/newsfirstlive-kannada/media/media_files/2025/11/08/virat_kohli_rcb_team_sale-2025-11-08-14-31-30.jpg)
ನ್ಯೂಜಿಲೆಂಡ್​ ಸರಣಿ ಮುಗಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದ ಕೊಹ್ಲಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕಿಂಗ್​ ಕೊಹ್ಲಿಯ ಆಗಮನದಿಂದ ಆರ್​​​ಸಿಬಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಐಪಿಎಲ್​ಗೆ ಒಂದು ತಿಂಗಳ ಮುನ್ನವೇ ಭಾರತಕ್ಕೆ ಬಂದಿರೋ ವಿರಾಟ್​ ಕೊಹ್ಲಿ, ಆರ್​​​ಸಿಬಿ ಫ್ಯಾನ್ಸ್​ಗೆ ಕೊಟ್ಟಿರೋ ಗುಡ್​ನ್ಯೂಸ್​ ಏನು?
ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 19ಕ್ಕೆ ಸಿದ್ಧತೆಗಳು ಗರಿಗೆದರಿವೆ. ಟೂರ್ನಿ ಆರಂಭಕ್ಕೆ ಒಂದು ತಿಂಗಳ ಮುನ್ನವೇ ಫ್ರಾಂಚೈಸಿ ತೆರೆ ಹಿಂದೆ ಸಿದ್ಧತೆ ಆರಂಭಿಸಿದೆ. ಪ್ರೀ ಸೀಸನ್​ ಕ್ಯಾಂಪ್​ಗಳನ್ನ ಆಯೋಜಿಸಿ ಆಟಗಾರರನ್ನ ಸಜ್ಜುಗೊಳಿಸ್ತಿವೆ. ಅಬುಧಾಬಿಗೆ ಆಟಗಾರರನ್ನ ಕಳಿಸಿ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಪ್ರೀ ಸೀಸನ್​ ಕ್ಯಾಂಪ್​ ನಡೆಸ್ತಿದ್ರೆ, ಭಾರತದಲ್ಲೇ ಹಾಲಿ ಚಾಂಪಿಯನ್​​ ಆರ್​​ಸಿಬಿಯ ಪ್ರಾಕ್ಟಿಸ್​​ ಸೆಷನ್​ ಕ್ಯಾಂಪ್​ ಆರಂಭವಾಗಿದೆ.
ಅಭ್ಯಾಸದ ಅಖಾಡಕ್ಕೆ ಧುಮುಕಿದ ಆಟಗಾರರು
ಹೋಮ್​ಗ್ರೌಂಡ್​ ಗೊಂದಲ, ಮಾರಾಟ ಟೆನ್ಶನ್​.. ಇದೆಲ್ಲದರ ನಡುವೆ ಆರ್​​ಸಿಬಿಯ ಸೀಸನ್​ 19ಕ್ಕೆ ಸಿದ್ಧತೆ ಆರಂಭಿಸಿದೆ. ಚಾಂಪಿಯನ್​​ ಟೈಟಲ್ ಡಿಫೆಂಡ್​ ಮಾಡಿಕೊಳ್ಳೋಕೆ ಟೂರ್ನಿಗೂ 1 ತಿಂಗಳ ಮುನ್ನವೇ ಅಭ್ಯಾಸದ ಆಖಾಡಕ್ಕೆ ಆರ್​​ಸಿಬಿ ಆಟಗಾರರು ಎಂಟ್ರಿಕೊಟ್ಟಿದ್ದಾರೆ. ವೆಂಕಟೇಶ್​ ಅಯ್ಯರ್​, ಜಿತೇಶ್​ ಶರ್ಮಾ ಸೇರಿದಂತೆ ವಿಶ್ವಕಪ್ ಟೂರ್ನಿ ಹಾಗೂ ಡೊಮೆಸ್ಟಿಕ್​ ಕ್ರಿಕೆಟ್​ನಿಂದ​ ಹೊರಗುಳಿದಿರೋ ಆಟಗಾರರು ಕ್ಯಾಂಪ್​ನಲ್ಲಿ ಭಾಗಿಯಾಗಿದ್ದಾರೆ. ಡೈರೆಕ್ಟರ್​ ಮೊ ಬೊಬಾಟ್​, ಹೆಡ್​ ಕೋಚ್​ ಆ್ಯಂಡಿ ಫ್ಲವರ್​ ಮಾರ್ಗದರ್ಶನದಲ್ಲಿ ಆರ್​​ಸಿಬಿ ಅಭ್ಯಾಸ ಭರದಿಂದ ಸಾಗಿದೆ.
/filters:format(webp)/newsfirstlive-kannada/media/media_files/2026/01/11/virat-kohli-6-2026-01-11-14-41-58.jpg)
ಆರ್​​​ಸಿಬಿ ತಂಡದ ಅಭ್ಯಾಸ ಆರಂಭವಾದ ಬೆನ್ನಲ್ಲೇ ಕಿಂಗ್​ ವಿರಾಟ್​ ಕೊಹ್ಲಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕಳೆದ ನ್ಯೂಜಿಲೆಂಡ್​ ವಿರುದ್ಧದ ಸರಣಿ ಅಂತ್ಯದ ಬಳಿಕ ಕುಟುಂಬದೊಂದಿಗೆ ಸಮಯ ಕಳೆಯಲು ವಿರಾಟ್​ ಕೊಹ್ಲಿ ಲಂಡನ್​ಗೆ ಹಾರಿದ್ರು. ಸುಮಾರು 3 ವಾರಗಳ ಬಳಿಕ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕೊಹ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ರಣಬೇಟೆಗಾರ ಬಂದ ಎಂದು ಫ್ಯಾನ್ಸ್​ ಸಂಭ್ರಮಿಸ್ತಿದ್ದಾರೆ.
ವಿರಾಟ್​ ಫ್ಲೈಟ್​ ಇಳಿದು ಟರ್ಮಿನಲ್​ನಿಂದ ಹೊರ ಬರ್ತಿದ್ದಂತೆ ಏರ್​​ಪೋರ್ಟ್​ನಲ್ಲಿ ಕೊಹ್ಲಿ ಮೇನಿಯಾ ಶುರುವಾಯ್ತು. ಫೋಟೋ​ಗಾಗಿ ಫ್ಯಾನ್ಸ್ ಕೊಹ್ಲಿ ಮುಗಿಬಿದ್ರು. ತಾಳ್ಮೆಯಿಂದಲೇ ಬಹುತೇಕರಿಗೆ ಫೋಟೋಗ್ರಾಫ್​ ನೀಡಿ ವಿರಾಟ್​ ಕೊಹ್ಲಿ ಫ್ಯಾನ್ಸ್​ನ ಖುಷಿಪಡಿಸಿದ್ದಾರೆ.
RCB ಪ್ರೀ ಸೀಸನ್​ ಕ್ಯಾಂಪ್​ನಲ್ಲಿ ಕೊಹ್ಲಿ ಭಾಗಿ?
ಕಳೆದೊಂದು ವರ್ಷದಿಂದ ಲಂಡನ್​ನಲ್ಲೇ ಬೀಡು ಬಿಟ್ಟಿರೋ ಕೊಹ್ಲಿ ಯಾವುದಾದರೂ ಸರಣಿಗಳಿದ್ರೆ ಮಾತ್ರ ಭಾರತಕ್ಕೆ ಬರ್ತಾ ಇದ್ರು. ಆದ್ರೆ, ಈ ಬಾರಿ ವಿರಾಟ್​ ಕೊಹ್ಲಿ, ಯಾವುದೇ ಸರಣಿಗಳಿಲ್ಲದ ಹೊರತಾಗಿಯೂ ಮುಂಬೈಗೆ ಬಂದಿಳಿದಿದ್ದಾರೆ. ಈ ಬಾರಿ ಕೊಹ್ಲಿ ಭಾರತಕ್ಕೆ ಬಂದಿರೋ ಉದ್ದೇಶ ಐಪಿಎಲ್​ಗೆ ಸಿದ್ಧತೆ. ಆರ್​​ಸಿಬಿಯ ಪ್ರೀ ಸೀಸನ್​ ಕ್ಯಾಂಪ್​ನಲ್ಲಿ ಭಾಗಿಯಾಗೋದಕ್ಕೆ ವಿರಾಟ್​ ಕೊಹ್ಲಿ ಭಾರತಕ್ಕೆ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ. ಇಂದು ಅಥವಾ ನಾಳೆ ವಿರಾಟ್​ ಆರ್​​ಸಿಬಿಯ ಅಭ್ಯಾಸದ ಕ್ಯಾಂಪ್​ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಧಾರವಾಡ ಯುವಕ ಕೊರಿಯನ್ ಗೇಮ್ಸ್ ನಿಂದ ಆತ್ಮಹತ್ಯೆ!? ಪೊಲೀಸರಿಂದ ಮುಂದುವರಿದ ತನಿಖೆ
/filters:format(webp)/newsfirstlive-kannada/media/media_files/2025/10/12/kohli-2025-10-12-12-36-38.jpg)
ವಿರಾಟ್​ ಕೊಹ್ಲಿ ಸದ್ಯ ಪೀಕ್​ ಫಾರ್ಮ್​ನಲ್ಲಿದ್ದಾರೆ. ಸೌತ್​ ಆಫ್ರಿಕಾ, ನ್ಯೂಜಿಲೆಂಡ್​ ವಿರುದ್ಧದ ಸರಣಿಗಳಲ್ಲಿ ಮಿಂಚಿನ ಪರ್ಫಾಮೆನ್ಸ್​ ನೀಡಿರುವ ವಿರಾಟ್​ ಕೊಹ್ಲಿಗೀಗ ಫಾರ್ಮ್​ ಕಾಯ್ದುಕೊಳ್ಳೋ ಸವಾಲಿದೆ. 2027ರ ವಿಶ್ವಕಪ್​ ಆಡೋಕೆ ಪಣತೊಟ್ಟಿರುವ ವಿರಾಟ್​ ಸದ್ಯ ಏಕದಿನ ಫಾರ್ಮೆಟ್​ಗೆ ಮಾತ್ರ ಸೀಮಿತವಾಗಿದ್ದಾರೆ. ಒಡಿಐ ಹೊರತಾಗಿ ಐಪಿಎಲ್​ ಟೂರ್ನಿಯನ್ನ ಮಾತ್ರ ಆಡ್ತಿರೋದ್ರೀಂದ ಕೊಹ್ಲಿ, ಟಚ್​​ ಕಾಯ್ದುಕೊಳ್ಳಲು ಪ್ರಾಕ್ಟಿಸ್​ ಕ್ಯಾಂಪ್​ನಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.
ಫಿಟ್​​ನೆಸ್​​ ವಿಚಾರದಲ್ಲಿ ಕೊಹ್ಲಿಯನ್ನ ಮೀರಿಸುವವರಿಲ್ಲ. ಆದ್ರೆ, ಬಾಡಿ ಫಿಟ್​ನೆಸ್​ ಜೊತೆಗೆ ಮ್ಯಾಚ್​ ಫಿಟ್​ನೆಸ್​ ಕೂಡ ಮುಖ್ಯ. ಸದ್ಯ ಫಾರ್ಮ್​ ಜೊತೆಗೆ ಮ್ಯಾಚ್​ ಫಿಟ್​ನೆಸ್​ ಕಾಯ್ದುಕೊಳ್ಳೋ ಸವಾಲು ಕೂಡ ವಿರಾಟ್​ ಕೊಹ್ಲಿಗಿದೆ. ಐಪಿಎಲ್​ಗೂ ಮುನ್ನ ಆರ್​​ಸಿಬಿ ಅಭ್ಯಾಸದ ಕ್ಯಾಂಪ್​ನಲ್ಲಿ ಭಾಗಿಯಾಗ್ತಿರೋದಕ್ಕೆ ಇದೂ ಒಂದು ಕಾರಣವಾಗಿದೆ.
ಒಟ್ಟಿನಲ್ಲಿ, ಐಪಿಎಲ್​ ಸೀಸನ್​ 19ರ ಆರಂಭಕ್ಕೆ ಒಂದು ತಿಂಗಳ ಮುನ್ನ ವಿರಾಟ್​ ಕೊಹ್ಲಿ ಅಭ್ಯಾಸದ ಅಖಾಡಕ್ಕೆ ಧುಮುಕಿರೋದು ಆರ್​​​ಸಿಬಿ ಪಾಲಿಗೆ ಸಿಕ್ಕಾಪಟ್ಟೆ ಪಾಸಿಟಿವ್​ ನೋಟ್​.! ಸಾಲಿಡ್​ ಆಟದಿಂದ ಪೀಕ್​ನಲ್ಲಿದ್ದ ಕೊಹ್ಲಿಯನ್ನ ನೆನಪಿಸಿರೋ ವಿರಾಟ್​, ಅದೇ ಫಾರ್ಮ್​ ಕಾಯ್ದುಕೊಂಡು ಐಪಿಎಲ್​ ಅಖಾಡಕ್ಕೆ ಧುಮುಕಿದ್ರೆ, 2016ರ ಆಟ ರಿಪೀಟ್​ ಆಗೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: ಜಡೇಜಾಗೆ ಶಾಕ್ ಕೊಟ್ಟ ರಾಜಸ್ಥಾನ್; ಪರಾಗ್​ಗೆ ಪಟ್ಟ ಕಟ್ಟಿದ್ಯಾಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us