿಂಡೀಸ್ ಬೌಲರ್​​ಗಳ ಮೇಲೆ ಸವಾರಿ ನಡೆಸಿದ್ರು. 36 ರನ್​ಗಳಿಸಿದಾಗ ಜೈಸ್ವಾಲ್, ಜೇಡನ್ ಸೀಲ್ಸ್ ಬೌಲಿಂಗ್​ನಲ್ಲಿ ಕಟ್ ಮಾಡಲು ಹೋಗಿ ವಿಕೆಟ್ ​​ಕೀಪರ್​ಗೆ ಕ್ಯಾಚ್ ನೀಡಿದ್ರು. ಸಾಯಿ ಸುದರ್ಶನ ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 7 ರನ್​ಗಳಿಸಿದ ಸುದರ್ಶನ್, ಚೇಸ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

Advertisment

ಬಿಗ್ ಸ್ಕೋರ್​ನತ್ತ ಟೀಮ್ ಇಂಡಿಯಾ..!

ಜೈಸ್ವಾಲ್ ಜೊತೆ ಅರ್ಧಶತಕದ ಕಾಣಿಕೆ ಮತ್ತು ಶುಭ್ಮನ್ ಗಿಲ್ ಜೊತೆಗೂಡಿ ಅಜೇಯ 31 ರನ್​​ ಪೇರಿಸಿದ್ದ ಕೆ.ಎಲ್.ರಾಹುಲ್, ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. ಟೆಸ್ಟ್ ಕ್ರಿಕೆಟ್​ನಲ್ಲಿ ರಾಹುಲ್, 20ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು.

ಇದನ್ನೂ ಓದಿ: ವಿಂಡೀಸ್ ಫಸ್ಟ್ ಬ್ಯಾಟಿಂಗ್.. ಬಲಿಷ್ಠ ತಂಡ ಕಣಕ್ಕಿಳಿಸಿದ ಭಾರತ..!

ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ, 2 ವಿಕೆಟ್ ನಷ್ಟಕ್ಕೆ 121 ರನ್​ಗಳಿಸಿತು. ರಾಹುಲ್ ಅಜೇಯ 53 ರನ್​ಗಳಿಸಿದ್ರೆ, ನಾಯಕ ಶುಭ್ಮನ್ ಗಿಲ್ ಅಜೇಯ 18 ರನ್​​​ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 41 ರನ್​ಗಳ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಇಂದು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
India vs West Indies IND vs WI
Advertisment
Advertisment
Advertisment