ಸತತ ಗೆಲುವಿನ ಓಟ.. ಈ ಸೀಸನ್​ನಲ್ಲಿ ಆರ್​​ಸಿಬಿ ಪರ್ಫಾಮೆನ್ಸ್​ ಹೇಗಿತ್ತು.? ಕಂಪ್ಲೀಟ್ ಮಾಹಿತಿ

ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4ರ ಫೈನಲ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ವಡೋದರಾದ ಮೈದಾನದಲ್ಲಿ ಇಂದು 2ನೇ WPL ಟ್ರೋಫಿಗೆ ಮುತ್ತಿಕ್ಕೋಕೆ ಆರ್​​ಸಿಬಿ ಮಹಿಳಾ ಮಣಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆರ್​​ಸಿಬಿ ಕಪ್​ ಗೆದ್ದೇ ಗೆಲ್ಲುತ್ತೆ ಅನ್ನೋದು ಲಾಯಲ್​ ಅಭಿಮಾನಿಗಳ ಆತ್ಮವಿಶ್ವಾಸದ ನುಡಿಯಾಗಿದೆ.

author-image
Ganesh Kerekuli
rcb (15)
Advertisment
  • ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​-4 ಫೈನಲ್​ ಫೈಟ್​
  • 2ನೇ ಟ್ರೋಫಿ ಗೆಲುವಿನ ಮೇಲೆ ಆರ್​​ಸಿಬಿಯ ಕಣ್ಣು
  • ಲೀಗ್​ ಹಂತದಲ್ಲಿ ಆರ್​​ಸಿಬಿ ತಂಡದ ರಾಯಲ್ ಆಟ

ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4ರ ಫೈನಲ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ವಡೋದರಾದ ಮೈದಾನದಲ್ಲಿ ಇಂದು 2ನೇ WPL ಟ್ರೋಫಿಗೆ ಮುತ್ತಿಕ್ಕೋಕೆ ಆರ್​​ಸಿಬಿ ಮಹಿಳಾ ಮಣಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆರ್​​ಸಿಬಿ ಕಪ್​ ಗೆದ್ದೇ ಗೆಲ್ಲುತ್ತೆ ಅನ್ನೋದು ಲಾಯಲ್​ ಅಭಿಮಾನಿಗಳ ಆತ್ಮವಿಶ್ವಾಸದ ನುಡಿಯಾಗಿದೆ. ಈ ಸೀಸನ್​ನಲ್ಲಿ ಆರ್​​ಸಿಬಿ ಆಟಗಾರ್ತಿಯರು ಆಡಿದ ಆಟ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. 

WPL ಸೀಸನ್​ 4ರ ಫೈನಲ್ ಫೈಟ್​ಗೆ ವೇದಿಕೆ ಸಜ್ಜಾಗಿದೆ. ವಡೋದರಾದ ಕೋಟಂಬಿ ಸ್ಟೇಡಿಯಂ ಇಂದು ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಲಿದೆ. ಸೀಸನ್​ 4ರಲ್ಲಿ ವಂಡರ್​ಫುಲ್​ ಪರ್ಫಾಮೆನ್ಸ್​ ನೀಡಿರೋ ರೆಡ್​ ಆರ್ಮಿ ಆರ್​​ಸಿಬಿ ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್​ ಅನಿಸಿದೆ. ಅಭಿಮಾನಿಗಳಂತೂ ಸ್ಮೃತಿ ಸೈನ್ಯವೇ ಟ್ರೋಫಿ ಗೆಲ್ಲೋದು ಪಕ್ಕಾ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಈ ಸೀಸನ್​ನಲ್ಲಿ ಆಡಿದ ಬೊಂಬಾಟ್​ ಕಾರಣ ಇದಕ್ಕೆಲ್ಲಾ ಕಾರಣವಾಗಿದೆ. 

ಇದನ್ನೂ ಓದಿ: ಆಸ್ತಿಗಳ ಎ ಖಾತಾ ಎಂದರೇನು? ಬಿ ಖಾತಾ ಎಂದರೇನು? ಖಾತಾ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ?

rcb (14)

ಈ ಸೀಸನ್​ನ ಮೊದಲ ಪಂದ್ಯದಲ್ಲಿ ಆರ್​​ಸಿಬಿ ತಂಡ ಎಲ್ಲರೂ ಅಚ್ಚರಿಯಾಗುವಂತಾ ಪರ್ಫಾಮೆನ್ಸ್​ ನೀಡಿತು. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಎದುರು 3 ವಿಕೆಟ್​ಗಳ ರಣರೋಚಕ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಆರ್​​ಸಿಬಿ ಸೋತೇ ಬಿಡ್ತು ಅನ್ನೋ ಸಂದರ್ಭ ಎದುರಾಗಿತ್ತು. ಆದ್ರೆ, ಸ್ಪೋಟಕ ಬ್ಯಾಟಿಂಗ್​ ನಡೆಸಿ ನದಿನ್​ ಡಿ ಕ್ಲೆರ್ಕ್​ ಮ್ಯಾಚ್​ ಗೆಲ್ಲಿಸಿದ್ರು. 

9 ವಿಕೆಟ್​​ಗಳ ಗೆಲುವು

2ನೇ ಪಂದ್ಯದಲ್ಲಿ ಆರ್​​ಸಿಬಿ ಪಡೆ ಶಿಸ್ತುಬದ್ಧ ಆಟವಾಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಯುಪಿ ವಾರಿಯರ್ಸ್​ ತಂಡವನ್ನ 143 ರನ್​ಗಳಿಗೆ ಬೌಲರ್ಸ್​ ಕಟ್ಟಿ ಹಾಕಿದ್ರು. ಬಳಿಕ ಚೇಸಿಂಗ್​ ವೇಳೆ ಗ್ರೇಸ್​ ಹ್ಯಾರಿಸ್​ ಸ್ಪೋಟಕ ಇನ್ನಿಂಗ್ಸ್​ ಕಟ್ಟಿದ್ರು. ಹ್ಯಾರಿಸ್​ 40 ಎಸೆತಗಳಲ್ಲಿ 85 ರನ್​ ಚಚ್ಚಿದ್ರೆ, ಸ್ಮತಿ ಮಂದಾನ ಅಜೇಯ 47 ರನ್​ಗಳಿಸಿದ್ರು. ಆರ್​​​ಸಿಬಿ 9 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು. 

3ನೇ ಪಂದ್ಯದಲ್ಲೂ ಆರ್​​ಸಿಬಿ ಅಬ್ಬರ ಜೋರಾಗಿ ನಡೀತು. ಮೊದಲು ಬ್ಯಾಟಿಂಗ್​ ನಡೆಸಿ ಆರಂಭಿಕ ಕುಸಿತ ಕಂಡ ತಂಡಕ್ಕೆ ರಾಧಾ ಯಾದವ್​, ರಿಚಾ ಘೋಷ್ ಸಾಲಿಡ್​ ಆಟವಾಡಿ ಬಿಗ್​ ಸ್ಕೋರ್​ ಕಲೆ ಹಾಕುವಲ್ಲಿ ನೆರವಾದ್ರು. ಬೌಲಿಂಗ್​ನಲ್ಲಿ ಕನ್ನಡತಿ ಶ್ರೆಯಾಂಕ ಪಾಟೀಲ್​ 5, ಲಾರೆನ್​ ಬೆಲ್​ 3 ವಿಕೆಟ್​ ಕಬಳಿಸಿ ಮಿಂಚಿದ್ರು. ಆರ್​​ಸಿಬಿ 32 ರನ್​​ಗಳ ಭರ್ಜರಿ ಜಯ ಸಾಧಿಸಿತು.

ಸೀಸನ್​ನಲ್ಲಾಡಿದ 4ನೇ ಪಂದ್ಯದಲ್ಲಿ ನವಿ ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಆರ್​​ಸಿಬಿ ರಾಯಲ್​ ಡಿಚ್ಚಿ ನೀಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ 166 ರನ್​ಗಳಿಗೆ ಆಲೌಟ್​ ಮಾಡುವಲ್ಲಿ ರೆಡ್​​ ಆರ್ಮಿ ಬೌಲರ್ಸ್​ ಸಕ್ಸಸ್​ ಕಂಡರು. ಚೇಸಿಂಗ್​ ವೇಳೆ ನಾಯಕಿ ಸ್ಮೃತಿ ಮಂದಾನ 96 ರನ್​​ಗಳಿಸಿ ಮಿಂಚಿದ್ರು. 18.2 ಓವರ್​ಗಳಲ್ಲಿ ಗುರಿ ತಲುಪಿದ ಆರ್​​ಸಿಬಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. 

ಇದನ್ನೂ ಓದಿ: ಮತ್ತೆ ಬರ್ತಿದ್ದಾರೆ ಬ್ರೋ ಗೌಡ.. ತೆರೆ ಮೇಲೆ ಮಿಸ್ ಮಾಡ್ಕೊಂಡಿದ್ದ ಫ್ಯಾನ್ಸ್​ಗೆ ಗುಡ್​ನ್ಯೂಸ್​..!

rcb (12)

ಆಡಿದ 5ನೇ ಪಂದ್ಯದಲ್ಲೂ ಆರ್​​ಸಿಬಿ ಗೆಲುವಿನ ಭಾವುಟ ಹಾರಿಸಿತು. ಗುಜರಾತ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆರ್​​ಸಿಬಿ 178 ರನ್​ಗಳಿಸಿತು. ಬೌಲಿಂಗ್​ ವೇಳೆ ಸಯಾಲಿ ಸತ್​ಗೆರೆ, ನದಿನ್ ಡೆ ಕ್ಲರ್ಕ್​ ಗುಜರಾತ್​ ಬ್ಯಾಟಿಂಗ್​ ಬೆನ್ನುಲುಬನ್ನೇ ಬ್ರೇಕ್ ಮಾಡಿದ್ರು. ಜಸ್ಟ್​ 117 ರನ್​ಗಳಿಗೆ ಗುಜರಾತ್​ ಆಲೌಟ್​ ಆದ್ರೆ, 61 ರನ್​ಗಳ ಜಯ ಸಾಧಿಸಿದ ಗುಜರಾತ್​ ಫ್ಲೇ ಆಫ್​​ಗೆ ರಾಯಲ್​ ಎಂಟ್ರಿ ಕೊಡ್ತು. 

ಪ್ಲೇ ಆಫ್​ಗೆ ಕ್ವಾಲಿಫೈ ಆದ ಬಳಿಕ ಸತತ 2 ಪಂದ್ಯಗಳಲ್ಲಿ ಆರ್​​ಸಿಬಿಗೆ ಸೋಲಿನ ದರ್ಶನವಾಯ್ತು. ಡೆಲ್ಲಿ, ಮುಂಬೈ ಎದುರು ಸೋತ ಆರ್​​ಸಿಬಿ ಮಿಸ್ಟೇಕ್ಸ್​ ತಿದ್ದಿಕೊಂಡು ಅಂತಿಮ ಲೀಗ್​ ಫೈಟ್​ನಲ್ಲಿ ಕಮ್​ಬ್ಯಾಕ್​ ಮಾಡ್ತು. ಯುಪಿ ವಾರಿಯರ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್​ಗೆ ಸ್ಮೃತಿ ಮಂದಾನ ಸೈನ್ಯ ಎಂಟ್ರಿಕೊಟ್ಟಿತು. 

ಲೀಗ್​ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿ 2 ಪಂದ್ಯ ಮಾತ್ರ ಸೋತ ಆರ್​ಸಿಬಿ ತಂಡ ಇಂದಿನ ಪಂದ್ಯದಲ್ಲೂ ಗೆಲ್ಲೋ ಆತ್ಮವಿಶ್ವಾಸದಲ್ಲಿದೆ. ಫೈನಲ್​ ಫೈಟ್​ನಲ್ಲೂ ಆರ್​​ಸಿಬಿ ಅಬ್ಬರದ ಆಟವಾಡಲಿ. 2ನೇ ಟ್ರೋಫಿಗೆ ಮುತ್ತಿಕ್ಕಲಿ ಅನ್ನೋದು ಲಾಯಲ್​ ಅಭಿಮಾನಿಗಳ ಮಹದಾಸೆಯಾಗಿದೆ. 

ಇದನ್ನೂ ಓದಿ: ಅಮ್ಮನಿಗೆ ಮುದ್ದು, ಬಂಗಾರ ಎನ್ನುತ್ತಿದ್ದ ಗುರೂಜಿ -ಕಮಲಾಕರ್ ಭಟ್​​ನ ಅಸಲಿ ಕತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2026 RCB
Advertisment