/newsfirstlive-kannada/media/media_files/2026/02/08/smriti-mandana-7-2026-02-08-12-16-20.jpg)
ಸಾಧಿಸಬೇಕು ಅನ್ನೋ ಛಲ ಇದ್ದವರಿಗೆ ಅದೆಷ್ಟೇ ಅಡೆತಡೆಗಳು ಎದುರಾದ್ರೂ ಇಟ್ಟ ಹೆಜ್ಜೆ ಹಿಂದೆ ತೆಗೆಯೋದಿಲ್ಲ.. ಕೆಜಿಎಫ್​ ಸಿನಿಮಾದಲ್ಲಿ ಒಂದ್ ಡೈಲಾಗ್​ ಇದೆ ಗೊತ್ತಾ? ಎದೇಲಿ ಕಲ್ಲಿದ್ದವ್ನಿಗೇ ಇದೆಲ್ಲಾ ಅಂಟೋದೇ ಇಲ್ಲ ಅಂತಾ.. ಆ ಡೈಲಾಗ್​ನ ಪ್ರತಿರೂಪದಂತೆ ನಿಂತವಳು ಆ ಗಟ್ಟಿಗಿತ್ತಿ.. ಜೀವನದಲ್ಲೇ ಅದೆಷ್ಟೇ ಮೋಸಗಳು ನಡೆದ್ರೂ, ಸಂಕಷ್ಟಗಳು ಎದುರಾದ್ರೂ ಯಾವುದಕ್ಕೂ ಎದೆಗುಂದದೇ ತನ್ನದೇ ದಾರಿಯಲ್ಲಿ ನಡೆದವಳು, ಇವತ್ತು ಮತ್ತೊಮ್ಮೆ ಕನ್ನಡಿಗರ ಮನೆಮಾತಾಗಿದ್ದಾಳೆ!
ಹೋರಾಟ..ಇದು ಗೆದ್ದೇ ಗೆಲ್ಲಬೇಕು ಅಂತಾ ಜಿದ್ದಿಗೆ ಬಿದ್ದು ಹೋರಾಡಿದ ಹೋರಾಟ..ಪರಿಶ್ರಮದ ಜೊತೆಗೆ ನಂಬಿಕೆ..ಅಚಲ ಆತ್ಮವಿಶ್ವಾಸವಿದ್ದರೆ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟ ಹೋರಾಟ..ಇಲ್ಲಿ ಧೈರ್ಯವೇ ದಾರಿದೀಪವಾಗಿತ್ತು.. ಛಲವೇ ಕೊನೆಕ್ಷಣದವರೆಗೂ ಪ್ರೇರಣೆಯಾಗಿತ್ತು..ಅಂತಹ ಗಟ್ಟಿ ಗುಂಡಿಗೆಗಳ ಹೋರಾಟಕ್ಕೆ ದಕ್ಕಿದ ಪ್ರತಿಫಲವೇ ಈ ಮುದ್ದಾದ ಟ್ರೋಫಿ.. ಮತ್ತೊಮ್ಮೆ ಕೋಟ್ಯಂತರ ಕನ್ನಡಿಗರ ದಿಲ್​ ಗೆದ್ದ ಟ್ರೋಫಿ..
/filters:format(webp)/newsfirstlive-kannada/media/media_files/2026/02/06/smriti-mandana-4-2026-02-06-12-47-47.jpg)
ಕರ್ನಾಟಕ ಅಂದ್ರೆ ಆರ್​ಸಿಬಿ...ಆರ್​​ಸಿಬಿ ಅಂದ್ರೆ ಕರ್ನಾಟಕ...ಹುಡುಗರ ಟೀಮ್​ ಆಗ್ಲಿ, ಇಲ್ಲ ಹೆಣ್ಮಕ್ಕಳ ಟೀಮೇ​ ಆಗ್ಲಿ..​..ಆರ್​ಸಿಬಿ ಅಂದ್ರೆ ನಮ್ಮ ರಾಜ್ಯದಲ್ಲಿ ಎಲ್ಲಿಲ್ಲದ ಕ್ರೇಜ್​ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ..ಇಂತಹ ಆರ್​ಸಿಬಿ ಗುರುವಾರವೂ ಸೇರಿ ಎರಡೆರಡು ಬಾರಿ ಕಪ್​ ಗೆಲ್ಲೋದಕ್ಕೆ ಕಾರಣವಾಗಿದ್ದು ತಂಡದ ನಾಯಕಿಯಾಗಿರೋ ಸ್ಮೃತಿ ಮಂಧಾನ.
ಬರೋಡಾದಲ್ಲಿ ನಡೆದ ಪಂದ್ಯದಲ್ಲಿ ಅದ್ಯಾವಾಗ ಜೆಮಿಮಾ ರಾಡ್ರಿಕ್ಸ್​ ನಾಯಕತ್ವದ ದೆಹಲಿ ಕ್ಯಾಪಿಟಲ್ಸ್​ 204 ರನ್​​ಗಳ ಟಾರ್ಗೆಟ್​ ಕೊಟ್ರೋ, ಆಗಲೇ ಆರ್​ಸಿಬಿ ಈ ಬಾರಿ ಕಪ್​ ಗೆಲ್ಲೋದು ಡೌಟು ಅಂತಾ ತುಂಬಾ ಜನ ಅಂದುಕೊಂಡಿದ್ರು..ಅದರಲ್ಲೂ ಎರಡನೇ ಓವರ್​​ನಲ್ಲೇ ತಂಡದ ಸ್ಫೋಟಕ ಆಟಗಾರ್ತಿ ಗ್ರೇಸ್​ ಹ್ಯಾರಿಸ್ ಔಟ್​ ಆದ್ಮೇಲೆ ಆರ್​​ಸಿಬಿ ಗೆಲುವಿನ ಕನಸು ಇನ್ನೂ ಕ್ಷೀಣಿಸಿಬಿಟ್ಟಿತ್ತು...ತಂಡದ ಛಲಗಾತಿ ಸ್ಮೃತಿ ಮಂಧಾನ ಇದ್ರಲ್ಲ, ಮ್ಯಾಚ್​ನ ಕೊನೆಯವರೆಗೂ ಎಲ್ಲೂ ಕುಗ್ಗಲಿಲ್ಲ..ತಂಡದ ಮತ್ತೊಬ್ಬ ಬೆಂಕಿ ಬಿರುಗಾಳಿಯಂತಹ ಪ್ಲೇಯರ್​ ಜಾರ್ಜಿಯಾ ವೋಲ್​ ಜೊತೆ ಸೇರಿ ಬರೋಬ್ಬರಿ 165 ರನ್​ಗಳನ್ನ ಕೂಡಿಹಾಕಿದ್ರು.
ಇದನ್ನೂ ಓದಿ: ಪ್ರೀತಿಸಿದವಳು ಮದುವೆ ಪತ್ರಿಕೆ, ಸ್ಯಾರಿ ತೋರಿಸಿದ್ಲು.. ವ್ಯಾಲೆಂಟೈನ್ಸ್ ಡೇ ಖುಷಿಯಲ್ಲಿದ್ದ ಪ್ರೇಮಿ ಜೀವ ಬಿಟ್ಟ..!
/filters:format(webp)/newsfirstlive-kannada/media/media_files/2026/02/08/smriti-mandana-8-2026-02-08-12-16-20.jpg)
ಡೆಲ್ಲಿ ಬೌಲರ್​ಗಳನ್ನ ದಿಕ್ಕಾಪಾಲಾಗಿ ದಂಡಿಸಿದ ಸ್ಮೃತಿ ಮಂಧಾನ, ಕೇವಲ 41 ಎಸೆತಗಳಲ್ಲಿ ಗಳಿಸಿದ್ದೆಷ್ಟು ರನ್​ ಗೊತ್ತಾ? ಬರೋಬ್ಬರಿ 87 ರನ್​ಗಳು..ಹೀಗೆ ಬೆಂಕಿ ಚೆಂಡಿನಂತಹ ಆಟವಾಡಿದ ಸ್ಮೃತಿ ಆರ್​ಸಿಬಿಯನ್ನ ಗೆಲುವಿನ ದಡ ಸೇರಿಸುವ ಮೂಲಕ ಸತತ 2ನೇ ಬಾರಿಗೆ ಕಪ್ ಗೆದ್ದುಕೊಟ್ಟಿದ್ದಾರೆ. ಸ್ಮೃತಿ ಮ್ಯಾಚ್​​ ಗೆಲ್ಲಿಸಿದ್ದನ್ನ ಎಲ್ಲರೂ ನೋಡಿದ್ರು, ಖುಷಿಪಟ್ರು..ಬಟ್​, ಅದೇ ಸ್ಮೃತಿ ಮ್ಯಾಚ್​ಗೂ ಮುಂಚೆ ಹಾಗೂ ಮೈದಾನದಲ್ಲಿ ಅನುಭವಿಸಿದ ನೋವಿದ್ಯಲ್ಲ..ಆ ನೋವಿನ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ..
ಹುಷಾರಿಲ್ಲದೇ ಇದ್ದರೂ ತಂಡದ ಸದಸ್ಯರಿಗೆ ಹೇಳಿದ್ದೇನು?
ಆರ್​​ಸಿಬಿ ವರ್ಸಸ್​ ದೆಹಲಿ ಫೈನಲ್​ ಮ್ಯಾಚ್​ಗೆ ಜಸ್ಟ್​ ಒಂದೇ ಒಂದು ದಿನ ಬಾಕಿ ಇತ್ತು..ಹೀಗಿರುವಾಗ ಹಿಂದಿನ ದಿನ ರಾತ್ರಿ ತಂಡದ ನಾಯಕಿ ಸ್ಮೃತಿ ಮಂಧಾನಾಗೆ ಅನಾರೋಗ್ಯ ಕಾಡಿದೆ..ಜ್ವರ ಅಂದ್ರೆ ಅಂತಿಂಥ ಜ್ವರ ಅಲ್ಲ..ಬರೋಬ್ಬರಿ 103 ಡಿಗ್ರಿ ಜ್ವರದಿಂದ ಬೇಯುತ್ತಿದ್ದರು ಸ್ಮೃತಿ ಮಂಧಾನ..ಇದರ ಬಗ್ಗೆ ಆರ್​ಸಿಬಿಯ ಹೆಡ್​​ ಕೋಚ್​ ಆಗಿರೋ ಮಲೋಲನ್​ ರಂಗರಾಜನ್​ಗೆ ಗೊತ್ತಾಗಿದೆ..ಬಳಿಕ ಪಂದ್ಯ ನಡೆಯುವ ದಿನದ ಮಧ್ಯಾಹ್ನ ಸ್ಮೃತಿಗೆ ಕೋಚ್​​ ಮಲೋಲನ್ ಆಕೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ..ನಿಮ್ಮ ಕೈಯಲ್ಲಿ ಆಟವಾಡಲು ಸಾಧ್ಯವೇ ಅನ್ನೋ ಪ್ರಶ್ನೆ ಮಾಡಿದ್ದಾರೆ..ಆಗ ಸ್ಮೃತಿ ತನಗೇನೂ ಆಗ ಇಲ್ಲ ಎಂಬಂತೆ ನಡೆದುಕೊಂಡಿದ್ದಾರೆ...
"ಸ್ಮೃತಿಗೆ 103 ಡಿಗ್ರಿ ಜ್ವರವಿತ್ತು"
ಸ್ಮೃತಿ ಯಾವುದೇ ಕಂಪ್ಲೇಂಟ್ ಇಲ್ಲದೇ ನಾಯಕಿಯಾಗಿ ಈ ಮ್ಯಾಚ್ನ ಗೆಲುವಿಗೆ ಕಾರಣವಾಗಿದ್ದಕ್ಕೆ ಧನ್ಯವಾದಗಳು..ನೀವು ಮ್ಯಾಚ್ ಹಿಂದಿನ ದಿನದ ರಾತ್ರಿ ಎಷ್ಟು ಅಸ್ವಸ್ಥರಾಗಿದ್ರಿ ಅನ್ನೋದು ನನಗ ಚೆನ್ನಾಗಿ ಗೊತ್ತು..ಸ್ಮೃತಿ 103 ಡಿಗ್ರಿಯಷ್ಟು ಜ್ವರದಿಂದ ಬಳಳುತ್ತಿದ್ದರು..ತುಂಬಾ ಅಂದ್ರೆ ತುಂಬಾನೇ ಜ್ವರ..ಆದರೆ, ತಂಡದಲ್ಲಿ ಯಾರಿಗೂ ಅವರಿಗಿರೋ ಅನಾರೋಗ್ಯದ ಬಗ್ಗೆ ತೋರಿಸಿಕೊಳ್ಳಲಿಲ್ಲ..ಹೇಳಿಕೊಳ್ಳಲಿಲ್ಲ..ಒಂದೇ ಒಂದು ಸೆಕೆಂಡ್ ಕೂಡ ಯಾರಿಗೂ ತೋರಿಸಿಕೊಳ್ಳಲಿಲ್ಲ..ಸ್ಮೃತಿಯದ್ದು ಅಂತಹ ವ್ಯಕ್ತಿತ್ವ..ಪಂದ್ಯದ ದಿನ ಮಧ್ಯಾಹ್ನ ನಾನು ಸ್ಮೃತಿಯ ಆರೋಗ್ಯದ ಬಗ್ಗೆ ವಿಚಾರಿಸಿದಾಗ, ಆಕೆ ಇಲ್ಲ ನನಗೇನೂ ಆಗಿಲ್ಲ..ಏನೂ ಸಮಸ್ಯೆ ಇಲ್ಲ ಅಂತಾ ಹೇಳಿದ್ದರು..ಅದು ಸ್ಮೃತಿಗೆ ತನ್ನ ಕೆಲಸದ ಮೇಲಿರೋ ಶ್ರದ್ಧೆಯನ್ನ ಎತ್ತಿ ತೋರಿಸುತ್ತದೆ.-ಮಲೋಲನ್ ರಂಗರಾಜನ್, ಆರ್ಸಿಬಿ ಕೋಚ್
ಸ್ಮೃತಿ ಮಂಧಾನಾಗೆ ಒಂದಂತೂ ಚೆನ್ನಾಗಿ ಗೊತ್ತಿತ್ತು..ನಾಯಕಿಯಾಗಿ ಆಕೆಯ ಮೇಲಿದ್ದ ಬೆಟ್ಟದಂತಹ ಜವಾಬ್ದಾರಿ ಬಗ್ಗೆಯೂ ತಿಳಿದಿತ್ತು..ಅದೇ ಕಾರಣಕ್ಕೆ ಸ್ಮೃತಿ ತನ್ನ ಅನಾರೋಗ್ಯದ ಬಗ್ಗೆ ಯಾರಿಗೂ ಹೇಳಿಕೊಳ್ಳಲಿಲ್ಲ..ಅಲ್ಲದೇ, ಈ ಬಾರಿಯೂ ಆರ್​ಸಿಬಿಗೆ ಕಪ್​ ತಂದುಕೊಟ್ಟರೆ, ಅದೆಷ್ಟು ಐತಿಹಾಸಿಕವಾಗಲಿದೆ ಅನ್ನೋದನ್ನೂ ತಿಳಿದುಕೊಂಡಿದ್ದ ಸ್ಮೃತಿ ತೀವ್ರ ಜ್ವರದಲ್ಲೂ, ಅಗಾಧ ಮನೋಸ್ಥೈರ್ಯದಿಂದ ಆಡಿ ಮ್ಯಾಚ್​ ವಿನ್ನರ್ ಆಗಿದ್ದಾರೆ..
6 ವರ್ಷ ಪ್ರೀತಿ..ನಂಬಿದ್ದ ಹುಡುಗನ ಮೋಸ..
ವೀಕ್ಷಕರೇ, ಈ ಜ್ವರ ಅನ್ನೋ ಅನಾರೋಗ್ಯ ಅಷ್ಟೇ...ದೇಹ ಬಾಧಿಸೋ ಒಂದು ರೀತಿಯ ಗಾಯ..ಆ ಗಾಯ ಮೆಡಿಸನ್​ ತಗೊಂಡ್ರೆ ಸರಿಯಾಗಿಬಿಡುತ್ತೆ...ಆದ್ರೆ, ಮನಸ್ಸಿಗೆ ಕಲ್ಪನೆಯನ್ನೂ ಮಾಡಿಕೊಳ್ಳಲಾಗದಂತಹ ಗಾಯವಾಗಿಬಿಟ್ರೆ...ಅಂಥದ್ದೇ ದೊಡ್ಡ ಗಾಯ ಇತ್ತೀಚೆಗಷ್ಟೇ ಸ್ಮೃತಿಯ ಮನಸ್ಸಿಗೂ ಆಗಿತ್ತು ಅಂದ್ರೆ ನೀವ್​ ನಂಬಲೇಬೇಕು..
/filters:format(webp)/newsfirstlive-kannada/media/media_files/2026/02/08/smriti-mandana-10-2026-02-08-12-16-20.jpg)
ಮುಚ್ಚಲ್​..ಪಲಾಶ್​ ಮುಚ್ಚಲ್​..ಸಿಂಗರ್, ಮ್ಯೂಸಿಕ್​ ಡೈರೆಕ್ಟರ್, ಕಂಪೋಸರ್​..ಇಂತಹ ಪಲಾಶ್​ ಮುಚ್ಚಲ್​ನ ಆರ್​ಸಿಬಿಯ ಕ್ಯಾಪ್ಟನ್​ ಸ್ಮೃತಿ ಮಂಧಾನ ಹುಚ್ಚಿಯಂತ ಪ್ರೀತಿಸಿದ್ದಳು..ಅದೂ ಕಡಿಮೆ ಸಮಯ ಏನಲ್ಲ, ಬರೋಬ್ಬರಿ 6 ವರ್ಷಗಳ ಕಾಲ ಸ್ಮೃತಿ ಹಾಗೂ ಪಲಾಶ್​ ಪ್ರೇಮಿಗಳಾಗಿದ್ರು..ಹೀಗಿರೋವಾಗಲೇ, ಕಳೆದ ವರ್ಷ ನಡೆದ ಮಹಿಳಾ ಕ್ರಿಕೆಟ್​ ವಿಶ್ವಕಪ್​​ನಲ್ಲಿ ಸ್ಮೃತಿ ಮಂಧಾನ ಉಪನಾಯಕಿಯಾಗಿ ಮಿಂಚು ಹರಿಸಿದ್ದರು..ಜೊತೆಗೆ ಭಾರತದ ಮಹಿಳಾ ತಂಡ ಮೊಟ್ಟ ಮೊದಲ ವಿಶ್ವಕಪ್ ಗೆಲ್ಲೋದಕ್ಕೂ ಕಾರಣರಾಗಿದ್ದರು..ಈ ವಿಶ್ವಕಪ್ ಗೆದ್ದ ಮೈದಾನಕ್ಕೆ ಸ್ಮೃತಿಯನ್ನ ಕರೆದೊಯ್ದ ಪ್ರೇಮಿ ಪಲಾಶ್​, ಅಲ್ಲೇ ಆಕೆಗೆ ದೇಶದ ಎದುರೇ ಪ್ರಪೋಸ್ ಕೂಡ ಮಾಡಿದ್ದ..ಇದಾದ್ಮೇಲೆ ಶುರುವಾಗಿದ್ದೇ ಇಬ್ಬರ ಮದುವೆ ಸಂಭ್ರಮ..6 ವರ್ಷಗಳ ಪ್ರೀತಿಯಲ್ಲಿದ್ದ ಸ್ಮೃತಿ ಹಾಗೂ ಪಲಾಶ್​ ಇಬ್ಬರ ಮದುವೆಯ ಡೇಟ್​ ನವೆಂಬರ್ 23ಕ್ಕೆ ಅಂತಾ ಅನೌನ್ಸ್​ ಆಗಿತ್ತು..ಸ್ಮೃತಿ ಮನೆಯಲ್ಲಿ ಮದುವೆ ಸಂಭ್ರಮ ಸಿಕ್ಕಾಪಟ್ಟೆ ಮನೆಮಾಡಿತ್ತು..ಮೆಹಂದಿ ಶಾಸ್ತ್ರ ಸಂಗೀತ ಕಾರ್ಯಕ್ರಮ ಎಲ್ಲವೂ ಜೋರಾಗಿಯೇ ನಡೀತಿತ್ತು..ಹೀಗಿರೋವಾಗಳೇ, 6 ವರ್ಷಗಳಿಂದ ತಾನು ನಂಬಿ ಪ್ರೀತಿಸಿದ್ದ ಹುಡುಗನ ಬಗ್ಗೆ ಸ್ಮೃತಿ ಕಟ್ಟಿದ್ದ ಆಸೆಗಳ ಗೋಪುರ ನುಚ್ಚು ನೂರಾಗಿತ್ತು...ಸ್ಮೃತಿ ಮಂಧಾನರ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ಅಡ್ಮಿಟ್​ ಆಗ್ತಾರೆ..ಬಳಿಕ ಅನೌನ್ಸ್​ ಆಗಿದ್ದ ಸ್ಮೃತಿ ಪಲಾಶ್​ ವಿವಾಹ ಮುರಿದು ಬೀಳುತ್ತೆ...ಡಿಸೆಂಬರ್ ಕಳೆದ ವರ್ಷ ಡಿಸೆಂಬರ್ 7ನೇ ತಾರೀಖು, ನಾವಿಬ್ರೂ ಮದುವೆ ಆಗ್ತಿಲ್ಲ ಅಂತಾ ಹೇಳುವ ಮೂಲಕ ಸ್ಮೃತಿ ಮಂಧಾನ ತಮ್ಮ ಪ್ರೀತಿ ದುರಂತ ಅಂತ್ಯ ಕಂಡಿದ್ದನ್ನ ಇಡೀ ದೇಶಕ್ಕೆ ಹಂಚಿಕೊಳ್ತಾರೆ.
/filters:format(webp)/newsfirstlive-kannada/media/media_files/2026/02/08/smriti-mandana-8-2026-02-08-12-16-20.jpg)
ಬಹುಶಃ ಇಂತಹ ಜಾಗದಲ್ಲಿ...ಇನ್ನೇನು ಕುತ್ತಿಗೆಗೆ ತಾಳಿ ಬೀಳಬೇಕು ಅನ್ನೋ ಸಮಯದಲ್ಲಿ ಮದುವೆ ಮುರಿದು ಹೋಗುತ್ತೆ ಅಂದ್ರೆ, ಅದೆಷ್ಟು ಜನ ಕುಸಿದೇ ಹೋಗ್ತಿದ್ರೇನೋ..ಎಲ್ಲಾ ಮರೆತು ತಮ್ಮ ಬದುಕಿಗೆ ವಾಪಸ್​ ಬರೋದಕ್ಕೆ ಸಿಕ್ಕಾಪಟ್ಟೆ ಟೈಮ್​ ತಗೋತಿದ್ರೇನೋ, ಆದ್ರೆ, ಸ್ಮೃತಿ ಮಂಧಾನಾ ಹಾಗ್​ ಮಾಡಲಿಲ್ಲ..ಮದುವೆ ಮುರಿದು ಹೋದ್ರೂ ತಮ್ಮ ಮೊದಲ ಪ್ರೀತಿ ಕ್ರಿಕೆಟ್​ನ ಕೈಬಿಡುವ ಕೆಲಸ ಮಾಡಲಿಲ್ಲ..ವಿವಾಹಕ್ಕೆ ಬ್ರೇಕ್ ಬಿದ್ದ ಕೆಲವೇ ದಿನಗಳಲ್ಲಿ ಮತ್ತೆ ಮೈದಾನಕ್ಕಿಳಿದಿದ್ದ ಈ ಸಿಂಹಿಣಿ ತಮ್ಮ ಖದರ್​ ಆಟವನ್ನ ಮುಂದುವರಿಸ್ತಾರೆ..
ಇದನ್ನೂ ಓದಿ: ಬೆಳಗ್ಗೆ ಸಂತಾಪ, ಮಧ್ಯಾಹ್ನ ತಿಥಿ ಊಟ! ಬದುಕಿದ್ದಾಗಲೇ ಆಹ್ವಾನ ಕೊಟ್ಟ ರೈತ.. ಚಿಕ್ಕಮಗಳೂರಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us