/newsfirstlive-kannada/media/media_files/2025/10/04/kl-rahul-3-2025-10-04-07-20-40.jpg)
ಅಹ್ಮದಾಬಾದ್​​ ಟೆಸ್ಟ್ ಪಂದ್ಯದ ಎರಡನೇ ದಿನ, ಟೀಮ್ ಇಂಡಿಯಾ ಬ್ಯಾಟರ್ಸ್​ ಘರ್ಜಿಸಿದ್ದಾರೆ. ಕೆ.ಎಲ್.ರಾಹುಲ್, ಧೃವ್ ಜುರೆಲ್ ಮತ್ತು ಲೋಕಲ್ ಬಾಯ್ ರವೀಂದ್ರ ಜಡೇಜಾರ ಆಕರ್ಷಕ ಶತಕಗಳ ನೆರವಿನಿಂದ, ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆಹಾಕಿದೆ. ವಿಂಡೀಸ್ ಎದುರು ಭಾರೀ ಮುನ್ನಡೆ ಸಾಧಿಸಿರುವ ಗಿಲ್ ಪಡೆ, ಇಂದೇ ವಿಂಡೀಸ್ ಉಡೀಸ್ ಮಾಡೋ ತವಕದಲ್ಲಿದೆ.
121 ರನ್​​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಕೆ.ಎಲ್.ರಾಹುಲ್ ಮತ್ತು ನಾಯಕ ಶುಭ್ಮನ್ ಗಿಲ್, ನಮೋ ಮೈದಾನದಲ್ಲಿ ವಿಂಡೀಸ್ ಬೌಲರ್​ಗಳನ್ನ ಬೆಂಡೆತ್ತಿದರು. 18 ರನ್​​​​ಗಳಿಸಿ ಕ್ರಿಸ್​​ ಕಾಯ್ದುಕೊಂಡಿದ್ದ ಶುಭ್ಮನ್ ಗಿಲ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರು. ಸಿಂಗಲ್ಸ್, ಡಬಲ್ಸ್​ ಓಡುತ್ತಾ ಸ್ಟ್ರೈಕ್​​​ ರೊಟೇಟ್ ಮಾಡ್ತಿದ್ದ ಗಿಲ್, 5 ಬೌಂಡರಿಗಳ ನೆರವಿನಿಂದ ಆಕರ್ಷಕ ಅರ್ಧಶತಕ ಸಿಡಿಸಿದ್ರು. ರಾಹುಲ್ ಜೊತೆ 3ನೇ ವಿಕೆಟ್​​​ಗೆ 98 ರನ್​ಗಳ ಜೊತೆಯಾಟವಾಡಿದ ಗಿಲ್, 50 ರನ್​ ಗಳಿಸಿ ಚೇಸ್ ಬೌಲಿಂಗ್​ನಲ್ಲಿ ಔಟಾದ್ರು.
ಇದನ್ನೂ ಓದಿ:ಸಾನಿಯಾ ಮಿರ್ಜಾ ಮಾಜಿ ಪತಿ ಶೋಯಿಬ್ ಮಲ್ಲಿಕ್‌ರಿಂದ ಈಗ ಸಾನಾ ಜಾವೇದ್‌ಗೂ ಡಿವೋರ್ಸ್!
ಕನ್ನಡಿಗ ಕೆ.ಎಲ್.ರಾಹುಲ್, ನಮೋ ಅಂಗಳದಲ್ಲಿ ದ ಬೆಸ್ಟ್ ಇನ್ನಿಂಗ್ಸ್ ಆಡಿದ್ರು. ತಾಳ್ಮೆ, ಎಚ್ಚರಿಕೆ ಮತ್ತು ಅದ್ಭುತ ಟೆಕ್ನಿಕ್​​​​​ ಪ್ರದರ್ಶಿಸಿದ ರಾಹುಲ್, ತವರಿನಲ್ಲಿ 9 ವರ್ಷಗಳ ಬಳಿಕ ಟೆಸ್ಟ್ ಶತಕ ಸಿಡಿಸಿ, ಸಂಭ್ರಮಿಸಿಕೊಂಡರು. ಲಂಚ್ ಬ್ರೇಕ್ ನಂತರ ಇನ್ನಿಂಗ್ಸ್ ಆರಂಭಿಸಿದ ರಾಹುಲ್, ಮೊದಲ ಓವರ್​ನಲ್ಲೇ ಎಡಗೈ ಸ್ಪಿನ್ನರ್ ವಾರಿಕಾನ್​​​​​​​​​​​​​​ಗೆ ವಿಕೆಟ್ ಒಪ್ಪಿಸಿದ್ರು. 100 ರನ್​​ಗಳಿಸಿ ಹೋರಾಟ ಮುಗಿಸಿದ್ರು.
5ನೇ ವಿಕೆಟ್​​ಗೆ ಧೃವ್ ಜುರೆಲ್ ಮತ್ತು ರವೀಂದ್ರ ಜಡೇಜಾ, ದ್ವಿಶತಕದ ಜೊತೆಯಾಟ ಆಡಿದ್ರು. 331 ಎಸೆತಗಳಲ್ಲಿ 206 ರನ್​ಗಳಿಸಿದ ಈ ಜೋಡಿ, ವಿಂಡೀಸ್ ಬೌಲರ್​ಗಳನ್ನ ಕಾಡಿದ್ರು. ಮತ್ತೊಂದೆಡೆ ಧೃವ್ ಜುರೆಲ್, ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ, ತನ್ನದೇ ಸ್ಟೈಲ್​​ನಲ್ಲಿ ಸೆಲೆಬ್ರೇಟ್ ಮಾಡಿಕೊಂಡರು.
ಲೋಕಲ್ ಬಾಯ್ ಜಡೇಜಾ ಸಹ, ತಾನೇನು ಕಮ್ಮಿ ಇಲ್ಲ ಅಂತ ಶತಕ ಬಾರಿಸಿ, ತನ್ನ ಕತ್ತಿವರೆಸೆ ತೋರಿಸಿದ್ರು. 15 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 125 ರನ್​​​ ಕಲೆಹಾಕಿದ ಜುರೆಲ್, ವಿಕೆಟ್ ಕೀಪರ್​​​​ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಅಂತಿಮವಾಗಿ ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ, 5 ವಿಕೆಟ್ ಕಳೆದುಕೊಂಡು 448 ರನ್​ಗಳಿಸಿತು. ರವೀಂದ್ರ ಜಡೇಜಾ 104 ರನ್​ಗಳಿಸಿ, ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ 286 ರನ್​ಗಳ ಮುನ್ನಡೆ ಸಾಧಿಸಿ, ಅಹ್ಮದಾಬಾದ್ ಟೆಸ್ಟ್ ಪಂದ್ಯವನ್ನ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ.
ಇದನ್ನೂ ಓದಿ:KL ರಾಹುಲ್ ಬೆನ್ನಲ್ಲೇ ಧೃವ್ ಜುರೇಲ್ ಸೆಂಚುರಿ.. ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ ಯಂಗ್ ಬ್ಯಾಟರ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ