/newsfirstlive-kannada/media/media_files/2025/09/01/shreyanka-patil-2025-09-01-17-53-16.jpg)
ಕ್ರಿಕೆಟ್ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸೂಪರ್ಸ್ಟಾರ್ ಆಗಿ ಮೆರೆದಾಡಿದ ಟೀಮ್ ಇಂಡಿಯಾ ಆಲ್ರೌಂಡರ್. ಕನ್ನಡತಿ ಶ್ರೇಯಾಂಕ ಪಾಟೀಲ್ ಎಲ್ಲೊದ್ರು? ಕಳೆದ ಸೀಸನ್ WPLನಲ್ಲೂ ದರ್ಶನ ನೀಡಲಿಲ್ಲ. ಮುಂಬರೋ ವಿಶ್ವಕಪ್ ತಂಡದಲ್ಲೂ ಇಲ್ಲ. ಟೀಮ್ ಇಂಡಿಯಾ ಪರ ಕೊನೆಯದಾಗಿ 2024ರ ಅಕ್ಟೋಬರ್ನಲ್ಲಿ ಕಾಣಿಸಿಕೊಂಡ ಟಗರು ಪುಟ್ಟಿ ಎಲ್ಲೋದ್ರು ಅನ್ನೋದಕ್ಕೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ನಿಂದ ರಾಹುಲ್ ದ್ರಾವಿಡ್ ರನ್ನು ಕಿಕ್ ಔಟ್ ಮಾಡಲಾಗಿದೆ ಎಂದ ಎಬಿ ಡಿವಿಲಿಯರ್ಸ್!
ಇಂಜುರಿಗೆ ತುತ್ತಾಗಿ ಆನ್ಫೀಲ್ಡ್ ಆಟದಿಂದ ದೂರಾಗಿರೋ ಪಾಟೀಲ್, ಆಫ್ ದ ಫೀಲ್ಡ್ನಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಡಾನ್ಸ್, ಹಾಡು, ರೀಲ್ಸ್, ಸುತ್ತಾಟ ಅಂತಾ ಸಿಕ್ಕಿರೋ ಬಿಡುವಿನ ಸಮಯವನ್ನ ಫುಲ್ ಎಂಜಾಯ್ ಮಾಡ್ತಿದ್ದಾರೆ. ಶ್ರೇಯಾಂಕ ಪಾಟೀಲ್ ಆನ್ಫೀಲ್ಡ್ನಿಂದ ದೂರಾಗಿ ಕೆಲವು ತಿಂಗಳುಗಳೇ ಆದ್ವು. ಇದು ಶ್ರೇಯಾಂಕ ಮಾರ್ಕೆಟ್ ವ್ಯಾಲ್ಯೂಗೆ ಯಾವ ಹೊಡೆತನೂ ಕೊಟ್ಟಿಲ್ಲ.. ಈಗಲೂ ಟಾಪ್ ಬ್ರ್ಯಾಂಡ್ಗಳು ಶ್ರೇಯಾಂಕ ಕಾಲ್ಶೀಟ್ಗೆ ಕಾಯ್ತಿವೆ. ಸದ್ಯ ಬಿಡುವಿನಲ್ಲಿರೋ ಟಗರುಪುಟ್ಟಿ ಶೂಟ್ಗಳಲ್ಲಿ ಭಾಗಿಯಾಗ್ತಿದ್ದಾರೆ.
ಇದನ್ನೂ ಓದಿ:ಅಭಿಷೇಕ್, ಸಂಗಕ್ಕಾರ ಮಧ್ಯೆ ರೇಸ್.. ಈ IPL ತಂಡದ ಹೆಡ್ ಕೋಚ್ ಯಾರು ಆಗ್ತಾರೆ?
ಮರ್ಸಿಡಿಸ್ ಬೆಂಜ್ನಂತಾ ಟಾಪ್ ಬ್ರ್ಯಾಂಡ್ ಜೊತೆಗೆ ಟೈ ಅಪ್ ಆಗಿರೋ ಶ್ರೇಯಾಂಕ, ಶೂಟ್ನಲ್ಲಿ ಭಾಗಿಯಾದ ವೇಳೆ ರೇಸ್ ಕಾರ್ನಲ್ಲಿ ರೌಂಡ್ ಹೊಡೆದಿದ್ದಾರೆ. ಶರವೇಗದ ರೈಡ್ಗೆ ದಂಗಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಶ್ರೇಯಾಂಕ ಪಾಟೀಲ್ ಸುತ್ತಾಟವನ್ನೂ ಜೋರಾಗಿ ಮಾಡ್ತಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್ಗೆ ಹಾರಿದ್ದ ಶ್ರೇಯಾಂಕ, ಲಂಡನ್ ಸುತ್ತಾಟ ನಡೆಸಿದ್ರು. ಲಾರ್ಡ್ಸ್ ಅಂಗಳದಿಂದ ವಿಂಬಲ್ಡನ್ವರೆಗೆ ತಿರುಗಾಟ ನಡೆಸಿದ್ರು.
ಡಾನ್ಸ್ ಅಂದ್ರೆ ಶ್ರೇಯಾಂಕ ಪಾಟೀಲ್ ಸಿಕ್ಕಾಪಟ್ಟೆ ಇಷ್ಟ. ಆಗಾಗ ರೀಲ್ಸ್ ಮಾಡಿ ಅದನ್ನ ಶೇರ್ ಮಾಡ್ತಾನೆ ಇರ್ತಾರೆ. ಈಗಲೂ ಅಷ್ಟೇ ಗೆಳತಿಯರೊಂದಿಗೆ ಡಾನ್ಸ್ ಮಾಡೋದನ್ನ ಮಿಸ್ ಮಾಡ್ತಿಲ್ಲ. ಬೆಂಗಳೂರಿನ ಎನ್ಸಿಎನಲ್ಲಿ ಶ್ರೇಯಾಂಕ ರಿಹ್ಯಾಬ್ಗೆ ಒಳಗಾಗಿದ್ದಾರೆ. ಇಲ್ಲೂ ಕೂಡ ರೀಲ್ಸ್ ಮಾಯೆ ಟಗರುಪುಟ್ಟಿಯನ್ನ ಬಿಟ್ಟಿಲ್ಲ. ಇಲ್ಲೂ ಕೂಡ ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಜೊತೆಗೆ ಈ ಔರಾ ಫಾರ್ಮಿಂಗ್ ರೀಲ್ಸ್ ಮಾಡಿದ್ರು.
ಇದನ್ನೂ ಓದಿ:ಭಾರತ ತಂಡದ ಓಪನರ್ ಸ್ಲಾಟ್ಗೆ ಬಿಗ್ ರೇಸ್.. ಏಷ್ಯಾಕಪ್ನಲ್ಲಿ ಆ ಅದೃಷ್ಟ ಸಿಗೋದು ಯಾರಿಗೆ?
ಕೇವಲ ರೀಲ್ಸ್ ಡಾನ್ಸ್ ಮಾತ್ರವಲ್ಲ. ಅಭ್ಯಾಸವನ್ನೂ ಶ್ರೇಯಾಂಕ ಪಾಟೀಲ್ ಬಿಟ್ಟಿಲ್ಲ. ನೆಟ್ಸ್ನಲ್ಲಿ ಸುದೀರ್ಘ ಕಾಲ ಅಭ್ಯಾಸವನ್ನೂ ನಡೆಸ್ತಾ ಆಟವನ್ನ ಇಂಪ್ರೂವ್ ಮಾಡಿಕೊಳ್ಳೋಕೆ ಶ್ರಮವಹಿಸ್ತಿದ್ದಾರೆ. ಎಲ್ಲಾ ಸರಿ ಇದ್ದಿದ್ರೆ ಶ್ರೇಯಾಂಕ ಪಾಟೀಲ್ ಭಾರತದಲ್ಲಿ ನಡೀತಿರೋ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕಿತ್ತು. ದುರಾದೃಷ್ಟ ಇಂಜುರಿ ಕಾರಣದಿಂದ ಅವಕಾಶ ಸಿಕ್ಕಿಲ್ಲ. ಆದಷ್ಟು ಬೇಗ ಶ್ರೇಯಾಂಕ ಫುಲ್ ಫಿಟ್ ಆಗಿ ಫೀಲ್ಡ್ಗೆ ಕಮ್ಬ್ಯಾಕ್ ಮಾಡಲಿ. ಆಫ್ ದ ಫೀಲ್ಡ್ನಂತೆ ಆನ್ಫೀಲ್ಡ್ನಲ್ಲೂ ಫ್ಯಾನ್ಸ್ನ ರಂಜಿಸಲಿ.
ಇದನ್ನೂ ಓದಿ:ಕಿಂಗ್ ಕೊಹ್ಲಿನ ಫಾಲೋ ಮಾಡ್ತಿರೋ ಯಂಗ್ ಪ್ಲೇಯರ್.. ಈಗ ಸ್ಟೈಲೀಶ್ ಸ್ಟಾರ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ