/newsfirstlive-kannada/media/media_files/2025/08/05/siraj_kohli-2-2025-08-05-16-52-37.jpg)
ಮೊಹಮ್ಮದ್ ಸಿರಾಜ್, ಟೀಮ್ ಇಂಡಿಯಾದ ಸಿಡಿಗುಂಡು. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಯಶಸ್ಸಿನ ಹಿಂದಿನ ಸೂತ್ರಧಾರ. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡಿ ಎದುರಾಳಿಯ ಹೆಡೆಮುರಿ ಕಟ್ಟಿದ ಹಂಟರ್. ಇಂಗ್ಲೆಂಡ್ ಪ್ರವಾಸದಲ್ಲಿ ಡೆಡ್ಲಿ ಸ್ಪೆಲ್ ಹಾಕಿದ ಸಿರಾಜ್, ಎದುರಾಳಿ ಇಂಗ್ಲೆಂಡ್ ತಂಡದ ಹೆಡೆಮುರಿಯ ಕಟ್ಟಿದ್ರು. ಬೂಮ್ರಾ ಹೊರತಾದ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ ಎಷ್ಟು ಸ್ಟ್ರಾಂಗ್ ಅನ್ನೋದನ್ನ ನಿರೂಪಿಸಿದ್ರು.
ಸಿರಾಜ್ ಲಾಂಗ್ ಸ್ಪೆಲ್
ಇಂಗ್ಲೆಂಡ್ ಸರಣಿಯಲ್ಲಿ ಎಲ್ಲರ ಗಮನ ಸೆಳೆದಿದ್ದು ಮೊಹಮ್ಮದ್ ಸಿರಾಜ್, ಲಾಂಗ್ ಸ್ಪೆಲ್. ಒಂದಲ್ಲ.. ಎರಡಲ್ಲ.. ಬರೋಬ್ಬರಿ 5 ಪಂದ್ಯಗಳಿಂದ ಬೌಲಿಂಗ್ ಮಾಡಿದ್ದು ಬರೋಬ್ಬರಿ 1113 ಬಾಲ್.. ಅಂದ್ರೆ, 185.3 ಓವರ್ಗಳು.
ಇದನ್ನೂ ಓದಿ: ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ಫ್ಯಾನ್ಸ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಎಂ.ಎಸ್ ಧೋನಿ!
/filters:format(webp)/newsfirstlive-kannada/media/media_files/2025/08/06/mohammed-siraj-2025-08-06-18-20-28.jpg)
ಇಂಗ್ಲೆಂಡ್ ಸರಣಿಯಲ್ಲಿ ಸಿರಾಜ್ ಬೌಲಿಂಗ್..!
ಇಂಗ್ಲೆಂಡ್ ಪ್ರವಾಸದ ಲೀಡ್ಸ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 27 ಓವರ್ ಬೌಲಿಂಗ್ ಮಾಡಿದ್ದ ಸಿರಾಜ್, 2ನೇ ಇನ್ನಿಂಗ್ಸ್ನಲ್ಲಿ 14 ಓವರ್ ಬೌಲ್ ಮಾಡಿದ್ರು. ಬರ್ಮಿಂಗ್ಹ್ಯಾಮ್ನ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ 19.3 ಓವರ್, 2ನೇ ಇನ್ನಿಂಗ್ಸ್ನಲ್ಲಿ 12 ಓವರ್ ಎಸೆದಿದ್ದ ಹೈದ್ರಾಬಾದ್ ಹಂಟರ್, ಲಾರ್ಡ್ಸ್ನ ಮೊದಲ ಇನ್ನಿಂಗ್ಸ್ 23.3 ಓವರ್ಸ್, 2ನೇ ಇನ್ನಿಂಗ್ಸ್ 13 ಓವರ್ಗಳನ್ನು ಎಸೆದಿದ್ರು. ಮ್ಯಾಂಚೆಸ್ಟರ್ನಲ್ಲಿ ಆಡಿದ ಒಂದೇ ಇನ್ನಿಂಗ್ಸ್ನಲ್ಲಿ 30 ಓವರ್ ಬೌಲಿಂಗ್ ಮಾಡಿದ್ದ ಸಿರಾಜ್, ಕೆನ್ನಿಂಗ್ಟನ್ ಓವಲ್ನಲ್ಲಿ 16.2 ಓವರ್, 2ನೇ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 30.1 ಓವರ್ ಬೌಲಿಂಗ್ ಮಾಡಿದ್ದರು.
ಸಿರಾಜ್ ಲಾಂಗ್ ಸ್ಪೆಲ್ ಹಿಂದಿದೆ ‘ಡಯಟ್ ಸೀಕ್ರೆಟ್’
ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳಿಗಿಂತ ವೇಗಿಗಳೇ ಹೆಚ್ಚು ಫಿಟ್ ಇರಬೇಕು. ಇದು ಕ್ರಿಕೆಟ್ ನಿಯಮ.. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಮೊಹಮ್ಮದ್ ಸಿರಾಜ್.. ಯಾಕಂದ್ರೆ 5 ಟೆಸ್ಟ್ ಮ್ಯಾಚ್ ಅಂದ್ರೆ ವರ್ಕ್ಲೋಡ್ ನೆಪದಲ್ಲಿ ಒಂದು ಮ್ಯಾಚ್ ಆದ್ರೂ ರೆಸ್ಟ್ ಮಾಡೋಣ ಅಂತಿರ್ತಾರೆ. ಬ್ಯಾಕ್ ಟು ಬ್ಯಾಕ್ ಸ್ಪೆಲ್ ಮಾಡಿದ್ರೂ ಸುಸ್ತಾಗಿ ಬಿಡ್ತಾರೆ. ಇದಕ್ಕೆ ಭಿನ್ನ ಮೊಹಮ್ಮದ್ ಸಿರಾಜ್, ಇದಕ್ಕೆ ಬೆಸ್ಟ್ ಎಕ್ಸಾಂಪಲ್ 185.1 ಓವರ್. ಇದೀಗ ಈ ಲಾಂಗ್ ಸ್ಪೆಲ್ ಸೀಕ್ರೆಟ್ ಸಿರಾಜ್ ವರ್ಕೌಟ್ ಅಂಡ್ ಡಯಟ್.
ಇದನ್ನೂ ಓದಿ:Poora Khol Diye Pasha; ಹೈದರಾಬಾದ್ ಸಂಸದನಿಗೆ ಬೌಲರ್ ಮೊಹಮ್ಮದ್ ಸಿರಾಜ್ ಕ್ಲಾಸಿ ಆನ್ಸರ್..?
ಲಾಂಗ್ ಸ್ಪೆಲ್ ಸೀಕ್ರೆಟ್
ಸಿರಾಜ್ ಫಿಟ್ನೆಸ್ ಮೇಲೆ ಫೋಕಸ್ ಮಾಡಿದ್ದಾರೆ. ಇದಕ್ಕಾಗಿ ಜಂಕ್ ಫುಡ್ನಿಂದ ದೂರ ಉಳಿದಿದ್ದಾರೆ. ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಪಾಲಿಸ್ತಿದ್ದಾರೆ. ಹೈದ್ರಾಬಾದ್ನಲ್ಲಿದ್ರೂ ಬಿರಿಯಾನಿ ತಿನ್ನುವುದು ಅಪರೂಪ. ಯಾವುದಾದರು ಸಮಾರಂಭಗಳಲ್ಲಿ ಮಾತ್ರವೇ ತಿನ್ನುತ್ತಾರೆ. ಅದು ಕೂಡ ಮನೆಯಲ್ಲಿ ಮಾಡಿರುವುದನ್ನ ಮಾತ್ರ. ಪಿಜ್ಜಾ, ಫಾಸ್ಟ್ ಫುಡ್ಗಳು ಸೇವಿಸಲ್ಲ. ಸಿರಾಜ್ ಆತನ ದೇಹದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದಾರೆ-ಮೊಹಮ್ಮದ್ ಇಸ್ಮಾಯಿಲ್, ಸಿರಾಜ್ ಸಹೋದರ
ಹೈದ್ರಾಬಾದ್ ಅಂದ್ರೆ ಬಿರಿಯಾನಿಗೆ ಫೇಮಸ್. ಮುಸಲ್ಮಾನರಾಗಿ ಬಿರಿಯಾನಿಯಿಂದ ದೂರ ಇರೋದು ಸ್ವಲ್ಪ ಕಷ್ಟನೇ. ಸಿರಾಜ್, ಡಯಟ್ ವಿಚಾರದಲ್ಲಿ ರಾಜಿಯನ್ನೇ ಮಾಡಿಕೊಳ್ಳಲಿಲ್ಲ. ಇದಕ್ಕೆ ಕಾರಣವಾಗಿದ್ದು ಆ ಒಂದು ಘಟನೆ.
ಸಿರಾಜ್ ಮನಸ್ಥಿತಿ ಬದಲಿಸಿದ್ದು ಚಾಂಪಿಯನ್ಸ್ ಟ್ರೋಫಿ
2025ರ ಚಾಂಪಿಯನ್ಸ್ ಟ್ರೋಫಿ. ಈ ಮಹತ್ವದ ಟೂರ್ನಿಯಲ್ಲಿ ಸರ್ಪ್ರೈಸಿಂಗ್ ರೀತಿಯಲ್ಲಿ ಮೊಹಮ್ಮದ್ ಸಿರಾಜ್ ಸ್ಥಾನ ಕಳೆದುಕೊಂಡಿದ್ದರು. ಇದರಿಂದ ಬೇಸರವಾಗಿದ್ದ ಸಿರಾಜ್, ಅಂದೇ ಕಮ್ಬ್ಯಾಕ್ ಶಪಥ ಮಾಡಿದ್ದರು. ಡಯಟ್, ವರ್ಕೌಟ್ ಮೇಲೆ ಫೋಕಸ್ ಮಾಡಿದ್ರಂತೆ..
ಸಿರಾಜ್ ಛಲಬಿಡಲ್ಲ..!
ಮೊಹಮ್ಮದ್ ಸಿರಾಜ್ರದ್ದು 100% ನೆವರ್ ಗಿವ್ ಅಫ್ ಅಟಿಟ್ಯೂಡ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಸಿಗದಿದ್ದಾಗಲೂ ಡಿಮೋಟಿವೇಟ್ ಆಗಿರಲಿಲ್ಲ. ಮತ್ತಷ್ಟು ಹೆಚ್ಚು ಕಠಿಣ ಶ್ರಮ ವಹಿಸಿದರು. ಜಿಮ್ನಲ್ಲಿ ಹೆಚ್ಚು ಬೆವರು ಹರಿಸುತ್ತಿದ್ದರು. ಫಿಟ್ನೆಸ್ ಮೇಲೆ ಗಮನ ಹರಿಸಿದರು. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹೆಚ್ಚು ಅಭ್ಯಾಸದಲ್ಲೇ ತೊಡಗಿದರು. ತಾನು ಏನನ್ನು ಮಿಸ್ಸಾಗಿದ್ದೇನೆ ಎಂಬುವುದನ್ನು ಕಂಡುಕೊಂಡಿದ್ದ ಸಿರಾಜ್, ಅದನ್ನು ನಂತರ ಪಡೆದುಕೊಂಡನು-ಮೊಹಮ್ಮದ್ ಇಸ್ಮಾಯಿಲ್, ಸಿರಾಜ್ ಸಹೋದರ
ಸಿರಾಜ್ರದ್ದು ನೆವರ್ ಗೀವ್ ಆಪ್ ಅಟಿಟ್ಯೂಡ್ ಅನ್ನೋದನ್ನ ಕೆನ್ನಿಂಗ್ಟನ್ ಓವಲ್ ಟೆಸ್ಟ್ ಪಂದ್ಯವೇ ಹೇಳುತ್ತೆ. ಆನ್ಫಿಲ್ಡ್ನಲ್ಲಿ ಹೋರಾಟ ಮಾಡಿದ ಪರಿ ಸಿರಾಜ್ ಎಂಥ ಫೈಟರ್ ಅನ್ನೋದನ್ನ ಜಗತ್ತಿಗೆ ಸಾರಿದೆ. ಐಪಿಎಲ್ ಟೂರ್ನಿಯ ಬೆನ್ನಿಗೆ ಇಂಗ್ಲೆಂಡ್ ಸರಣಿಪೂರ್ತಿ ಒಂದೂ ಮ್ಯಾಚ್ ರೆಸ್ಟ್ ಪಡೆಯದೇ ಲಾಂಗ್ ಸ್ಪೆಲ್ ಮಾಡಿರೋದು ಸಿರಾಜ್ ಫಿಟ್ನೆಸ್ ಲೆವೆಲ್ಗೆ ಹಿಡಿದ ಕೈಗನ್ನಡಿ ಮಾತ್ರವಲ್ಲ. ಕಠಿಣ ಶ್ರಮದ ಸಿಕ್ಕ ಫಲವೂ ಹೌದು.
ಇದನ್ನೂ ಓದಿ: ಅದೊಂದು ಕ್ಯಾಚ್ ಕಂಗೆಡಿಸಿಬಿಟ್ಟಿತ್ತು.. ಕೊನೆಯಲ್ಲಿ ರಿಯಲ್ ವಾರಿಯರ್ ಎಂದು ಸಿರಾಜ್ ನಿರೂಪಿಸಿದ್ದೇಗೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ