Advertisment

ಪಂತ್, ಪಾಂಡ್ಯ ಇರಲ್ಲ! ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಾರಿಗೆಲ್ಲ ಅವಕಾಶ..?

ಏಷ್ಯಾಕಪ್ ಗೆದ್ದಾಗಿರುವ ಟೀಮ್ ಇಂಡಿಯಾ, ಈಗ ಟೆಸ್ಟ್​ ಅಖಾಡಕ್ಕಿಳಿದಿದೆ. ಈ ನಡುವೆಯೇ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಕಟ್ಟೋಕೆ ತೆರೆ ಹಿಂದೆಯೇ ಕಸರತ್ತು ನಡೆಸ್ತಿದೆ. ಶ್ರೀಘ್ರದಲ್ಲೇ ಏಕದಿನ ಹಾಗೂ ಟಿ20 ಸರಣಿಗೆ ತಂಡ ಪ್ರಕಟಿಸಲಿರುವ ಸೆಲೆಕ್ಷನ್​​​ ಕಮಿಟಿ, ರೋಹಿತ್​​​​, ಕೊಹ್ಲಿಗೆ ಚಾನ್ಸ್ ನೀಡ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡ್ತಿದೆ.

author-image
Ganesh Kerekuli
Virat kohli Rohit sharma

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ Photograph: (ಬಿಸಿಸಿಐ)

Advertisment

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​. ಇದೇ ಫೈನಲ್​​ ಪಂದ್ಯವೇ ಕೊನೆ. ಈ ಬಳಿಕ ಬರೋಬ್ಬರಿ 6 ತಿಂಗಳಿಂದ ಏಕದಿನ ಸರಣಿಯನ್ನೇ ಆಡದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಎದುರಿನ ಸರಣಿಯೊಂದಿಗೆ ಏಕದಿನ ಕ್ರಿಕೆಟ್​​ಗೆ ಕಮ್​ಬ್ಯಾಕ್ ಮಾಡ್ತಿದೆ. ಈ ಪ್ರತಿಷ್ಠತ್ಮಾಕ ಏಕದಿನ ಸರಣಿಗೆ ಇನ್ನಷ್ಟೇ ಟೀಮ್ ಇಂಡಿಯಾವನ್ನ ಪ್ರಕಟಿಸಬೇಕಿದ್ದು, ಇದಕ್ಕಾಗಿ ತೆರೆ ಹಿಂದೆಯೇ ಸೆಲೆಕ್ಷನ್ ಕಮಿಟಿ ಲೆಕ್ಕಚಾರ ಹಾಕ್ತಿದೆ. ಶೀಘ್ರದಲ್ಲೇ ತಂಡವನ್ನು ಅನೌನ್ಸ್​ ಮಾಡಲಿರುವ ಈ ಏಕದಿನ ಸರಣಿಯಲ್ಲಿ ಯಾರಿಗೆಲ್ಲಾ ಚಾನ್ಸ್​ ಸಿಗುತ್ತೆ ಅನ್ನೋದು ಭಾರೀ ಕ್ಯೂರಿಯಾಸಿಟಿ ಹುಟ್ಟುಹಾಕಿದೆ.  

Advertisment

ಇದನ್ನೂ ಓದಿ:ವಿಂಡೀಸ್​ಗೆ ಸಿರಾಜ್ ಆಘಾತ.. ಸಂಕಷ್ಟಕ್ಕೆ ಸಿಲುಕಿದ ಎದುರಾಳಿ 150/8

ಭಾರತೀಯ ಕ್ರಿಕೆಟ್ ಲೋಕದ ಬಿಗ್ಗೆಸ್ಟ್ ಕ್ವಷನ್. ರೋಹಿತ್ ಶರ್ಮ ಮತ್ತು  ವಿರಾಟ್ ಕೊಹ್ಲಿ ಭವಿಷ್ಯ. ಈಗಾಗಲೇ ಟಿ20, ಟೆಸ್ಟ್​ನಿಂದ ದೂರವಾಗಿರುವ ರೋಹಿತ್ ಮತ್ತು ಕೊಹ್ಲಿ, ಏಕದಿನ ತಂಡದಿಂದಲೈ ದೂರವಾಗುವ ಮಾತುಗಳಿವೆ. ಆಸ್ಟ್ರೇಲಿಯಾ ಸರಣಿಯಿಂದಲೇ ಮಿಷನ್-2027 ಏಕದಿನ ವಿಶ್ವಕಪ್​​ಗೆ ಚಾಲನೆ ನೀಡಲಿರುವ ಬಿಸಿಸಿಐ, ಯುವ ತಂಡ ಕಟ್ಟುವ ಲೆಕ್ಕಚಾರ ಇದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ಕೊಹ್ಲಿಯ ಆಯ್ಕೆ ಪ್ರಶ್ನಾರ್ಥಕ ಚಿನ್ಹೆಯಾಗಿದೆ. ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಮತ್ತು ಕೊಹ್ಲಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್. ರೋಹಿತ್ ಶರ್ಮಾ ನಾಯಕತ್ವದಲ್ಲೇ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿಮಾನವೇರಲಿದೆ.

ರೋಹಿತ್ ಶರ್ಮಾ ನಾಯಕತ್ವದ ತಂಡದಲ್ಲಿ ಶುಭ್​ಮನ್ ಗಿಲ್, ಉಪ ನಾಯಕನಾಗಿ ಕಾಣಿಸಿಕೊಳ್ಳಲಿದ್ರೆ, ಯಶಸ್ವಿ ಜೈಸ್ವಾಲ್ ಬ್ಯಾಕ್ ಆಪ್ ಓಪನರ್​ ಆಗಿ ಆಯ್ಕೆಯಾಗಲಿದ್ದಾರೆ. ವಿಕೆಟ್ ಕೀಪರ್ ಆಗಿ ಕೆ.ಎಲ್.ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಇಂಜುರಿಯಾಗಿರುವ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸಕ್ಕೂ ಅನುಮಾನವಾಗಿದೆ. ಹೀಗಾಗಿ ಪಂತ್ ಬದಲಿ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡೋ ಚಾನ್ಸ್​ ಇದೆ. ಪಾಂಡ್ಯ ಇಂಜುರಿ ನಿತಿಶ್ ರೆಡ್ಡಿಗೆ ಅದೃಷ್ಟ ಒಲಿಯೋದು ಕನ್ಫರ್ಮ್..

ಇದನ್ನೂ ಓದಿ: ವಿಂಡೀಸ್ ಫಸ್ಟ್ ಬ್ಯಾಟಿಂಗ್.. ಬಲಿಷ್ಠ ತಂಡ ಕಣಕ್ಕಿಳಿಸಿದ ಭಾರತ..!

ಸ್ಪಿನ್ ಆಲ್​ರೌಂಡರ್​​ಗಳ ಕೋಟಾದಲ್ಲಿ ರವೀಂದ್ರ ಜಡೇಜಾ ಸ್ಥಾನ ಕನ್ಫರ್ಮ್. ಇನ್ನೊಂದು ಸ್ಥಾನಕ್ಕಾಗಿ ಸುಂದರ್ ಹಾಗೂ ವಾಷಿಗ್ಟಂನ್ ಸುಂದರ್ ನಡುವೆ ನೇರ ಸ್ಪರ್ಧೆ ಇರಲಿದ್ದು, ಇಬ್ಬರಲ್ಲಿ ಯಾರ ಮೇಲೆ ಸೆಲೆಕ್ಷನ್ ಕಮಿಟಿ ಕೃಪೆ ತೋರುವರು ಅನ್ನೋದು ಕಾದುನೋಡಬೇಕಿದೆ. ಸ್ಪೆಷಲಿಸ್ಟ್ ಸ್ಪಿನ್ನರ್ ಕೋಟಾದಲ್ಲಿ ಕುಲ್​ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ನಡುವೆ ನೇರ ಫೈಟ್ ಇರಲಿದೆ.

Advertisment

ಶಮಿ ಆಡ್ತಾರಾ? ಸಿರಾಜ್ ಕಮ್​ಬ್ಯಾಕ್?

ಏಕದಿನ ಸರಣಿಗೆ ಜಸ್​ಪ್ರೀತ್ ಬೂಮ್ರಾ ರೆಸ್ಟ್ ಪಡೆಯೀ ಸಾಧ್ಯತೆ ಇದೆ. ವರ್ಕ್​ಲೋಡ್​ ನೆಪದಲ್ಲಿ ಬೂಮ್ರಾ ರೆಸ್ಟ್ ಪಡೆದ್ರೆ, ಮೊಹಮ್ಮದ್ ಶಮಿ ಅವಕಾಶ ಗಿಟ್ಟಿಸಲಿದ್ದಾರೆ. ಶಮಿ ಮತ್ತಷ್ಟು ಪಂದ್ಯಗಳನ್ನಾಡಬೇಕು ಎಂದಿರುವ ಅಜಿತ್ ಅಗರ್ಕರ್​, ಚಾನ್ಸ್ ಕೊಡ್ತಾರಾ ಅನ್ನೋದೇ ಡೌಟ್. ಇನ್ನುಳಿಂದತೆ ಅರ್ಷ್​ದೀಪ್ ಕಾಣಿಸಿಕೊಳ್ಳುವುದು ಫಿಕ್ಸ್​.  ಚಾಂಪಿಯನ್ಸ್​ ಟ್ರೋಫಿಯಲ್ಲಿ ಕಾಣಿಸಿಕೊಳ್ಳದ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಸರಣಿಗೆ ಕಮ್​ಬ್ಯಾಕ್ ಮಾಡೋ ಚಾನ್ಸ್ ತಳ್ಳಿಹಾಕುವಂತಿಲ್ಲ.

5 ಪಂದ್ಯಗಳ ಟಿ20 ಸರಣಿಗೆ ಏಷ್ಯಾಕಪ್ ತಂಡವೇ ಫಿಕ್ಸ್​.. 

ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ತಂಡಕ್ಕೆ ಸೇಮ್, ಏಷ್ಯಾಕಪ್ ತಂಡವೇ ಪ್ರಕಟಿಸೋದು ಕನ್ಫರ್ಮ್​. ಯುಎಇ ಕಂಡೀಷನ್ಸ್​ಗೆ ಹೋಲಿಕೆ ಮಾಡಿದ್ರೆ, ಆಸ್ಟ್ರೇಲಿಯಾದ ಪಿಚ್ ಕಂಡೀಷನ್ಸ್​ಗೆ ವಿಭಿನ್ನ. ಹೀಗಾಗಿ ಎರಡ್ಮೂರು ಬದಲಾವಣೆಯಾದರೂ ಅಚ್ಚರಿ ಇಲ್ಲ. ಇಲ್ಲ ಏಷ್ಯಾಕಪ್ ತಂಡವೇ ಕಾಂಗರೂ ಬೇಟೆಗೆ ಇಳಿಯೋದು ಫಿಕ್ಸ್. ಸೆಲೆಕ್ಷನ್ ಕಮಿಟಿ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ್ರೆ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Virat Kohli Rohit Sharma-Virat Kohli Rohith Sharma
Advertisment
Advertisment
Advertisment