/newsfirstlive-kannada/media/media_files/2025/08/25/kohli_rcb-2025-08-25-12-53-26.jpg)
ವಿಶ್ವ ಕ್ರಿಕೆಟ್​ ಸುಲ್ತಾನ ವಿರಾಟ್​​ ಕೊಹ್ಲಿಯ ಭವಿಷ್ಯ ಸದ್ಯ ಮಿಲಿಯನ್​ ಡಾಲರ್​​ ಪ್ರಶ್ನೆಯಾಗಿದೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕ ಕೊಹ್ಲಿ ಒನ್​ ಡೇ ಕ್ರಿಕೆಟ್​ಗೆ ಗುಡ್​ ಬೈ ಹೇಳ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದ್ರ ನಡುವೆ ಮತ್ತೊಂದು​ ಸುದ್ದಿ ಸಂಚಲನ ಸೃಷ್ಟಿಸಿದೆ. ಆರ್​​ಸಿಬಿ ಅಭಿಮಾನಿಗಳ ಪಾಲಿಗಂತೂ ಇದು ಶಾಕಿಂಗ್ ಸುದ್ದಿ. ಆಸಿಸ್​​ ಪ್ರವಾಸದ ಐಪಿಎಲ್​ಗೂ ಕೊಹ್ಲಿ ಗುಡ್​ ಬೈ ಹೇಳ್ತಿದ್ದಾರಂತೆ.
ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಇಂಟರ್​​ನ್ಯಾಷನಲ್​ ಕ್ರಿಕೆಟ್​ ಭವಿಷ್ಯ ತೀವ್ರವಾದ ಚರ್ಚೆಯಲ್ಲಿದೆ. ವಿರಾಟ್​ ಕೊಹ್ಲಿ 2027ರ ವಿಶ್ವಕಪ್​ ಆಡ್ತಾರಾ? ಇಲ್ವಾ? ಆಸ್ಟ್ರೇಲಿಯಾ ಪ್ರವಾಸವೇ ಕೊಹ್ಲಿಯ ಕೊನೆಯ ಸರಣಿಯಾ? ಭವಿಷ್ಯಕ್ಕಾಗಿ ವಿಜಯ್​​ ಹಜಾರೆ ಆಡ್ತಾರಾ? ಇಂತದ್ದೇ ಹಲವು ಪ್ರಶ್ನೆಗಳ ಸುತ್ತ ಸದ್ಯ ಚರ್ಚೆಗಳು ಜೋರಾಗಿ ನಡೀತಿವೆ. ಇದ್ರ ನಡುವೆ ಮತ್ತೊಂದು ಶಾಕಿಂಗ್​ ಸುದ್ದಿ ಹೊರಬಿದ್ದಿದೆ.
RCB ಲಾಯಲ್​​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್!
ಇಷ್ಟು ದಿನ ವಿರಾಟ್​ ಕೊಹ್ಲಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಕರಿಯರ್​ ಬಗ್ಗೆ ಮಾತ್ರ ಚರ್ಚೆ ನಡೆದಿತ್ತು. ಇದೀಗ ಐಪಿಎಲ್​ ಕ್ರಿಕೆಟ್​​ ಭವಿಷ್ಯವೂ ಚರ್ಚೆಗೆ ಬಂದಿದೆ. ಆರ್​​​ಸಿಬಿಯ ಲಾಯಲ್ ಅಭಿಮಾನಿಗಳಿಗಂತೂ ಅರಗಿಸಿಕೊಳ್ಳಲಾಗದ ಸುದ್ದಿಯೊಂದು ಹೊರಬಿದ್ದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಾತ್ರವಲ್ಲ... ಐಪಿಎಲ್​ಗೂ ಗುಡ್​​ ಬೈ ಹೇಳೋಕೆ ವಿರಾಟ್​ ಕೊಹ್ಲಿ ಮುಂದಾಗಿದ್ದಾರಂತೆ. ಇಂತದ್ದೊಂದು ಶಾಕಿಂಗ್ ಸುದ್ದಿ​ ಆರ್​​​ಸಿಬಿ ಫ್ರಾಂಚೈಸಿಯಿಂದಲೇ ಹೊರಬಿದ್ದಿದೆ.
ಬ್ರ್ಯಾಂಡ್​ ಒಪ್ಪಂದ ನವೀಕರಿಸಲು ನಿರಾಕರಣೆ
ಡಿಸೆಂಬರ್​ನಲ್ಲಿ ನಡೆಯಲಿರೋ ಐಪಿಎಲ್​ ಮಿನಿ ಆಕ್ಷನ್​ಗೆ ಆರ್​​ಸಿಬಿಯ ಸಿದ್ಧತೆ ಆರಂಭವಾಗಿದೆ. ಆಟಗಾರರ ರಿಟೈನ್​, ರಿಲೀಸ್​ ಪ್ಲಾನಿಂಗ್​ ನಡೀತಾ ಇದ್ದು, ವಿರಾಟ್​ ಕೊಹ್ಲಿ ಮುಂದಿನ ನಿರ್ಧಾರ ಏನು ಅನ್ನೋದು ಫ್ರಾಂಚೈಸಿಗೆ ತಿಳಿಯದಾಗಿದೆ. 2024ರ ಮೆಗಾ ಆಕ್ಷನ್​ಗೂ​ ಮುನ್ನ ಆರ್​​ಸಿಬಿ ರಿಟೈನ್​ ಮಾಡಿಕೊಂಡಿದ್ದ ವೇಳೆಯೇ ವಿರಾಟ್​​ ಕೊಹ್ಲಿ ಒಂದು ವರ್ಷದ ಅವಧಿಗೆ ಮಾತ್ರ ಬ್ರ್ಯಾಂಡ್​ ಡೀಲ್​ ಮಾಡಿಕೊಂಡಿದ್ರು. ಇದೀಗ ಆ ಒಪ್ಪಂದವನ್ನ ಮುಂದಿನ ಸೀಸನ್​​ಗೂ ಮುನ್ನ ನವೀಕರಿಸಬೇಕಿದೆ. ಆದ್ರೆ, ರಿನ್ಯೂವಲ್​ ಮಾಡಿಕೊಳ್ಳಲು ಕೊಹ್ಲಿ ನಿರಾಕರಿಸಿದ್ದಾರಂತೆ.
ಕಳೆದ ತಿಂಗಳು ಆರ್​​​ಸಿಬಿಯ ಮ್ಯಾನೇಜ್​​ಮೆಂಟ್​ ಲಂಡನ್​ನಲ್ಲಿ ಮೀಟಿಂಗ್​ ಮಾಡಿತ್ತು. ಡೈರೆಕ್ಟರ್​ ಮೊ ಬೊಬಾಟ್​, ಕೋಚ್​ ಆ್ಯಂಡಿ ಫ್ಲವರ್​, ಆರ್​ಸಿಬಿ ಹೆಡ್​ ರಾಜೇಶ್​ ಮೆನನ್​, ಚೇರ್​​ಮನ್ ಪ್ರಥಮೇಶ್​ ಮಿಶ್ರಾ ಕಾಣಿಸಿಕೊಂಡಿದ್ರು. ಆ ಮೀಟಿಂಗ್​ ಸೀಕ್ರೆಟ್​ ಇದೀಗ ರಿವೀಲ್​ ಆಗಿದೆ. ಅಂದು ಆರ್​​ಸಿಬಿ ಥಿಂಕ್​​ ಟ್ಯಾಂಕ್ಸ್​ ಲಂಡನ್​ಗೆ ಬಂದಿದ್ದು ಕೊಹ್ಲಿಯ ಮನವೊಲಿಕೆಗೆ ಎನ್ನಲಾಗಿದೆ. ವಿರಾಟ್​ ಕೊಹ್ಲಿ ಆ ಸಭೆಯಲ್ಲೂ ಬ್ರ್ಯಾಂಡ್​ಡೀಲ್ ರಿನ್ಯೂವಲ್​​​​ಗೆ ನೋ ಎಂದಿದ್ದಾರಂತೆ. ಇದ್ರ ಅರ್ಥ ಮುಂದಿನ ಸೀಸನ್​ ಐಪಿಎಲ್​ ಆಡಲ್ಲ ಅನ್ನೋದೆ ಆಗಿದೆ.
ಫಾಫ್​ ಡುಪ್ಲೆಸಿಯನ್ನ ತಂಡದಿಂದ ರಿಲೀಸ್​ ಮಾಡಿದ ಆರ್​​ಸಿಬಿ ಕೊಹ್ಲಿಗೆ ಮತ್ತೆ ಪಟ್ಟ ಕಟ್ಟೋ ಒಲವು ಹೊಂದಿತ್ತು. 2024ರ ಐಪಿಎಲ್​ಗೂ ಈ ಬಗ್ಗೆ ಚರ್ಚೆ ನಡೆಸಿದ್ದಾಗ ಕೊಹ್ಲಿ ನಾಯಕತ್ವಕ್ಕೆ ನೋ ಎಂದಿದ್ರು. ಆರ್​​ಸಿಬಿ ಆಫರ್​ನ ರಿಜೆಕ್ಟ್​ ಮಾಡಿದ್ದ ವೇಳೆ ಬ್ರ್ಯಾಂಡ್​ ಡೀಲ್​ ಒಪ್ಪಂದದ ಬಗ್ಗೆಯೂ ಮಾತನಾಡಿದ್ದ ವಿರಾಟ್​, ಒಂದು ವರ್ಷದ ಒಪ್ಪಂದಕ್ಕೆ ಮಾತ್ರ ಸಹಿ ಹಾಕೋದಾಗಿ ತಿಳಿಸಿದ್ರಂತೆ.
ಇದನ್ನೂ ಓದಿ: ಗರ್ಲ್​ಫ್ರೆಂಡ್​ ಜೊತೆ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ - VIDEO
ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ 2020ರಲ್ಲೇ ಗುಡ್​ ಬೈ ಹೇಳಿದ್ರು. ಈಗಲೂ ಐಪಿಎಲ್​ ಆಡ್ತಿದ್ದಾರೆ. 2026ರ ಐಪಿಎಲ್​ನಲ್ಲೂ ಧೋನಿ ಆಡ್ತಾರೆ ಅನ್ನೋದು ಸದ್ಯದ ಮಾಹಿತಿ. ವಿರಾಟ್ ಕೊಹ್ಲಿ ಧೋನಿ ಹಾದಿಯಲ್ಲಿ ಸಾಗೋದು ಅನುಮಾನವೇ. ಆಸ್ಟ್ರೇಲಿಯಾ ಪ್ರವಾಸ ಅಂತ್ಯದ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್​ಗೂ ಗುಡ್​ ಬೈ ಹೇಳಿ ಕುಟುಂಬಕ್ಕೆ ಸಮಯ ಮೀಸಲಿಡೋ ಲೆಕ್ಕಾಚಾರ ವಿರಾಟ್​ ಕೊಹ್ಲಿಯದ್ದಾಗಿದೆ. ​
ಒಟ್ಟಿನಲ್ಲಿ ವಿರಾಟ್​ ಕೊಹ್ಲಿಯ ಕ್ರಿಕೆಟ್​ ಭವಿಷ್ಯ ಸದ್ಯಕ್ಕಂತೂ ಕ್ರಿಕೆಟ್ ಲೋಕದ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಮುಂದಿನ ಆಸ್ಟ್ರೇಲಿಯಾ ಪ್ರವಾಸದ ಅಂತ್ಯದೊಳಗೆ ಈ ಮಿಲಿಯನ್​ ಡಾಲರ್​ ಪ್ರಶ್ನೆಗೆ ಪರ್ಫೆಕ್ಟ್​ ಉತ್ತರ ಸಿಗಲಿದೆ.
ಇದನ್ನೂ ಓದಿ: RO-KO ವರ್ಸಸ್ ಗಂಭೀರ್​ ಗಲಾಟೆಯಲ್ಲಿ ಮತ್ತೊಬ್ಬ.. ಸೇಡು ತೀರಿಸಿಕೊಂಡಿದ್ದು ಹೀಗೆ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ