Advertisment

ಟೆಸ್ಟ್ ಗೆಲ್ಲಿಸಿ ಕೊಡಲು KL ರಾಹುಲ್​​​ಗೆ ಸುವರ್ಣ ಅವಕಾಶ.. ಎಷ್ಟು ರನ್ಸ್​​ ಬೇಕು..?

ಕೆ.ಎಲ್.ರಾಹುಲ್ 25 ರನ್ ಮತ್ತು ಸಾಯಿ ಸುದರ್ಶನ್ 30 ರನ್​ಗಳಿಸಿ, ಅಜೇಯರಾಗುಳಿದಿದ್ದಾರೆ. ಕೊನೆಯ ದಿನವಾದ ಇಂದು, ಟೀಮ್ ಇಂಡಿಯಾಕ್ಕೆ ಗೆಲ್ಲಲು ಕೇವಲ, 58 ರನ್​ ಬೇಕಾಗಿದೆ. 2 ಪಂದ್ಯಗಳ ಟೆಸ್ಟ್ ಸರಣಿಯನ್ನ, ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ.

author-image
Ganesh Kerekuli
KL Rahul (4)
Advertisment
  • 2ನೇ ಇನ್ನಿಂಗ್ಸ್​ನಲ್ಲಿ ವಿಂಡೀಸ್ ಬೊಂಬಾಟ್ ಬ್ಯಾಟಿಂಗ್
  • ಕುಲ್ದೀಪ್ ಯಾದವ್, ರವೀಂದ್ರ ಜಡೇಜಾಗೆ ತಲಾ 3 ವಿಕೆಟ್
  • ರಾಹುಲ್ ಅಜೇಯ 25 ರನ್, ಸುದರ್ಶನ್ ಅಜೇಯ 30 ರನ್

ದೆಹಲಿ ಟೆಸ್ಟ್ ಪಂದ್ಯದ ನಾಲ್ಕನೇ ದಿನ, ಟೀಮ್ ಇಂಡಿಯಾ ಬೌಲರ್​ಗಳು ಪರದಾಡಿದ್ರು. ದಿನದಾಟದ ಮೊದಲ ಸೆಷನ್​ನಲ್ಲಿ  ಜಾನ್ ಕ್ಯಾಂಬೆಲ್ ಮತ್ತು ಶಾಯ್ ಹೋಪ್ ಜೋಡಿ, ಗಿಲ್ ಪಡೆಗೆ ನೀರು ಕುಡಿಸಿತು. ಕೊನೆಯ ಸೆಷನ್​ನಲ್ಲಿ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್, ಟೀಮ್ ಇಂಡಿಯಾ ಬೌಲರ್​ಗಳನ್ನ ಕಾಡಿದ್ರು. 2ನೇ ಇನ್ನಿಂಗ್ಸ್​ನಲ್ಲಿ ದಿಟ್ಟ ಹೋರಾಟ ನಡೆಸಿದ ವಿಂಡೀಸ್, ಪ್ರೇಕ್ಷಕರ ಮನ ಗೆದ್ದಿತ್ತು. ಆದ್ರೆ ವಿಂಡೀಸ್ ತಂಡಕ್ಕೆ, ಸೋಲಿನಿಂದ ಪಾರಾಗೋದು ಅಸಾಧ್ಯವೆನಿಸಿದೆ.

2 ವಿಕೆಟ್ ನಷ್ಟಕ್ಕೆ 173 ರನ್​ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ವೆಸ್ಟ್​ ಇಂಡೀಸ್​​​​, ನೆನ್ನೆ ಬೊಂಬಾಟ್ ಬ್ಯಾಟಿಂಗ್ ನಡೆಸಿತು. ಅರ್ಧಶತಕ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದ ಕ್ಯಾಂಬೆಲ್ ಮತ್ತು ಚೇಸ್, 3ನೇ ವಿಕೆಟ್​​ಗೆ ಭರ್ಜರಿ ಜೊತೆಯಾಟವಾಡಿದ್ರು. 295 ಎಸೆತಗಳಲ್ಲಿ 177 ರನ್​ ಕಾಣಿಕೆ ನೀಡಿದ ಈ ಜೋಡಿ, ಟೀಮ್ ಇಂಡಿಯಾ ಬೌಲರ್​ಗಳ ಪ್ಲಾನ್, ಉಲ್ಟಾ ಮಾಡಿದ್ರು. 

Advertisment

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಮಹತ್ವದ ಜವಾಬ್ದಾರಿ.. ಇತಿಹಾಸ ನಿರ್ಮಿಸಿದ ಯಂಗ್ ಬ್ಯಾಟರ್​!

india vs west indies

ಸ್ಟಡಿ ಇನ್ನಿಂಗ್ಸ್ ಕಟ್ಟಿದ್ದ ಆರಂಭಿಕ ಜಾನ್ ಕ್ಯಾಂಬೆಲ್, ದೆಹಲಿಯ ಜೇಟ್ಲಿ ಸ್ಟೇಡಿಯಮ್​ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. ಶತಕ ಸಿಡಿಸಿ ಬಿಗ್ ಇನ್ನಿಂಗ್ಸ್ ಆಡುವ ಲೆಕ್ಕಾಚಾರದಲ್ಲಿದ್ದ ಕ್ಯಾಂಬೆಲ್​​​​, 115 ರನ್​ಗಳಿಸಿ ರವೀಂದ್ರ ಜಡೇಜಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ರು. ಕ್ಯಾಂಬೆಲ್ ಔಟಾಗ್ತಿದಂತೆ ಶಾಯ್ ಹೋಪ್, ನಾಯಕ ರೋಸ್ಟನ್ ಚೇಸ್​​​ ಜೊತೆಗೂಡಿ ರನ್​​​​ ಬಿಲ್ಡ್ ಮಾಡಲು ಮುಂದಾದ್ರು. ಆದ್ರೆ 40 ರನ್​ಗಳಿಸುತ್ತಿದ್ದಂತೆ ಚೇಸ್​​​, ಕುಲ್ಡೀಪ್ ಯಾದವ್ ಬೌಲಿಂಗ್​ನಲ್ಲಿ ಪಡಿಕ್ಕಲ್​​ಗೆ ಕ್ಯಾಚ್ ನೀಡಿದ್ರು. 

ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಟೆವಿನ್ ಇಮ್ಲಾಚ್ ಸಹ, ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 12 ರನ್​ಗಳಿಸಿದ ಇಮ್ಲಾಚ್, ಕುಲ್ದೀಪ್ ಬೌಲಿಂಗ್​ನಲ್ಲಿ ಎಲ್​​ಬಿಡಬ್ಲ್ಯೂ ಆದ್ರು. 2ನೇ ಸೆಷನ್​ನಲ್ಲಿ ವೆಸ್ಟ್ ಇಂಡೀಸ್​​ನ ಬ್ಯಾಟ್ಸ್​ಮನ್​​ಗಳು, ಒಬ್ಬರ ಹಿಂದೊಂಬ್ಬರು ಪೆವಿಲಿಯನ್​ನತ್ತ ಹೆಜ್ಜೆ ಹಾಕಿದ್ರು. ಈ ನಡುವೆ ಶಾಯ್ ಹೋಪ್, ತಾಳ್ಮೆ ಮತ್ತು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ, ಶತಕ ಪೂರೈಸಿಕೊಂಡ್ರು.

Advertisment

ಇದನ್ನೂ ಓದಿ: IND vs WI; ಮ್ಯಾಚ್ ನೋಡುವಾಗ ಯುವಕನ ಕೆನ್ನೆ..ಕೆನ್ನೆಗೆ ಬಾರಿಸಿದ ಪ್ರಿಯತಮೆ.. ಅಸಲಿಗೆ ಆಗಿದ್ದೇನು?

Siddaramaiah (2)

ಖಾರಿ ಪಿಯರೆ, ವಾರಿಕಾನ್ ಮತ್ತು ಌಂಡರ್​ಸನ್ ಫಿಲಿಪ್, ಸಿಂಗಲ್ ಡಿಜಿಟ್​ಗಳಿಸಿ ಪೆವಿಲಿಯನ್​ ಸೇರಿಕೊಡ್ರು. ಕೊನೆಗೆ 9ನೇ ವಿಕೆಟ್​​ಗೆ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್, ಅದ್ಭುತ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾ ಬೌಲರ್​ಗಳ ಬೆವರಿಳಿಸಿದ್ರು. 133 ಎಸೆತಗಳನ್ನ ಫೇಸ್ ಮಾಡಿದ ಈ ಜೋಡಿ 79 ರನ್​ಗಳ ಅಮೂಲ್ಯ ಕಾಣಿಕೆ ನೀಡಿತು. ಇದೇ ವೇಳೆ ಗ್ರೀವ್ಸ್, ಆಕರ್ಷಕ ಅರ್ಧಶತ ಸಿಡಿಸಿ ಮಿಂಚಿದ್ರು.

ಅಂತಿಮವಾಗಿ ವೆಸ್ಟ್ ಇಂಡೀಸ್, 390 ರನ್​ಗಳಿಗೆ ಆಲೌಟ್ ಆಯ್ತು. ಆ ಮೂಲಕ 120 ರನ್​ಗಳ ಮುನ್ನಡೆ ಸಾಧಿಸಿದ ವಿಂಡೀಸ್, ಟೀಮ್ ಇಂಡಿಯಾಕ್ಕೆ ಟಾರ್ಗೆಟ್ ಸೆಟ್ ಮಾಡಿತು. ಟೀಮ್ ಇಂಡಿಯಾ ಪರ ಕುಲ್ದೀಪ್ ಮತ್ತು ಜಡೇಜಾ, ತಲಾ 3 ವಿಕೆಟ್ ಪಡೆದ್ರು. 121 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ, 2ನೇ ಓವರ್​ನಲ್ಲೇ ಆರಂಭಿಕ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು.

Advertisment

ಇದನ್ನೂ ಓದಿ: 2ನೇ ಇನ್ನಿಂಗ್ಸ್​ನಲ್ಲೂ ಕುಲ್ದೀಪ್ ಕಮಾಲ್.. ಭಾರತದ ಗೆಲುವಿಗೆ ಕೆಲವೇ ಕೆಲವು ರನ್ಸ್​..!

ಅಂತಿಮವಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ, ಒಂದು ವಿಕೆಟ್ ನಷ್ಟಕ್ಕೆ 63 ರನ್​ಗಳಿಸಿತು. ಕೆ.ಎಲ್.ರಾಹುಲ್ 25 ರನ್ ಮತ್ತು ಸಾಯಿ ಸುದರ್ಶನ್ 30 ರನ್​ಗಳಿಸಿ, ಅಜೇಯರಾಗುಳಿದಿದ್ದಾರೆ. ಕೊನೆಯ ದಿನವಾದ ಇಂದು, ಟೀಮ್ ಇಂಡಿಯಾಕ್ಕೆ ಗೆಲ್ಲಲು ಕೇವಲ, 58 ರನ್​ ಬೇಕಾಗಿದೆ. 2 ಪಂದ್ಯಗಳ ಟೆಸ್ಟ್ ಸರಣಿಯನ್ನ, ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
KL Rahul IND vs WI India vs West Indies
Advertisment
Advertisment
Advertisment