ಕನ್ನಡಿಗನ ಕನಸು ಬಹು ದೊಡ್ಡದು.. ಅದೊಂದು ಆಸೆ ಈಡೇರುತ್ತಾ..?

ಕೆ.ಎಲ್.ರಾಹುಲ್ ಟಿ20 ಕರಿಯರ್ ಬಹುತೇಕ ಅಂತ್ಯವಾಗಿದೆ. ಏಕದಿನ, ಟೆಸ್ಟ್​ಗೆ ಮಾತ್ರವೇ ಸಿಮೀತವಾಗಿರುವ ಕನ್ನಡಿಗನ ಕನಸು ಮಾತ್ರ ಬಹು ದೊಡ್ಡದಿದೆ. ಅದೇ 2026ರ ಟಿ20 ವಿಶ್ವಕಪ್​ ಆಡಬೇಕು ಅನ್ನೋದು.

author-image
Ganesh Kerekuli
K L Rahul

ಕೆ.ಎಲ್.ರಾಹುಲ್ Photograph: (@klrahul)

Advertisment

ಕೆ.ಎಲ್.ರಾಹುಲ್ ಟಿ20 ಕರಿಯರ್ ಬಹುತೇಕ ಅಂತ್ಯವಾಗಿದೆ. ಏಕದಿನ, ಟೆಸ್ಟ್​ಗೆ ಮಾತ್ರವೇ ಸಿಮೀತವಾಗಿರುವ ಕನ್ನಡಿಗನ ಕನಸು ಮಾತ್ರ ಬಹು ದೊಡ್ಡದಿದೆ. ಅದೇ 2026ರ ಟಿ20 ವಿಶ್ವಕಪ್​ ಆಡಬೇಕು ಅನ್ನೋದು. 

2025ರ ಏಷ್ಯಾಕಪ್​​ಗೆ ದಿನಗಣನೆ ಶುರುವಾಗಿದೆ. ಈ ಮಹತ್ವದ ಟೂರ್ನಿಯಲ್ಲಿ ಯಾರು ಸ್ಥಾನ ಪಡೆದುಕೊಳ್ತಾರೆ ಎಂಬ ಕ್ಯೂರಿಯಾಸಿಟಿ ಮನೆ ಮಾಡಿದೆ. ಕನ್ನಡಿಗ ಕೆ.ಎಲ್.ಹೆಸರು ಈ ಸೆಲೆಕ್ಷನ್​ ರೇಸ್​​ನಲ್ಲಿ ಜೋರಾಗಿ ಓಡಾಡ್ತಿದೆ. ರಾಹುಲ್​ ಮಾತ್ರ, ಏಷ್ಯಾಕಪ್​ ಅಲ್ಲ. ನನ್ನ ಟಾರ್ಗೆಟ್ 2026ರ ಟಿ20 ವಿಶ್ವಕಪ್ ಅಂತಿದ್ದಾರೆ. 

K.L.ರಾಹುಲ್​ಗೆ ಟಿ20 ಕಮ್​ಬ್ಯಾಕ್ ಕನಸು

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​, ಆಲ್ ಫಾರ್ಮೆಟ್​ ಪ್ಲೇಯರ್, ಫ್ಲೆಕ್ಸಿಬಲ್ ಕೆ.ಎಲ್.ರಾಹುಲ್, ಈತ ಟಿ20 ತಂಡದಿಂದ ದೂರವಾಗಿ ವರ್ಷಗಳೇ ಉರುಳುತ್ತಿವೆ. ಏಷ್ಯಾಕಪ್​ಗೆ ಟಿ20 ತಂಡದ ಪ್ರಕಟಿಸುವ ಹೊತ್ತಿನಲ್ಲೇ ಕೆ.ಎಲ್.ರಾಹುಲ್ ಟಿ20 ತಂಡಕ್ಕೆ ಕಮ್​ಬ್ಯಾಕ್ ಕನಸು ಕಾಣ್ತಿದ್ದಾರೆ. 2026ರ ಟಿ20 ವಿಶ್ವಕಪ್​​ನಲ್ಲಿ ಆಡುವ ಬಯಕೆ ಹೊಂದಿದ್ದಾರೆ. ಇದು ನಿಜಕ್ಕೂ ಅಷ್ಟು ಸುಲಭದ್ದಾ ಅಂದ್ರೆ ಖಂಡಿತ ಇಲ್ಲ.

ಇದನ್ನೂ ಓದಿ: ಫಿಲ್ ಸಾಲ್ಟ್​​​ರನ್ನ ಬಿಟ್ಟುಕೊಡುತ್ತಾ RCB? ಕೆಕೆಆರ್​ ಜೊತೆ ಆರ್​ಸಿಬಿ ಬಿಗ್ ಡೀಲ್..?

2022 ನವೆಂಬರ್​ 10. ಅಡಿಲೇಡ್​​ನಲ್ಲಿ ಇಂಗ್ಲೆಂಡ್​ ಎದುರಿನ ಟಿ20 ವಿಶ್ವಕಪ್​ ಸೆಮಿಫೈನಲ್. ಈ ಸೆಮಿಫೈನಲ್​ ಪಂದ್ಯವಾಡಿದ್ದೇ ಕೊನೆ. ಈ ಬಳಿಕ ಟಿ20ಯಿಂದಲೇ ಹೊರಬಿದ್ದ ರಾಹುಲ್​ಗೆ ಮತ್ತೆ ಟೀಮ್​ ಇಂಡಿಯಾ ಟಿ20 ತಂಡದ ಡೋರ್​ ಓಪನ್​ ಆಗಿಲ್ಲ. 2024ರ ಟಿ20 ವಿಶ್ವಕಪ್​​​ ಕನಸು ಕೂಡ ಭಗ್ನವಾಗಿತ್ತು. ಕೇವಲ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಮಾತ್ರವೇ ಸ್ಥಾನ ಉಳಿಸಿಕೊಂಡಿರುವ ರಾಹುಲ್​, ಈಗ 2026ರ ಟಿ20 ವಿಶ್ವಕಪ್​ ಆಡುವ ಕನಸು ಕಾಣ್ತಿದ್ದಾರೆ.

ರಾಹುಲ್ ಟಿ20 ಭವಿಷ್ಯ!

ಸೀಸನ್​-18ರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆ.ಎಲ್.ರಾಹುಲ್, ಕಳೆದ ಸೀಸನ್​ನಲ್ಲಿ 3 ಹಾಗೂ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಾರೆ. ಸಕ್ಸಸ್​ ಕೂಡ ಕಂಡಿದ್ದಾರೆ. 2024ರ ಟಿ20 ವಿಶ್ವಕಪ್​ ಆಯ್ಕೆಗೆ ಮಿಡಲ್ ಆರ್ಡರ್​ ಬ್ಯಾಟರ್ ಅಲ್ಲ ಸಬೂಬು ನೀಡಿದವರಿಗೆ ಉತ್ತರ ಕೊಟ್ಟಿದ್ದಾರೆ. ಯಾವುದೇ ರೋಲ್ ಪ್ಲೇ ಮಾಡೋಕೆ ರೆಡಿ ಎಂದಿರುವ ರಾಹುಲ್​ಗೆ, ರಿಷಭ್ ಪಂತ್ ಇಂಜುರಿ ವರವಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ.. ಬೆಂಗಳೂರಿಗೆ ಆಗ್ತಿರುವ ನಷ್ಟಗಳು ಏನೇನು..?

ಪಂತ್​ ಬದಲಿ ಆಟಗಾರನಾಗಿ ಏಷ್ಯಾಕಪ್​ ತಂಡಕ್ಕೆ ಎಂಟ್ರಿ ಕೊಟ್ಟು 2026ರ ಟಿ20 ವಿಶ್ವಕಪ್ ಕನಸು ನನಸು ಮಾಡಿಕೊಳ್ಳೋ ಲೆಕ್ಕಾಚಾರ ರಾಹುಲ್​​ರದ್ದು. ಇದಕ್ಕೆ ಆರ್​ಸಿಬಿ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಜಿತೇಶ್ ಶರ್ಮಾ ಅಡ್ಡಗೋಡೆಯಾಗಿದ್ದಾರೆ. ಒಂದ್ಕಡೆ ಸಾಲಿಡ್ ಫಾರ್ಮ್​ನಲ್ಲಿರುವ ಸಂಜು ಸ್ಯಾಮ್ಸನ್​​ ಇದ್ರೆ, ಮತ್ತೊಂದ್ಕಡೆ ಲೋವರ್ ಆರ್ಡರ್​ನಲ್ಲಿ ಆಡಬಲ್ಲ ಜಿತೇಶ್ ಶರ್ಮಾ ಇದ್ದಾರೆ. ರಾಹುಲ್​​ ಇವರಿಬ್ಬರನ್ನ ಹಿಂದಿಕ್ಕಿ ತಂಡಕ್ಕೆ ಆಯ್ಕೆಯಾಗಬೇಕಿದೆ.

6 ತಿಂಗಳಷ್ಟೇ ಬಾಕಿ

2026ರ ಟಿ20 ವಿಶ್ವಕಪ್​ ಫೆಬ್ರವರಿಯಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾ, ಏಷ್ಯಾಕಪ್​, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯನ್ನಷ್ಟೇ ಆಡಲಿದೆ. ಫಿಟ್ ಆದ ಬಳಿಕ ರಿಷಭ್ ಪಂತ್ ಟಿ20ಗೆ ಕಮ್​ಬ್ಯಾಕ್ ಮಾಡೋದು ಫಿಕ್ಸ್. ಟಾಪ್ ಆರ್ಡರ್​ನಲ್ಲಿ ಆಡೋಕೆ ಸಂಜು ರೆಡಿಯಾಗಿದ್ದಾರೆ. ಓಪನಿಂಗ್ ಸ್ಲಾಟ್​​ನಲ್ಲಿ ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಯಶ್ವಸ್ವಿ ಜೈಸ್ವಾಲ್ ನಡುವೆಯೇ ಫೈಟ್​ ಇದೆ. ವಾಸ್ತವ ಹೀಗಿರೋವಾಗ ಕೆ.ಎಲ್.ರಾಹುಲ್, ಟಿ20 ಕಮ್​ಬ್ಯಾಕ್ ಸಾಧ್ಯಾನಾ? 

ಇದನ್ನೂ ಓದಿ:ಧೋನಿಯ 100 ಕೋಟಿ ಕೇಸ್​​ಗೆ 12 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್​.. ಏನಿದು ಪ್ರಕರಣ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

KL Rahul KL Rahul T20
Advertisment