ದ್ರಾವಿಡ್, ಸಂಜು ಬಳಿಕ ಮತ್ತೊಂದು ವಿಕೆಟ್.. KKR ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯೋ ಪ್ಲಾನ್

ಐಪಿಎಲ್​ಗೂ ಮುನ್ನ ಕೊಲ್ಕತ್ತಾ ನೈಟ್​​ ರೈಡರ್ಸ್​ ಫ್ರಾಂಚೈಸಿ ಸಿದ್ಧತೆ ಜೋರಾಗಿದೆ. ಸಂಜು ಸ್ಯಾಮ್ಸನ್​ನ ಖರೀದಿಸಲು ಶತ ಪ್ರಯತ್ನ ನಡೆಸ್ತಿರೋ ಕೆಕೆಆರ್ ಇದೀಗ ಹೊಸ ದಾಳ ಉರುಳಿಸಿದೆ. ರಾಜಸ್ಥಾನ್​​ ರಾಯಲ್ಸ್​​ ತಂಡದ ಮತ್ತೊಬ್ಬ ಬಿಗ್​ಸ್ಟಾರ್​​ಗೆ ಕೆಕೆಆರ್​ ಗಾಳ ಹಾಕಿದೆ.

author-image
Ganesh Kerekuli
Dravid sanju samson
Advertisment

ಐಪಿಎಲ್​ಗೂ ಮುನ್ನ ಕೊಲ್ಕತ್ತಾ ನೈಟ್​​ ರೈಡರ್ಸ್​ ಫ್ರಾಂಚೈಸಿ ಸಿದ್ಧತೆ ಜೋರಾಗಿದೆ. ಸಂಜು ಸ್ಯಾಮ್ಸನ್​ನ ಖರೀದಿಸಲು ಶತ ಪ್ರಯತ್ನ ನಡೆಸ್ತಿರೋ ಕೆಕೆಆರ್ ಇದೀಗ ಹೊಸ ದಾಳ ಉರುಳಿಸಿದೆ. ರಾಜಸ್ಥಾನ್​​ ರಾಯಲ್ಸ್​​ ತಂಡದ ಮತ್ತೊಬ್ಬ ಬಿಗ್​ಸ್ಟಾರ್​​ಗೆ ಕೆಕೆಆರ್​ ಗಾಳ ಹಾಕಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ರಾಜಸ್ಥಾನ್​ ರಾಯಲ್ಸ್​ನಲ್ಲಿ 2 ವಿಕೆಟ್​ ಪತನವಾಗಲಿವೆ. 

ಏಷ್ಯಾಕಪ್​ ಅಬ್ಬರದ ನಡುವೆ ಐಪಿಎಲ್​ನ ಗದ್ದಲ ಕೂಡ ಜೋರಾಗಿದೆ. ಈಗಾಗಲೇ ರಾಹುಲ್ ದ್ರಾವಿಡ್ ಆರ್​ಆರ್​ಗೆ ಗುಡ್ ಬೈ ಹೇಳಿದ್ದಾರೆ. ಮತ್ತೊಂದ್ಕಡೆ ಸಂಜು ಸ್ಯಾಮ್ಸನ್​ ಗುಡ್​ ಬೈ ಹೇಳೋಕೆ ಮುಂದಾಗಿರೋದು ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ತಿದೆ. ಸಂಜುವಿನ ಮುಂದಿನ ದಾರಿ ಯಾವುದಯ್ಯಾ? ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದ್ರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಸಂಜು ಸ್ಯಾಮ್ಸನ್​ ಮಾತ್ರವಲ್ಲ.. ರಾಜಸ್ಥಾನ್​ ರಾಯಲ್ಸ್​ನಲ್ಲಿ ಮತ್ತೊಂದು ವಿಕೆಟ್​​ ಉರುಳೋ ಸಾಧ್ಯತೆ ದಟ್ಟವಾಗಿದೆ. 

ಮತ್ತೊಂದು ವಿಕೆಟ್​ ಪತನ?

ರಾಜಸ್ಥಾನ್​ ರಾಯಲ್ಸ್​ ತಂಡದ ಡೈರೆಕ್ಟರ್​ ಆಫ್​ ಕ್ರಿಕೆಟ್​​ ಕುಮಾರ್​ ಸಂಗಾಕ್ಕರ ಫ್ರಾಂಚೈಸಿಗೆ ಗುಡ್​ ಬೈ ಹೇಳೋಕೆ ಹೊರಟಿದ್ದಾರೆ ಅನ್ನೋ ಹೊಸ ಸುದ್ದಿ ಹೊರಬಿದ್ದಿದೆ. ರಾಜಸ್ಥಾನ ತಂಡಕ್ಕೆ ಕಳೆದ ವರ್ಷ ದ್ರಾವಿಡ್ ಹೆಡ್​ ಕೋಚ್​ ಆಗಿ​ ವಾಪಾಸ್ಸಾದ ಬಳಿಕ ಕುಮಾರ್​ ಸಂಗಾಕ್ಕರಗೆ ಹೆಚ್ಚಿನ ಆದ್ಯತೆ ಸಿಕ್ಕಿರಲಿಲ್ಲ. ಮುಂದಿನ ಸೀಸನ್​​ಗೂ ಮುನ್ನ ಕುಮಾರ್​ ಸಂಗಾಕ್ಕರ ರಾಜಸ್ಥಾನ್​​ ರಾಯಲ್ಸ್​ ತೊರೆದು ಬೇರೊಂದು ಫ್ರಾಂಚೈಸಿ ಸೇರಲು ಚಿಂತಿಸಿದ್ದಾರೆ. 

ಇದನ್ನೂ ಓದಿ:ಕೊಹ್ಲಿಯನ್ನೂ ಮೀರಿಸೋ ರೇಂಜ್​​ಗೆ ಪಾಂಡ್ಯ.. ಒಂದು ಇನ್​ಸ್ಟಾ ಪೋಸ್ಟ್​ಗೆ ಎಷ್ಟು ಚಾರ್ಜ್​ ಮಾಡ್ತಾರೆ..?

ಕೊಲ್ಕತ್ತಾ ನೈಟ್​ ರೈಡರ್ಸ್​ ಸೇರ್ತಾರಾ ಸಂಗಾಕ್ಕರ..?

ರಾಜಸ್ಥಾನ್​ ರಾಯಲ್ಸ್​ನ ತೊರೆಯಲು ಮುಂದಾಗಿರೋ ಸಂಗಾಕ್ಕರ ಕೊಲ್ಕತ್ತಾ ನೈಟ್​​ ರೈಡರ್ಸ್​ ಸೇರ್ತಾರೆ ಎಂಬ ಸುದ್ದಿ ಹರಿದಾಡ್ತಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರಕಾಂತ್​ ಪಂಡಿತ್​ಗೆ ಕೊಕ್​ ನೀಡಿರುವ ಕೆಕೆಆರ್​​​ ಹೊಸ ಹೆಡ್​ಕೋಚ್​ಗಾಗಿ ಹುಡುಕಾಟ ನಡೆಸ್ತಿದೆ. ಶಾರೂಖ್​ ಖಾನ್​​ ಫ್ರಾಂಚೈಸಿಯ ಕಣ್ಣು ಸಂಗಾಕ್ಕರ ಮೇಲೆ ಬಿದ್ದಿದ್ದು, ಈಗಾಗಲೇ ಅಪ್ರೋಚ್​ ಮಾಡಲಾಗಿದೆ ಎನ್ನಲಾಗ್ತಿದೆ. 

ಗುರುವಿನಿಂದಲೇ ಶಿಷ್ಯನಿಗೆ ಕೆಕೆಆರ್​​​ ಗಾಳ?

ಕುಮಾರ್​​ ಸಂಗಾಕ್ಕರ ಕರೆತರಲು ಪ್ರಯತ್ನಿಸ್ತಾ ಇರೋ ಕೆಕೆಆರ್​​ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲಾನ್​ ರೂಪಿಸಿದೆ. ಒಂದೆಡೆ ಹೊಸ ಹೆಡ್​​ಕೋಚ್​ ಕರೆ ತರೋದ್ರ ಜೊತೆಗೆ ಹೊಸ ನಾಯಕನನ್ನೂ ಸೆಳೆಯಲು ಮುಂದಾಗಿದೆ. ಗುರು ಸಂಗಾಕ್ಕರನ ತಂಡಕ್ಕೆ ಕರೆ ತಂದ್ರೆ ಶಿಷ್ಯ ಸಂಜು ಸ್ಯಾಮ್ಸನ್ ಬುಟ್ಟಿಗೆ ಹಾಕಿಕೊಳ್ಳೋದು ಇನ್ನಷ್ಟು ಸುಲಭ ಅನ್ನೋದು ಕೆಕೆಆರ್​​ ಫ್ರಾಂಚೈಸಿಯ ಪ್ಲಾನ್​ ಆಗಿದೆ. 

ಇದನ್ನೂ ಓದಿ:ಶ್ರೀಮಂತ ಕ್ರಿಕೆಟ್​​ ಲೀಗ್​ನಲ್ಲಿ ಆರ್​ಸಿಬಿಯೇ ಕಿಂಗ್.. ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಲಿಸ್ಟ್..!

Rahul dravid

ಸಂಜು ಸ್ಯಾಮ್ಸನ್​ ಮೇಲೆ ಕೆಕೆಆರ್​ಗೆ ಅತೀವ ಆಸಕ್ತಿ

ಸಂಜು ಸ್ಯಾಮ್ಸನ್​ ಖರೀದಿಗೆ ಕೊಲ್ಕತ್ತಾ ನೈಟ್ ರೈಡರ್ಸ್​​ ಫ್ರಾಂಚೈಸಿ ಅತೀವ ಆಸಕ್ತಿ ಹೊಂದಿದೆ. ವಿಕೆಟ್​ ಕೀಪರ್​, ನಾಯಕನ ಹುಡುಕಾಟದಲ್ಲಿರೋ ಕೆಕೆಆರ್​​​, ಶತಯಾಗತಾಯ ಸಂಜುನ ತಂಡಕ್ಕೆ ಕರೆ ತರಲು ಪಣತೊಟ್ಟಿದ್ದು ಅದಕ್ಕಾಗಿ 3 ಪ್ಲಾನ್​ಗಳನ್ನೂ ರೂಪಿಸಿದೆ. ಅದ್ರಲ್ಲಿ ಮೊದಲನೇ ಪ್ಲಾನೇ ಟ್ರೇಡಿಂಗ್​. ಆಟಗಾರರ ವರ್ಗಾವಣೆ ನಿಯಮದಡಿ ರಾಜಸ್ಥಾನ್​ ಫ್ರಾಂಚೈಸಿ ಜೊತೆಗೆ ಚರ್ಚಿಸಿ ವೆಂಕಟೇಶ್​ ಅಯ್ಯರ್​ನ ಬಿಟ್ಟು ಕೊಟ್ಟು ಸಂಜುವನ್ನ ಖರೀದಿಸಲು ಕೆಕೆಆರ್​ ಮುಂದಾಗಿದೆ.  

ಮೊದಲ ಪ್ಲಾನ್​ ವರ್ಕೌಟ್​ ಆಗಲಿಲ್ಲ ಅಂದ್ರೆ ಕೆಕೆಆರ್​ ಬಳಿ ಪ್ಲಾನ್​ ಬಿ ಕೂಡ ರೆಡಿಯಾಗಿದೆ. ಪ್ಲೇಯರ್ಸ್​​ ವರ್ಗಾವಣೆ ಮತ್ತು ಕ್ಯಾಶ್​ ಡೀಲ್​ನ ಆಫರ್​ ಮಾಡಲು ಕೆಕೆಆರ್​ ಚಿಂತಿಸಿದೆ. ಮೂಲಗಳ ಪ್ರಕಾರ ತಂಡದ ಯುವ ಆಟಗಾರರಾದ ಅಂಗ್​​ಕ್ರಿಶ್​​ ರಘವಂಶಿ ಅಥವಾ ರಮಣ್​ದೀಪ್​ ಸಿಂಗ್​ ಇಬ್ಬರಲ್ಲಿ ಒಬ್ಬರನ್ನ ಬಿಟ್ಟು ಕೊಟ್ಟು, ಉಳಿದ ಹಣವನ್ನ ಕ್ಯಾಶ್​​ ರೂಪದಲ್ಲಿ ನೀಡಲು ಕೆಕೆಆರ್​​ ಪ್ಲಾನ್​ ರೂಪಿಸಿಕೊಂಡಿದೆ. 

ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್ ನಿಂದ ರಾಹುಲ್ ದ್ರಾವಿಡ್‌ ರನ್ನು ಕಿಕ್ ಔಟ್ ಮಾಡಲಾಗಿದೆ ಎಂದ ಎಬಿ ಡಿವಿಲಿಯರ್ಸ್!

Sanju Samson
ಸಂಜು ಸ್ಯಾಮ್ಸನ್

ಕೆಕೆಆರ್​​ನ ಪ್ಲಾನ್​ ಸಿ ಫುಲ್​ ಕ್ಯಾಶ್​ ಡೀಲ್​. ಇದೇನಾದ್ರೂ ವರ್ಕೌಟ್​ ಆದ್ರೆ ಗುಜರಾತ್​​ ಟೈಟನ್ಸ್​, ಮುಂಬೈ ಇಂಡಿಯನ್ಸ್​ ನಡುವೆ ಹಾರ್ದಿಕ್​ ಪಾಂಡ್ಯ ವರ್ಗಾವಣೆಯ ಡೀಲ್​ ನಡೀತಲ್ವಾ? ಅದಕ್ಕಿಂತ ಬಿಗ್​ ಡೀಲ್​ ಇದಾಗಲಿದೆ. ಅಂದು ಹಾರ್ದಿಕ್​ ಪಾಂಡ್ಯನ ಮುಂಬೈ ಖರೀದಿಸಿದ್ದು 15 ಕೋಟಿಗೆ. ಕೆಕೆಆರ್ ಬರೋಬ್ಬರಿ 18 ಕೋಟಿಗೂ ಅಧಿಕ ಹಣವನ್ನ ನೀಡಿ ಸಂಜು ಸ್ಯಾಮ್ಸನ್​​ ಖರೀದಿಸಲು ಮುಂದಾಗಿದೆ. 

ಒಂದು ವೇಳೆ ಸಂಜು ಸ್ಯಾಮ್ಸನ್​ ಮಿನಿ ಆಕ್ಷನ್​ ಕಣಕ್ಕೆ ಹೋದ್ರೂ ಕೂಡ ಕೆಕೆಆರ್​​​ ಬಿಗ್​ ಪರ್ಸ್​ನೊಂದಿಗೆ ಆಕ್ಷನ್​ ಅಖಾಡಕ್ಕಿಳಿದು ಬಿಡ್​ ಮಾಡೋ ಲೆಕ್ಕಾಚಾರದಲ್ಲಿದೆ. ಒಟ್ಟಿನಲ್ಲಿ, ಮುಂದಿನ ಸೀಸನ್​​ಗೂ ಮುನ್ನ ಬಲಿಷ್ಠ ತಂಡ ಕಟ್ಟಲು ಕೆಕೆಆರ್​​ ಸಕಲ ಪ್ರಯತ್ನವನ್ನ ಮಾಡ್ತಿದೆ. ಕೋಚ್​ ಆಗಿ ಸಂಗಾಕ್ಕರ ಕರೆತರಲು ಮುಂದಾಗಿರೋ ಕೆಕೆಆರ್​, ನಾಯಕನಾಗಿ ಸಂಜುವನ್ನ ಸೆಳೆಯಲು ಪ್ಲಾನ್​​ ರೂಪಿಸಿದೆ. ಇದು ಎಷ್ಟರಮಟ್ಟಿಗೆ ವರ್ಕೌಟ್​ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. 

ಇದನ್ನೂ ಓದಿ:ಐಪಿಎಲ್​ ಆಡ್ಲಿಲ್ಲ, ವಿಶ್ವಕಪ್​ನಲ್ಲೂ ಇಲ್ಲ.. ಎಲ್ಲಿಗೆ ಹೋದ್ರು ಕನ್ನಡತಿ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

kumara sangakkara Rahul Dravid resigns Sanju Samson KKR Plan
Advertisment