/newsfirstlive-kannada/media/post_attachments/wp-content/uploads/2024/11/IPL_TROPHY.jpg)
ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ನ ಆಕ್ಷನ್​ ಫೀವರ್​ ಕ್ರಿಕೆಟ್​ ಲೋಕದಲ್ಲಿ ಜೋರಾಗ್ತಿದೆ. ಮಿನಿ ಆಕ್ಷನ್​ಗೆ ಒಂದು ವಾರ ಬಾಕಿ ಇರುವಾಗಲೇ ಬಿಸಿಸಿಐ ಹರಾಜಿನ ಕಣದಲ್ಲಿರೋ ಆಟಗಾರರ ಫೈನಲ್​ ಲಿಸ್ಟ್​ ಅನೌನ್ಸ್​ ಮಾಡಿದೆ. ಕೊನೆ ಕ್ಷಣದಲ್ಲಿ ಹರಾಜಿನ ಕಣಕ್ಕೆ ಕೆಲ ಆಟಗಾರರು ಎಂಟ್ರಿ ಕೊಟ್ಟು ಫ್ಯಾನ್ಸ್​ಗೆ ಸರ್​​​ಪ್ರೈಸ್​ ಕೊಟ್ಟಿದ್ದಾರೆ. ಇನ್ನೊಂದೆಡೆ ಹೊಸ ರೂಲ್ಸ್​ ತಂಡ ಫಾರಿನ್​ ಪ್ಲೇಯರ್ಸ್​ಗೆ ಬಿಸಿಸಿಐ ಶಾಕ್​ ಕೊಟ್ಟಿದೆ. ಮಿನಿ ಹರಾಜಿನ ಫೈನಲ್​ ಲಿಸ್ಟ್​ನ ಫುಲ್​ ಡಿಟೇಲ್ಸ್​ ಇಲ್ಲಿದೆ.
ಇಂಡಿಯನ್​ ಪ್ರೀಮಿಯರ್​ ಲೀಗ್​ ಮಿನಿ ಆಕ್ಷನ್​ ಕೌಂಟ್​​ಡೌನ್​ ಆಗಿದೆ. ಮುಂದಿನ ಸೀಸನ್​ನಲ್ಲಿ ತಂಡವನ್ನ ಮತ್ತಷ್ಟು ಬಲಿಷ್ಠಗೊಳಿಸಲು ಪಣತೊಟ್ಟಿರೋ ಫ್ರಾಂಚೈಸಿಗಳು ಆಕ್ಷನ್​ಗೆ ತೆರೆ ಹಿಂದೆ ಭರ್ಜರಿ ಸಿದ್ಧತೆ ನಡೆಸಿವೆ. ಬಿಸಿಸಿಐ ವಲಯದಲ್ಲೂ ಮಿನಿ ಆಕ್ಷನ್​ ಭರದ ಸಿದ್ಧತೆಗಳು ನಡೆದಿದೆ. ಹರಾಜಿಗೂ ಒಂದು ವಾರ ಮುನ್ನವೇ ಬಾಸ್​​ಗಳು ಆಟಗಾರರ ಲಿಸ್ಟ್​ ಫೈನಲ್​ ಮಾಡಿದ್ದಾರೆ.
ಇದನ್ನೂ ಓದಿ: 2 ಸರಣಿ, 10 ಪಂದ್ಯ! ವಿಶ್ವಕಪ್​ಗೂ ಮುನ್ನ 5 ಸವಾಲ್.. ಗಂಭೀರ್ ಬಳಿ ಉತ್ತರ ಇದ್ಯಾ?
/filters:format(webp)/newsfirstlive-kannada/media/media_files/2025/09/02/bcci-1-2025-09-02-22-44-54.jpg)
ಆಟಗಾರರ ಫೈನಲ್​ ಲಿಸ್ಟ್​ ಪ್ರಕಟಿಸಿದ ಬಿಸಿಸಿಐ
ಡಿಸೆಂಬರ್​ 16ಕ್ಕೆ ನಡೆಯೋ ಮಿನಿ ಆಕ್ಷನ್​ಗೆ ದೇಶ-ವಿದೇಶಗಳಿಂದ ಬರೋಬ್ಬರಿ 1335 ಮಂದಿ ಆಟಗಾರರು ರಿಜಿಸ್ಟರ್​ ಮಾಡಿಕೊಂಡಿದ್ರು. ಆಟಗಾರರ ಹೆಸರನ್ನ ಫಿಲ್ಟರ್​ ಮಾಡಿರೋ ಬಿಸಿಸಿಐ, ಕೇವಲ 350 ಆಟಗಾರರ ಹೆಸರನ್ನ ಶಾರ್ಟ್​ ಲಿಸ್ಟ್​ ಮಾಡಿ ಫೈನಲ್​ ಲಿಸ್ಟ್​ ಪ್ರಕಟಿಸಿದೆ. ಈ ಪೈಕಿ 16 ಮಂದಿ ಕ್ಯಾಪ್ಡ್​ ಇಂಡಿಯನ್​ ಪ್ಲೇಯರ್ಸ್​ ಆದ್ರೆ, 96 ಮಂದಿ ಕ್ಯಾಪ್ಡ್​ ಫಾರಿನ್​ ಆಟಗಾರರಿದ್ದಾರೆ. ಇನ್ನು, 224 ಮಂದಿ ಅನ್​ಕ್ಯಾಪ್ಡ್​ ಇಂಡಿಯನ್ಸ್​ ಹಾಗೂ 14 ಮಂದಿ ಅನ್​ಕ್ಯಾಪ್ಡ್​ ಫಾರಿನ್​ ಪ್ಲೇಯರ್ಸ್​ ಇದ್ದಾರೆ.
ಆಕ್ಷನ್​ ಅಖಾಡಕ್ಕೆ ಸರ್​​ಪ್ರೈಸ್​ ಡಿಕಾಕ್ ಎಂಟ್ರಿ.!
ಮಿನಿ ಆಕ್ಷನ್​ನ ಫೈನಲ್​ ಲಿಸ್ಟ್​ನಲ್ಲಿ ಕೆಲ ಆಟಗಾರರ ಸರ್​​ಪ್ರೈಸ್​​ ಎಂಟ್ರಿಯಾಗಿದೆ. ಹರಾಜಿನ ರಿಜಿಸ್ಟರ್​ ಲಿಸ್ಟ್​ ಪ್ರಕಟವಾದಾಗ ಪಟ್ಟಿಯಲ್ಲಿರದ 35 ಆಟಗಾರರು ಹೊಸದಾಗಿ ಫೈನಲ್​ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ರಾಂಚೈಸಿಯ ಮನವಿಯ ಮೇರೆಗೆ ಕೆಲ ಆಟಗಾರರು ಆಕ್ಷನ್​ ಅಖಾಡಕ್ಕೆ ಇಳಿದಿದ್ದಾರೆ. ಸೌತ್​ ಆಫ್ರಿಕಾದ ಬ್ಯಾಟ್ಸ್​​ಮನ್​ ಕ್ವಿಂಟನ್​ ಡಿ ಕಾಕ್​ ಎಂಟ್ರಿ ಎಲ್ಲರಿಗೂ ಸರ್​​ಪ್ರೈಸ್​ ಮೂಡಿಸಿದೆ. ಡಿ ಕಾಕ್​ ಜೊತೆಗೆ ದುನಿಲ್​ ವೆಲ್ಲಲಗೆ, ಜಾರ್ಜ್​ ಲಿಂಡೆ ಸೇರಿದಂತೆ 35 ಆಟಗಾರರು ಹೊಸದಾಗಿ ಹರಾಜಿನ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.
2 ಕೋಟಿ ಮೂಲ ಬೆಲೆಯಲ್ಲಿ 40 ಆಟಗಾರರು
ಹೈಯೆಸ್ಟ್​​ ಬೇಸ್​​ ಪ್ರೈಸ್​ 2 ಕೋಟಿ ಮೂಲ ಬೆಲೆಗೆ 40 ಮಂದಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನ ನೊಂದಾಯಿಸಿಕೊಂಡಿದ್ದಾರೆ. ಅಚ್ಚರಿಯಂದ್ರೆ, ಈ 40 ಆಟಗಾರರ ಪೈಕಿ ಇಬ್ಬರು ಮಾತ್ರ ಭಾರತೀಯ ಆಟಗಾರರಾಗಿದ್ದಾರೆ. ವೆಂಕಟೇಶ್​ ಅಯ್ಯರ್​ ಹಾಗೂ ಸ್ಪಿನ್ನರ್​ ರವಿ ಬಿಷ್ನೋಯ್​​ 2 ಕೋಟಿ ಮೂಲ ಬೆಲೆಗೆ ಹರಾಜಿಗೆ ನೊಂದಾಯಿಸಿಕೊಂಡಿದ್ದಾರೆ. ಒಂದೂವರೆ ಕೋಟಿ ಮೂಲ ಬೆಲೆಯಲ್ಲಿ 9, 1.25 ಕೋಟಿಗೆ 4, 1 ಕೋಟಿಗೆ 17, 75 ಲಕ್ಷಕ್ಕೆ 42, 50 ಲಕ್ಷಕ್ಕೆ 4, 40 ಲಕ್ಷಕ್ಕೆ 7 ಹಾಗೂ 30 ಲಕ್ಷ ಬೇಸ್​​ ಪ್ರೈಸ್​ಗೆ 227 ಮಂದಿ ಆಟಗಾರರು ಹರಾಜಿಗಿದ್ದಾರೆ.
ಇದನ್ನೂ ಓದಿ: 74 ರನ್​ಗಳಿಗೆ ಸೌತ್ ಆಫ್ರಿಕಾ ಆಲೌಟ್.. 101 ರನ್​ಗಳ ಅಂತರದಲ್ಲಿ ಗೆದ್ದ ಭಾರತ ತಂಡ..!
/filters:format(webp)/newsfirstlive-kannada/media/post_attachments/wp-content/uploads/2024/11/ASHWIN_IPL.jpg)
ಅದೃಷ್ಟ ಪರೀಕ್ಷೆಗಿಳಿದ 14 ಮಂದಿ ಕನ್ನಡಿಗರು
ಕರ್ನಾಟಕದ ಆಟಗಾರರು ಕೂಡ ಐಪಿಎಲ್​ ಮಿನಿ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಶನ್​ನ 14 ಮಂದಿ ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಮಯಾಂಕ್​ ಅಗರ್​ವಾಲ್​, ಅಭಿನವ್​ ಮನೋಹರ್​, ವಿಧ್ವತ್​ ಕಾವೇರಪ್ಪ, ಮನೋಜ್​ ಬಾಂಡಗೆ ಆಕ್ಷನ್​ ಅಖಾಡದಲ್ಲಿರೋ ಪ್ರಮುಖ ಆಟಗಾರರಾಗಿದ್ದಾರೆ. 75 ಲಕ್ಷ ಮೂಲ ಬೆಲೆಗೆ ಹರಾಜಿಗಿರೋ ಮಯಾಂಕ್​ ಖರೀದಿಗೆ ಆರ್​​ಸಿಬಿ ಆಸಕ್ತಿ ಹೊಂದಿದೆ.
18 ಕೋಟಿ ಫೈನಲ್​!
ಫ್ರಾಂಚೈಸಿಗಳ ವಿದೇಶಿ ಆಟಗಾರರ ವ್ಯಾಮೋಹಕ್ಕೆ ಕಡಿವಾಣ ಹಾಕಲು ಮುಂದಾಗಿರೋ ಬಿಸಿಸಿಐ, ಹೊಸ ನಿಯಮವನ್ನ ಪರಿಚಯಿಸಿದೆ. ವಿದೇಶಿ ಆಟಗಾರರಿಗೆ ಗರಿಷ್ಠ 18 ಕೋಟಿ ಹಣವನ್ನ ಮಾತ್ರ ನೀಡುವ ನಿಯಮವನ್ನ ಬಿಸಿಸಿಐ ರೂಪಿಸಿದೆ. 18 ಕೋಟಿಗೂ ಅಧಿಕ ಹಣವನ್ನ ಬಿಡ್​ ಮಾಡೋಕೆ ಅವಕಾಶವಿದೆ. ಆಟಗಾರರಿಗೆ ಕೇವಲ 18 ಕೋಟಿ ಮಾತ್ರ ಸಿಗಲಿದ್ದು, ಉಳಿದ ಹಣವನ್ನ ಬಿಸಿಸಿಐಗೆ ನೀಡಬೇಕಿದೆ. ಈ ಹಣವನ್ನ ಬಿಸಿಸಿಐ, ಆಟಗಾರರ ಕಲ್ಯಾಣಕ್ಕೆ ಉಪಯೋಗಿಸಲಿದೆ.
ಐಪಿಎಲ್​ ಮಿನಿ ಆಕ್ಷನ್​ಗೆ ಬಿಸಿಸಿಐ ಫೈನಲ್​ ಲಿಸ್ಟ್​ ಅನೌನ್ಸ್​ ಮಾಡಿದ ಬೆನ್ನಲ್ಲೇ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಜೋರಾಗಿದೆ. ಅಸಲಿ ಸಿದ್ಧತೆ ಈಗ ಆರಂಭವಾಗಿದ್ದು, ಸ್ಟ್ರೇಂಥ್​ & ವೀಕ್​ನೆಸ್​ ಜೊತೆಗೆ ಹಣದ ಲೆಕ್ಕಾಚಾರ ಹಾಕ್ತಿರೋ ಫ್ರಾಂಚೈಸಿಗಳು ತಂಡಕ್ಕೆ ಬೇಕಾದ ಆಟಗಾರರ ಟಾರ್ಗೆಟ್​ ಲಿಸ್ಟ್​ ರೆಡಿ ಮಾಡಿಕೊಳ್ತಿವೆ. ಅಂತಿಮವಾಗಿ ಯಾವೆಲ್ಲಾ ಆಟಗಾರರು.? ಯಾವ ತಂಡದ ಪಾಲಾಗ್ತಾರೆ.? ಮಿನಿ ಆಕ್ಷನ್​ನಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಗಿಲ್​​, ಸೂರ್ಯ​ ಫೇಲ್, ಭಾರೀ ಆಕ್ರೋಶ.. ಜನ ಮೆಚ್ಚಿದ ಪಾಂಡ್ಯ ಆಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us