/newsfirstlive-kannada/media/media_files/2025/10/13/india-vs-west-indies-2025-10-13-14-35-36.jpg)
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್​ ರೋಚಕ ಘಟ್ಟ ತಲುಪಿದೆ. ನಿನ್ನೆಯಿಂದ ದಿಟ್ಟ ಉತ್ತರ ನೀಡುತ್ತಿದ್ದ ವಿಂಡೀಸ್ ಬ್ಯಾಟರ್​​, ಮಧ್ಯಾಹ್ನದ ವೇಳೆಗೆ ಕುಲ್ದೀಪ್ ಹಾಗೂ ಬೂಮ್ರಾ ದಾಳಿಗೆ ಉಡೀಸ್ ಆಗಿದ್ದಾರೆ.
ಇದನ್ನೂ ಓದಿ: RO-KO ವರ್ಸಸ್ ಗಂಭೀರ್​ ಗಲಾಟೆಯಲ್ಲಿ ಮತ್ತೊಬ್ಬ.. ಸೇಡು ತೀರಿಸಿಕೊಂಡಿದ್ದು ಹೀಗೆ..
​270 ರನ್​ಗಳ ಹಿನ್ನಡೆ ಅನುಭವಿಸಿ ಫಾಲೋ ಆನ್ ಸುಳಿಗೆ ಸಿಲುಕಿ ಬ್ಯಾಟಿಂಗ್​ಗೆ ಬಂದಿದ್ದ ವಿಂಡೀಸ್ ದಿಟ್ಟ ಹೋರಾಟ ನಡೆಸಿತು. ಇಂದಿನ ಮೊದಲ ಸೆಷನ್​​ವರೆಗೂ ಅದ್ಭುತ ಹೋರಾಟ ನಡೆಸಿತು. ಕೊನೆಗೆ ಬುಮ್ರಾ ಹಾಗೂ ಕುಲ್ದೀಪ್ ಯಾದವ್​​ರ ಮಾರಕ ದಾಳಿಗೆ ತತ್ತರಿಸಿ ಆಲೌಟ್ ಆಗಿದೆ. ಆ ಮೂಲಕ ಟೀಂ ಇಂಡಿಯಾಗೆ ಗೆಲ್ಲಲು ಕೆಲವೇ ಕೆಲವು ರನ್​ಗಳ ಅಗತ್ಯ ಇದೆ.
ಇದನ್ನೂ ಓದಿ: ಗರ್ಲ್​ಫ್ರೆಂಡ್​ ಜೊತೆ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ - VIDEO
/filters:format(webp)/newsfirstlive-kannada/media/media_files/2025/08/03/team-india-england-test-2025-08-03-07-23-15.jpg)
ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​ 248 ರನ್​​ಗಳಿಗೆ ಮೊದಲ ಇನ್ನಿಂಗ್ಸ್​ ಅನುಭವಿಸಿತ್ತು. ಇದರಿಂದ ಫಾಲೋ ಆನ್​​ ಸುಳಿಗೆ ಬಿದ್ದ ವಿಂಡೀಸ್, 270 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್​ಗೆ ಬಂದಿತ್ತು. ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ 390 ರನ್​ಗಳಿಸಿ ಆಲೌಟ್ ಆಗಿದೆ. ಆ ಮೂಲಕ ಭಾರತಕ್ಕೆ ಗೆಲ್ಲಲು 121 ರನ್​ಗಳ ಅಗತ್ಯ ಇದೆ.
ಎರಡನೇ ಇನ್ನಿಂಗ್ಸ್​ನಲ್ಲಿ ಕುಲ್ದೀಪ್ ಯಾದವ್, ಬುಮ್ರಾ ತಲಾ 3 ವಿಕೆಟ್ ಪಡೆದರು. ಸಿರಾಜ್ 2, ಜಡೇಜಾ, ಸುಂದರ್ ಒಂದೊಂದು ವಿಕೆಟ್ ಪಡೆದುಕೊಂಡರು. ವಿಂಡೀಸ್ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಚಂಬೆಲ್ 115, ಹೋಪ್ 103 ರನ್​ಗಳ ಕಾಣಿಕೆ ನೀಡಿದರು.
ಇದನ್ನೂ ಓದಿ: ವರ್ಕೌಟ್​ ಆಗಲಿಲ್ಲ ಗುಪ್ತಸಭೆ.. ಕೊಹ್ಲಿ ನಿರ್ಧಾರಕ್ಕೆ ದಿಕ್ಕು ತೋಚದಂತಾದ RCB..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ